Sunday, Nov 17 2019 | Time 16:01 Hrs(IST)
 • ಶ್ರೀನಗರ-ಜಮ್ಮು ಹೆದ್ದಾರಿಯಲ್ಲಿ ಏಕಮುಖ ಸಂಚಾರ ಆರಂಭ
 • ಬಾಳಾ ಠಾಕ್ರೆ ಏಳನೇ ಪುಣ್ಯ ತಿಥಿ; ಮಹಾರಾಷ್ಟ್ರದಲ್ಲಿ ಮುಖಂಡರ ಪಕ್ಷಾತೀತ ನಮನ
 • ಸಂಸತ್‍ ಚಳಿಗಾಲದ ಅಧಿವೇಶನ: ಸರ್ಕಾರ ಕರೆದಿದ್ದ ಸರ್ವಪಕ್ಷಗಳ ಸಭೆ ಅಂತ್ಯ
 • 105 ದಿನಗಳ ಬಳಿಕ ಶ್ರೀನಗರ-ಬನಿಹಾಲ್ ರೈಲು ಸೇವೆ ಪುನಾರಂಭ
 • ಕಾಶ್ಮೀರದಲ್ಲಿ ಹೆಚ್ಚಿನ ಅಂಗಡಿಗಳು ಪುನರಾರಂಭ: ಸಾಮಾನ್ಯ ಸ್ಥಿತಿಯತ್ತ ಜನ-ಜೀವನ
 • ಮೀಸಲಾತಿಗೆ ಶತಶತಮಾನಗಳ ಇತಿಹಾಸವಿದೆ: ನಾಡೋಜ ಬರಗೂರು ರಾಮಚಂದ್ರಪ್ಪ
 • ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ ; ಜಯಗಳಿಸಿರುವ ಗೋಟ ಬಯಾ ರಾಜಪಕ್ಸೆ ಗೆ ಪ್ರಧಾನಿ ಮೋದಿ ಅಭಿನಂದನೆ
 • ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದ ಬೆಲೆ ಹೆಚ್ಚಿಸುವುದಿಲ್ಲ ಟಿಟಿಡಿ ಅಧ್ಯಕ್ಷರ ಸ್ಪಷ್ಟನೆ
 • ಮೂವರು ಅಂತಾರಾಜ್ಯ ಮಾದಕ ವಸ್ತು ಮಾರಾಟಗಾರರ ಬಂಧನ
 • ಪೂಂಚ್‌ನಲ್ಲಿನ ಗಡಿ ನಿಯಂತ್ರಣಾ ರೇಖೆಯಲ್ಲಿ ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ
 • ಅಧ್ಯಕ್ಷೀಯ ಚುನಾವಣೆ: ಶ್ರೀಲಂಕಾ ರಕ್ಷಣಾ ಸಚಿವ ಗೋಟಬಯಾ ರಾಜಪಕ್ಸೆಗೆ ಜಯ
 • ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಜಮೀನು ನೀಡಲು ಮುಂದಾದ ಹಿಂದೂ ಕುಟುಂಬಗಳು
 • ಶಿಕಾರಿಪುರದಲ್ಲಿ 15, 17 ನೇ ಶತಮಾನದ ಎರಡು ಶಿಲಾಶಾಸನಗಳು ಪತ್ತೆ
 • ಡಿಸೆಂಬರ್ ಎರಡನೇ ವಾರ ರಾಜ್ಯ ರಾಜಕಾರಣದಲ್ಲಿ ಮಹತ್ವ ಬದಲಾವಣೆ; ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭವಿಷ್ಯ
 • ಶಿವಮೊಗ್ಗದಲ್ಲಿ ಎರಡು ಶಿಲಾಶಾಸನ ಪತ್ತೆ
National Share

ಕರ್ನಾಟಕ, ಗೋವಾದಲ್ಲಿ ಆಪರೇಷನ್ ಕಮಲ, ಸಂಸತ್ ಭವನದ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ಪ್ರತಿಭಟನೆ

ಕರ್ನಾಟಕ, ಗೋವಾದಲ್ಲಿ ಆಪರೇಷನ್ ಕಮಲ, ಸಂಸತ್ ಭವನದ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ಪ್ರತಿಭಟನೆ
ಕರ್ನಾಟಕ, ಗೋವಾದಲ್ಲಿ ಆಪರೇಷನ್ ಕಮಲ, ಸಂಸತ್ ಭವನದ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ಪ್ರತಿಭಟನೆ

ನವದೆಹಲಿ, ಜು 11 [ಯುಎನ್ಐ] ಕರ್ನಾಟಕ ಮತ್ತು ಗೋವಾದಲ್ಲಿ ಆಪರೇಷನ್ ಕಮಲ ಕಾರ್ಯಾಚರಣೆ ನಡೆಸಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ಗಾಳಿಗೆ ತೂರಿ, ಜನತಂತ್ರ ವ್ಯವಸ್ಥೆಯನ್ನು ಕಗ್ಗೊಲೆ ಮಾಡುತ್ತಿರುವ ಕೇಂದ್ರದ ಆಡಳಿತರೂಢ ಬಿಜೆಪಿ ವಿರುದ್ಧ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತಿತರ ಪಕ್ಷಗಳ ಸಂಸತ್ ಸದಸ್ಯರು ಪ್ರತಿಭಟನೆ ನಡೆಸಿದರು.

ಸಂಸದರು, ರಾಜ್ಯಸಭೆ ಸದಸ್ಯರು, ಹಿರಿಯ ಕಾಂಗ್ರೆಸ್ ನಾಯಕರಲ್ಲದೇ ಟಿಎಂಸಿ, ಎಸ್ ಪಿ, ಎನ್ ಸಿಪಿ, ಆರ್ ಜೆಡಿ, ಸಿಪಿಐನ(ಎಂ)ನ ಕೆಲ ಸಂಸದರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಬಿಜೆಪಿ ಪ್ರಜಾತಂತ್ರ ವ್ಯವಸ್ಥೆಗೆ ಅಪಮಾನ ಮಾಡುತ್ತಿರುವ ಬಿಜೆಪಿ ರಾಷ್ಟ್ರೀಯ ನಾಯಕರು, ಅಧಿಕಾರ ದಾಹಕ್ಕಾಗಿ ಪ್ರಜಾಪ್ರಭುತ್ವ ವಿರೋಧಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಧಿಕ್ಕಾರದ ಘೋಷಣೆ ಮೊಳಗಿಸಿದರು. ಭಿತ್ತಿ ಪತ್ರಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರದ ದಾಹಕ್ಕಾಗಿ ಬಿಜೆಪಿನಾಯಕರು ದೇಶದ ಸಾರ್ವಭೌಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹತ್ಯೆ ಮಾಡುತ್ತಿದ್ದಾರೆ ಎಂದು ಆಪಾದಿಸಿ, ಇಂತಹ ವಾಮ ಮಾರ್ಗದ ರಾಜಕೀಯವನ್ನು ತಕ್ಷಣವೇ ನಿಲ್ಲಿಸುವಂತೆ ಆಗ್ರಹಪಡಿಸಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಶಾಸಕರ ರಾಜೀನಾಮೆ ಹಾಗೂ ಗೋವಾದಲ್ಲಿ ಕಾಂಗ್ರೆಸ್ ನ 10 ಶಾಸಕರ ಒಂದು ಪ್ರತ್ಯೇಕ ಬಣ ಬಿಜೆಪಿಯಲ್ಲಿ ವಿಲೀನ ಆಗಿರುವ ಬೆಳವಣಿಗೆ ಬಗ್ಗೆ ಸೋನಿಯಾ ಗಾಂಧಿ ಅವರು ರಾಜ್ಯಸಭೆ ಹಾಗೂ ಲೋಕಸಭಾ ಸದಸ್ಯರ ಜತೆ ಇಂದು ಬೆಳಗ್ಗೆ ಸಭೆ ನಡೆಸಿದರು.

ಯುಎನ್ಐ ವಿಎನ್ 1458