Wednesday, Jun 3 2020 | Time 07:32 Hrs(IST)
National Share

ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ: ಜಾವಡೇಕರ್

ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ: ಜಾವಡೇಕರ್
ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ: ಜಾವಡೇಕರ್

ನವದೆಹಲಿ, ಅ, 9 (ಯುಎನ್ಐ ) ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿಗೂ ಮುನ್ನವೇ ಶುಭ ಹಾಗೂ ಸಂತಸದ ಸುದ್ದಿ ಪ್ರಕಟವಾಗಿದೆ. ನೌಕರರ ತುಟ್ಟಿ ಭತ್ಯೆಯನ್ನು ಶೇಕಡ 5 ರಷ್ಟು ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಸಭೆಯ ಬಳಿಕ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಬುಧವಾರ ತಿಳಿಸಿದ್ದಾರೆ.

ಕೇಂದ್ರದ ಈ ಕ್ರಮದಿಂದ ಕೇಂದ್ರ ಸರ್ಕಾರದ್ 50 ಲಕ್ಷ ಉದ್ಯೋಗಿಗಳು ಮತ್ತು 62 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ ಎಂದು ಸಚಿವರು ಹೇಳಿದ್ದಾರೆ.

ಪ್ರಸ್ತುತ ತುಟ್ಟಿಭತ್ಯೆ ದರ ಬೇಸಿಕ್ ಪೇ/ಪಿಂಚಣಿ ಮೇಲೆ ಶೇಕಡ 12 ರಷ್ಟು ಇದ್ದು, ಹೆಚ್ಚುವರಿಯಾಗಿ ಶೇಕಡ 5 ಸೇರ್ಪಡೆ ಮಾಡಲಾಗಿದೆ.

ಯುಎನ್ಐ ಕೆಎಸ್ಆರ್ ಎಎಚ್ 1643

More News

ಮೋದಿ - ಟ್ರಂಪ್ ಮಾತುಕತೆ

02 Jun 2020 | 10:12 PM

 Sharesee more..
ಪ್ರಧಾನಿಯವರಿಂದ ಪಶ್ಚಿಮ ಕರಾವಳಿಯಲ್ಲಿ ಚಂಡಮಾರುತದ ಪರಿಸ್ಥಿತಿಯ ಪರಿಶೀಲನೆ

ಪ್ರಧಾನಿಯವರಿಂದ ಪಶ್ಚಿಮ ಕರಾವಳಿಯಲ್ಲಿ ಚಂಡಮಾರುತದ ಪರಿಸ್ಥಿತಿಯ ಪರಿಶೀಲನೆ

02 Jun 2020 | 9:00 PM

ನವದೆಹಲಿ, ಜೂನ್ 2 (ಯುಎನ್‍ಐ) ಮಹಾರಾಷ್ಟ್ರ ಮತ್ತು ದಕ್ಷಿಣ ಗುಜರಾತ್ ಕರಾವಳಿಯಲ್ಲಿ ನಿಸರ್ಗ ಚಂಡಮಾರುತ ಭೀತಿಯ ಹಿನ್ನೆಲೆಯಲ್ಲಿ ಪಶ್ಚಿಮ ಕರಾವಳಿಯ ಪರಿಸ್ಥಿತಿಯನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪರಿಶೀಲಿಸಿದ್ದಾರೆ.

 Sharesee more..