Saturday, Dec 5 2020 | Time 02:35 Hrs(IST)
National Share

ಚೆನ್ನೈನ 5 ನೇ ಜಲಾಶಯ ಅಮಿತ್ ಷಾರಿಂದ ಸಮರ್ಪಣೆ: ಮೆಟ್ರೋ ಹಂತ -2, ಮೂಲಸೌಕರ್ಯ ಯೋಜನೆಗಳಿಗೆ ಶಿಲಾನ್ಯಾಸ

ಚೆನ್ನೈನ 5 ನೇ ಜಲಾಶಯ ಅಮಿತ್ ಷಾರಿಂದ ಸಮರ್ಪಣೆ: ಮೆಟ್ರೋ ಹಂತ -2, ಮೂಲಸೌಕರ್ಯ ಯೋಜನೆಗಳಿಗೆ ಶಿಲಾನ್ಯಾಸ
ಚೆನ್ನೈನ 5 ನೇ ಜಲಾಶಯ ಅಮಿತ್ ಷಾರಿಂದ ಸಮರ್ಪಣೆ: ಮೆಟ್ರೋ ಹಂತ -2, ಮೂಲಸೌಕರ್ಯ ಯೋಜನೆಗಳಿಗೆ ಶಿಲಾನ್ಯಾಸ

ಚೆನ್ನೈ, 21 (ಯುಎನ್‌ಐ) ಚೆನ್ನೈ ಸಮೀಪ ಹೊಸದಾಗಿ ನಿರ್ಮಿಸಿರುವ ಐದನೇ ಜಲಾಶಯವನ್ನು ಶನಿವಾರ ರಾಜ್ಯಕ್ಕೆ ಸಮರ್ಪಿಸಿರುವ ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ಹಿರಿಯ ಮುಖಂಡ ಅಮಿತ್ ಶಾ, ಚೆನ್ನೈ ಮೆಟ್ರೋ ಎರಡನೇ ಹಂತದ ಯೋಜನೆಗೆ ಶಿಲಾನ್ಯಾಸ ನೆರವೇರಿಸಿದ್ದಾರೆ.

ಮಧ್ಯಾಹ್ನ 1.40ಕ್ಕೆ ದೆಹಲಿಯಿಂದ ಇಲ್ಲಿಗೆ ಆಗಮಿಸಿದ ಅಮಿತ್ ಷಾ ವಿಶ್ರಾಂತಿಗಾಗಿ ತಾರಾ ಹೋಟೆಲ್ ಗೆ ತೆರಳಿದರು.

ಅಲ್ಲಿಂದ ಅವರು ಕಲೈವಾನರ್ ಅರಂಗಂ ಎಂಬಲ್ಲಿ 67,378 ಕೋಟಿ ರೂ ವೆಚ್ಚದ ವಿವಿಧ ಮೂಲಸೌಕರ್ಯ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ, ಉಪಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ, ಸಚಿವರು ಮತ್ತು ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಅಮಿತ್ ಶಾ ಭೇಟಿ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಗಳನ್ನು ಬಿಗಿಗೊಳಿಸಲಾಗಿತ್ತು.

3,000 ಕ್ಕಿಂತ ಹೆಚ್ಚು ಪೊಲೀಸ್‍ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ನೆರೆಯ ತಿರುವಳ್ಳೂರು ಜಿಲ್ಲೆಯ ಥರ್ವೊಯ್ ಕಂಡಿಗೈ ಜಲಾಶಯವನ್ನು ರಾಜ್ಯಕ್ಕೆ ಸಮರ್ಪಿಸಿದರು. ಈ ಜಲಾಶಯವನ್ನು 380 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಅಲ್ಲದೆ, 61,843 ಕೋಟಿ ರೂ.ವೆಚ್ಚದ ಚೆನ್ನೈ ಮೆಟ್ರೋ ರೈಲಿನ ಎರಡನೇ ಹಂತಕ್ಕೂ ಅಮಿತ್‍ ಶಾ ಶಿಲಾನ್ಯಾಸ ನೆರವೇರಿಸಿದರು.

ಎರಡು ಕೆರೆಗಳನ್ನು ಸೇರಿಸಿ ಹೊಸ ಥರ್ವೊಯ್ ಕಂಡಿಗೈ ಜಲಾಶಯ ನಿರ್ಮಿಸಲಾಗಿದೆ.

1,495 ಎಕರೆ ವಿಸ್ತೀರ್ಣದ ಜಲಾಶಯ ನಗರದ ಐದನೇ ಜಲಾಶಯವಾಗಿದೆ

ಸದ್ಯ ಪೂಂಡಿ, ಶೋಲಾವರಂ, ರೆಡ್‌ಹಿಲ್ಸ್ ಮತ್ತು ಚೆಂಬರಂಬಕ್ಕಂ ಜಲಾಶಯಗಳಿಂದ ನಗರಕ್ಕೆ ನೀರು ಪೂರೈಕೆಯಾಗುತ್ತಿದ್ದು, ಇವುಗಳ ಒಟ್ಟು ಶೇಖರಣಾ ಸಾಮರ್ಥ್ಯ 11,257 ಎಂ ಸಿಎಫ್ ಟಿ ನಷ್ಟಿದೆ.

ಯುಎನ್‍ಐ ಎಸ್ಎಲ್ಎಸ್ 2044

More News
ಅಯೋಧ್ಯೆಯ ಮಸೀದಿ ನಿರ್ಮಾಣದ ಟ್ರಸ್ಟ್ ಗೆ ಸರ್ಕಾರದ ನಾಮನಿರ್ದೇಶಿತರ ನೇಮಕ : ಮನವಿ ತಿರಸ್ಕರಿಸಿದ ಸುಪ್ರೀಂ

ಅಯೋಧ್ಯೆಯ ಮಸೀದಿ ನಿರ್ಮಾಣದ ಟ್ರಸ್ಟ್ ಗೆ ಸರ್ಕಾರದ ನಾಮನಿರ್ದೇಶಿತರ ನೇಮಕ : ಮನವಿ ತಿರಸ್ಕರಿಸಿದ ಸುಪ್ರೀಂ

04 Dec 2020 | 6:00 PM

ನವದೆಹಲಿ, ಡಿ 04 (ಯುಎನ್‌ಐ) ಅಯೋಧ್ಯೆಯಲ್ಲಿ ಮಸೀದಿ ನಿರ್ಮಿಸಲು ಸ್ಥಾಪಿಸಲಾದ ಇಂಡೋ ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಟ್ರಸ್ಟ್‌ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರತಿನಿಧಿಗಳನ್ನು ನಾಮನಿರ್ದೇಶನ ಮಾಡುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

 Sharesee more..