Tuesday, Nov 30 2021 | Time 18:06 Hrs(IST)
National Share

ಬಡತನ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ: ವೆಂಕಯ್ಯ ನಾಯ್ಡು

ಬಡತನ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ: ವೆಂಕಯ್ಯ ನಾಯ್ಡು
ಬಡತನ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ: ವೆಂಕಯ್ಯ ನಾಯ್ಡು

ನವದೆಹಲಿ, ಅ 17 [ಯುಎನ್ಐ] ಬಡತನ ರೇಖೆಗಿಂತ ಕೆಳಗಿರುವವರನ್ನು ಮೇಲೆತ್ತಲು ಸಮಾಜದಲ್ಲಿ ಸಮಾನತೆ ಸಾಧಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಕರೆ ನೀಡಿದ್ದಾರೆ.

ಅಂತಾರಾಷ್ಟ್ರೀಯ ಬಡತನ ನಿರ್ಮೂಲನಾ ದಿನದ ಅಂಗವಾಗಿ ಟ್ವೀಟ್ ಮಾಡಿರುವ ಅವರು, ಆರ್ಥಿಕ, ಸಾಮಾಜಿಕವಾಗಿ ಸಮಾನತೆ ಸಾಧಿಸುವುದು ನಮ್ಮೆಲ್ಲರ ಗುರಿಯಾಗಬೇಕು. ಇದಕ್ಕೆ ಎಲ್ಲರೂ ಒಗ್ಗೂಡಬೇಕು ಎಂದು ಹೇಳಿದ್ದಾರೆ.

ಬಡತನ ಸಮಸ್ಯೆ ನೀಗಿಸಲು ವಿಶ್ವದಾದ್ಯಂತ ಹಲವಾರು ಕಾರ್ಯಕ್ರಮಗಳು ಹಾಗೂ ನೀತಿ-ನಿರೂಪಣೆಗಳನ್ನು ರೂಪಿಸಿ, ಅನುಷ್ಠಾನಗೊಳಿಸಲಾಗುತ್ತಿದೆ.ಅದರಲ್ಲೂ ಪ್ರಮುಖವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳು ಬಡತನ ನಿರ್ಮೂಲನೆಗೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದಿದ್ದಾರೆ.

ಬಡತನ ನಿರ್ಮೂಲನಾ ದಿನದ ಅಂಗವಾಗಿ ವಿಶ್ವಸಂಸ್ಥೆಯ ಅಭಿವೃದ್ಧಿ ಯೋಜನೆಯಲ್ಲಿ ಭಾರತದ ಉಪ ಪ್ರತಿನಿಧಿಯಾದ ನಾದಿಯಾ ರಶೀದ್, ಬಡತನ ನಿರ್ಮೂಲನೆಗೆ ಭಾರತ, ಹಲವಾರು ರಚನಾತ್ಮಕ ಕ್ರಮಗಳನ್ನು ಕೈಗೊಂಡು ಉತ್ತಮ ಪ್ರಗತಿ ಸಾಧಿಸುತ್ತಿದೆ ಎಂದು ಹೇಳಿದ್ದಾರೆ.

ಯುಎನ್ಐ ವಿಎನ್ 1550

More News
ಚಾರ್ಧಾಮ್ ದೇವಸ್ಥಾನಂ ಬೋರ್ಡ್​ ರದ್ದುಗೊಳಿಸಿದ ಉತ್ತರಾಖಂಡ ಸರ್ಕಾರ

ಚಾರ್ಧಾಮ್ ದೇವಸ್ಥಾನಂ ಬೋರ್ಡ್​ ರದ್ದುಗೊಳಿಸಿದ ಉತ್ತರಾಖಂಡ ಸರ್ಕಾರ

30 Nov 2021 | 5:05 PM

ಡೆಹ್ರಾಡೂನ್: ನ.

 Sharesee more..
ಈ ಸ್ಕೂಟಿಯ ನಂಬರ್ ಪ್ಲೇಟ್ ಮೇಲೆಯೇ ಎಲ್ಲರ ಕಣ್ಣು

ಈ ಸ್ಕೂಟಿಯ ನಂಬರ್ ಪ್ಲೇಟ್ ಮೇಲೆಯೇ ಎಲ್ಲರ ಕಣ್ಣು

30 Nov 2021 | 3:52 PM

ನವದೆಹಲಿ,ನ.

 Sharesee more..