ನವದೆಹಲಿ, ಜ 13 (ಯುಎನ್ಐ) ಪೆಟ್ರೋಲ್, ಡೀಸಲ್ ದರ ಮತ್ತೆ ಹೆಚ್ಚಳವಾಗಿದೆ.ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಐದು ದಿನಗಳ ನಂತರ ಬುಧವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಿದ್ದು, ವಾಣಿಜ್ಯ ನಗರಿ ಮುಂಬೈಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 91 ರೂಗಳನ್ನು ದಾಟಿದ್ದು, 91.07 ರೂಗಳನ್ನು ತಲುಪಿದೆ.
ಇದು 2018 ರ ಅಕ್ಟೋಬರ್ 4 ರಂದು ದಾಖಲೆಯ ಬೆಲೆ 91.34 ರೂ.ಗಿಂತ ಕೇವಲ 27 ಪೈಸೆ ಕಡಿಮೆಯಾಗಿದೆ. 29 ದಿನಗಳವರೆಗೆ ಬೆಲೆಗಳು ಸ್ಥಿರವಾಗಿದ್ದ ನಂತರ ತೈಲ ಕಂಪನಿಗಳು ಜನವರಿ 06 ಮತ್ತು 07 ರಂದು ಎರಡೂ ಇಂಧನಗಳ ಬೆಲೆಯನ್ನು ಹೆಚ್ಚಿಸಿದ್ದವು. ಜನವರಿ 6 ಮತ್ತು 7 ರಂದು ಪೆಟ್ರೋಲ್ ಬೆಲೆ 49 ಪೈಸೆ ಆಗಿದ್ದರೆ, ಡೀಸೆಲ್ ಬೆಲೆಯನ್ನು 51 ಪೈಸೆ ಹೆಚ್ಚಿಸಿದೆ. ಬುಧವಾರ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 25 ಪೈಸೆ ಹೆಚ್ಚಿದ್ದು, ಪೆಟ್ರೋಲ್ ಹೊಸ ದಾಖಲೆಯ ಮಟ್ಟವನ್ನು 84.45 ರೂ.ಗೆ ತಲುಪಿದೆ. ಡೀಸೆಲ್ ಲೀಟರ್ಗೆ 74.63 ರೂ.ಗೆ ಏರಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಹೊಸ ವರ್ಷದಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಬಲವಾದ ಪ್ರವೃತ್ತಿ ಕಂಡುಬಂದಿದೆ. ತೈಲ ರಫ್ತು ದೇಶಗಳ ಸಂಸ್ಥೆ ಒಪೆಕ್ ಮಾರ್ಚ್ನಲ್ಲೂ ಉತ್ಪಾದನಾ ಕಡಿತವನ್ನು ಮುಂದುವರಿಸಲು ಒಪ್ಪಿಕೊಂಡಿದ್ದು, ಇದು ಬೆಲೆಗಳನ್ನು ಹೆಚ್ಚಿಸಿದೆ.
ಬುಧವಾರ ದೆಹಲಿಯಲ್ಲಿ ಪೆಟ್ರೋಲ್ 84.45 ರೂ ಮತ್ತು ಡೀಸೆಲ್ ಲೀಟರ್ಗೆ 74.63 ರೂ ಮತ್ತು ಮುಂಬೈಯಲ್ಲಿ ಪೆಟ್ರೋಲ್ 91.07 ಲೀಟರ್ ಮತ್ತು ಡೀಸೆಲ್ 81.34 ರೂ. ಅದೇ ರೀತಿ ಕೋಲ್ಕತ್ತಾದಲ್ಲಿ ಪೆಟ್ರೋಲ್ 85.92 ಮತ್ತು ಡೀಸೆಲ್ 78.22 ರೂ ಮತ್ತು ಚೆನ್ನೈನಲ್ಲಿ ಪೆಟ್ರೋಲ್ 87.18 ಮತ್ತು ಡೀಸೆಲ್ 79.95 ರೂ.ಗಳಷ್ಟಿದೆ.
ಯುಎನ್ಐ ಎಸ್ಎ 1125