Saturday, Aug 15 2020 | Time 09:33 Hrs(IST)
  • ಭಾರತೀಯರು ಸ್ಥಳೀಯರ ಧ್ವನಿಯಾಗಬೇಕು- ಪ್ರಧಾನಿ ಪ್ರತಿಪಾದನೆ
  • ನಾಡಿನ ಜನತೆಗೆ 74ನೇ ಸ್ವಾತಂತ್ರ್ಯೋತ್ಸವದ ಶುಭಕೋರಿದ ಮುಖ್ಯಮಂತ್ರಿ
  • ಆತ್ಮನಿರ್ಭರ ಭಾರತ, ಪ್ರತಿ ಭಾರತೀಯರ ದಿವ್ಯ ಮಂತ್ರ: ಪ್ರಧಾನಿ
  • ಅಧಿಕೃತ ನಿವಾಸದಲ್ಲೇ ಧ್ವಜಾರೋಹಣ ನೆರವೇರಿಸಿದ ರಾಜನಾಥ್ ಸಿಂಗ್
  • ಕರೋನ ಸಮರದಲ್ಲಿ ಗೆಲ್ಲುವುದೆ ನಮ್ಮ ಮುಖ್ಯ ಗುರಿ: ಮೋದಿ
  • ಡಿ ಜೆ ಹಳ್ಳಿ ಗಲಭೆ ಪ್ರಕರಣ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶ ಮಾಡಿ ರಾಜ್ಯ ಸರ್ಕಾರದ ಆದೇಶ
National Share

ಮೋದಿಯನ್ನು ಶಿವಾಜಿಗೆ ಹೋಲಿಕೆ; ವಿವಾದ ಅಂತ್ಯಗೊಳಿಸಿ-ಜಾವಡೇಕರ್

ಮೋದಿಯನ್ನು ಶಿವಾಜಿಗೆ ಹೋಲಿಕೆ; ವಿವಾದ ಅಂತ್ಯಗೊಳಿಸಿ-ಜಾವಡೇಕರ್
ಮೋದಿಯನ್ನು ಶಿವಾಜಿಗೆ ಹೋಲಿಕೆ; ವಿವಾದ ಅಂತ್ಯಗೊಳಿಸಿ-ಜಾವಡೇಕರ್

ನವದೆಹಲಿ, ಜ 14 (ಯುಎನ್ಐ) ಪ್ರಧಾನಿ ನರೇಂದ್ರ ಮೋದಿ ಅವರನ್ನು ಛತ್ರಪತಿ ಶಿವಾಜಿಗೆ ಹೋಲಿಸಿದ ಪುಸ್ತಕ ಬಿಜೆಪಿಗೆ ಸಂಬಂಧಿಸಿದಲ್ಲವಾದ್ದರಿಂದ ಈ ಕುರಿತು ವಿವಾದ ಸೃಷ್ಟಿಸುವುದನ್ನು ನಿಲ್ಲಿಸಬೇಕು ಎಂದು ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸಲಹೆ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಇತ್ತೀಚಿಗೆ ಬಿಡುಗಡೆಗೊಂಡಿರುವ ಪುಸ್ತಕಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಅಲ್ಲದೆ, ಈಗಾಗಲೇ ಲೇಖಕರು ಕ್ಷಮೆಯಾಚಿಸಿದ್ದು, ಪುಸ್ತಕವನ್ನೂ ಹಿಂಪಡೆದಿದ್ದಾರೆ. ಆದ್ದರಿಂದ ಈಗ ವಿವಾದವನ್ನು ಸ್ಥಗಿತಗೊಳಿಸಬೇಕು ಎಂದಿದ್ದಾರೆ.

ಶಿವಾಜಿ ಮಹಾರಾಜ್ ಓರ್ವ ಶ್ರೇಷ್ಠ ಆಡಳಿತಗಾರ ಮತ್ತು ದಂತಕತೆಯ ರಾಜನಾಗಿದ್ದರು. ಅವರು ಸದಾ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದ್ದರು. ಅವರು ಶತಮಾನಗಳ ನಂತರವೂ ಇತರರಿಗೆ ಸ್ಫೂರ್ತಿಯಾಗಿದ್ದು, ಅವರನ್ನು ಇತರರಿಗೆ ಹೋಲಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಈ ನಡುವೆ, ಶಿವಸೇನೆಯ ಮುಖವಾಣಿ 'ಸಾಮ್ನಾ' ತನ್ನ ಸಂಪಾದಕೀಯದಲ್ಲಿ ಮೋದಿಯನ್ನು ಶಿವಾಜಿಗೆ ಹೋಲಿಸಿರುವುದು ಭಟ್ಟಂಗಿತನದ ಸಂಕೇತವಾಗಿದ್ದು, ದೇಶ, ದೇವರು ಮತ್ತು ಧರ್ಮಕ್ಕೆ ಮಾಡಿರುವ ಅವಮಾನ ಎಂದು ಕಿಡಿಕಾರಿದೆ.

ಶಿವಾಜಿಯ ಭಕ್ತರಾದ ಬಿಜೆಪಿಯ ರಾಜ್ಯಸಭಾ ಸದಸ್ಯರಾದ ಸಂಬಾಜಿ ರಾಜೇ ಕೂಡ ಈ ಪುಸ್ತಕವನ್ನು ನಿಷೇಧಿಸುವಂತೆ ಬೇಡಿಕೆಯಿಟ್ಟಿದ್ದಾರೆ.

ಬಿಜೆಪಿ ಕೂಡ ಪುಸ್ತಕದಲ್ಲಿನ ಅಂಶಗಳಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.

ಬಿಜೆಪಿ ನಾಯಕ ಜೈ ಭಗವಾನ್ ಗೋಯಲ್ ಅವರು ತಮ್ಮ ಪುಸ್ತಕದಲ್ಲಿ ಮೋದಿಯನ್ನು ಶಿವಾಜಿಗೆ ಹೋಲಿಸಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಕ್ಷಮೆಯಾಚಿಸಿರುವ ಗೋಯಲ್, ಆ ಅಧ್ಯಾಯವನ್ನು ಹಿಂಪಡೆಯುವುದಾಗಿ ತಿಳಿಸಿದ್ದಾರೆ.

ಯುಎನ್ಐ ಎಸ್ಎಚ್ 1221