Thursday, Oct 1 2020 | Time 21:59 Hrs(IST)
 • ‘ಜಲ ಜೀವನ್ ಮಿಷನ್’ ಪರಿಣಾಮಕಾರಿ ಅನುಷ್ಠಾನ ಪ್ರಯತ್ನಗಳ ಮುಂದುವರಿಸುವಂತೆ ಗ್ರಾಮಪಂಚಾಯಿತಿಗಳಿಗೆ ಪ್ರಧಾನಿ ಕರೆ
 • ಒಂದು ವಾರ ವಿಶ್ರಾಂತಿಯ ಸಂಪೂರ್ಣ ಲಾಭ ಪಡೆದಿದ್ದೇವೆ: ಸಿಎಸ್‌ಕೆ ಕೋಚ್‌ ಫ್ಲೆಮಿಂಗ್
 • ರೋಹಿತ್ ಅರ್ಧಶತಕದ ಮಿಂಚು, ಮುಂಬಯಿ ಸವಾಲಿನ ಮೊತ್ತ
 • ರಾಹುಲ್, ಪ್ರಿಯಾಂಕಾ ಮೇಲಿನ ದೌರ್ಜನ್ಯ ವಿರೋಧಿಸಿ ಕಾಂಗ್ರೆಸ್ ಪಂಜಿನ ಮೆರವಣಿಗೆ; ನಾಯಕರ ಬಂಧನ
 • ರಾಹುಲ್ ಗಾಂಧಿ, ಪ್ರಿಯಾಂಕಾ ಬಂಧನಕ್ಕೆ ಸಿದ್ದರಾಮಯ್ಯ ಕಿಡಿ
 • ರಾಜ್ಯದಲ್ಲಿ 10,070 ಕೊರೋನಾ ಸೋಂಕು ಪತ್ತೆ: ಒಂದೇ ದಿನ 96,588 ದಾಖಲೆಯ ಸೋಂಕು ಪತ್ತೆ ಪರೀಕ್ಷೆ
 • ವಿಧಾನ ಪರಿಷತ್ ನ 4 ಸ್ಥಾನಗಳಿಗೆ ಚುನಾವಣೆಗೆ ಅಧಿಸೂಚನೆ ಪ್ರಕಟ; ನಾಮಪತ್ರ ಸಲ್ಲಿಕೆ ಆರಂಭ
 • ಭಾರತೀಯ ತೈಲ ನಿಗಮದಿಂದ ಪೆಟ್ರೋಲಿಯಂ ಉತ್ಪನ್ನಗಳ ಚಿಲ್ಲರೆ ಮಾರಾಟ ದರ ಇಳಿಕೆ
 • ರಾಜ್ಯದಲ್ಲಿ ಮುಂದುವರಿದ ಕೋವಿಡ್‌ ಪ್ರಕರಣಗಳ ಏರಿಕೆ; 1 10 ಲಕ್ಷ ತಲುಪಿದ ಸಕ್ರಿಯ ಪ್ರಕರಣಗಳು
 • ರಾಹುಲ್, ಪ್ರಿಯಾಂಕಾ ಮೇಲಿನ ಪೊಲೀಸ್ ದೌರ್ಜನ್ಯ ಖಂಡಿಸಿದ ಜೆಡಿಎಸ್
 • ವಿಧಾನ ಪರಿಷತ್ ಚುನಾವಣೆ: ಜೆಡಿಎಸ್ ಅಭ್ಯರ್ಥಿಗಳ ಹೆಸರು ಅಖೈರು
 • ಮೀಸಲು ಅರಣ್ಯದಲ್ಲಿ ಕಡವೆ ಬೇಟೆ; ಆರೋಪಿಗಳು ಅರಣ್ಯ ಇಲಾಖೆ ಬಲೆಗೆ
 • ನಾಗರಹೊಳೆ ಹುಲಿ ರಕ್ಷಿತಾರಣ್ಯದಲ್ಲಿ ಮೊದಲ ಬಾರಿಗೆ ಚಿಟ್ಟೆ ಪ್ರಬೇಧಗಳ ಸಮೀಕ್ಷೆ
 • ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್: ಇಬ್ಬರ ಬಂಧನ
 • ಬಿಜೆಪಿ ಸರ್ಕಾರದ ಮನಸ್ಥಿತಿ ಏನು ಎಂಬುದು ಬಯಲಾಗಿದೆ : ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್
National Share

ರಾಜಕೀಯವನ್ನು ಅಪರಾಧಮುಕ್ತಗೊಳಿಸುವ ಸುಪ್ರೀಂಕೋರ್ಟ್ ತೀರ್ಪು ಸ್ವಾಗತಿಸಿದ ಕಾಂಗ್ರೆಸ್; ಕರ್ನಾಟಕದಲ್ಲಿ ಕಳಂಕಿತ ಸಚಿವರ ನೇಮಕದ ವಿರುದ್ಧ ವಾಗ್ದಾಳಿ

ರಾಜಕೀಯವನ್ನು ಅಪರಾಧಮುಕ್ತಗೊಳಿಸುವ ಸುಪ್ರೀಂಕೋರ್ಟ್ ತೀರ್ಪು ಸ್ವಾಗತಿಸಿದ ಕಾಂಗ್ರೆಸ್; ಕರ್ನಾಟಕದಲ್ಲಿ ಕಳಂಕಿತ ಸಚಿವರ ನೇಮಕದ ವಿರುದ್ಧ ವಾಗ್ದಾಳಿ
ರಾಜಕೀಯವನ್ನು ಅಪರಾಧಮುಕ್ತಗೊಳಿಸುವ ಸುಪ್ರೀಂಕೋರ್ಟ್ ತೀರ್ಪು ಸ್ವಾಗತಿಸಿದ ಕಾಂಗ್ರೆಸ್; ಕರ್ನಾಟಕದಲ್ಲಿ ಕಳಂಕಿತ ಸಚಿವರ ನೇಮಕದ ವಿರುದ್ಧ ವಾಗ್ದಾಳಿ

ನವದೆಹಲಿ, ಫೆ.13 (ಯುಎನ್‌ಐ) ಭಾರತೀಯ ರಾಜಕಾರಣವನ್ನು ಅಪರಾಧಮುಕ್ತಗೊಳಿಸುವ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಸ್ವಾಗತಿಸಿರುವ ಕಾಂಗ್ರೆಸ್, ಕ್ರಿಮಿನಲ್ ಹಿನ್ನೆಲೆಯುಳ್ಳವರಿಗೆ ಬಿಜೆಪಿಯು ಸುರಕ್ಷಿತ ತಾಣ ಅಥವಾ ಆಶ್ರಯತಾಣವಾಗಿದೆ ಎಂದು ಗುರುವಾರ ಬಿಜೆಪಿಯ ವಿರುದ್ಧ ಟೀಕಾಪ್ರಹಾರ ನಡೆಸಿದೆ.

“ಮೋದಿಜಿ ಮತ್ತು ಬಿಜೆಪಿ ಮತ್ತೆ 'ಬಳ್ಳಾರಿ ಗ್ಯಾಂಗ್' ನ ರಕ್ಷಣೆಗೆ ಬರುತ್ತಿವೆ! ಕಳಂಕಿತ ನಾಯಕನಿಗೆ ಟಿಕೆಟ್ ನೀಡಿರುವ ಕಾರಣವನ್ನು ತಿಳಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ! ಕಳಂಕಿತರು ನಾಯಕರು ಮಾತ್ರ ಶಾಸಕರು ಅಲ್ಲ ಎಂದು ಮೋದಿಜಿ ಹೇಳುತ್ತಾರೆ. ಲೂಟಿ ಮಾಡಿದವರನ್ನೇ ಸಚಿವರನ್ನಾಗಿ ನೇಮಕ ಮಾಡಲಾಗಿದೆ! ಪ್ರಧಾನಿ ಮತ್ತು ಕರ್ನಾಟಕ ಮುಖ್ಯಮಂತ್ರಿಯವರ ವಿರುದ್ಧ ಸುಪ್ರೀಂಕೋರ್ಟ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುತ್ತದೆಯೇ ? ”ಎಂದು ಎಐಸಿಸಿ ಸಂವಹನ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಟ್ವೀಟ್ ಮಾಡಿದ್ದಾರೆ.

ಗಣಿಗಾರಿಕೆ ಮತ್ತು ಅರಣ್ಯ ಪ್ರಕರಣಗಳಲ್ಲಿ ಆರೋಪಿಯಾಗಿರುವ ಆನಂದ್ ಸಿಂಗ್ ಅವರನ್ನು ಕರ್ನಾಟಕ ರಾಜ್ಯದ ಅರಣ್ಯ, ಪರಿಸರ ಮತ್ತು ಪರಿಸರ ಸಚಿವರಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇಮಕ ಮಾಡಿರುವುದನ್ನು ಪ್ರಸ್ತಾಪಿಸಿ ಕಾಂಗ್ರೆಸ್ ವಕ್ತಾರರು ಈ ಪ್ರತಿಕ್ರಿಯೆ ನೀಡಿದ್ದಾರೆ.

ಇಂದು ಬೆಳಗ್ಗೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪೊಂದನ್ನು ನೀಡಿದ್ದು, ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ವಿರುದ್ಧ ಬಾಕಿ ಇರುವ ಪ್ರಕರಣಗಳ ವಿವರಗಳನ್ನು ಪತ್ರಿಕೆಗಳು, ಸಾಮಾಜಿಕ ಮಾಧ್ಯಮ ಮತ್ತು ಅವರ ವೆಬ್‌ಸೈಟ್‌ಗಳಲ್ಲಿ ಅಪ್‌ಲೋಡ್ ಮಾಡುವಂತೆ ರಾಜಕೀಯ ಪಕ್ಷಗಳಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು.

ರಾಜಕೀಯ ಪಕ್ಷಗಳು ಆದೇಶವನ್ನು ಪಾಲಿಸಲು ವಿಫಲವಾದರೆ ನ್ಯಾಯಾಂಗ ನಿಂದನೆಯನ್ನು ಎದುರಿಸಬೇಕಾಗುತ್ತದೆ ಎಂದು ಕೋರ್ಟ್ ಎಚ್ಚರಿಕೆ ನೀಡಿದೆ. ಅಂತಹ ಸಂದರ್ಭಗಳಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವಂತೆ ಚುನಾವಣಾ ಆಯೋಗಕ್ಕೆ ನ್ಯಾಯಪೀಠ ಸೂಚಿಸಿದೆ.

ರಾಜಕೀಯವನ್ನು ಶುದ್ಧೀಕರಿಸುವ ಸಂಬಂಧ ಸುಪ್ರೀಂ ಕೋರ್ಟ್ ಇಂದು ನೀಡಿರುವುದು ಐತಿಹಾಸಿಕ ತೀರ್ಪು. ರಾಜಕೀಯವನ್ನು ನ್ಯಾಯಸಮ್ಮತಗೊಳಿಸುವತ್ತ ಇದು ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಎಐಸಿಸಿ ವಕ್ತಾರ ಜೈವೀರ್ ಶೆರ್ಗಿಲ್ ಅವರು ಪಕ್ಷದ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಸುಪ್ರೀಂ ಕೋರ್ಟ್ ತೀರ್ಪು ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ರಾಜಕೀಯದ ಅಪರಾಧಿಗಳ ವಿರುದ್ಧದ ಹೋರಾಟ ಮತ್ತು ರಾಜಕೀಯ ಎಂಬುದು ಅಪರಾಧ ಮತ್ತು ಅಪರಾಧಿಗಳಿಂದ ಮುಕ್ತವಾಗಬೇಕೆಂಬ ಅವರ ನಿಲುವನ್ನು ಸಮರ್ಥಿಸುತ್ತದೆ ಎಂದು ಶೆರ್ಗಿಲ್ ಹೇಳಿದ್ದಾರೆ.

"ಈ ಐತಿಹಾಸಿಕ ತೀರ್ಪು ಬಂದ ದಿನ, ಬಿಜೆಪಿ ತನ್ನ ಶಾಸಕ ಆನಂದ್ ಸಿಂಗ್ ಅವರ ವಿರುದ್ಧ 15 ಭ್ರಷ್ಟಾಚಾರ ಪ್ರಕರಣಗಳು ಇದ್ದರೂ ಸಹ ಅವರನ್ನು ಕರ್ನಾಟಕದಲ್ಲಿ ಸಚಿವರನ್ನಾಗಿ ನೇಮಿಸಿದೆ ಎಂದು ಬಿಜೆಪಿಯ ವಿರುದ್ಧ ಅವರು ಟೀಕಾಪ್ರಹಾರ ನಡೆಸಿದ್ದಾರೆ.

"ಆನಂದ್ ಸಿಂಗ್ ಅವರನ್ನು ಬಿಜೆಪಿ ನೇಮಕ ಮಾಡುವುದರ ಮೂಲಕ ಬಳ್ಳಾರಿ ಗ್ಯಾಂಗ್ ಅನ್ನು ಆಡಳಿತಕ್ಕೆ ಕರೆತರುವ ತನ್ನ ಬದ್ಧತೆಯನ್ನು ಈಡೇರಿಸಿದೆ" ಎಂದು ಅವರು ವ್ಯಂಗ್ಯವಾಡಿದರು.

"ಆನಂದ್ ಸಿಂಗ್ ನೇಮಕ ಮೂಲಕ ಕರ್ನಾಟಕದಲ್ಲಿ ನಡೆಯುತ್ತಿರುವ ಬಳ್ಳಾರಿ ಗಣಿಗಾರಿಕೆ ಹಗರಣಗಳಿಗೆ ದೇಶದ ಪ್ರಧಾನಿ ಮತ್ತು ಕರ್ನಾಟಕದ ಮುಖ್ಯಮಂತ್ರಿ ಅನುಮೋದನೆ ನೀಡಿದಂತಾಗಿದೆ ಎಂದು ಅವರು ವ್ಯಾಖ್ಯಾನಿಸಿದರು.

"ಅಪರಾಧದ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಮತ್ತು ಚಾರ್ಜ್‌ಶೀಟ್ ಎದುರಿಸುತ್ತಿರುವ ಯಾವುದೇ ಸಚಿವರನ್ನು ಸೇರಿಸಿಕೊಳ್ಳಬಾರದು ಎಂಬ ಸುಪ್ರೀಂ ಕೋರ್ಟ್‌ನ ನಿರ್ದೇಶನವನ್ನು ಪ್ರಧಾನಿ ಉಲ್ಲಂಘಿಸಿದ್ದಾರೆ ಎಂದು ಶೆರ್ಗಿಲ್ ಹೇಳಿದರು.

ಹೆಸರಾಂತ ಸಂಸ್ಥೆಯೊಂದರ ಪ್ರಕಾರ, ಶೇಕಡಾ 42 ರಷ್ಟು ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಬಾಕಿ ಇದೆ.

106 ಸಂಸದರ ವಿರುದ್ಧ ಗಂಭೀರ ಅಪರಾಧ-ಕೊಲೆ, ಅಪಹರಣ ಇತ್ಯಾದಿ ಪ್ರಕರಣಗಳು ಇವೆ. ಈ ಪೈಕಿ 92 ಸಂಸದರು ಬಿಜೆಪಿಯವರು ಎಂದು ಅವರು ಆರೋಪಿಸಿದರು.

ಶೇ.55 ರಷ್ಟು ಬಿಜೆಪಿ ಸಂಸದರ ವಿರುದ್ಧ ಗಂಭೀರ ಸ್ವರೂಪದ ಪ್ರಕರಣಗಳು ಬಾಕಿ ಇವೆ. ಕೆಲವು ಬಿಜೆಪಿ ಸಂಸದರು ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳಲ್ಲೂ ಆರೋಪಿಗಳಾಗಿದ್ದಾರೆ. ದೆಹಲಿ ವಿಧಾನಸಭಾ ಚುನಾವಣೆಯ ನಂತರ, ಹೊಸ ಬಿಜೆಪಿ ಶಾಸಕರಲ್ಲಿ, ಶೇಕಡಾ 64 ರಷ್ಟು ಬಿಜೆಪಿ ಶಾಸಕರ (5/8) ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಕಾಂಗ್ರೆಸ್ ವಕ್ತಾರರು ವಿವರಿಸಿದರು.

ಯುಎನ್ಐ ಎಎಚ್ 2210

More News
ಶನಿವಾರ ರೋಹ್ಟಂಗ್‌ನಲ್ಲಿನ ವಿಶ್ವದ ಅತಿ ಉದ್ದದ ಹೆದ್ದಾರಿ ಅಟಲ್ ಸುರಂಗ ಲೋಕಾರ್ಪಣೆ ಮಾಡಲಿರುವ ಪ್ರಧಾನಿ ಮೋದಿ

ಶನಿವಾರ ರೋಹ್ಟಂಗ್‌ನಲ್ಲಿನ ವಿಶ್ವದ ಅತಿ ಉದ್ದದ ಹೆದ್ದಾರಿ ಅಟಲ್ ಸುರಂಗ ಲೋಕಾರ್ಪಣೆ ಮಾಡಲಿರುವ ಪ್ರಧಾನಿ ಮೋದಿ

01 Oct 2020 | 8:49 PM

ನವದೆಹಲಿ, ಅ 1 [ಯುಎನ್ಐ] ರೋಹ್ಟಂಗ್‌ನಲ್ಲಿ ವಿಶ್ವದ ಅತಿ ಉದ್ದದ ಹೆದ್ದಾರಿ, ಅಟಲ್ ಸುರಂಗವನ್ನು ಪ್ರಧಾನಿ ನರೇಂದ್ರಮೋದಿ ನಾಡಿದ್ದು, ಬೆಳಗ್ಗೆ ಉದ್ಘಾಟಿಸಲಿದ್ದಾರೆ.

 Sharesee more..
ಲಾಕ್‌ಡೌನ್‌ ಅವಧಿಯ ವಿಮಾನ ಟಿಕೆಟ್‌ ದರ ತಕ್ಷಣ ಮರುಪಾವತಿಸಿ; ಸುಪ್ರೀಂಕೋರ್ಟ್

ಲಾಕ್‌ಡೌನ್‌ ಅವಧಿಯ ವಿಮಾನ ಟಿಕೆಟ್‌ ದರ ತಕ್ಷಣ ಮರುಪಾವತಿಸಿ; ಸುಪ್ರೀಂಕೋರ್ಟ್

01 Oct 2020 | 8:41 PM

ನವದೆಹಲಿ, ಅ 1 (ಯುಎನ್ಐ) ದೇಶದಲ್ಲಿ ಲಾಕ್‌ಡೌನ್‌ ಅವಧಿಯಲ್ಲಿ ಕಾಯ್ದಿರಿಸಲಾಗಿರುವ ವಿಮಾನ ಟಿಕೆಟ್‌ಗಳನ್ನು ಮರುಪಾವತಿ ಮಾಡಲು ನಾಗರಿಕ ವಿಮಾನಯಾನದ ಪ್ರಧಾನ ನಿರ್ದೇಶನಾಲಯ (ಡಿಜಿಸಿಎ) ಸಮ್ಮತಿ ನೀಡಿದ ಹಿನ್ನೆಲೆಯಲ್ಲಿ ಇದಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಸುಪ್ರೀಂಕೋರ್ಟ್ ಗುರುವಾರ ಇತ್ಯರ್ಥಗೊಳಿಸಿದೆ.

 Sharesee more..