NationalPosted at: Feb 22 2021 5:53PM
Shareವಿಶ್ವಾಸಮತಕ್ಕೆ ಸೋಲು, ಪುದುಚೇರಿ ಕಾಂಗ್ರೆಸ್ ಸರಕಾರ ಪತನ
ವಿಶ್ವಾಸಮತಕ್ಕೆ ಸೋಲು, ಪುದುಚೇರಿ ಕಾಂಗ್ರೆಸ್ ಸರಕಾರ ಪತನಪುದುಚೇರಿ ಫೆ 22 (ಯುಎನ್ಐ ) ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಸಾಧ್ಯವಾಗದ ಕಾರಣ ಪುದುಚೇರಿ ಕಾಂಗ್ರೆಸ್ ಸರಕಾರ ಪತನಗೊಂಡಿದೆ ಎಂದು ವರದಿಯಾಗಿದೆ ಭಾನುವಾರದಂದು ಇಬ್ಬರು ಶಾಸಕರು ರಾಜೀನಾಮೆ ನೀಡಿದ್ದರು.
ಕಾಂಗ್ರೆಸ್ ನ ಓರ್ವ ಶಾಸಕ ಹಾಗೂ ಮಿತ್ರಪಕ್ಷ ಡಿಎಂಕೆಯ ಓರ್ವ ಶಾಸಕ ರಾಜೀನಾಮೆ ನೀಡಿದ್ದರು. ಇದರಿಂದಾಗಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಸರಕಾರದ ಸ್ಥಾನವು ೧೨ಕ್ಕೆ ಕುಸಿತವಾಗಿ ವಿಧಾನಸಭೆಯಲ್ಲಿ ವಿಶ್ವಾಸ ಮತಕ್ಕೆ ಸೋಲಾಗಿ,. ನಾರಾಯಣಸ್ವಾಮಿ ನೇತೃತ್ವದ ಸರಕಾರವು ಪತನಗೊಂಡಿದ್ದು ಬಳಿಕ ವಿದಾನಸಭೆಯ ಕಲಾಪವನ್ನು ಅನಿದಿಷ್ಟ ಅವಧಿಗೆ ಸ್ಪೀಕರ್ ಮುಂದೂಡಿದ್ದಾರೆ.
ಯುಎನ್ಐ ಕೆಎಸ್ಆರ್ 1213