Sunday, Jul 12 2020 | Time 23:32 Hrs(IST)
 • ಟೆಸ್ಟ್ ಕ್ರಿಕೆಟ್: ಇಂಗ್ಲೆಂಡ್‌ ವಿರುದ್ಧ ವೆಸ್ಟ್‌ ಇಂಡೀಸ್‌ಗೆ 4 ವಿಕೆಟ್ ಜಯ
 • ಕೃಷಿ ಸಚಿವ ಬಿ ಸಿ ಪಾಟೀಲ್ ಒಂದು ವಾರ ಕ್ವಾರಂಟೈನ್ : ಸೋಂಕಿತರ ಸಂಪರ್ಕ ಹಿನ್ನಲೆ
 • ರಾಮನಗರ ಲಾಕ್‌ಡೌನ್‌ಗೆ ಎಚ್ ಡಿ ಕುಮಾರಸ್ವಾಮಿ ಸಲಹೆ
 • ಸೋಂಕಿತರಿಗೆ ಸೂಕ್ತ ಚಿಕಿತ್ಸೆ,ರೋಗ ಲಕ್ಷಣ ಪತ್ತೆಗಾಗಿ ತುರ್ತು ಸಹಾಯವಾಣಿ ಆರಂಭಿಸಲು ಸೂಚನೆ : ಡಾ ಸುಧಾಕರ್
 • ಕಾಂಗ್ರೆಸ್ ನಾಯಕತ್ವವನ್ನು ಭೇಟಿ ಮಾಡಲು ದೆಹಲಿಯಲ್ಲಿರುವ ಸಚಿನ್ ಪೈಲಟ್
 • 'ಕುವೆಂಪು ಹನುಮದ್ದರ್ಶನ' ಕೃತಿ ಲೋಕಾರ್ಪಣೆ ಮಾಡಿದ ಡಿಸಿಎಂ ಡಾ ಅಶ್ವಥ್ ನಾರಾಯಣ್
 • ವಿಕಾಸ್ ದುಬೆ ಪ್ರಕರಣ; ಬ್ರಾಹ್ಮಣ ಸಮುದಾಯಕ್ಕೆ ಕಿರುಕುಳ ಬೇಡ; ಯೋಗಿ ಸರ್ಕಾರಕ್ಕೆ ಮಾಯಾವತಿ ಒತ್ತಾಯ
 • ಮಚ್ಚಿನಿಂದ ಕೊಚ್ಚಿ ಯುವಕನ ಬರ್ಬರ ಕೊಲೆ
 • ಮಗಳಿಗೆ ಮದ್ಯ ಕುಡಿಸಿ ಅತ್ಯಾಚಾರವೆಸಗಿದ ಮಲತಂದೆ: ಪರಾರಿಯಾಗಿರುವ ಆರೋಪಿಗಾಗಿ ಶೋಧ
 • ಪೊಲೀಸರಿಗೆ ಕರೋನಾ ಸೋಂಕು ಹೆಚ್ಚಳ ತಡವಾಗಿ ಎಚ್ಚತ್ತ ಗೃಹ ಇಲಾಖೆ : ಸಿಬ್ಬಂದಿಗಳ ಕಾರ್ಯವಿಧಾನದಲ್ಲಿ ಬದಲಾವಣೆ
 • ರಾಜ್ಯದಲ್ಲಿ 2627 ಹೊಸ ಕೋವಿಡ್ ಪ್ರಕರಣಗಳು ವರದಿ, 71 ಸಾವು; ಸೋಂಕಿತರ ಸಖ್ಯೆ 38843ಕ್ಕೇರಿಕೆ
 • ರಾಜಕಾಲುವೆಗೆ ಬಿದ್ದ ಬಾಲಕಿಗಾಗಿ ಮುಂದುವರಿದ ಕಾರ್ಯಾಚರಣೆ: ಎರಡು ದಿನವಾದರೂ ಪತ್ತೆಯಿಲ್ಲ
 • ಕೊವಿಡ್‍: ಪರಪ್ಪನ ಅಗ್ರಹಾರ ಜೈಲಿನಲ್ಲಿ 56 ಕೈದಿಗಳಿಗೆ ಸೋಂಕು ದೃಢ
 • ಕೋವಿಡ್ ನಿಭಾಯಿಸಲು ಸರ್ಕಾರಕ್ಕೆ ಬೆಂಬಲ ನೀಡೋಣ, ಆದರೆ ಕೋವಿಡ್ ಕಾಲದ ಲೂಟಿಗಲ್ಲ; ಎಚ್‌ಡಿಕೆ
 • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಐವರು ಕೊರೊನಾದಿಂದ ಸಾವು: 46ಕ್ಕೇರಿದ ಸಾವಿನ ಸಂಖ್ಯೆ
National Share

ಹುರಿಯತ್ ಕಾನ್ಫರೆನ್ಸ್ ಗೆ ಸಯ್ಯದ್‍ ಅಲಿ ಶಾ ಗಿಲಾನಿ ರಾಜೀನಾಮೆ

ಹುರಿಯತ್ ಕಾನ್ಫರೆನ್ಸ್ ಗೆ ಸಯ್ಯದ್‍ ಅಲಿ ಶಾ ಗಿಲಾನಿ ರಾಜೀನಾಮೆ
ಹುರಿಯತ್ ಕಾನ್ಫರೆನ್ಸ್ ಗೆ ಸಯ್ಯದ್‍ ಅಲಿ ಶಾ ಗಿಲಾನಿ ರಾಜೀನಾಮೆ

ಶ್ರೀನಗರ, ಜೂನ್ 29 (ಯುಎನ್‌ಐ) ಕಳೆದ ಮೂರು ದಶಕಗಳಿಂದ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳ ಮುಖವಾಣಿಯಾಗಿದ್ದ ಸೈಯದ್ ಅಲಿ ಶಾ ಗಿಲಾನಿ, ಕಣಿವೆಯ ಅತಿದೊಡ್ಡ ಪ್ರತ್ಯೇಕತಾವಾದಿಗಳ ಒಕ್ಕೂಟವಾದ ಹುರಿಯತ್ ಕಾನ್ಫರೆನ್ಸ್(ಎಚ್‌ಸಿ)ಗೆ ರಾಜೀನಾಮೆ ನೀಡಿದ್ದಾರೆ.

ಹುರಿಯತ್ ಕಾನ್ಫರೆನ್ಸ್ ನ ಜೀವಾವಧಿ ಅಧ್ಯಕ್ಷರಾಗಿದ್ದ 90 ವರ್ಷ ವಯಸ್ಸಿನ ಗಿಲಾನಿ ಕಳೆದ ಹಲವಾರು ಅನಾರೋಗ್ಯದಿಂದ ಬಳಲುತ್ತಿದ್ದಾರೆ.

ಆಲ್-ಪಾರ್ಟಿ ಹುರಿಯತ್ ಕಾನ್ಫರೆನ್ಸ್‍ಗೆ ರಾಜೀನಾಮೆ ಘೋಷಿಸಿದ ನಂತರ ಗಿಲಾನಿ, ‘ ಒಕ್ಕೂಟದಲ್ಲಿನ ಪ್ರಸ್ತುತ ಸನ್ನಿವೇಶಗಳಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ.’ ಎಂದು ಆಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

‘ಹುರಿಯತ್ ಕಾನ್ಫರೆನ್ಸ್‍ ನ ಸದ್ಯದ ಸ್ಥಿತಿಯ ಹಿನ್ನೆಲೆಯಲ್ಲಿ ಒಕ್ಕೂಟದಿಂದ ಸಂಪೂರ್ಣವಾಗಿ ನಿರ್ಗಮಿಸುತ್ತಿದ್ದೇನೆ . ಈ ಸನ್ನಿವೇಶದಲ್ಲಿ, ವಿವಿಧ ಪ್ರತ್ಯೇಕತಾವಾದಿ ಸಂಘಟನೆಗಳ ಮೈತ್ರಿ ಕೂಟದ ಎಲ್ಲರಿಗೂ ಈಗಾಗಲೇ ಎರಡು ಪುಟಗಳ ವಿವರವಾದ ಪತ್ರವನ್ನು ಕಳುಹಿಸಿದ್ದೇನೆ.’ಎಂದು ಗಿಲಾನಿ ಅವರು ಇಂದು ಬೆಳಿಗ್ಗೆ ಬಿಡುಗಡೆ ಮಾಡಿದ ಆಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

1993 ರಲ್ಲಿ ಸ್ಥಾಪಿತವಾದ ಹುರಿಯತ್‍ ಕಾನ್ಫರೆನ್ಸ್‍ ಸ್ಥಾಪಕ ಸದಸ್ಯರಲ್ಲಿ ಗಿಲಾನಿ ಒಬ್ಬರಾಗಿದ್ದರು. ಮಿರ್ವಾಯಿಜ್ ಮೌಲ್ವಿ ಒಮರ್ ಫಾರೂಕ್ ಅವರ ತಂದೆ ಮೇ 21, 1990 ರಂದು ಅವರ ನೈಜೀನ್ ನಿವಾಸದಲ್ಲಿ ಅಪರಿಚಿತ ಬಂದೂಕುಧಾರಿಗಳಿಂದ ಹತ್ಯೆಯಾದ ನಂತರ ಫಾರೂಕ್‍ ಒಕ್ಕೂಟದ ಮೊದಲ ಅಧ್ಯಕ್ಷರಾಗಿದ್ದರು.

2003 ರಲ್ಲಿ ಹುರಿಯತ್ ಕಾನ್ಫರೆನ್ಸ್ ಎರಡು ಬಣಗಳಾಗಿ ವಿಭಜನೆಗೊಂಡಿತು. ಗಿಲಾನಿ ಅದೇ ವರ್ಷದಲ್ಲಿ ತೆಹ್ರೀಕ್-ಎ-ಹುರಿಯತ್ ಎಂಬ ಹೊಸ ಪಕ್ಷವನ್ನು ಸ್ಥಾಪಿಸಿದ್ದರು.

ಹುರಿಯತ್ ಸಮ್ಮೇಳನದ ಒಂದು ಗಿಲಾನಿ ಬಣವನ್ನು ಮುನ್ನಡೆಸುತ್ತಿದ್ದರೆ, ಮತ್ತೊಂದು ಬಣದ ನೇತೃತ್ವವನ್ನು ಮಿರ್ವಾಯಿಜ್ ಉಮರ್ ಫಾರೂಕ್ ನೇತೃತ್ವ ವಹಿಸಿದ್ದರು.

ಹುರಿಯತ್ ಸಮ್ಮೇಳನದ ಮುಖ್ಯಸ್ಥರಾಗಿ ಮುಂದುವರಿದಿದ್ದರೂ, ಗಿಲಾನಿ ಮಾರ್ಚ್ 2018 ರಲ್ಲಿ ತೆಹ್ರೀಕ್-ಎ-ಹುರಿಯತ್ ಎಂಬ ಪ್ರತ್ಯೇಕತಾವಾದಿ ಪಕ್ಷದ ಅಧ್ಯಕ್ಷ ಸ್ಥಾನದಿಂದ ಹೊರಬಂದಿದ್ದರು. ಗಿಲಾನಿಯ ಆಪ್ತ ಸಹಾಯಕ ಮೊಹಮ್ಮದ್ ಅಶ್ರಫ್ ಸೆಹ್ರಾಯ್ , ತೆಹ್ರೀಕ್-ಎ-ಹುರಿಯತ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.

ಯುಎನ್‍ಐ ಎಸ್‍ಎಲ್‍ಎಸ್ 1437

More News
ತೈಲ ಕಂಪನಿಗಳಿಂದ ಡೀಸೆಲ್ ಬೆಲೆ ಮತ್ತೆ ಹೆಚ್ಚಳ

ತೈಲ ಕಂಪನಿಗಳಿಂದ ಡೀಸೆಲ್ ಬೆಲೆ ಮತ್ತೆ ಹೆಚ್ಚಳ

12 Jul 2020 | 6:15 PM

ನವದೆಹಲಿ, ಜುಲೈ 12(ಯುಎನ್ಐ) ವಾಹನ ಸವಾರರಿಗೆ ಮತ್ತೆ ಬೆಲೆ ಏರಿಕೆಯ ಶಾಕ್ ತಟ್ಟಿದ್ದು ತೈಲ ಕಂಪನಿಗಳು ಇಂದೂ ಪ್ರತಿ ಲೀಟರ್ ಡೀಸೆಲ್ ಗೆ ಮತ್ತೆ 16 ಪೈಸೆ ಏರಿಕೆ ಮಾಡಿವೆ.

 Sharesee more..
ಆತ್ಮನಿರ್ಭರ ಭಾರತ ಯೋಜನೆಯ ಪ್ಯಾಕೇಜ್ ಅನುಷ್ಠಾನ ಪರಿಶೀಲಿಸಿದ ನಿರ್ಮಲಾ ಸೀತಾರಾಮನ್

ಆತ್ಮನಿರ್ಭರ ಭಾರತ ಯೋಜನೆಯ ಪ್ಯಾಕೇಜ್ ಅನುಷ್ಠಾನ ಪರಿಶೀಲಿಸಿದ ನಿರ್ಮಲಾ ಸೀತಾರಾಮನ್

12 Jul 2020 | 5:35 PM

ನವದೆಹಲಿ, ಜು 12 (ಯುಎನ್ಐ) ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಮತ್ತು ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವಾಗಲು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಜಿಡಿಪಿಯ ಶೇ.10ರಷ್ಟು ಮೊತ್ತಕ್ಕೆ ಸಮನಾದ 20 ಲಕ್ಷ ಕೋಟಿ ರೂ.ಗಳ ಆತ್ಮನಿರ್ಭರ ಭಾರತ ಪ್ಯಾಕೇಜ್ ಅನುಷ್ಠಾನದ ಕ್ರಮಗಳನ್ನು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಪರಿಶೀಲನೆ ನಡೆಸಿದರು.

 Sharesee more..