Friday, Sep 17 2021 | Time 13:26 Hrs(IST)
National Share

ದೇಶದಲ್ಲಿ 41,831 ಹೊಸ ಕೊರೋನ ಪ್ರಕರಣ, 541 ಜನರ ಸಾವು

ದೇಶದಲ್ಲಿ 41,831 ಹೊಸ ಕೊರೋನ ಪ್ರಕರಣ, 541 ಜನರ ಸಾವು
ದೇಶದಲ್ಲಿ 41,831 ಹೊಸ ಕೊರೋನ ಪ್ರಕರಣ, 541 ಜನರ ಸಾವು

ನವದೆಹಲಿ, ಆ 1 (ಯುಎನ್ಐ ) ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 41,831 ಜನರಿಗೆ ಕೊರೊನ ಸೋಂಕು ತಗುಲಿದ್ದು , ಚಿಕಿತ್ಸೆ ಫಲಕಾರಿಯಾಗದೇ 541ರೋಗಿಗಳು ಮೃತಪಟ್ಟಿದ್ದಾರೆ ಎಂದು ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಸದ್ಯ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 31,655,824‬ಕ್ಕೆ ಏರಿಕೆಯಾಗಿದೆ . ಇನ್ನು ಒಂದೇ ದಿನದಲ್ಲಿ 39,258 ಜನರು ಕೊರೊನಾದಿಂದ ಚೇತರಿಸಿಕೊಂಡಿದ್ದು, ಈವರೆಗೆ 30,820,521‬ ಜನರು ಗುಣಮುಖರಾಗಿದ್ದಾರೆ. ಚೇತರಿಕೆ ಶೇಕಡ 97.36ರಷ್ಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಚಿಕಿತ್ಸೆಫಲಕಾರಿಯಾಗದೆ 541 ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 424,351ಕ್ಕೆ ಏರಿದೆ.

ದೇಶದಲ್ಲಿ ಈವರೆಗೆ 47ಕೋಟಿ ಜನರಿಗೆ ಕೊರೋನ ಲಸಿಕೆ ನೀಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮಾಹಿತಿ ನೀಡಿದೆ.

ಯುಎನ್ಐ ಕೆಎಸ್ಆರ್ 1030