Wednesday, Jul 17 2019 | Time 12:15 Hrs(IST)
  • ಬಂಡಾಯ ಶಾಸಕರು ವಿಶ್ವಾಸ ಮತಯಾಚನೆಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಲ್ಲ: ಸುಪ್ರೀಂ ತೀರ್ಪು
  • ನರೇಂದರ್‌ : ಅಂತಾರಾಷ್ಟ್ರೀಯ ಗೋಲು ಗಳಿಸಿದ ಭಾರತದ ಎರಡನೇ ಅತಿ ಕಿರಿಯ ಆಟಗಾರ
  • ನಾಲ್ಕೈದು ದಿನಗಳಲ್ಲಿ ಬಿಜೆಪಿ ಸರ್ಕಾರಅಸ್ಥಿತ್ವಕ್ಕೆ : ಬಿಎಸ್ ಯಡಿಯೂರಪ್ಪ ವಿಶ್ವಾಸ
Parliament Share

ಕರ್ನಾಟಕ ರಾಜಕೀಯ ಬಿಕ್ಕಟ್ಟು: 3ನೇ ದಿನವೂ ಪ್ರತಿಪಕ್ಷಗಳಿಂದ ಸಭಾತ್ಯಾಗ

ಕರ್ನಾಟಕ ರಾಜಕೀಯ ಬಿಕ್ಕಟ್ಟು: 3ನೇ ದಿನವೂ ಪ್ರತಿಪಕ್ಷಗಳಿಂದ ಸಭಾತ್ಯಾಗ
ಕರ್ನಾಟಕ ರಾಜಕೀಯ ಬಿಕ್ಕಟ್ಟು: 3ನೇ ದಿನವೂ ಪ್ರತಿಪಕ್ಷಗಳಿಂದ ಸಭಾತ್ಯಾಗ

ನವದೆಹಲಿ, ಜುಲೈ 11 (ಯುಎನ್‌ಐ) ಕರ್ನಾಟಕ ಮತ್ತು ಗೋವಾದಲ್ಲಿನ ರಾಜಕೀಯ ಬೆಳವಣಿಗೆಗಳ ವಿರುದ್ಧ ತಮ್ಮ ಪ್ರತಿಭಟನೆ ವ್ಯಕ್ತಪಡಿಸುವ ಮೂಲಕ ಪ್ರಧಾನ ವಿರೋಧ ಪಕ್ಷಗಳಾದ ಕಾಂಗ್ರೆಸ್, ಡಿಎಂಕೆ, ತೃಣಮೂಲ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಗುರುವಾರ ಲೋಕಸಭೆಯಲ್ಲಿ ಸಭಾತ್ಯಾಗ ನಡೆಸಿದವು

ಬೆಳಿಗ್ಗೆ ಶೂನ್ಯ ವೇಳೆ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರೈತರ ವಿಷಯದ ಕುರಿತು ಮಾತು ಮುಗಿಸುತ್ತಿದ್ದಂತೆ ಕಾಂಗ್ರೆಸ್ ಸಭಾ ನಾಯಕ ಅಧಿರ್ ರಂಜನ್ ಚೌಧರಿ ಎದ್ದು ನಿಂತು ಕರ್ನಾಟಕ ಮತ್ತು ಗೋವಾದಲ್ಲಿ ಬಿಜೆಪಿ 'ಶಾಸಕರ ಖರೀದಿ ರಾಜಕೀಯ'ದಲ್ಲಿ ತೊಡಗಿದೆ ಎಂದು ಆರೋಪಿಸಿದರು.

ಹತ್ತು ಕಾಂಗ್ರೆಸ್ ಶಾಸಕರು ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ಗೋವಾ ರಾಜಕೀಯ ಪರಿಸ್ಥಿತಿಯನ್ನು ಅವರು ಉಲ್ಲೇಖಿಸಿದರು.

ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ರಾಜಕೀಯ ಅಸ್ಥಿರತೆಯಾಗುತ್ತಿದೆ ಎಂಬ ವಿಷಯವನ್ನು ಕಾಂಗ್ರೆಸ್ ನಾಯಕ ಚೌಧರಿ ಮತ್ತು ಇತರರು ಸತತ ನಾಲ್ಕನೇ ದಿನವೂ ಪ್ರಸ್ತಾಪಿಸಿದರು.

'ಸಂವಿಧಾನವನ್ನು ಕಗ್ಗೋಲೆ ಮಾಡಲಾಗುತ್ತಿದೆ.' ಎಂದು ಚೌಧರಿ ದೂರಿದರು.

ಪಕ್ಷವನ್ನು ತೊರೆದು ಬಿಜೆಪಿಗೆ ಸೇರಿದ ಹತ್ತು ಗೋವಾ ಕಾಂಗ್ರೆಸ್ ಶಾಸಕರು ಬುಧವಾರ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಕಾರ್ಯಾಧ್ಯಕ್ಷ ಜೆ ಪಿ ನಡ್ಡಾ ಸೇರಿದಂತೆ ಹಿರಿಯ ಬಿಜೆಪಿ ನಾಯಕರೊಂದಿಗೆ ಸಂಭಾವ್ಯ ಭೇಟಿಗಾಗಿ ಇಲ್ಲಿಗೆ ಆಗಮಿಸಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಎದುರಿಸುತ್ತಿರುವ ಪ್ರಮುಖ ರಾಜಕೀಯ ಬಿಕ್ಕಟ್ಟಿನ ರೀತಿಯಲ್ಲೇ ಗೋವಾದಲ್ಲಿ ಪ್ರಮುಖ ರಾಜಕೀಯ ಪ್ರಹಸನ ಶುರುವಾಗಿದೆ.

ಪಕ್ಷ ತೊರೆದ ಕಾಂಗ್ರೆಸ್ ಶಾಸಕರು - ಚಂದ್ರಕಾಂತ್ ಕವಲೆಕರ್, ಅಟಾನಾಸಿಯೊ ಮಾನ್‌ಸೆರೇಟ್, ಜೆನ್ನಿಫರ್ ಮಾನ್‌ಸೆರೇಟ್, ನೀಲಕಾಂತ್ ಹಲಾರಂಕರ್, ಟೋನಿ ಫೆರ್ನಾಂಡಿಸ್, ಫ್ರಾನ್ಸಿಸ್ ಸಿಲ್ವೀರಾ, ವಿಲ್ಫ್ರೆಡ್ ಡಿ ಸಾ, ಫಿಲಿಪೆ ನೆರಿ ರಾಡ್ರಿಗಸ್, ಕ್ಲಾಫಾಸಿಯೊ ಡಿಯಾಸ್ ಮತ್ತು ಐಸಿಡೋರ್ ಫರ್ನಾಂಡಿಸ್. ಪಕ್ಷದಿಂದ ಹೊರ ಬಂದ 15 ಶಾಸಕರ ಪೈಕಿ 10 ಶಾಸಕರ ಗುಂಪು ಬಿಜೆಪಿ ಸೇರಲಿದೆ ಎಂದು ಶಾಸಕರು ಹೇಳಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಸದನದಲ್ಲಿ ಮಾತನಾಡಿ, ಕಾಂಗ್ರೆಸ್‍ಗೆ ತಮ್ಮ ಸ್ವಂತ ಮನೆ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಈ ವಿಷಯವನ್ನು ಲೋಕಸಭೆಗೆ ಎಳೆದು ಕಾರ್ಯಕಲಾಪಗಳಿಗೆ ಅಡ್ಡಿಪಡಿಸುತ್ತಿದೆ ಎಂದು ಹೇಳಿದ್ದರು.

ಘೋಷಣೆ, ಗದ್ದಲಗಳ ನಡುವೆ ಕಾಂಗ್ರೆಸ್‍ ಮತ್ತು ಇತರ ಪ್ರತಿಪಕ್ಷಗಳ ಸದಸ್ಯರು ಚೌಧರಿ ನೇತೃತ್ವದಲ್ಲಿ ಸಭಾತ್ಯಾಗ ಮಾಡಿದರು.

ಯುಎನ್‍ಐ ಎಸ್‍ಎಲ್ಎಸ್‍ ಕೆವಿಆರ್ 1413

More News
ಮಾಜಿ ಪ್ರಧಾನಿ ಚಂದ್ರಶೇಖರ್ ಪುತ್ರ ನೀರಜ್ ಬಿಜೆಪಿ ಸೇರ್ಪಡೆ

ಮಾಜಿ ಪ್ರಧಾನಿ ಚಂದ್ರಶೇಖರ್ ಪುತ್ರ ನೀರಜ್ ಬಿಜೆಪಿ ಸೇರ್ಪಡೆ

16 Jul 2019 | 5:45 PM

ನವದೆಹಲಿ, ಜುಲೈ 16 (ಯುಎನ್ಐ) ರಾಜ್ಯಸಭಾ ಸದಸ್ಯ, ಸಮಾಜವಾದಿ ಪಕ್ಷದ ಮಾಜಿ ನಾಯಕ ಹಾಗೂ ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಪುತ್ರ ನೀರಜ್ ಶೇಖರ್ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ

 Sharesee more..
ಭೂಮಿ ಇಲ್ಲದಿದ್ದರೆ, ಆಕಾಶದಲ್ಲಿ ರಸ್ತೆಗಳ ನಿರ್ಮಾಣ : ನಿತಿನ್ ಗಡ್ಕರಿ!!

ಭೂಮಿ ಇಲ್ಲದಿದ್ದರೆ, ಆಕಾಶದಲ್ಲಿ ರಸ್ತೆಗಳ ನಿರ್ಮಾಣ : ನಿತಿನ್ ಗಡ್ಕರಿ!!

16 Jul 2019 | 3:49 PM

ನವದೆಹಲಿ, ಜುಲೈ 16 (ಯುಎನ್‌ಐ) ನಮಗೆ ರಸ್ತೆ ಮಾಡಲು ಭೂಮಿ ಕೊಡದಿದ್ದರೆ, ಇಲ್ಲದಿದ್ದರೆ, ಆಕಾಶದಲ್ಲಿ ರಸ್ತೆಗಳನ್ನು ಮಾಡುತ್ತೇವೆ ಎಂದು ಹೆದ್ದಾರಿ ಸಚಿವ ಸಚಿವ ನಿತಿನ್ ಗಡ್ಕರಿ ಪಶ್ಚಿಮ ಬಂಗಾಳ ಸರ್ಕಾರದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿ ಈ ವಿಷಯದಲ್ಲಿ ಸಂಸದರು ಭೂಸ್ವಾಧೀನಕ್ಕೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಒತ್ತಾಯಿಸಿದ ಪ್ರಸಂಗ ಮಂಗಳವಾರ ಲೋಕಸಭೆಯಲ್ಲಿ ಜರುಗಿದೆ.

 Sharesee more..