Sunday, Nov 17 2019 | Time 15:08 Hrs(IST)
 • ಕಾಶ್ಮೀರದಲ್ಲಿ ಹೆಚ್ಚಿನ ಅಂಗಡಿಗಳು ಪುನರಾರಂಭ: ಸಾಮಾನ್ಯ ಸ್ಥಿತಿಯತ್ತ ಜನ-ಜೀವನ
 • ಮೀಸಲಾತಿಗೆ ಶತಶತಮಾನಗಳ ಇತಿಹಾಸವಿದೆ: ನಾಡೋಜ ಬರಗೂರು ರಾಮಚಂದ್ರಪ್ಪ
 • ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ ; ಜಯಗಳಿಸಿರುವ ಗೋಟ ಬಯಾ ರಾಜಪಕ್ಸೆ ಗೆ ಪ್ರಧಾನಿ ಮೋದಿ ಅಭಿನಂದನೆ
 • ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದ ಬೆಲೆ ಹೆಚ್ಚಿಸುವುದಿಲ್ಲ ಟಿಟಿಡಿ ಅಧ್ಯಕ್ಷರ ಸ್ಪಷ್ಟನೆ
 • ಮೂವರು ಅಂತಾರಾಜ್ಯ ಮಾದಕ ವಸ್ತು ಮಾರಾಟಗಾರರ ಬಂಧನ
 • ಪೂಂಚ್‌ನಲ್ಲಿನ ಗಡಿ ನಿಯಂತ್ರಣಾ ರೇಖೆಯಲ್ಲಿ ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ
 • ಅಧ್ಯಕ್ಷೀಯ ಚುನಾವಣೆ: ಶ್ರೀಲಂಕಾ ರಕ್ಷಣಾ ಸಚಿವ ಗೋಟಬಯಾ ರಾಜಪಕ್ಸೆಗೆ ಜಯ
 • ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಜಮೀನು ನೀಡಲು ಮುಂದಾದ ಹಿಂದೂ ಕುಟುಂಬಗಳು
 • ಶಿಕಾರಿಪುರದಲ್ಲಿ 15, 17 ನೇ ಶತಮಾನದ ಎರಡು ಶಿಲಾಶಾಸನಗಳು ಪತ್ತೆ
 • ಡಿಸೆಂಬರ್ ಎರಡನೇ ವಾರ ರಾಜ್ಯ ರಾಜಕಾರಣದಲ್ಲಿ ಮಹತ್ವ ಬದಲಾವಣೆ; ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭವಿಷ್ಯ
 • ಶಿವಮೊಗ್ಗದಲ್ಲಿ ಎರಡು ಶಿಲಾಶಾಸನ ಪತ್ತೆ
 • ಪವನ್ ದೇಶ್‍ಪಾಂಡೆ ಸ್ಫೋಟಕ ಅರ್ಧ ಶತಕ: ಗೋವಾಗೆ 173 ರನ್ ಗುರಿ ನೀಡಿದ ಕರ್ನಾಟಕ
 • ಶ್ರೀ ಲಂಕಾ ಅಧ್ಯಕ್ಷೀಯ ಚುನಾವಣೆ; ಗೋಟಬಯಾ ರಾಜಪಕ್ಸೆ ಗೆಲುವು, ಅಧಿಕೃತ ಘೋಷಣೆ ಬಾಕಿ
 • ಮರಳಿದ ಪಂದ್ಯದಲ್ಲೇ ಅರ್ಧ ಶತಕ ಸಿಡಿಸಿದ ಪೃಥ್ವಿ ಶಾ
 • ಜನಸಂಖ್ಯಾ ನಿಯಂತ್ರಣ ಕಾಯ್ದೆ ಜಾರಿಗೆ ಬಂದ ಕೂಡಲೇ ರಾಜಕೀಯ ನಿವೃತ್ತಿ; ಕೇಂದ್ರ ಸಚಿವ ಗಿರಿರಾಜ್ ಸಿಂಗ್
Parliament Share

ತಮ್ಮ ಕ್ಷೇತ್ರಗಳಲ್ಲಿ ರೈಲು ಯೋಜನೆಗಳಿಗೆ ಹೆಚ್ಚಿನ ಗಮನ ನೀಡಲು ಲೋಕಸಭೆಯಲ್ಲಿ ಮನವಿ

ತಮ್ಮ ಕ್ಷೇತ್ರಗಳಲ್ಲಿ ರೈಲು ಯೋಜನೆಗಳಿಗೆ ಹೆಚ್ಚಿನ ಗಮನ ನೀಡಲು ಲೋಕಸಭೆಯಲ್ಲಿ ಮನವಿ
ತಮ್ಮ ಕ್ಷೇತ್ರಗಳಲ್ಲಿ ರೈಲು ಯೋಜನೆಗಳಿಗೆ ಹೆಚ್ಚಿನ ಗಮನ ನೀಡಲು ಲೋಕಸಭೆಯಲ್ಲಿ ಮನವಿ

ನವದೆಹಲಿ, ಜುಲೈ 11 (ಯುಎನ್‌ಐ) ಲೋಕಸಭೆಯಲ್ಲಿ ಸಂಸದರು ತಮ್ಮ ಕ್ಷೇತ್ರಗಳಲ್ಲಿ ರೈಲ್ವೆ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಗುರುವಾರ ಸರ್ಕಾರಕ್ಕೆ ಮನವಿ ಮಾಡಿದರು.

ಆದಾಗ್ಯೂ, ಚರ್ಚೆಯು ಸಂಸದರ ರಾಜಕೀಯ ಸಂಬಂಧದ ದೃಷ್ಟಿಕೋನವನ್ನು ಹೊಂದಿದ್ದು, ಆಡಳಿತದ ಪಕ್ಷದವರು ಸರ್ಕಾರದ ಉಪಕ್ರಮಗಳನ್ನು ಶ್ಲಾಘಿಸಿದರು ಮತ್ತು ಪ್ರತಿಪಕ್ಷಗಳು ಸರ್ಕಾರಕ್ಕೆ ಯಾವುದೇ ಯೋಜನೆ ಮತ್ತು ದೃಷ್ಟಿಕೋನ ಇಲ್ಲ ಎಂದು ಟೀಕಿಸಿದರು.

ರೈಲ್ವೆ ಮೂಲಸೌಕರ್ಯಕ್ಕಾಗಿ ಸರ್ಕಾರಕ್ಕೆ 50 ಲಕ್ಷ ಕೋಟಿ ರೂ. ಬೇಕಾಗುತ್ತದೆ ಎಂದು ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ. ಆದರೆ ಇಷ್ಟು ದೊಡ್ಡ ಮೊತ್ತವು ಹೇಗೆ ಬರುತ್ತದೆ ಎಂಬುದರ ಕುರಿತು ಯಾವುದೇ ಪ್ರಸ್ತಾಪಗಳಿಲ್ಲ ಎಂದು ಆರ್‌ಎಸ್‌ಪಿ ಸದಸ್ಯ ಎನ್ ಕೆ ಪ್ರೇಮಚಂದ್ರನ್ ಹೇಳಿದ್ದಾರೆ.

2015-16ರಲ್ಲೂ ಇಂತಹ ಬೃಹತ್‌ ಘೋಷಣೆಗಳನ್ನು ಮಾಡಲಾಗಿತ್ತು. ಆದರೆ ಬಳಿಕ ಯಾವ ಘೋಷಣೆಯೂ ಸರಿಯಾಗಿ ಅನುಷ್ಠಾನಕ್ಕೆ ಬರಲಿಲ್ಲ ಎಂದರು.

ಇದಕ್ಕೂ ಮೊದಲು ರೈಲ್ವೆ 2019-20ರ ಅನುದಾನದ ಬೇಡಿಕೆ ಕುರಿತು ಚರ್ಚೆಯನ್ನು ಪ್ರಾರಂಭಿಸಿದ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಸಾಲವನ್ನು ಅವಲಂಬಿಸುವ ಪ್ರವೃತ್ತಿಯಿಂದ ಸರ್ಕಾರ ಹೊರಬರಬೇಕು ಎಂದರು.

ಸರ್ಕಾರ ಪ್ರಸ್ತಾಪಿಸಿದ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮಾದರಿಯನ್ನೂ ಅವರು ಟೀಕಿಸಿದರು. ರೈಲ್ವೆ ಯೋಜನೆಗಳ ಪರ ಮತ್ತು ವಿರೋಧವಾಗಿ ಹಲವು ಸಂಸದರು ಲೋಕಸಭೆಯಲ್ಲಿ ತಮ್ಮ ನಿಲುವು ಮಂಡಿಸಿದರು.

ಯುಎನ್‌ಐ ಕೆಎಸ್‌ವಿ ವಿಎನ್‌ಎಲ್‌ 1930