Saturday, Aug 15 2020 | Time 10:44 Hrs(IST)
  • ಭಾರತ - ಜರ್ಮನಿ ನಡುವೆ ಒಪ್ಪಂದ; ಬೆಂಗಳೂರಿಗೆ ವಿಮಾನ ಸೇವೆ ಪ್ರಾರಂಭಿಸಿದ ಲುಫ್ತಾನ್ಸಾ
  • ಶಿವಮೊಗ್ಗ ಜಿಲ್ಲೆಯಲ್ಲಿ ಅಭಿವೃದ್ಧಿಯ ಹೊಸಪರ್ವವೇ ಆರಂಭ; ಸ್ವಾತಂತ್ರ್ಯ ದಿನದ ಸಂದೇಶದಲ್ಲಿ ಕೆ ಎಸ್ ಈಶ್ವರಪ್ಪ
  • ಭಾನುವಾರದಿಂದ ಮಾತಾ ವೈಷ್ಣೋ ದೇವಿ ಯಾತ್ರೆ ಆರಂಭ
  • ಭಾರತೀಯರು ಸ್ಥಳೀಯರ ಧ್ವನಿಯಾಗಬೇಕು- ಪ್ರಧಾನಿ ಪ್ರತಿಪಾದನೆ
  • ನಾಡಿನ ಜನತೆಗೆ 74ನೇ ಸ್ವಾತಂತ್ರ್ಯೋತ್ಸವದ ಶುಭಕೋರಿದ ಮುಖ್ಯಮಂತ್ರಿ
  • ಆತ್ಮನಿರ್ಭರ ಭಾರತ, ಪ್ರತಿ ಭಾರತೀಯರ ದಿವ್ಯ ಮಂತ್ರ: ಪ್ರಧಾನಿ
  • ಅಧಿಕೃತ ನಿವಾಸದಲ್ಲೇ ಧ್ವಜಾರೋಹಣ ನೆರವೇರಿಸಿದ ರಾಜನಾಥ್ ಸಿಂಗ್
  • ಕರೋನ ಸಮರದಲ್ಲಿ ಗೆಲ್ಲುವುದೆ ನಮ್ಮ ಮುಖ್ಯ ಗುರಿ: ಮೋದಿ
  • ಡಿ ಜೆ ಹಳ್ಳಿ ಗಲಭೆ ಪ್ರಕರಣ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶ ಮಾಡಿ ರಾಜ್ಯ ಸರ್ಕಾರದ ಆದೇಶ
Parliament Share

ಪಿ ಎಂ ಸಿ ಬ್ಯಾಂಕ್ – ಸಣ್ಣ ಠೇವಣಿದಾರರಿಗೆ ಹಣ ಹಿಂಪಡೆಯಲು ಅವಕಾಶ ಅಗತ್ಯ: ನಿರ್ಮಲಾ ಸೀತಾರಾಮನ್

ಪಿ ಎಂ ಸಿ ಬ್ಯಾಂಕ್ – ಸಣ್ಣ ಠೇವಣಿದಾರರಿಗೆ ಹಣ ಹಿಂಪಡೆಯಲು ಅವಕಾಶ ಅಗತ್ಯ: ನಿರ್ಮಲಾ ಸೀತಾರಾಮನ್
ಪಿ ಎಂ ಸಿ ಬ್ಯಾಂಕ್ – ಸಣ್ಣ ಠೇವಣಿದಾರರಿಗೆ ಹಣ ಹಿಂಪಡೆಯಲು ಅವಕಾಶ ಅಗತ್ಯ: ನಿರ್ಮಲಾ ಸೀತಾರಾಮನ್

ನವದೆಹಲಿ, ಡಿ 2 (ಯುಎನ್ಐ) ಪಂಜಾಬ್ ಮತ್ತು ಮಹಾರಾಷ್ಟ್ರ ಬ್ಯಾಂಕ್ ನಲ್ಲಿ ಠೇವಣಿ ಇರಿಸಿರುವ ಸಣ್ಣ ಠೇವಣಿದಾರರು ತಮ್ಮ ಖಾತೆಗಳಿಂದ ಹಣ ಹಿಂಪಡೆಯಲು ಅವಕಾಶ ನೀಡಬೇಕಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಲೋಕಸಭೆಗೆ ತಿಳಿಸಿದ್ದಾರೆ.ಲೋಕಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಈ ವಿಷಯ ತಿಳಿಸಿದ ಅವರು, ಪಿಎಂಸಿ ಬ್ಯಾಂಕ್ ನ ಶೇ 78 ರಷ್ಟು ಹೂಡಿಕೆದಾರರು ತಮ್ಮ ಖಾತೆಯಲ್ಲಿ ಮೊತ್ತ ಹಿಂಪಡೆಯಬಹುದಾಗಿದೆ. ಸಣ್ಣ ಠೇವಣಿದಾರರಿಗೆ ಹಣ ಹಿಂಪಡೆಯುವ ಅವಕಾಶ ನೀಡಬೇಕಿದೆ ಎಂದರು.ಬಿಜೆಪಿಯ ರಿತಾ ಬಹುಗುಣ ಜೋಷಿ ಮತ್ತು ಜಿ ಎಸ್ ಬಸವರಾಜ್ ಅವರ ಪ್ರಶ್ನೆ ಉತ್ತರಿಸಿದ ಸಚಿವೆ, ಹಣ ಹಿಂಪಡೆಯುವ ಮಿತಿಯ ಮೇಲೆ ನಿಗಾ ವಹಿಸಿದ್ದು ಠೇವಣಿದಾರರ ಹಿತಾಸಕ್ತಿ ಗಮನಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.ಠೇವಣಿದಾರರ ಅಗತ್ಯ, ಕಷ್ಟ ಕಾರ್ಪಣ್ಯ ಆಧರಿಸಿ ವೈದ್ಯಕೇತರ ಅಗತ್ಯಗಳಿಗಾಗಿ ಒಂದು ಲಕ್ಷ ರೂಪಾಯಿವರೆಗೆ ಹಣ ಹಿಂಪಡೆಯಲು ಅವಕಾಶವಿದೆ ಎಂದು ಸಚಿವರು ತಿಳಿಸಿದರು.ತನ್ನ ಅಧಿಕಾರಿಗಳು ಮತ್ತು ಸಾಲ ಪಡೆದವರ ವಿರುದ್ಧ ಬ್ಯಾಂಕ್ ನೀಡಿರುವ ದೂರು ಆಧರಿಸಿ, ಮಹಾರಾಷ್ಟ್ರ ಪೊಲೀಸರ ಆರ್ಥಿಕ ಅಪರಾಧ ವಿಭಾಗ ತನಿಖೆ ಕೈಗೊಂಡಿದೆ.ವಹಿವಾಟಿನ ಬಗ್ಗೆ ಫಾರೆನ್ಸಿಕ್ ಆಡಿಟರ್ ಗಳನ್ನೂ ನೇಮಕ ಮಾಡಲಾಗಿದೆ ಎಂದು ಲೋಕಸಭೆಗೆ ತಿಳಿಸಲಾಯಿತು.ಯುಎನ್ಐ ಜಿಎಸ್ಆರ್ 1441

There is no row at position 0.