Saturday, Aug 15 2020 | Time 10:03 Hrs(IST)
  • ಭಾನುವಾರದಿಂದ ಮಾತಾ ವೈಷ್ಣೋ ದೇವಿ ಯಾತ್ರೆ ಆರಂಭ
  • ಭಾರತೀಯರು ಸ್ಥಳೀಯರ ಧ್ವನಿಯಾಗಬೇಕು- ಪ್ರಧಾನಿ ಪ್ರತಿಪಾದನೆ
  • ನಾಡಿನ ಜನತೆಗೆ 74ನೇ ಸ್ವಾತಂತ್ರ್ಯೋತ್ಸವದ ಶುಭಕೋರಿದ ಮುಖ್ಯಮಂತ್ರಿ
  • ಆತ್ಮನಿರ್ಭರ ಭಾರತ, ಪ್ರತಿ ಭಾರತೀಯರ ದಿವ್ಯ ಮಂತ್ರ: ಪ್ರಧಾನಿ
  • ಅಧಿಕೃತ ನಿವಾಸದಲ್ಲೇ ಧ್ವಜಾರೋಹಣ ನೆರವೇರಿಸಿದ ರಾಜನಾಥ್ ಸಿಂಗ್
  • ಕರೋನ ಸಮರದಲ್ಲಿ ಗೆಲ್ಲುವುದೆ ನಮ್ಮ ಮುಖ್ಯ ಗುರಿ: ಮೋದಿ
  • ಡಿ ಜೆ ಹಳ್ಳಿ ಗಲಭೆ ಪ್ರಕರಣ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶ ಮಾಡಿ ರಾಜ್ಯ ಸರ್ಕಾರದ ಆದೇಶ
Parliament Share

ಮೋದಿ, ಶಾ ಒಳನುಸುಳುಕೋರರು ಹೇಳಿಕೆ: ಕ್ಷಮೆ ಯಾಚಿಸುವಂತೆ ಅಧೀರ್ ಚೌಧರಿಗೆ ಬಿಜೆಪಿ ಒತ್ತಾಯ

ಮೋದಿ, ಶಾ ಒಳನುಸುಳುಕೋರರು ಹೇಳಿಕೆ: ಕ್ಷಮೆ ಯಾಚಿಸುವಂತೆ ಅಧೀರ್ ಚೌಧರಿಗೆ ಬಿಜೆಪಿ ಒತ್ತಾಯ
ಮೋದಿ, ಶಾ ಒಳನುಸುಳುಕೋರರು ಹೇಳಿಕೆ: ಕ್ಷಮೆ ಯಾಚಿಸುವಂತೆ ಅಧೀರ್ ಚೌಧರಿಗೆ ಬಿಜೆಪಿ ಒತ್ತಾಯ

ನವದೆಹಲಿ, ಡಿ.2 (ಯುಎನ್ಐ) ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಒಳನುಸುಳುಕೋರರು ಎಂದು ಹೇಳಿಕೆ ನೀಡಿರುವ ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಕ್ಷಮೆಯಾಚಿಸಬೇಕು ಎಂದು ಹಲವು ಬಿಜೆಪಿ ಸಂಸದರು ಇಂದು ಲೋಕಸಭೆಯ ಕಲಾಪದಲ್ಲಿ ಒತ್ತಾಯಿಸಿದರು.

ಚೌದರಿ ಅವರ ಹೇಳಿಕೆಯನ್ನು ಬಿಜೆಪಿ ಸಂಸದ ಉದಯ್ ಪ್ರತಾಪ್ ಸಿಂಗ್ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿ, ಬಿಜೆಪಿ ಹಿರಿಯ ನಾಯಕರ ವಿರುದ್ಧ ನೀಡಿದ ಹೇಳಿಕೆ ಒಪ್ಪಲು ಸಾಧ್ಯವಿಲ್ಲ. ಆದ್ದರಿಂದ ಚೌಧರಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

"ಪ್ರಧಾನಿ ಮೋದಿ ಕೇವಲ ಬಿಜೆಪಿ ನಾಯಕನಲ್ಲ, ಅವರು ರಾಷ್ಟ್ರದ ಹೆಮ್ಮೆ" ಎಂದು ಅವರು ಬಿಜೆಪಿ ಸದಸ್ಯರ ಬೆಂಬಲದ ನಡುವೆ ಹೇಳಿದರು.

ಚೌಧರಿ ಅವರು ಸದನದ ಹಿರಿಯ ಸದಸ್ಯ. ಅವರು ತಕ್ಷಣ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಮುಖಂಡರಿಂದ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿ ಹಲವು ಬಿಜೆಪಿ ಸದಸ್ಯರು ಸ್ಪೀಕರ್ ಪೀಠದ ಎದುರು ಜಮಾಯಿಸಿದರು.

ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಮತ್ತು ಅವರ ಕಿರಿಯ ಸಹೋದ್ಯೋಗಿ ಅರ್ಜುನ್ ರಾಮ್ ಮೇಘವಾಲ್ ಕೂಡ ಚೌಧರಿ ಕೂಡಲೇ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಅನೇಕ ಬಿಜೆಪಿ ಸಂಸದರು ತಮ್ಮ ವಿರುದ್ಧ ಧ್ವನಿ ಎತ್ತಿದ್ದರಿಂದ, ಕಾಂಗ್ರೆಸ್ ಮುಖಂಡ ಚೌಧರಿ ಮಾತನಾಡಿ, ಮೊದಲು ನಾನು ಹೇಳುವ ಮಾತನ್ನು ಕೇಳಬೇಕು ಮತ್ತು ಆಗ ಮಾತ್ರ ಅವರು ಕ್ಷಮೆಯಾಚಿಸುತ್ತೇನೆ ಎಂದರು.

ಒಳನುಸುಳುವವರು ರಾಜ್ಯದಲ್ಲಿ ಬಂದು ನೆಲೆಸಲು ಪ್ರೋತ್ಸಾಹಿಸಲು ಪಶ್ಚಿಮ ಬಂಗಾಳದಲ್ಲಿ ಮಾಫಿಯಾ ಕಾರ್ಯನಿರ್ವಹಿಸುತ್ತಿದೆ ಮತ್ತು ಅವರ ಪಕ್ಷ (ಬಿಜೆಪಿ) ಅಕ್ರಮ ಒಳನುಸುಳುವವರ ವಿರುದ್ಧ ಕೆಲಸ ಮಾಡಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ಶಾಸಕ ಉದಯ್ ಪ್ರತಾಪ್ ಸಿಂಗ್ ಹೇಳಿದ್ದಾರೆ.

ನೀವು ಕ್ಷಮೆಯಾಚಿಸಿ ಎಂದು ಮೇಘವಾಲ್ ಆಗ್ರಹಿಸಿದರು.

ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಷಾ ಒಳನುಸುಳುಕೋರರು ಎಂಬ ಚೌಧರಿ ಅವರ ಹೇಳಿಕೆಗಳನ್ನು ಬಲವಾಗಿ ಖಂಡಿಸಬೇಕಾಗಿದೆ ಎಂದರು.

ಪ್ರಧಾನಿ ಮೋದಿ ರಾಷ್ಟ್ರದ ನಾಯಕರು. ಅವರಿಗೆ ಸ್ಪಷ್ಟ ಜನಾದೇಶವಿದೆ ಎಂದು ಜೋಶಿ ಹೇಳಿದರು.

ಯುಎನ್ಐ ಎಎಚ್ 1435

There is no row at position 0.