Tuesday, Oct 15 2019 | Time 18:55 Hrs(IST)
 • ಆರ್ಥಿಕ ಪರಿಸ್ಥಿತಿ ಬಣ್ಣಿಸುವ ಹಣಕಾಸು ಸಚಿವರ ಪತಿಯ ಪತ್ರ ;ಕಾಂಗ್ರೆಸ್ ಟೀಕೆ
 • ಐಟಿಎಫ್ ನಿರ್ಧಾರಕ್ಕಾಗಿ ಕಾಯುತ್ತಿದ್ದೇವೆ: ಮಹೇಶ್ ಭೂಪತಿ
 • ಹೊಟ್ಟೆಪಾಡಿಗೆ ವ್ಯಾನ್ ಚಾಲಕನಾದ ಪಾಕ್ ಕ್ರಿಕೆಟಿಗ !
 • ಡೆನ್ಮಾಕ್ ಓಪನ್: ಎರಡನೇ ಸುತ್ತಿಗೆ ಸಿಂಧು , ಕಶ್ಯಪ್ ಗೆ ನಿರಾಸೆ
 • ವೇತನ ಪರಿಷ್ಕರಣೆ ಸರಿಯಿದೆ; ಎಚ್ ಎಎಲ್ ಸಮರ್ಥನೆ, ನೌಕರರಿಂದ ಮುಷ್ಕರ ಮುಂದುವರಿಕೆಯ ಬೆದರಿಕೆ
 • ಮಹಿಳಾ ಏಕದಿನ ಶ್ರೇಯಾಂಕ: ಅಗ್ರ ಸ್ಥಾನದಿಂದ ಕುಸಿದ ಸ್ಮತಿ ಮಂಧಾನ
 • ಅಯೋಧ್ಯಾ ಭೂ ವಿವಾದ: ನಾಳೆಯೇ ವಿಚಾರಣೆ ಅಂತ್ಯ ಸಾಧ್ಯತೆ
 • ಡೆನ್ಮಾಕ್ ಓಪನ್: ಎರಡನೇ ಸುತ್ತಿಗೆ ಪ್ರವೇಶಿಸಿದ ಸಿಂಧು, ಕಶ್ಯಪ್
 • ಐಟಿ ವಿಚಾರಣೆಗೆ ಹಾಜರು: ರಮೇಶ್ ಸಾವಿನ ಬಗ್ಗೆ ವಿಶೇಷ ತನಿಖೆಗೆ ಆಗ್ರಹಿಸಿದ ಡಾ ಜಿ ಪರಮೇಶ್ವರ್
 • ಹೈಕಮಾಂಡ್ ಭೇಟಿಗಾಗಿ ಸಿದ್ದರಾಮಯ್ಯ ಮಂಗಳವಾರ ದೆಹಲಿಗೆ
 • ನಿವೃತ್ತ ವಿಧಾನಸಭೆ ಕಾರ್ಯದರ್ಶಿ ಓಂಪ್ರಕಾಶ್ ಸ್ಪೀಕರ್ ಸಲಹೆಗಾರರಾಗಿ ನೇಮಕ: ಹೊಸ ಸಂಪ್ರದಾಯಕ್ಕೆ ನಾಂದಿ
 • ಕಲಾಂ ಹುಟ್ಟುಹಬ್ಬ: ವಿಶ್ವ ವಿದ್ಯಾರ್ಥಿಗಳ ದಿನವಾಗಿಯೂ ಆಚರಣೆ
 • ತಿಹಾರ್ ಜೈಲುವಾಸ, ಪೊಲೀಸರ ಬರ್ಬರತೆ ನೆನಪು ಮಾಡಿಕೊಂಡ ಅಭಿಜಿತ್ ಬ್ಯಾನರ್ಜಿ
 • ಕರ್ನಾಟಕ – ಕೇರಳದಲ್ಲಿ ಇಂದು ಭಾರಿ ಮಳೆ ಸಂಭವ
 • ವೀರ್ ಸಾರ್ವಕರ್‌ಗೆ ಭಾರತರತ್ನ ಪಕ್ಷದ ಧ್ಯೇಯ; ಪ್ರಣಾಳಿಕೆಯಲ್ಲಿ ಬಿಜೆಪಿ ಘೋಷಣೆ
Parliament Share

ರಸ್ತೆ ಅಪಘಾತ ತಡೆಯಲು ತಮಿಳುನಾಡು ಮಾದರಿ ಯೋಜನೆ; ಲೋಕಸಭೆಯಲ್ಲಿ ನಿತಿನ್ ಗಡ್ಕರಿ

ರಸ್ತೆ ಅಪಘಾತ ತಡೆಯಲು ತಮಿಳುನಾಡು ಮಾದರಿ ಯೋಜನೆ; ಲೋಕಸಭೆಯಲ್ಲಿ ನಿತಿನ್ ಗಡ್ಕರಿ
ರಸ್ತೆ ಅಪಘಾತ ತಡೆಯಲು ತಮಿಳುನಾಡು ಮಾದರಿ ಯೋಜನೆ; ಲೋಕಸಭೆಯಲ್ಲಿ ನಿತಿನ್ ಗಡ್ಕರಿ

ನವದೆಹಲಿ, ಜುಲೈ 11(ಯುಎನ್ಐ) ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸುತ್ತಿರುವ ರಸ್ತೆ ಅಪಘಾತಗಳನ್ನು ತಡೆಯಲು ಕೇಂದ್ರ ಸರ್ಕಾರ 14 ಸಾವಿರ ಕೋಟಿರೂಪಾಯಿ ಅಂದಾಜಿನಲ್ಲಿ ವಿಸ್ತೃತ ಯೋಜನಾ ವರದಿ ಸಿದ್ದಪಡಿಸಿದ್ದು, ಪ್ರಸ್ತಾವನೆಗೆ ಹಣಕಾಸು ಸಚಿವಾಲಯ ಅನುಮೋದನೆ ನೀಡಿದ್ದು, ವಿಶ್ವಬ್ಯಾಂಕ್ ನೆರವಿಗಾಗಿ ಎದುರು ನೋಡಲಾಗುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಲೋಕಸಭೆಗೆ ತಿಳಿಸಿದ್ದಾರೆ.

ಪ್ರಶ್ನೋತ್ತರ ಅವಧಿಯಲ್ಲಿ ತಮಿಳುನಾಡಿನ ಡಿಎಂಕೆ ಸದಸ್ಯ ಜಗತ್ ರಕ್ಷಕನ್, ದೇಶದಲ್ಲಿ ಪ್ರತಿವರ್ಷ ಲಕ್ಷಾಂತರ ಮಂದಿ ರಸ್ತೆ ಅವಗಡಗಳಿಂದ ಪ್ರಾಣ ಕಳೆದುಕೊಂಡು, ಹಲವು ಲಕ್ಷ ಮಂದಿ ಗಾಯಗೊಳ್ಳುತ್ತಿದ್ದಾರೆ. ಈ ಸಮಸ್ಯೆ ನಿವಾರಣೆಗೆ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ನಿತಿನ್ ಗಡ್ಕರಿ, ರಸ್ತೆ ಅಪಘಾತಗಳನ್ನು ತಗ್ಗಿಸುವ ವಿಶೇಷ ಕಾರ್ಯಕ್ರಮ ಜಾರಿಗೊಳಿಸಿ ಯಶಸ್ಸು ಸಾಧಿಸಿರುವ ತಮಿಳುನಾಡು ನಾಡು ರಾಜ್ಯವನ್ನು ಮಾದರಿಯಾಗಿರಿಸಿಕೊಂಡು ತಮ್ಮ ಸಚಿವಾಲಯ 14 ಸಾವಿರ ಕೋಟಿರೂಪಾಯಿಗಳ ವಿಸ್ತೃತ ಯೋಜನಾ ವರದಿ ಸಿದ್ದಪಡಿಸಿದೆ ಎಂದರು.

ಹಣಕಾಸು ಸಚಿವಾಲಯ ಸಹ ಅನುಮೋದನೆ ನೀಡಿದ್ದು, ಪ್ರಸ್ತಾವನೆ ಹಣಕಾಸು ನೆರವಿಗಾಗಿ ವಿಶ್ವಬ್ಯಾಂಕ್ ಮುಂದಿದೆ. ಹಣಕಾಸು ದೊರೆತ ತಕ್ಷಣ ಗುರುತಿಸಲಾಗಿರುವ ಅಪಘಾತ ಸಂಭವಿಸುವ ಸ್ಥಳಗಳಲ್ಲಿ ಬೈಪಾಸ್, ಸೇತುವೆ ಮತ್ತಿತರ ಮುನ್ನೆಚ್ಚರಿಯ ಮೂಲ ಸೌರ್ಕರ್ಯಗಳನ್ನು ನಿರ್ಮಿಸಲಾಗುವುದು ಸಚಿವರು ಭರವಸೆ ನೀಡಿದರು.

ದೇಶದಲ್ಲಿ ಪ್ರತೀ ವರ್ಷವೂ ರಸ್ತೆ ಅಪಘಾತಕ್ಕೆ 1ಲಕ್ಷಕ್ಕೂ ಹೆಚ್ಚು ಮಂದಿ ಬಲಿಯಾಗುತ್ತಿದ್ದಾರೆ. ಇದನ್ನು ತಡೆಯುವುದು ತಮ್ಮ ಸಚಿವಾಲಯದ ಮೊದಲ ಆದ್ಯತೆಯಾಗಿದೆ ರಸ್ತೆ ಅಪಘಾತಕ್ಕೆ ಕಾರಣವಾಗುವ ಕಪ್ಪು ಸ್ಪಾಟ್‌ಗಳನ್ನು ಈಗಾಗಲೇ ಪತ್ತೆ ಹಚ್ಚಲಾಗಿದ್ದು, ಅವುಗಳ ಸರಿಪಡಿಸುವಿಕೆಗಾಗಿ ವಿಶ್ವ ಬ್ಯಾಂಕ್ ಹಣ ವೆಚ್ಚಮಾಡಲಾಗುವುದು ಎಂದರು.

ಯುಎನ್ಐ ಕೆವಿಆರ್ ವಿಎನ್ 2013