Wednesday, Jul 24 2019 | Time 01:11 Hrs(IST)
  • ನಾಳೆ ಬಿಜೆಪಿ ಶಾಸಕಾಂಗ ನಾಯಕರಾಗಿ ಬಿಎಸ್ ಯಡಿಯೂರಪ್ಪ ಆಯ್ಕೆ :ಮುರಳೀಧರ ರಾವ್
Special

ವಿಮಾನ ನಿಲ್ದಾಣದಲ್ಲಿ 2.5 ಕೋಟಿ ಮೌಲ್ಯದ ಚಿನ್ನ ವಶ

23 Jul 2019 | 11:28 PM

ಕಲ್ಲಿಕೋಟೆ, ಜು 23 (ಯುಎನ್ಐ)- ಇಲ್ಲಿನ ಕರಿಪುರ್ ವಿಮಾನ ನಿಲ್ದಾಣದ ಸುಂಕ ಅಧಿಕಾರಿಗಳು ಮಂಗಳವಾರ ಸುಮಾರು 2 50 ಕೋಟಿ ಮೌಲ್ಯದ ಬಂಗಾರವನ್ನು ವಶಕ್ಕೆ ಪಡೆದಿದ್ದಾರೆ.

 Sharesee more..

ಜನಾಭಿಪ್ರಾಯವನ್ನು ಧಿಕ್ಕರಿಸಿದವರಿಗೆ ಸರಿಯಾದ ಪಾಠ: ಸುರೇಶ್ ಅಂಗಡಿ

23 Jul 2019 | 11:00 PM

ಬೆಂಗಳೂರು, ಜು 23 (ಯುಎನ್ಐ)- ರಾಜ್ಯದ ಅಭಿವೃದ್ಧಿಯನ್ನು ಅಧೋಗತಿಗೆ ತಂದು ನಿಲ್ಲಿಸಿದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೆ ಸರಿಯಾದ ಪಾಠ ದೊರಕಿದೆ ಎಂದು ಕೇಂದ್ರ ಸಚಿವ ಸುರೇಶ್ ಅಂಗಡಿ ತಿಳಿಸಿದ್ದಾರೆ ವಿಧಾನಸಭೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳು ವಿಶ್ವಾಸ ಮತ ಗೆಲ್ಲುವಲ್ಲಿ ವಿಫಲವಾಗಿದ್ದು, ಸತ್ಯಕ್ಕೆ ಸಂದ ಜಯವಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

 Sharesee more..

ಕರ್ನಾಟಕದ ಅನೈತಿಕ ಮೈತ್ರಿ ಬಿದ್ದಿದೆ: ಶಿವರಾಜ್ ಸಿಂಗ್ ಚೌಹಾಣ್

23 Jul 2019 | 10:45 PM

ಭೋಪಾಲ್, ಜು 23 (ಯುಎನ್ಐ)- ಕರ್ನಾಟಕದ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಅನೈತಿಕ ಸಂಬಂಧ, ಮಂಗಳವಾರ ಮರಿದು ಬಿದ್ದಿದೆ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಉಪಾಧ್ಯಕ್ಷ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.

 Sharesee more..

ಎನ್‌ಸಿಸಿ ಕೆಡೆಟ್‌ಗಳಿಗೆ ಪ್ರಶಸ್ತಿ ಮತ್ತು ನಗದು ಹೆಚ್ಚಿಸಲು ರಾಜನಾಥ್ ಸಿಂಗ್ ಅನುಮೋದನೆ

23 Jul 2019 | 10:35 PM

ನವದೆಹಲಿ, ಜುಲೈ 23 (ಯುಎನ್‌ಐ) ರಾಷ್ಟ್ರೀಯ ಕ್ಯಾಡೆಟ್ ಕಾರ್ಪ್ಸ್ (ಎನ್‌ಸಿಸಿ) ಕೆಡೆಟ್‌ಗಳಿಗೆ ನೀಡಲಾಗುವ ಪ್ರಶಸ್ತಿಗಳ ಸಂಖ್ಯೆಯನ್ನು ಈಗಿರುವ 143 ರಿಂದ 243 ಕ್ಕೆ ಹೆಚ್ಚಿಸಲು ಮತ್ತು ವಿವಿಧ ವಿಭಾಗಗಳಲ್ಲಿನ ನಗದು ಪ್ರೋತ್ಸಾಹವನ್ನು ಹೆಚ್ಚಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಅನುಮೋದನೆ ನೀಡಿದ್ದಾರೆ.

 Sharesee more..

ಸೋನ್ ಭದ್ರಗೆ ಪ್ರಿಯಾಂಕಾ ಮತ್ತೆ ಭೇಟಿ

23 Jul 2019 | 10:28 PM

ನವದೆಹಲಿ, ಜು 23 (ಯುಎನ್ಐ)- ಸೋನ್ ಭದ್ರ ಹತ್ಯಾಕಾಂಡದ ಸಂತ್ರಸ್ತರನ್ನು ಭೇಟಿಯಾಗಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಕುಟಂಬಸ್ಥರಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ, ಮತ್ತೊಮ್ಮೆ ಸೋನ್ ಭದ್ರಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

 Sharesee more..

ಗಡಿ ನಿಯಂತ್ರಣ ರೇಖೆಯಲ್ಲಿನ ವ್ಯಾಪಾರ ಅಕ್ರಮಕ್ಕೆ ಸಂಬಂಧಿಸಿದಂತೆ ಕಾಶ್ಮೀರದಲ್ಲಿ ಎನ್‌ಐಎ ದಾಳಿ

23 Jul 2019 | 9:58 PM

ನವದೆಹಲಿ, ಜುಲೈ 23 (ಯುಎನ್‌ಐ) ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಗಡಿ ನಿಯಂತ್ರಣ ರೇಖೆ ವ್ಯಾಪಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಕಾಶ್ಮೀರ ಕಣಿವೆಯ ಆರು ಸ್ಥಳಗಳಲ್ಲಿ ದಾಳಿ ನಡೆಸಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ ಪುಲ್ವಾಮ ಮತ್ತು ಶ್ರೀನಗರದಲ್ಲಿ ಈ ದಾಳಿಗಳು ನಡೆದಿವೆ.

 Sharesee more..

ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಚಿಂತನೆ

23 Jul 2019 | 8:34 PM

ಭೂಪಾಲ್, ಜುಲೈ 23 (ಯುಎನ್ಐ) ಉನ್ನತ ಶಿಕ್ಷಣ ಕ್ಷೇತ್ರದ ಭವಿಷ್ಯದ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವುದು ಪ್ರಸ್ತುತ ಅಗತ್ಯವಾಗಿದೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಮಂಗಳವಾರ ವಿಧಾನಸಭೆಯಲ್ಲಿ ತಿಳಿಸಿದರು ತಮ್ಮ ತವರೂರಾದ ಚಿಂದ್ವಾರ ಜಿಲ್ಲೆಯಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಲು ಸಂಬಂಧಿಸಿದ ವಿಶ್ವವಿದ್ಯಾಲಯಗಳ (ತಿದ್ದುಪಡಿ) ಮಸೂದೆ ಕುರಿತ ಚರ್ಚೆಯಲ್ಲಿ ಅವರು ಈ ವಿಷಯ ತಿಳಿಸಿದರು.

 Sharesee more..

ಡಿಎಂಕೆ ಮಾಜಿ ಮಹಾಪೌರೆ ಸೇರಿ ಇಬ್ಬರ ಹತ್ಯೆ

23 Jul 2019 | 8:30 PM

ತಿರುನೆಲ್ವೇಲಿ, ಜುಲೈ 23 (ಯುಎನ್‌ಐ) ಆಘಾತಕಾರಿ ಘಟನೆಯೊಂದರಲ್ಲಿ, ತಿರುನೆಲ್ವೇಲಿ ನಗರಸಭಾ ಮಾಜಿ ಡಿಎಂಕೆ ಮೇಯರ್ ಎಂ ಉಮಾ ಮಹೇಶ್ವರಿ, ಅವರ ಪತಿ ಮತ್ತು ಅವರ ಮನೆಯ ಕೆಲಸದಾಕೆಯನ್ನು ಮಂಗಳವಾರ ಸಂಜೆ ಇಲ್ಲಿನ ರೆಡಿಯಾರ್‌ಪಟ್ಟಿಯಲ್ಲಿರುವ ಮನೆಯಲ್ಲಿ ಅಪರಿಚಿತ ಗುಂಪುನ ಅಮಾನುಷವಾಗಿ ಹತ್ಯೆ ಮಾಡಿದೆ.

 Sharesee more..

ಅಮರನಾಥ ದೇಗುಲದಲ್ಲಿ ಇಂದು 8,659 ಯಾತ್ರಿಕರಿಂದ ಪೂಜೆ: ಇದುವರೆಗೆ 2.94 ಲಕ್ಷ ಮಂದಿ ದರ್ಶನ

23 Jul 2019 | 8:28 PM

ಶ್ರೀನಗರ, ಜುಲೈ 23 (ಯುಎನ್‌ಐ) ದಕ್ಷಿಣ ಕಾಶ್ಮೀರ ಹಿಮಾಲಯದ ಪವಿತ್ರ ಅಮರನಾಥ ಗುಹಾಂತರ ದೇಗುಲಕ್ಕೆ ಯಾತ್ರೆ ಸುಗಮವಾಗಿ ಸಾಗುತ್ತಿದ್ದು, ಮಂಗಳವಾರ 8,659 ಯಾತ್ರಿಕರು ಪೂಜೆ ಸಲ್ಲಿಸಿದ್ದಾರೆ ಎಂದು ಯಾತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಅಮರನಾಥ ಯಾತ್ರೆಯ 23 ನೇ ದಿನ 8,659 ಯಾತ್ರಿಕರು ಪವಿತ್ರ ಗುಹಾಂತರ ದೇಗುಲದಲ್ಲಿ ಪೂಜೆ ಸಲ್ಲಿಸಿದ್ದಾರೆ.

 Sharesee more..

ಅಸ್ಸಾಂನ ಹಲವೆಡೆ ಮತ್ತೆ ನೆರೆ ಹಾವಳಿ

23 Jul 2019 | 8:20 PM

ಗುವಾಹಟಿ, ಜುಲೈ 23 (ಯುಎನ್ಐ) ಅಸ್ಸಾಂನಲ್ಲಿ ತೀವ್ರ ಮಳೆ ಗಾಳಿ ಮುಂದುವರಿದಿದ್ದು, ಪಶ್ಚಿಮ ಹಾಗೂ ಉತ್ತರ ರಾಜ್ಯಗಳ ಹಲವೆಡೆ ಮಂಗಳವಾರ ಕೂಡ ಭಾರಿ ವರ್ಷಧಾರೆಯಾಗಿದೆ ಅಧಿಕೃತ ಮಾಹಿತಿಯ ಪ್ರಕಾರ, ಕೊಕ್ರಾಜ್ ಹರ್ , ಬೋನ್ ಗೈಗಾಂವ್, ಚಿರಂಗ್, ಬಕ್ಸ, ಲಖೀಮ್ ಪುರ ಹಾಗೂ ಧೀಮಾಜಿ ಜಿಲ್ಲೆಗಳಲ್ಲಿ ನೆರೆ ನೀರು ಆವರಿಸಿದೆ.

 Sharesee more..

ಮಾನವ ಹಕ್ಕು ಆಯೋಗದ ನಕಲಿ ಅಧ್ಯಕ್ಷನ ವಿರುದ್ಧ ಪ್ರಕರಣ ದಾಖಲು

23 Jul 2019 | 8:18 PM

ಥಾಣೆ, ಜುಲೈ 23 (ಯುಎನ್ಐ) ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷನೆಂದು ಹೇಳಿಕೊಂಡು ತನ್ನ ಪತ್ರ ಹಾಗೂ ವಿಸಿಟಿಂಗ್ ಕಾರ್ಡ್ ಗಳ ಮೇಲೆ ರಾಷ್ಟ್ರೀಯ ಲಾಂಛನವನ್ನು ದುರ್ಬಳಕೆ ಮಾಡಿಕೊಂಡ ವ್ಯಕ್ತಿ ವಿರುದ್ಧ ಪೊಲೀಸರು ವಂಚನೆ ಪ್ರಕರಣ ದಾಖಲಿಸಿದ್ದಾರೆ.

 Sharesee more..

ತೆರಿಗೆ ಪಠ್ಯಕ್ರಮದಲ್ಲಿ ಜೆಎಸ್‌ಟಿ ಬೋಧಿಸುವಂತೆ ಮಾನವ ಸಂಪನ್ಮೂಲ ಸಚಿವರಿಗೆ ಸಿಎಐಟಿ ಪತ್ರ

23 Jul 2019 | 8:14 PM

ನವದೆಹಲಿ, ಜುಲೈ 23 (ಯುಎನ್‌ಐ) ದೇಶದ ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿ ಬದಲಾವಣೆಯಾಗುತ್ತಿರುವುದರಿಂದ, ತೆರಿಗೆ ಪಠ್ಯಕ್ರಮದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಶಿಕ್ಷಣ ಸೇರಿಸಬೇಕು ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರನ್ನು ಒತ್ತಾಯಿಸಿದೆ.

 Sharesee more..

ಕರ್ನಾಟಕ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ಭಾರಿ ಮಳೆ

23 Jul 2019 | 8:13 PM

ಪುಣೆ, ಜುಲೈ 23 (ಯುಎನ್ಐ) ಕರ್ನಾಟಕ, ಮಧ್ಯಪ್ರದೇಶ, ಪಶ್ಚಿಮಬಂಗಾಳ, ಸಿಕ್ಕಿಂ, ಜಮ್ಮು ಕಾಶ್ಮೀರ, ಉತ್ತರಾಖಂಡ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದೆ ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯ, ಹಿಮಾಲಯದ ತಪ್ಪಲು, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ, ಕೊಂಕಣ ಮತ್ತು ಗೋವಾ, ಕರಾವಳಿ ಕರ್ನಾಟಕ ಮತ್ತು ಕೇರಳ ಮತ್ತು ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ, ಉತ್ತರ ಆಂತರಿಕ ಕರ್ನಾಟಕದ ಅನೇಕ ಸ್ಥಳಗಳಲ್ಲಿ ಮಳೆ ಅಥವಾ ಗುಡುಗು ಸಹಿತ ಮಳೆಯಾಗಿದೆ.

 Sharesee more..

ಗುಜರಾತ್ ನಲ್ಲಿ ಭಾರತ - ಇಸ್ರೇಲ್ ನೌಕಾಪಡೆ ಸಭೆ

23 Jul 2019 | 7:19 PM

ಪೋರಬಂದರ್, ಜುಲೈ 23 (ಯುಎನ್ಐ) ಭಾರತ -ಇಸ್ರೇಲ್ ನೌಕಾಪಡೆಗಳ ನಡುವೆ ಸೇವಾ ವಿಷಯ ತಜ್ಞರ ನಡುವಿನ ಅನುಭವಗಳ ಮಾಹಿತಿ ವಿನಿಮಯಕ್ಕಾಗಿ ಗುಜರಾತ್ ನ ನೌಕಾ ಪ್ರದೇಶವಾದ ಪೋರಬಂದರ್ ನಲ್ಲಿ ಉಭಯ ದೇಶಗಳ 12ನೇ ನೌಕಾಪಡೆಗಳ ಸಿಬ್ಬಂದಿ ಸಭೆ ಪಶ್ಚಿಮ ನೌಕಾಪಡೆಯ ಕಮಾಂಡಿಂಗ್ ಮುಖ್ಯಸ್ಥರ ನೇತೃತ್ವದಲ್ಲಿ ಪ್ರಗತಿಯಲ್ಲಿದೆಸೋಮವಾರ ಪ್ರಾರಂಭವಾಗಿರುವ ಈ ದ್ವಿಪಕ್ಷೀಯ ಸಭೆ ಬುಧವಾರ ಮುಕ್ತಾಯಗೊಳ್ಳಲಿದೆ.

 Sharesee more..

ಗಡಿಯಲ್ಲಿ ಮತ್ತೆ ಕದನವಿರಾಮ ಉಲ್ಲಂಘಿಸಿದ ಪಾಕ್: ಭಾರತದ ತಿರುಗೇಟು

23 Jul 2019 | 6:27 PM

ಜಮ್ಮು, ಜುಲೊಐ 23 (ಯುಎನ್ಐ) ಪದೇ ಪದೆ ಕದನವಿರಾಮ ಉಲ್ಲಂಘಿಸುತ್ತಿರುವ ಪಾಕಿಸ್ತಾನ, ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಸಮೀಪದ ಗ್ರಾಮಗಳಲ್ಲಿ ಮಂಗಳವಾರ ಶೆಲ್ ದಾಳಿ ನಡೆಸಿದ್ದು, ಭಾರತೀಯ ಸೇನೆ ತಕ್ಕ ತಿರುಗೇಟು ನೀಡಿದೆ ಸೋಮವಾರ ಪಾಕಿಸ್ತಾನ ಸೇನೆ ರಜೌರಿ ಜಿಲ್ಲೆಯಲ್ಲಿ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಭಾರತೀಯ ಯೋಧರೊಬ್ಬರು ಮೃತಪಟ್ಟಿದ್ದರು ಮಂಗಳವಾರ ಕೃಷ್ಣಾ ಘಾಟಿ, ಮಾನ್ ಕೋಟ್ ಮತ್ತು ಮೆಂಧರ್ ಸೆಕ್ಟರ್ ಗಳಲ್ಲಿ ಪಾಕಿಸ್ತಾನ ಸೇನೆ ಕದನವಿರಾಮ ಉಲ್ಲಂಘಿಸಿದೆ ಎಂದು ಜಮ್ಮು ಮೂಲದ ಸೇನಾ ವಕ್ತಾರರು ತಿಳಿಸಿದ್ದಾರೆ.

 Sharesee more..