Wednesday, Jul 17 2019 | Time 11:51 Hrs(IST)
  • ಬಂಡಾಯ ಶಾಸಕರು ವಿಶ್ವಾಸ ಮತಯಾಚನೆಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಲ್ಲ: ಸುಪ್ರೀಂ ತೀರ್ಪು
  • ನರೇಂದರ್‌ : ಅಂತಾರಾಷ್ಟ್ರೀಯ ಗೋಲು ಗಳಿಸಿದ ಭಾರತದ ಎರಡನೇ ಅತಿ ಕಿರಿಯ ಆಟಗಾರ
  • ನಾಲ್ಕೈದು ದಿನಗಳಲ್ಲಿ ಬಿಜೆಪಿ ಸರ್ಕಾರಅಸ್ಥಿತ್ವಕ್ಕೆ : ಬಿಎಸ್ ಯಡಿಯೂರಪ್ಪ ವಿಶ್ವಾಸ
Special Share

ಅಮರನಾಥ್ ಯಾತ್ರೆ: 13,555 ಯಾತ್ರಿಗಳಿಂದ ದರ್ಶನ

ಅಮರನಾಥ್ ಯಾತ್ರೆ: 13,555 ಯಾತ್ರಿಗಳಿಂದ ದರ್ಶನ
ಅಮರನಾಥ್ ಯಾತ್ರೆ: 13,555 ಯಾತ್ರಿಗಳಿಂದ ದರ್ಶನ

ಶ್ರೀನಗರ, ಜುಲೈ 11 (ಯುಎನ್‌ಐ) ದಕ್ಷಿಣ ಕಾಶ್ಮೀರ ಹಿಮಾಲಯದ ಪವಿತ್ರ ಅಮರನಾಥ ಗುಹೆಯಲ್ಲಿನ ವಾರ್ಷಿಕ ತೀರ್ಥಯಾತ್ರೆ ಸುಗಮವಾಗಿ ನಡೆಯುತ್ತಿದ್ದು, ಗುರುವಾರ 13,555 ಯಾತ್ರಿಗಳು ಪವಿತ್ರ ಗುಹೆಯ ದರ್ಶನ ಪಡೆದು, ನಮಸ್ಕರಿಸಿದ್ದಾರೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.ಯಾತ್ರೆಯ 11ನೇ ದಿನವಾಗಿದ್ದು, ವಾರ್ಷಿಕ ತೀರ್ಥಯಾತ್ರೆ ಪ್ರಾರಂಭವಾದಾಗಿನಿಂದ ಮಹಿಳೆಯರು, ಸಾಧುಗಳು ಸೇರಿದಂತೆ ಯಾತ್ರಿಗಳು ಸ್ವಯಂ ನಿರ್ಮಿತ ಹಿಮ ಶಿವಲಿಂಗದ ದರ್ಶನ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.ಇದರೊಂದಿಗೆ ಇಲ್ಲಿವರೆಗೆ ಒಟ್ಟು 1,44,058 ಯಾತ್ರಿಗಳು ಶಿವಲಿಂಗದ ದರ್ಶನ ಪಡೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.ಯುಎನ್‌ಐ ಕೆಎಸ್‌ವಿ ವಿಎನ್‌ಎಲ್‌ 2002