SpecialPosted at: Feb 22 2021 5:09PM
Shareಕೋಲ್ಕತಾ: ಕಾಲಿಘಾಟ್ ದೇಗುಲಕ್ಕೆ ಪೀಯೂಷ್ ಗೋಯಲ್ ಭೇಟಿ
ಕೋಲ್ಕತಾ: ಕಾಲಿಘಾಟ್ ದೇಗುಲಕ್ಕೆ ಪೀಯೂಷ್ ಗೋಯಲ್ ಭೇಟಿಕೋಲ್ಕತಾ, ಫೆ .22 (ಯುಎನ್ಐ) ರೈಲ್ವೆ ಸಚಿವ ಪೀಯೂಷ್ ಗೋಯಲ್ ಸೋಮವಾರ ದಕ್ಷಿಣ ಕೋಲ್ಕತ್ತಾದ ಕಾಲಿಘಾಟ್ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಕಾಲಿಘಾಟ್ ಕಾಳಿ ದೇವಾಲಯವು ಈ ಮಹಾನಗರದ ರಕ್ಷಕ ದೇವತೆಯೆಂದು ಪರಿಗಣಿಸಲಾಗುತ್ತಿದೆ ಮತ್ತು 51 ಶಕ್ತಿ ಪೀಠಗಳಲ್ಲಿ ಒಂದಾಗಿದೆ.
ರೈಲ್ವೆಯ ಅಧಿಕೃತ ಕಾರ್ಯಕ್ರಮಕ್ಕಾಗಿ ನಗರಕ್ಕೆ ಭೇಟಿ ನೀಡಿದ್ದ ಗೋಯಲ್, ನೂತನವಾಗಿ ನಿರ್ಮಾಣಗೊಂಡಿರುವ ಮೆಟ್ರೋ ರೈಲ್ವೆ ವಿಸ್ತರಣೆ ಸೇರಿದಂತೆ ಹಲವು ಯೋಜನೆಗಳಿಗೆ ಚಾಲನೆ ನೀಡಿದರು.
ವಿಸ್ತೃತ ಮೆಟ್ರೋ ರೈಲ್ವೆ ಮಾರ್ಗವು ಯಾತ್ರಾರ್ಥಿಗಳಿಗೆ ದೇಗುಲ ತಲುಪಲು ಸಹಾಯ ಮಾಡುತ್ತದೆ
ಕಾಲಿಘಾಟ್ ಮತ್ತು ದಕ್ಷಿಣೇಶ್ವರವನ್ನು ಬಹಳ ಕಡಿಮೆ ಸಮಯ ಹಾಗೂ ಕಡಿಮೆ ವೆಚ್ಚದಲ್ಲಿ ತಲುಪಬಹುದಾಗಿದೆ.
ಯುಎನ್ಐ ಎಸ್ಎಚ್ 1458