ಬೆಂಗಳೂರು, ಜ13(ಯುಎನ್ಐ) ಪ್ರಮುಖ ಆನ್ಲೈನ್ ರಿಟೈಲ್ ದೈತ್ಯ ಅಮೆಜಾನ್... ಜೆಇಇ( ಜಂಟಿ ಪ್ರವೇಶ ಪರೀಕ್ಷೆ ) ಗಾಗಿ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗಾಗಿ ವಿಶೇಷ ಶಿಕ್ಷಣ ವೇದಿಕೆ ಸ್ಥಾಪಿಸಿದೆ.
ಅಮೆಜಾನ್ ಅಕಾಡೆಮಿ ಹೆಸರಿನಲ್ಲಿ ಪ್ರಾರಂಭಿಸಲಾಗಿರುವ ಈ ವೇದಿಕೆಯ ಮೂಲಕ ಆನ್ಲೈನ್ ತರಗತಿಗಳು, ಅಧ್ಯಯನ ಸಾಮಗ್ರಿಗಳನ್ನು ಒದಗಿಸಲಿವೆ ಎಂದು ತಿಳಿಸಿದೆ. ವಿಶೇಷವಾಗಿ ಗಣಿತ, ರಸಾಯನ ಶಾಸ್ತ್ರ, ಭೌತ ಶಾಸ್ತ್ರದ ಬಗ್ಗೆ ವಿದ್ಯಾರ್ಥಿಗಳಿಗೆ ಸಮಗ್ರ ತಿಳುವಳಿಕೆ ಕಲ್ಪಿಸಲಾಗುವುದು ಎಂದು ತಿಳಿಸಿದೆ.
ಅಮೆಜಾನ್ ಅಕಾಡೆಮಿಯ ಬೀಟಾ ಆವೃತ್ತಿ ಪ್ರಸ್ತುತ ವೆಬ್ ಹಾಗೂ ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿದೆ. ಅಣಕು ಪರೀಕ್ಷೆಗಳು, ಅಭ್ಯಾಸ ಬಿಟ್ಗಳು ಹಾಗೂ ತಜ್ಞರ ಸೂಚನೆ, ಸಲಹೆಗಳೊಂದಿಗೆ ಬೀಟಾ ಆವೃತ್ತಿಯು ಲಭ್ಯವಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.
ದೇಶಾದ್ಯಂತ ಇರುವ ತಜ್ಞ ಅಧ್ಯಾಪಕರಿಂದ ಕಂಟೆಟ್ ರೂಪಿಸಲಾಗಿದೆ. ಈ ಸಾಮಗ್ರಿ ಜೆಇಇ ಜೊತೆಗೆ, ವಿಐಟಿ ಇಇಇ, ಎಸ್ಆರ್ಎಂಇಇಇ, ಎಂಇಟಿಗೆ ತಯಾರಿ ನಡೆಸುವ ವಿದ್ಯಾರ್ಥಿಗಳಿಗೆ ಸಹ ಉಪಯುಕ್ತವಾಗಿರಲಿದೆ ಈ ಎಲ್ಲ ಸಾಮಗ್ರಿಗಳನ್ನು ಕೆಲವು ತಿಂಗಳುಗಳವರೆಗೆ ಉಚಿತವಾಗಿ ಬಳಸಬಹುದು.
ಯುಎನ್ಐ ಕೆವಿಆರ್ 2033