Monday, Oct 26 2020 | Time 03:19 Hrs(IST)
Special Share

ಡಿಡಿಸಿಎ ಅಧ್ಯಕ್ಷರಾಗಿ ಆಯ್ಕೆಗೊಂಡ ರೋಹನ್ ಜೇಟ್ಲಿ

ಡಿಡಿಸಿಎ ಅಧ್ಯಕ್ಷರಾಗಿ ಆಯ್ಕೆಗೊಂಡ ರೋಹನ್ ಜೇಟ್ಲಿ
ಡಿಡಿಸಿಎ ಅಧ್ಯಕ್ಷರಾಗಿ ಆಯ್ಕೆಗೊಂಡ ರೋಹನ್ ಜೇಟ್ಲಿ

ನವದೆಹಲಿ, ಅ 17(ಯುಎನ್ಐ) ದೆಹಲಿ ಅಂಡ್ ಡಿಸ್ಟ್ರಿಕ್ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ)ನ ನೂತನ ಅಧ್ಯಕ್ಷರಾಗಿ ದಿ, ಮಾಜಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಪುತ್ರ ರೋಹನ್ ಜೇಟ್ಲಿ ಶನಿವಾರ ಸರ್ವಾನುಮತದಿಂದ ಆಯ್ಕೆಗೊಂಡಿದ್ದಾರೆ.

2021ರ ಜೂನ್ 30ರವರೆಗೆ ರೋಹನ್ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಉಳಿದ ಪದಾಧಿಕಾರಿಗಳು( ಕೋಶಾಧ್ಯಕ್ಷ , ನಿರ್ದೇಶಕರು) ನವಂಬರ್ 5,6,8ರಂದು ಚುನಾವಣೆ ನಡೆಯಲಿದ್ದು, ನವಂಬರ್ 9 ಫಲಿತಾಂಶ ಪ್ರಕಟಗೊಳ್ಳಲಿದೆ.

ವೃತ್ತಿಯಲ್ಲಿ ವಕೀಲರಾಗಿರುವ ರೋಹನ್ ಜೇಟ್ಲಿ ನಾಮಪತ್ರ ಸಲ್ಲಿಕೆಯ ಕೊನೆಯ ದಿನದಂದು ನಾಮಪತ್ರಸಲ್ಲಿಸಿದ್ದರು. ಅಧ್ಯಕ್ಷ ಪದವಿಗೆ ನಾಮಪತ್ರ ಸಲ್ಲಿಸಿದ್ದ ಮತ್ತೊಬ್ಬ ವ್ಯಕ್ತಿ ಸುನಿಲ್ ಕುಮಾರ್ ಗೋಯಲ್, ತಮ್ಮ ನಾಮಪತ್ರ ವಾಪಸ್ಸು ಪಡೆದುಕೊಂಡ ಹಿನ್ನಲೆಯಲ್ಲಿ ರೋಹನ್ ಸರ್ವಾನುಮತದಿಂದ ಆಯ್ಕೆಗೊಂಡಿದ್ದಾರೆ. ರೋಹನ್ ಅವರ ತಂದೆ ದಿ. ಅರುಣ್ ಜೇಟ್ಲಿ 1999ರಿಂದ 2013ರವರೆಗೂ ಡಿಡಿಸಿಎ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ಯುಎನ್ಐ ಕೆವಿಆರ್ 18.23

More News
370ನೇ ವಿಧಿ: ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿಕೆಗೆ ಒಮರ್ ಅಬ್ದುಲ್ಲಾ ಸಿಡಿಮಿಡಿ

370ನೇ ವಿಧಿ: ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿಕೆಗೆ ಒಮರ್ ಅಬ್ದುಲ್ಲಾ ಸಿಡಿಮಿಡಿ

25 Oct 2020 | 5:53 PM

ಶ್ರೀನಗರ, ಅ 25(ಯುಎನ್ಐ) ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370 ನೇ ವಿಧಿ ಮರು ಜಾರಿ ಸಾಧ್ಯವಿಲ್ಲದ ಕೆಲಸ ಎಂಬ ಕೇಂದ್ರ ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ಹೇಳಿಕೆಗೆ ನ್ಯಾಷನಲ್ ಕಾನ್ಫರೆನ್ಸ್ (ಎನ್ ಸಿ) ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

 Sharesee more..
ಭಾರತದ ಭೂ ಪ್ರದೇಶ ಚೀನಾ ಆಕ್ರಮಿಸಿರುವುದು ಆರ್ ಎಸ್ ಎಸ್ ಗೂ ಗೊತ್ತಿದೆ: ರಾಹುಲ್ ಗಾಂಧಿ

ಭಾರತದ ಭೂ ಪ್ರದೇಶ ಚೀನಾ ಆಕ್ರಮಿಸಿರುವುದು ಆರ್ ಎಸ್ ಎಸ್ ಗೂ ಗೊತ್ತಿದೆ: ರಾಹುಲ್ ಗಾಂಧಿ

25 Oct 2020 | 5:02 PM

ನವದೆಹಲಿ, ಅ 25(ಯುಎನ್ಐ) ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸಂಚಲನಾತ್ಮಕ ಹೇಳಿಕೆ ನೀಡಿದ್ದಾರೆ. ಭಾರತದ ಭೂ ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿರುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ತಿಳಿದಿದೆ, ಆದರೆ ಅದನ್ನು ಅವರು ಹೇಳಲು ಭಯಪಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

 Sharesee more..