Monday, Sep 23 2019 | Time 02:17 Hrs(IST)
  • ಇಂಡೋ-ಆಫ್ರಿಕಾ ಚುಟುಕು ಸರಣಿ ಸಮಬಲ
Special Share

ತ್ರಿವಳಿ ತಲಾಖ್‍ ನಿಷೇಧ: ಕೇಂದ್ರ ಸರ್ಕಾರದ ಬಹುದೊಡ್ಡ ಸಾಧನೆಗಳಲ್ಲಿ ಒಂದು- ಸ್ಮೃತಿ ಇರಾನಿ

ತ್ರಿವಳಿ ತಲಾಖ್‍ ನಿಷೇಧ: ಕೇಂದ್ರ ಸರ್ಕಾರದ ಬಹುದೊಡ್ಡ ಸಾಧನೆಗಳಲ್ಲಿ ಒಂದು- ಸ್ಮೃತಿ ಇರಾನಿ
ತ್ರಿವಳಿ ತಲಾಖ್‍ ನಿಷೇಧ: ಕೇಂದ್ರ ಸರ್ಕಾರದ ಬಹುದೊಡ್ಡ ಸಾಧನೆಗಳಲ್ಲಿ ಒಂದು- ಸ್ಮೃತಿ ಇರಾನಿ

ಕೋಲ್ಕತ, ಸೆ 10 (ಯುಎನ್‌ಐ) ತ್ರಿವಳಿ ತಲಾಖ್‍ ನಿಷೇಧ ಕೇಂದ್ರ ಸರ್ಕಾರದ ಬಹುದೊಡ್ಡ ಸಾಧನೆಗಳಲ್ಲಿ ಒಂದಾಗಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಜವಳಿ ಸಚಿವ ಸ್ಮೃತಿ ಜುಬಿನ್ ಇರಾನಿ ಮಂಗಳವಾರ ಇಲ್ಲಿ ಹೇಳಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ 370 ನೇ ವಿಧಿ ರದ್ದುಪಡಿಸಿರುವ ಕ್ರಮ ರಾಜ್ಯದಲ್ಲಿನ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳನ್ನು ಪುನರ್ ಸ್ಥಾಪಿಸುವುದು ಮಾತ್ರವಲ್ಲದೆ, ಜಮ್ಮು-ಕಾಶ್ಮೀರದ ನಾಗರಿಕರು ಮತ್ತು ಎಲ್ಲ ರಾಜ್ಯಗಳ ನಾಗರಿಕರ ನಡುವಿನ ಅಂತರವನ್ನು ಶಾಸನಬದ್ಧವಾಗಿ ನಿವಾರಿಸುತ್ತದೆ ಎಂದು ಅವರು ಹೇಳಿದ್ದಾರೆ.

'ನಾಗರಿಕರ ಶಾಸನಾತ್ಮಕ ಹೊರೆಯಾಗಿದ್ದ ಹಳೆಯ ಕಾನೂನುಗಳನ್ನು ರದ್ದುಗೊಳಿಸುವುದಕ್ಕೆ ನರೇಂದ್ರ ಮೋದಿ ಸರ್ಕಾರ ಬದ್ದವಾಗಿದೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರದ ಕಳೆದ 100 ದಿನಗಳಲ್ಲಿನ ಸಾಧನೆಗಳ ಪಟ್ಟಿಯನ್ನು ವಿವರಿಸಿದ ಅವರು, 58 ಕಾನೂನುಗಳನ್ನು ಒಟ್ಟಾರೆಯಾಗಿ ರದ್ದುಪಡಿಸಲಾಗಿದೆ. 2014 ರಿಂದೀಚೆಗೆ ಕೇಂದ್ರದಲ್ಲಿನ ಎನ್‍ಡಿಎ ಸರ್ಕಾರದ ಆಡಳಿತದಲ್ಲಿ 1 ಸಾವಿರ 486 ಕಾನೂನುಗಳನ್ನು ರದ್ದುಪಡಿಸಲಾಗಿದೆ. ದೇಶದ ರೈತರ ಆದಾಯ ಹೆಚ್ಚಿಸಲು ಸರ್ಕಾರ ಬದ್ದವಾಗಿದೆ ಎಂದು ಪುನರುಚ್ಚರಿಸಿದರು.

ಪ್ರಧಾನಮಂತ್ರಿ ಕಿಸಾನ್‍ ಯೋಜನೆಯಡಿ ಪ್ರತಿ ರೈತ ಕುಟುಂಬಕ್ಕೆ ಮೊದಲ ಬಾರಿಗೆ ಕೇಂದ್ರದ ಖಜಾನೆಯಿಂದ ನೇರವಾಗಿ ತಮ್ಮ ಬ್ಯಾಂಕ್ ಖಾತೆಗಳಿಗೆ 6,000 ರೂ ನಗದನ್ನು ನೇರವಾಗಿ ವರ್ಗಾಯಿಸಲಾಗುತ್ತಿದೆ. ಕಳೆದ ನೂರು ದಿನಗಳಲ್ಲಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ವಿಸ್ತರಿಸಿದ್ದು, ದೇಶಾದ್ಯಂತ ಒಟ್ಟು 6 ಕೋಟಿ 37 ಲಕ್ಷ ರೈತರಿಗೆ ಇದರುವರೆಗೆ ಇದರಿಂದ ಪ್ರಯೋಜನವಾಗಿದೆ.

ಪ್ರಧಾನಮಂತ್ರಿ ಕಿಸಾನ್‍ ಸಮ್ಮಾನ್‍ ಯೋಜನೆಯಡಿ, ಕಳೆದ 100 ದಿನಗಳಲ್ಲಿ 8,955 ಕೋಟಿ ರೂ ಹಣವನ್ನು ನೇರವಾಗಿ ಕೃಷಿ ಕುಟುಂಬಗಳಿಗೆ ವರ್ಗಾಯಿಸಲಾಗಿದೆ. ಎನ್‍ಡಿಎ ಸರ್ಕಾರ ಈ ಯೋಜನೆಯಡಿ ಒಟ್ಟಾರೆ 20,200,50 ಕೋಟಿ ರೂ. ಹಣ ವರ್ಗಾವಣೆ ಮಾಡಿದೆ ಎಂದು ಸ್ಮೃತಿ ಇರಾನಿ ಹೇಳಿದರು.

ಯುಎನ್‍ಐ ಎಸ್ಎಲ್‍ಎಸ್‍ ಕೆವಿಆರ್ 1916

More News
ಪಾಕ್ ನೊಂದಿಗೆ ಮಾತುಕತೆ ನಡೆದಲ್ಲಿ ಅದು ಪಿಒಕೆ ಬಗ್ಗೆ ಮಾತ್ರ; ರಾಜನಾಥ್

ಪಾಕ್ ನೊಂದಿಗೆ ಮಾತುಕತೆ ನಡೆದಲ್ಲಿ ಅದು ಪಿಒಕೆ ಬಗ್ಗೆ ಮಾತ್ರ; ರಾಜನಾಥ್

22 Sep 2019 | 8:25 PM

ಪಾಟನಾ, ಸೆ 22 (ಯುಎನ್ಐ) ಪಾಕಿಸ್ತಾನದೊಂದಿಗೆ ಭಾರತ ಯಾವುದೇ ಮಾತುಕತೆ ನಡೆಸಲು ಇಚ್ಛಿಸುವುದಿಲ್ಲ. ಒಂದೊಮ್ಮೆ ಮಾತುಕತೆ ನಡೆದರೂ, ಅದು ಕೇವಲ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಸಂಬಂಧಿಸಿದ್ದಾಗಿರುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಜಮ್ಮು ಕಾಶ್ಮೀರಕ್ಕೆ ಸ್ವಾಯತತ್ತೆ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದು ಕುರಿತ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 370ನೇ ವಿಧಿಯ ರದ್ದತಿ ಐತಿಹಾಸಿಕ ನಡೆ ಎಂದು ಬಣ್ಣಿಸಿದರು.

 Sharesee more..