Sunday, Aug 25 2019 | Time 01:38 Hrs(IST)
Special Share

ನಿರ್ಬಂಧ ಹಂತಹಂತವಾಗಿ ಸಡಿಲ: ಜಮ್ಮು ಮತ್ತು ಕಾಶ್ಮೀರ ಸರ್ಕಾರ

ನಿರ್ಬಂಧ ಹಂತಹಂತವಾಗಿ ಸಡಿಲ: ಜಮ್ಮು ಮತ್ತು ಕಾಶ್ಮೀರ ಸರ್ಕಾರ
ನಿರ್ಬಂಧ ಹಂತಹಂತವಾಗಿ ಸಡಿಲ: ಜಮ್ಮು ಮತ್ತು ಕಾಶ್ಮೀರ ಸರ್ಕಾರ

ನವದೆಹಲಿ, ಆಗಸ್ಟ್ 13 (ಯುಎನ್‌ಐ) ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿನ ನಿರ್ಬಂಧಗಳನ್ನು ಹಂತ ಹಂತವಾಗಿ ಸಡಿಲಿಸಿ ಜನಜೀವನವನ್ನು ಸಾಮಾನ್ಯ ಸ್ಥಿತಿಗೆ ತರಲಾಗುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಮಂಗಳವಾರ ಹೇಳಿದೆ..

ಕಾಶ್ಮೀರ ವಿಭಾಗದ ವಿವಿಧ ಭಾಗಗಳಲ್ಲಿ ಸ್ಥಳೀಯ ಅಧಿಕಾರಿಗಳು ವಾಸ್ತವ ಪರಿಸ್ಥಿತಿಯನ್ನು ಅಂದಾಜು ಮಾಡಿದ ನಂತರ ನಿರ್ಬಂಧಗಳನ್ನು ಸಡಿಲಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರದ ವಕ್ತಾರ ರೋಹಿತ್ ಕನ್ಸಾಲ್ ಹೇಳಿದರು.

ವಿವಿಧ ಅಗತ್ಯ ಸೇವೆಗಳಿಗೆ ಸರ್ಕಾರ ಕೈಗೊಂಡಿರುವ ಉಪಕ್ರಮಗಳನ್ನು ಉಲ್ಲೇಖಿಸಿದ ಅವರು, ಜನರಿಗೆ ಯಾವುದೇ ಅಡೆತಡೆಗಳಿಲ್ಲದೆ ವೈದ್ಯಕೀಯ ಸೇವೆಗಳನ್ನು ಒದಗಿಸಲಾಗುತ್ತಿದೆ ಎಂದರು.

ಸುಮಾರು 13,500 ಒಪಿಡಿಗಳು ಅಗತ್ಯವಾದ ವೈದ್ಯಕೀಯ ಚಿಕಿತ್ಸೆಯನ್ನು ನೀಡುತ್ತಿವೆ ಮತ್ತು 1400 ಹೊಸ ದಾಖಲಾತಿಗಳನ್ನು ಸಹ ಮಾಡಲಾಗಿದೆ. 600 ವೈದ್ಯಕೀಯ ಸೇವೆಯ ಜೊತೆಗೆ ಕಣಿವೆಯಾದ್ಯಂತದ ಪ್ರತಿ ಆಸ್ಪತ್ರೆಯಲ್ಲಿ ಜೀವ ಉಳಿಸುವಿಕೆ ಸೇರಿದಂತೆ ಎಲ್ಲಾ ಔಷಧಿಗಳ ಲಭ್ಯತೆಯನ್ನು ಖಾತ್ರಿಪಡಿಸಲಾಗಿದೆ ಎಂದು ಕನ್ಸಾಲ್ ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಎಲ್‌ಪಿಜಿ ಇತರ ಅಗತ್ಯ ವಸ್ತುಗಳನ್ನು ಹೊತ್ತೊಯ್ಯುವ ಭಾರಿ ಗಾತ್ರದ ವಾಹನಗಳು ಮತ್ತು ಪ್ರತಿದಿನವೂ ಚಲಿಸುತ್ತಿವೆ. ಕಣಿವೆಯಿಂದ ವಿಮಾನಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು 1400-1500 ಲಘು ಮೋಟಾರ್ ಮತ್ತು ಇತರ ವಾಹನಗಳು ಸಹ ಪ್ರತಿದಿನವೂ ಚಲಿಸುತ್ತಿವೆ ಎಂದು ಅವರು ಮಾಹಿತಿ ನೀಡಿದರು.

ರಾಜ್ಯ ಸರ್ಕಾರದ ಪ್ರಕಾರ, ಕಣಿವೆಯ ಪ್ರತಿಯೊಂದು ಜಿಲ್ಲೆಯಲ್ಲೂ ಸ್ವಾತಂತ್ರ್ಯ ದಿನಾಚರಣೆಯ ಪೂರ್ವಾಭ್ಯಾಸವನ್ನು ಮಾಡಲಾಗಿದ್ದು, ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಸುಗಮವಾಗಿ ನಡೆಸಲು ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ.

ಯುಎನ್‌ಐ ಕೆಎಸ್‌ವಿ ವಿಎನ್‌ಎಲ್‌ 1940