Tuesday, Jun 25 2019 | Time 14:06 Hrs(IST)
 • ಜಿಂದಾಲ್ ಗೆ ಭೂಮಿ: ಲ್ಯಾಂಡ್ ಆಡಿಟ್ ಮಾಡಿಸಲು ಪಾಟೀಲ್ ಆಗ್ರಹ
 • ಕಳೆದ ಐದು ವರ್ಷದಲ್ಲಿ ದೇಶ ತುರ್ತು ಪರಿಸ್ಥಿತಿಯಲ್ಲಿ ಸಾಗಿದೆ: ಮಮತಾ ಬ್ಯಾನರ್ಜಿ
 • ಲೋಕಸಭಾ ಸದಸ್ಯರಾಗಿ ನುಸ್ರತ್ ಜಹಾನ್, ಮಿಮಿ ಚಕ್ರವರ್ತಿ ಪ್ರಮಾಣ ವಚನ
 • ರೈತರಿಗೆ ಬೆಳೆ ವಿಮೆ ಆಯ್ಕೆಯಾಗಬೇಕೋ, ಕಡ್ಡಾಯವಾಗಬೇಕೋ? ಸಲಹೆಗಾಗಿ ರಾಜ್ಯಗಳಿಗೆ ಕೇಂದ್ರ ಮನವಿ
 • ಕಾಂಗ್ರೆಸ್ ಮುಕ್ತ ಭಾರತ ಕನಸು ನನಸಾಗಲಿದೆ: ಯಡಿಯೂರಪ್ಪ
 • ಜಪಾನ್ ನೊಂದಿಗಿನ ಭದ್ರತಾ ಒಪ್ಪಂದದಿಂದ ಹಿಂದೆ ಸರಿಯಲಿದೆಯೇ ಅಮೆರಿಕ?
 • ಕೃಷಿಗಿಂತ ಹೈನುಗಾರಿಕೆಯಲ್ಲಿ ಹೆಚ್ಚು ಸಂಪಾದನೆ; ಕೇಂದ್ರ ಸರ್ಕಾರ
 • ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ವಾಲ್ಮೀಕಿ ಸಮುದಾಯದಿಂದ ಬೃಹತ್ ಪ್ರತಿಭಟನೆ
 • ಭಾರತದ ವಿರುದ್ಧ ಪಾಕ್ ಸೋತ ಬಳಿಕ ಆತ್ಮಹತ್ಯೆ ಮಾಡಿಕೊಳ್ಳಬೇಕೆನಿಸಿತ್ತು !
 • ಕಾರ್ಮಿಕ ಮುಖಂಡ, ಮಾಜಿ ಕೌನ್ಸಿಲರ್‌ ಸತ್ಯನಾರಾಯಣರಾವ್ ನಿಧನ
 • ಪರ್ಷಿಯಾ ಕೊಲ್ಲಿ ಪ್ರದೇಶದಲ್ಲಿ “ಗರಿಷ್ಠ ಸಂಯಮ” ಭದ್ರತಾ ಮಂಡಳಿ ಒತ್ತಾಯ
 • ಪರ್ಷಿಯಾ ಕೊಲ್ಲಿ ಪ್ರದೇಶದಲ್ಲಿ “ಗರಿಷ್ಠ ಸಂಯಮ” ಅಮೆರಿಕಾ ಒತ್ತಾಯ
 • ಗ್ರಾಮ ವಾಸ್ತವ್ಯ ಬೇಡ ಎನ್ನುವವರಿಗೆ ಆಡಳಿತದ ಪರಿಕಲ್ಪನೆಯೇ ಇಲ್ಲ: ವಿಶ್ವನಾಥ್ ಟೀಕೆ
 • ಕಿವೀಸ್‌ ವಿರುದ್ಧ ಪಾಕಿಸ್ತಾನಕ್ಕೆ ಮತ್ತೊಂದು ಅಗ್ನಿಪರೀಕ್ಷೆ
 • ಕೋಲ್ಕತ್ತಾದಲ್ಲಿ ನಾಲ್ವರು ಜೆಎಂಬಿ ಭಯೋತ್ಪಾದಕರ ಬಂಧನ
Special Share

ಮೋದಿಗೆ ಜಗತ್ತಿನ ಮೂಲೆಮೂಲೆಗಳಿಂದ ಅಭಿನಂದನೆಯ ಮಹಾಪೂರ

ಮೋದಿಗೆ ಜಗತ್ತಿನ ಮೂಲೆಮೂಲೆಗಳಿಂದ ಅಭಿನಂದನೆಯ ಮಹಾಪೂರ
ಮೋದಿಗೆ ಜಗತ್ತಿನ ಮೂಲೆಮೂಲೆಗಳಿಂದ ಅಭಿನಂದನೆಯ ಮಹಾಪೂರ

ನವದೆಹಲಿ, ಮೇ 26 (ಯುಎನ್ಐ) ಸಾರ್ವತ್ರಿಕ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶ್ವದ ಮೂಲೆಮೂಲೆಗಳಿಂದ ಅಭಿನಂದನೆಗಳು ಹರಿದು ಬಂದಿವೆ.

ಸೌದಿ ಅರೆಬಿಯಾದ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್, ಕತಾರ್ ನ ಎಮಿರ್ (ಆಡಳಿತಗಾರ) ತಮೀಮ್ ಬಿನ್ ಹಮಾಮ್ ಅಲ್ ಥಾನಿ, ಜರ್ಮನಿಯ ಚಾನ್ಸೆಲರ್ ಏಂಜೆಲ ಮರ್ಕೆಲ್, ಬ್ರಿಟನ್ ಪ್ರಧಾನಿ ಥೆರೇಸಾ ಮೇ, ಶ್ರೀಲಂಕಾ ಅಧ್ಯಕ್ಷ ಮಹಿಂದ ರಾಜಪಕ್ಷ ಮತ್ತಿತರರು ಮೋದಿ ಅವರಿಗೆ ಕರೆ ಮಾಡಿದ ಅಭಿನಂದನೆ ಸಲ್ಲಿಸಿದ್ದಾರೆ.

ಸೌದಿ ಅರೆಬಿಯಾದ ರಾಜಕುಮಾರ ಸಲ್ಮಾನ್ , ಕತಾರ್ ನ ಎಮಿರ್ ಸೇರಿದಂತೆ ಎಲ್ಲಾ ನಾಯಕರು ಭಾರತದೊಂದಿಗಿನ ಸಂಬಂಧ ವೃದ್ಧಿ, ವ್ಯಾಪಾರ ವಹಿವಾಟಿನ ಸುಧಾರಣೆ ಹಾಗೂ ದ್ವಿಪಕ್ಷೀಯ ಸಂಬಂಧಗಳ ಮುಂದುವರಿಕೆಯ ಆಶಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮೊರಿಸ್ಸನ್ ಹಾಗೂ ಭೂತಾನದ ದೊರೆ ಜಿಗ್ಮೆ ಕೇಸರ್ ನ್ಯಾಮ್ಗೆಲ್ ವ್ಯಾಂಚುಕ್ ಮತ್ತಿತರರು ಕೂಡ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದ್ದಾರೆ.

ಯುಎನ್ಐ ಎಸ್ಎಚ್ ಎಎಚ್ 1731