Saturday, Dec 5 2020 | Time 02:15 Hrs(IST)
Special Share

ಲಿಕ್ಕರ್ ಮಾಫಿಯಾ ತಡೆಗಟ್ಟುವಲ್ಲಿ ಯೋಗಿ ಸರ್ಕಾರ ವಿಫಲ: ಪ್ರಿಯಾಂಕಾ

ಲಿಕ್ಕರ್ ಮಾಫಿಯಾ ತಡೆಗಟ್ಟುವಲ್ಲಿ ಯೋಗಿ ಸರ್ಕಾರ ವಿಫಲ: ಪ್ರಿಯಾಂಕಾ
ಲಿಕ್ಕರ್ ಮಾಫಿಯಾ ತಡೆಗಟ್ಟುವಲ್ಲಿ ಯೋಗಿ ಸರ್ಕಾರ ವಿಫಲ: ಪ್ರಿಯಾಂಕಾ

ಲಖನೌ, ನ 21 (ಯುಎನ್‍ಐ) ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಲಿಕ್ಕರ್ ಮಾಫಿಯಾ ತಡೆಯುವಲ್ಲಿ ವಿಫಲವಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಟೀಕಿಸಿದ್ದಾರೆ.

ಶನಿವಾರ ಈ ಕುರಿತು ಟ್ವೀಟ್ ಮಾಡಿರುವ ಪ್ರಿಯಾಂಕಾ "ಲಖನೌ, ಫಿರೋಜಾಬಾದ್, ಹಾಪುರ್, ಮಥುರಾ, ಪ್ರಯಾಗರಾಜ್ ಸೇರಿದಂತೆ ಉತ್ತರ ಪ್ರದೇಶದ ಹಲವೆಡೆ ನಕಲಿ ಮದ್ಯದಿಂದ ಅನೇಕರು ಮೃತಪಟ್ಟಿದ್ದಾರೆ. ಆಗ್ರಾ, ಬಾಗಪತ್, ಮೀರತ್ ನಲ್ಲಿಯೂ ಸಾವುಗಳು ಸಂಭವಿಸಿವೆ" ಎಂದು ಹೇಳಿದ್ದಾರೆ.

“ಮಾಫಿಯಾ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳದಿರಲು ಕಾರಣವೇನು? ಯಾರು ಜವಾಬ್ದಾರರು?" ಎಂದು ಪ್ರಶ್ನಿಸಿದ್ದಾರೆ.

ರಾಜ್ಯ ರಾಜಧಾನಿ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಲ್ಲಿ ನಕಲಿ ಮದ್ಯದಿಂದ ಸಾವಿನಂತಹ ದುರಂತ ಘಟನೆಗಳು ಹೆಚ್ಚಿವೆ. ಈ ಬಗ್ಗೆ ಕಠಿಣ ನಿಲುವು ತೆಗೆದುಕೊಂಡಿರುವ ಸರ್ಕಾರ ಮದ್ಯ ಮಾಫಿಯಾ ವಿರುದ್ಧ ಕ್ರಮಕ್ಕೆ ಮುಂದಾಗಿದ್ದು,ಪೊಲೀಸರಿಗೆ ಸೂಚನೆ ನೀಡಿದೆ.

ಯುಎನ್‍ಐ ಎಸ್‍ಎ 1530

More News
ಫ್ರಾನ್ಸ್ ನಲ್ಲಿರುವ ವಿಜಯ್ ಮಲ್ಯ ಆಸ್ತಿಗಳ ಜಪ್ತಿ

ಫ್ರಾನ್ಸ್ ನಲ್ಲಿರುವ ವಿಜಯ್ ಮಲ್ಯ ಆಸ್ತಿಗಳ ಜಪ್ತಿ

04 Dec 2020 | 9:31 PM

ನವದೆಹಲಿ, ಡಿ 4(ಯುಎನ್ಐ) ಬ್ಯಾಂಕುಗಳಿಂದ ಪಡೆದ ಸಾವಿರಾರು ಕೋಟಿ ರೂ ಸಾಲ ಮರು ಪಾವತಿಸದೆ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯಮಲ್ಯ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬೆನ್ನಿತ್ತಿದೆ.

 Sharesee more..
ಕಾಂಗ್ರೆಸ್ ಹೀನಾಯ ಸೋಲು, ಉತ್ತಮ್ ಕುಮಾರ್ ರೆಡ್ಡಿ ಪದತ್ಯಾಗ

ಕಾಂಗ್ರೆಸ್ ಹೀನಾಯ ಸೋಲು, ಉತ್ತಮ್ ಕುಮಾರ್ ರೆಡ್ಡಿ ಪದತ್ಯಾಗ

04 Dec 2020 | 9:06 PM

ಹೈದರಾಬಾದ್ , ಡಿ 4 (ಯುಎನ್ಐ) ಹೈದರಾಬಾದ್ ಗ್ರೇಟರ್ ಮುನ್ಸಿ ಪಲ್ ಕಾರ್ಫೋರೆಷನ್ ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಕಂಡ ಹಿನ್ನಲೆಯಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಉತ್ತಮ್ ಕುಮಾರ್ ರೆಡ್ಡಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

 Sharesee more..