Saturday, Aug 15 2020 | Time 11:18 Hrs(IST)
 • ಆಗಸ್ಟ್ 15 ಎಂದರೆ ನವ ಭಾರತದ ಉದಯದ ದಿನ : ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ
 • ಭಾರತೀಯತೆ, ದೇಶಪ್ರೇಮ, ದೇಶಭಕ್ತಿ ಉಕ್ಕಿ ಹರಿಯಲಿ: ಆರ್ ಅಶೋಕ
 • ಅಖಂಡ ಶ್ರೀನಿವಾಸಮೂರ್ತಿ ಮೇಲೆ ಬಿಜೆಪಿಯಿಂದ ಒತ್ತಡ: ಡಿ ಕೆ ಶಿವಕುಮಾರ್
 • ಭಾರತ - ಜರ್ಮನಿ ನಡುವೆ ಒಪ್ಪಂದ; ಬೆಂಗಳೂರಿಗೆ ವಿಮಾನ ಸೇವೆ ಪ್ರಾರಂಭಿಸಿದ ಲುಫ್ತಾನ್ಸಾ
 • ಶಿವಮೊಗ್ಗ ಜಿಲ್ಲೆಯಲ್ಲಿ ಅಭಿವೃದ್ಧಿಯ ಹೊಸಪರ್ವವೇ ಆರಂಭ; ಸ್ವಾತಂತ್ರ್ಯ ದಿನದ ಸಂದೇಶದಲ್ಲಿ ಕೆ ಎಸ್ ಈಶ್ವರಪ್ಪ
 • ಭಾನುವಾರದಿಂದ ಮಾತಾ ವೈಷ್ಣೋ ದೇವಿ ಯಾತ್ರೆ ಆರಂಭ
 • ಭಾರತೀಯರು ಸ್ಥಳೀಯರ ಧ್ವನಿಯಾಗಬೇಕು- ಪ್ರಧಾನಿ ಪ್ರತಿಪಾದನೆ
 • ನಾಡಿನ ಜನತೆಗೆ 74ನೇ ಸ್ವಾತಂತ್ರ್ಯೋತ್ಸವದ ಶುಭಕೋರಿದ ಮುಖ್ಯಮಂತ್ರಿ
 • ಆತ್ಮನಿರ್ಭರ ಭಾರತ, ಪ್ರತಿ ಭಾರತೀಯರ ದಿವ್ಯ ಮಂತ್ರ: ಪ್ರಧಾನಿ
 • ಅಧಿಕೃತ ನಿವಾಸದಲ್ಲೇ ಧ್ವಜಾರೋಹಣ ನೆರವೇರಿಸಿದ ರಾಜನಾಥ್ ಸಿಂಗ್
 • ಕರೋನ ಸಮರದಲ್ಲಿ ಗೆಲ್ಲುವುದೆ ನಮ್ಮ ಮುಖ್ಯ ಗುರಿ: ಮೋದಿ
 • ಡಿ ಜೆ ಹಳ್ಳಿ ಗಲಭೆ ಪ್ರಕರಣ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶ ಮಾಡಿ ರಾಜ್ಯ ಸರ್ಕಾರದ ಆದೇಶ
Special Share

ವಾಯುಭಾರ ಕುಸಿತ : ಭಾರಿ ಮಳೆ, ತಮಿಳುನಾಡಿನಾದ್ಯಂತ ರೆಡ್ ಅಲರ್ಟ್ ಘೋಷಣೆ

ವಾಯುಭಾರ ಕುಸಿತ : ಭಾರಿ ಮಳೆ, ತಮಿಳುನಾಡಿನಾದ್ಯಂತ ರೆಡ್ ಅಲರ್ಟ್ ಘೋಷಣೆ
ವಾಯುಭಾರ ಕುಸಿತ : ಭಾರಿ ಮಳೆ, ತಮಿಳುನಾಡಿನಾದ್ಯಂತ ರೆಡ್ ಅಲರ್ಟ್ ಘೋಷಣೆ

ಚೆನ್ನೈ, ಡಿ 2 (ಯುಎನ್ಐ) ಹಿಂದೂ ಮಹಾ ಸಾಗರ ಮತ್ತು ಅರಬ್ಬಿ ಸಮುದ್ರದ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಕಾರಣ ತಮಿಳುನಾಡು,ಪುದುಚೇರಿ ಮತ್ತು ಕರ್ನಾಟಕ, ಕೇರಳ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಮುಂದಿನ 48 ಗಂಟೆಗಳ ಅವಧಿಯಲ್ಲಿ ಭಾರಿ ಮಳೆಯಾಗಲಿದ್ದು ಜನಜೀವನದ ಮೇಲೆ ಪರಿಣಾಮ ಬೀರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಧಾರಾಕಾರ ಮಳೆ ಜೀವನವನ್ನು ತತ್ತರಿಸುವಂತೆ ಮಾಡಿದ್ದು, ತಮಿಳುನಾಡಿನಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದೆ ಇಂದಿನಿಂದ ಇನ್ನೂ 2 ದಿನಗಳ ಕಾಲ ವರುಣನ ಆರ್ಭಟ ಮುಂದುವರಿಯಲಿದೆ.

ಹಿನ್ನಲೆಯಲ್ಲಿ ಚನ್ನೈ ವಿವಿ ಪರೀಕ್ಷೆಗಳನ್ನು ಸಹ ಮುಂದಕ್ಕೆ ಹಾಕಲಾಗಿದೆ. , ತಿರುವಳ್ಳೂರು, ವೆಲ್ಲೂರು, ತಿರುವಣ್ಣಾಮಲೈ, ತೂತುಕುಡಿ, ರಾಮನಾಥಪುರಂ ಮತ್ತು ತಿರುನಲ್ವೇಲಿ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗಲಿದೆ ಎಂದು ಚೆನ್ನೈ ಹವಾಮಾನ ಇಲಾಖೆಯ ಪ್ರಾದೇಶಿಕ ಕೇಂದ್ರ ಎಚ್ಚರಿಕೆ ನೀಡಿದೆ.

ವಾಯಭಾರ ಕುಸಿತದ ಕಾರಣ ಕರ್ನಾಟಕದ ಹಲವು ಜಿಲ್ಲೆಗಳಲ್ಲೂ ಭಾರಿ ಮಳೆಯಾಗಲಿದೆ ಎಂದೂ ಇಲಾಖೆ ವರದಿ ಹೇಳಿದೆ.

ಮುಂದಿನ ಎರಡು ಮೂರು ದಿನ ತುಂತುರು ಮಳೆ , ಬಿರುಗಾಳಿ, ಚಳಿಗಾಳಿ ಬೀಸಲಿದ್ದು ಜನರು ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ. ಕೇರಳದಲ್ಲೂ ಧಾರಾಕಾರ ಮಳೆಯಾಗಲಿದೆ ಎಂದೂ ಹವಾಮಾನ ಇಲಾಖೆ ಹೇಳಿದೆ.

ಯುಎನ್ಐ ಕೆಎಸ್ ಆರ್ 0725

More News

ಲವ್ ಅಗರವಾಲ್ ಗೆ ಕೊರೊನಾ ಪಾಸಿಟಿವ್

14 Aug 2020 | 9:28 PM

 Sharesee more..
ಕೋವಿಡ್‌ ಸೋಂಕು ಹಿನ್ನೆಲೆ; ಹಿರಿಯ ಗಾಯಕ ಎಸ್‌ ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಗಂಭೀರ

ಕೋವಿಡ್‌ ಸೋಂಕು ಹಿನ್ನೆಲೆ; ಹಿರಿಯ ಗಾಯಕ ಎಸ್‌ ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಗಂಭೀರ

14 Aug 2020 | 6:13 PM

ಚೆನ್ನೈ, ಆ 14 (ಯುಎನ್ಐ) ಕೋವಿಡ್ ಸೋಂಕಿಗೆ ಗುರಿಯಾಗಿದ್ದ ಹಿನ್ನೆಲೆ ಗಾಯನದ ದಂತಕಥೆ ಎಸ್ ಪಿ.ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಅತ್ಯಂತ ಗಂಭೀರವಾಗಿದೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ಖಾಸಗಿ ಆಸ್ಪತ್ರೆ ತಿಳಿಸಿದೆ.

 Sharesee more..