Monday, Aug 2 2021 | Time 14:02 Hrs(IST)
  • ಸಂಪುಟ : ಮೊದಲ ಹಂತದಲ್ಲಿ 15 ಸಚಿವರ ಪ್ರಮಾಣ ವಚನ ಸಂಭವ
  • ಕೊರೋನ ಅನಾಹುತ ತಡೆಗೆ ಸೂಕ್ತ ಕ್ರಮ ಕೈಗೊಳ್ಳಿ : ಸಿದ್ದರಾಮಯ್ಯ
  • ಮೇಲ್ಮನೆ ಸದಸ್ಯ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಪರ ಮಠಾಧೀಶರು ವಕಾಲತ್ತು
  • ದೇಶದಲ್ಲಿ 41, 134 ಹೊಸ ಕೊರೋನ ಪ್ರಕರಣ: 422 ಜನರ ಸಾವು
  • ಅಫ್ಘಾನಿಸ್ತಾನದಲ್ಲಿ ನಿಲ್ಲದ ಕದನ, 20 ಮಂದಿ ಸಾವು
  • ಕ್ಯಾಲಿಫೋರ್ನಿಯಾದಲ್ಲಿ ಹೆಲಿಕಾಪ್ಟರ್ ಅಪಘಾತ: ನಾಲ್ವರ ಸಾವು
Special Share

ಹಾರಾಟ ನಿಷಿದ್ಧ ವಲಯ ಘೋಷಿಸಿದ ಕಾರವಾರ, ವಜ್ರಕೋಶ ವಾಯುನೆಲೆ

ಹಾರಾಟ ನಿಷಿದ್ಧ ವಲಯ ಘೋಷಿಸಿದ ಕಾರವಾರ, ವಜ್ರಕೋಶ ವಾಯುನೆಲೆ
ಹಾರಾಟ ನಿಷಿದ್ಧ ವಲಯ ಘೋಷಿಸಿದ ಕಾರವಾರ, ವಜ್ರಕೋಶ ವಾಯುನೆಲೆ

ಕಾರವಾರ, ಜುಲೈ 21(ಯುಎನ್ಐ) ಕಾರವಾರ ಮತ್ತು ವಜ್ರಕೋಶ ನೌಕಾ ನೆಲೆಯೊಳಗೆ ಯಾವುದೇ ಖಾಸಗಿ ವ್ಯಕ್ತಿಗಳ ಹಾಗೂ ನಾಗರಿಕ ಸಂಸ್ಥೆಗಳ ವೈಮಾನಿಕ ಡ್ರೋನ್‌ಗಳನ್ನು ಹಾರಿಸುವುದನ್ನು ನಿಷೇಧಿಸಲಾಗಿದೆ.

ನೌಕಾ ನೆಲೆಯ ಪರಿಧಿಯಿಂದ ಮೂರು ಕಿ.ಮೀ ವಿಸ್ತೀರ್ಣವನ್ನು ‘ಹಾರಾಟದ ವಲಯವಲ್ಲ ’ ಎಂದು ಗೊತ್ತುಪಡಿಸಿರುವುದಾಗಿ, ಕಾಲಕಾಲಕ್ಕೆ ತಿದ್ದುಪಡಿ ಮಾಡಿದಂತೆ ಗೃಹ ವ್ಯವಹಾರ ಸಚಿವಾಲಯ ಹೊರಡಿಸಿದೆ.

ಈ ಹಾರಾಟ ನಿಷೇಧಿತ ವಲಯಗಳ ಬಳಕೆಯನ್ನು ನಿಯಂತ್ರಿಸಲಾಗುತ್ತಿದ್ದು, ಮಾರ್ಗಸೂಚಿಗಳನ್ನು ಉಲ್ಲಂಘಿಸಿದಲ್ಲಿ ಕಾನೂನಿನ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದರ ಬಗ್ಗೆ ಸೂಚಿಸಲಾಗಿದೆ.

ಯಾವುದೇ ವೈಮಾನಿಕ ಡ್ರೋನ್ ಗಳ ಹಾರಾಟಕ್ಕಾಗಿ ಡಿಜಿ ಸ್ಕೈ ಆಪರೇಟರ್‌ಗಳ ಮೂಲಕ ನಾಗರಿಕ ವಿಮಾನಯಾನ ಮಹಾನಿರ್ದೇಶಕ ಡಿಜಿಸಿಎ ಯಿಂದ ಅನುಮೋದನೆ ಪಡೆಯಬೇಕಾಗಿದ್ದು, ವೆಬ್‌ಸೈಟ್ (www.dgca nic in) ಮತ್ತು ಅನುಮೋದನೆ ಪತ್ರದ ಪ್ರತಿಯನ್ನು ನಿಗದಿತ ಹಾರುವ ಕಾರ್ಯಾಚರಣೆಗೆ ಕನಿಷ್ಠ ಎರಡು ವಾರಗಳ ಮೊದಲು ಪ್ರಧಾನ ಕಚೇರಿಯ ಕರ್ನಾಟಕ ನೌಕಾ ಪ್ರದೇಶಕ್ಕೆ ಸಲ್ಲಿಸಬೇಕು. ಯಾವುದೇ ವೈಮಾನಿಕ ಡ್ರೋನ್ ಅಥವಾ ಮಾನವರಹಿತ ವೈಮಾನಿಕ ವಾಹನಗಳನ್ನು (ಯುಎವಿ) ಮುಟ್ಟುಗೋಲು ಹಾಕುವ ಅಥವಾ ನಾಶಪಡಿಸುವ ಹಕ್ಕನ್ನು ಭಾರತೀಯ ನೌಕಾಪಡೆ ಹೊಂದಿದೆ.

ಯುಎನ್ಐ ಎಸ್ಎ 1222

More News
ಸಮಾಜದ ಎಲ್ಲಾ ವರ್ಗಗಳ ಬೆಳವಣಿಗೆಗೆ ಬಿಜೆಪಿ ಬದ್ಧ; ಶಾ

ಸಮಾಜದ ಎಲ್ಲಾ ವರ್ಗಗಳ ಬೆಳವಣಿಗೆಗೆ ಬಿಜೆಪಿ ಬದ್ಧ; ಶಾ

01 Aug 2021 | 8:41 PM

ವಿದ್ಯಾಂಚಲ್, ಉತ್ತರಪ್ರದೇಶ, ಆ 21 (ಯುಎನ್ಐ) ಕೇಂದ್ರ ಹಾಗೂ ಉತ್ತರ ಪ್ರದೇಶ ರಾಜ್ಯ ಸರ್ಕಾರವು ಯಾವುದೇ ತಾರತಮ್ಯವಿಲ್ಲದೆ ಜನರ ಕಲ್ಯಾಣಕ್ಕಾಗಿ ಬದ್ಧವಾಗಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಭಾನುವಾರ ಹೇಳಿದ್ದಾರೆ.

 Sharesee more..
ಪೊಲೀಸ್‌  ವ್ಯವಸ್ಥೆಯ

ಪೊಲೀಸ್‌ ವ್ಯವಸ್ಥೆಯ "ಪ್ರತಿಷ್ಟೆ" ಹೆಚ್ಚಿಸಲು ಶ್ರಮಿಸಿ, ಐಪಿಎಸ್‌ ಗಳಿಗೆ ಪ್ರಧಾನಿ ಮೋದಿ ಕರೆ

31 Jul 2021 | 5:47 PM

ನವದೆಹಲಿ, ಜುಲೈ 31 (ಯು ಎನ್‌ ಐ) ಭಾರತದಲ್ಲಿ ಪೊಲೀಸ್ ವ್ಯವಸ್ಥೆಯ ಬಗ್ಗೆ ಜನಸಾಮಾನ್ಯರಲ್ಲಿ ನಕಾರಾತ್ಮಕ ಅಭಿಪ್ರಾಯವಿದೆ, ವ್ಯವಸ್ಥೆಯ ಪ್ರತಿಷ್ಟೆ ಹೆಚ್ಚಿಸುವಂತಹ ಸುಧಾರಣೆಗೆ ಕೆಲಸ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶನಿವಾರ ಕರೆ ನೀಡಿದ್ದಾರೆ.

 Sharesee more..

ಭದ್ರತಾ ಪಡೆ ಗುಂಡಿಗೆ ಇಬ್ಬರು ಉಗ್ರರು ಹತ್ಯೆ

31 Jul 2021 | 10:03 AM

 Sharesee more..