Tuesday, Jun 25 2019 | Time 12:58 Hrs(IST)
 • ಪರ್ಷಿಯಾ ಕೊಲ್ಲಿ ಪ್ರದೇಶದಲ್ಲಿ “ಗರಿಷ್ಠ ಸಂಯಮ” ಅಮೆರಿಕಾ ಒತ್ತಾಯ
 • ಗ್ರಾಮ ವಾಸ್ತವ್ಯ ಬೇಡ ಎನ್ನುವವರಿಗೆ ಆಡಳಿತದ ಪರಿಕಲ್ಪನೆಯೇ ಇಲ್ಲ: ವಿಶ್ವನಾಥ್ ಟೀಕೆ
 • ಕಿವೀಸ್‌ ವಿರುದ್ಧ ಪಾಕಿಸ್ತಾನಕ್ಕೆ ಮತ್ತೊಂದು ಅಗ್ನಿಪರೀಕ್ಷೆ
 • ಕೋಲ್ಕತ್ತಾದಲ್ಲಿ ನಾಲ್ವರು ಜೆಎಂಬಿ ಭಯೋತ್ಪಾದಕರ ಬಂಧನ
 • ಮದಲ್ ಲಾಲ್ ಸೈನಿಗೆ ಶ್ರದ್ಧಾಂಜಲಿ: ರಾಜ್ಯಸಭಾ ಕಲಾಪ ಮುಂದೂಡಿಕೆ
 • ಪಾಕಿಸ್ತಾನಕ್ಕೆ ಉಪಯುಕ್ತ ಸಲಹೆ ನೀಡಿದ ವಾಸೀಮ್‌ ಅಕ್ರಂ
 • ಕ್ವಾರ್ಟರ್‌ ಫೈನಲ್‌ ಅರ್ಹತೆ ಪಡೆಯುವಲ್ಲಿ ಜಪಾನ್‌, ಈಕ್ವೆಡಾರ್‌ ವಿಫಲ
 • ಶ್ರೀನಗರದ ಹಿರಿಯ ಪತ್ರಕರ್ತ ಬಂಧನ
 • ಕಂದಕಕ್ಕೆ ಉರುಳಿದ ಬಸ್: ಐವರು ಸಾವು, 40 ಮಂದಿಗೆ ಗಾಯ
 • ಭಾರತದ 1983ರ ಚೊಚ್ಚಲ ವಿಶ್ವಕಪ್‌ಗೆ 36ರ ವರ್ಷಗಳ ಸಂಭ್ರಮ
 • ಬಿಜೆಪಿ ನಾಯಕ ಮದನ್ ಲಾಲ್ ಸೈನಿ ನಿಧನದ ಹಿನ್ನೆಲೆ; ಬಿಜೆಪಿ ಸಂಸದೀಯ ಸಭೆ ರದ್ದು
 • ಉತ್ತಮ ಪ್ರದರ್ಶನ ತೋರಲು ಫಿಟ್ನೆಸ್‌ ಕಾರಣ: ಶಕೀಬ್‌
 • ಸಚಿವ ಡಾ ಜೈಶಂಕರ್ ಗುಜರಾತ್‌ನಿಂದ ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿಯಿಂದ ಸ್ಪರ್ಧೆ
 • ತುರ್ತುಪರಿಸ್ಥಿತಿ ವಿರೋಧಿಸಿದ ನಾಗರಿಕರು, ನಾಯಕರಿಗೆ ಪ್ರಧಾನಿ, ಅಮಿತ್ ಶಾ ಗೌರವ
 • ಇಂದಿನಿಂದ ಮೈಕ್ ಪೊಂಪಿಯೋ ಮೂರು ದಿನಗಳ ಭಾರತ ಭೇಟಿ
Special Share

‘ವಾಯು’ ಚಂಡಮಾರುತ: ಪರಿಸ್ಥಿತಿ ಎದುರಿಸಲು ಕೇಂದ್ರ ಗೃಹ ಸಚಿವರಿಂದ ಸನ್ನದ್ಧತೆ ಪರಿಶೀಲನೆ

‘ವಾಯು’ ಚಂಡಮಾರುತ: ಪರಿಸ್ಥಿತಿ ಎದುರಿಸಲು ಕೇಂದ್ರ ಗೃಹ ಸಚಿವರಿಂದ ಸನ್ನದ್ಧತೆ ಪರಿಶೀಲನೆ
‘ವಾಯು’ ಚಂಡಮಾರುತ: ಪರಿಸ್ಥಿತಿ ಎದುರಿಸಲು ಕೇಂದ್ರ ಗೃಹ ಸಚಿವರಿಂದ ಸನ್ನದ್ಧತೆ ಪರಿಶೀಲನೆ

ನವದೆಹಲಿ, ಜೂನ್ 11(ಯುಎನ್‌ಐ)- 'ವಾಯು' ಚಂಡಮಾರುತದಿಂದ ಎದುರಾಬಹುದಾದ ಪರಿಸ್ಥಿತಿಯ ನಿಭಾಯಿಸುವ ದೃಷ್ಟಿಯಿಂದ ರಾಜ್ಯಗಳು ಮತ್ತು ಕೇಂದ್ರೀಯ ಸಂಸ್ಥೆಗಳೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಮಂಗಳವಾರ ಸನ್ನದ್ಧತೆಯನ್ನು ಪರಿಶೀಲಿಸಿದ್ದಾರೆ.

'ವಾಯು' ಚಂಡಮಾರುತ ಜೂನ್ 13 ರ ಮುಂಜಾನೆ 110 ರಿಂದ 135 ಕಿ.ಮೀ. ವೇಗದಲ್ಲಿ ಬಿರಗಾಳಿಯೊಂದಿಗೆ ಗುಜರಾತ್‍ ಕರಾವಳಿಯ ಪೋರ್ ಬಂದರ್ ಮತ್ತು ಮಹುವಾ ನಡುವೆ ಹಾಗೂ ವೆರಾವಲ್‍ ಮತ್ತು ಡಿಯು ಪ್ರಾಂತ್ಯದಲ್ಲಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.ಚಂಡಮಾರುತದಿಂದ ಗುಜರಾತ್ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಂಭವವಿದೆ. ಸಮುದ್ರ ಅಲೆಗಳು ಸಾಮಾನ್ಯಕ್ಕಿಂತ 1.0ರಿಂದ 1.5 ಮೀಟರ್ ನಷ್ಟು ಎತ್ತರಕ್ಕೆ ಏಳುವುದರಿಂದ ಕರಾವಳಿಯ ತಗ್ಗು ಪ್ರದೇಶಗಳಾದ ಕಚ್, ದೇವಭೂಮಿ ದ್ವಾರಕಾ, ಪೋರಬಂದರ್, ಜುನಾಗಢ್, ಡಿಯು, ಗಿರ್‍ ಸೋಮನಾಥ್, ಅಮ್ರೇಲಿ ಮತ್ತು ಭಾವ್‍ನಗರ್ ಜಿಲ್ಲೆಗಳು ಜಲಾವೃತವಾಗುವ ಸಾಧ್ಯತೆ ಇದೆ.ಭಾರತೀಯ ಹವಾಮಾನ ಇಲಾಖೆ ಈ ಕುರಿತಂತೆ ಏಪ್ರಿಲ್ 9 ರಿಂದ ಸಂಬಂಧಪಟ್ಟ ಎಲ್ಲ ರಾಜ್ಯಗಳಿಗೆ ನಿರಂತರವಾಗಿ ಮಾಹಿತಿ ಸಂಚಿಕೆಗಳನ್ನು ನೀಡುತ್ತಿದೆ.

ಚಂಡಮಾರುತದಿಂದ ಹಾನಿ ಮತ್ತು ಸಂಕಷ್ಟ ಎದುರಾದದಲ್ಲಿ ಜನರು ಸುರಕ್ಷಿತವಾಗಿ ಸ್ಥಳಾಂತರಿಸುವುದು ಮತ್ತು ವಿದ್ಯುತ್, ದೂರ ಸಂಪರ್ಕ, ಆರೋಗ್ಯ, ಕುಡಿಯುವ ನೀರು ಮುಂತಾದ ಎಲ್ಲ ಅಗತ್ಯ ಸೇವೆಗಳನ್ನು ಸೂಕ್ತವಾಗಿ ನಿರ್ವಹಿಸುವಂತೆ ಅಮಿತ್‍ ಶಾ ಸೂಚಿಸಿದ್ದಾರೆ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ನಿಯಂತ್ರಣಾ ಕೊಠಡಿಗಳ ಕಾರ್ಯ ನಿರ್ವಹಣೆಗು ಅವರು ಸೂಚಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇಂದಿನ ಸಭೆಯಲ್ಲಿ ಗೃಹ ಕಾರ್ಯದರ್ಶಿ, ಭೂ ವಿಜ್ಞಾನಗಳ ಸಚಿವಾಲಯದ ಕಾರ್ಯದರ್ಶಿ ಮತ್ತು ಹವಾಮಾನ ಇಲಾಖೆ ಮತ್ತು ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಯುಎನ್‍ಐ ಎಸ್‍ಎಲ್‍ಎಸ್‍ ಕೆವಿಆರ್ 1712