Friday, Sep 17 2021 | Time 12:35 Hrs(IST)
Special

ರಾಜ್ಯಸಭೆ ಏಳು ಸ್ಥಾನಗಳಿಗೆ ಉಪ ಚುನಾವಣೆ ದಿನಾಂಕ ಘೋಷಣೆ

09 Sep 2021 | 8:08 PM

ನವದೆಹಲಿ, ಸೆ 9(ಯುಎನ್‌ ಐ) ತಮಿಳು ನಾಡು, ಪಶ್ಚಿಮ ಬಂಗಾಳ ಸೇರಿದಂತೆ ಆರು ರಾಜ್ಯಗಳಿಂದ ತೆರವಾಗಿರುವ ಸಂಸತ್ತಿನ ಮೇಲ್ಮನೆ ರಾಜ್ಯಸಭೆಯ ಏಳು ಸ್ಥಾನಗಳಿಗೆ ಉಪ ಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗ ಗುರುವಾರ ಘೋಷಿಸಿದೆ ತಮಿಳುನಾಡಿನಲ್ಲಿ 2, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಅಸ್ಸಾಂ, ಮಹಾರಾಷ್ಟ್ರ, ಪುದುಚೇರಿಗಳ ತಲಾ 1 ರಾಜ್ಯಸಭಾ 1 ಸ್ಥಾನ ತೆರವಾಗಿವೆ.

 Sharesee more..

ಜಾವೇದ್‌ ಅಖ್ತರ್‌ ಮಾನನಷ್ಟ ಮೊಕದ್ದಮೆ ರದ್ದು ಕೋರಿದ್ದ ಕಂಗನಾ ಅರ್ಜಿ ವಜಾ

09 Sep 2021 | 7:14 PM

ಮುಂಬೈ, ಸೆ 9 (ಯುಎನ್ಐ) ತನ್ನ ವಿರುದ್ಧ ಸಾಹಿತಿ ಜಾವೇದ್ ಅಖ್ತರ್ ಸ್ಥಳೀಯ ನ್ಯಾಯಾಲಯದಲ್ಲಿ ದಾಖಲಿಸಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ರದ್ದುಗೊಳಿಸಬೇಕೆಂದು ನಟ ಕಂಗನಾ ರಣಾವತ್ ಸಲ್ಲಿಸಿದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.

 Sharesee more..

ವಿಧಾನಸಭೆ ಕಾರ್ಯಕಲಾಪ ಲೋಕಸಭೆ ಮಾದರಿಯಲ್ಲಿ ಚಿತ್ರೀಕರಿಸಿ ನೇರ ಪ್ರಸಾರ

09 Sep 2021 | 6:02 PM

ಬೆಂಗಳೂರು, ಸೆ ೯( ಯು ಎನ್ ಐ) ಕರ್ನಾಟಕ ವಿಧಾನಸಭೆಯ ಅಧಿವೇಶನ ಸೆಪ್ಟೆಂಬರ್ ೧೩ ರಿಂದ ಪ್ರಾರಂಭವಾಗಲಿದ್ದು, ಅಧಿವೇಶನದ ಕಾರ್ಯಕಲಾಪಗಳನ್ನು ಲೋಕಸಭೆಯ ಮಾದರಿಯಲ್ಲಿ ಚಿತ್ರೀಕರಿಸಿ ನೇರ ಪ್ರಸಾರ ಮಾಡಲು ಹಾಗೂ ಚಿತ್ರೀಕರಿಸಿದ ದೃಶ್ಯಗಳನ್ನು ಇತರೆ ಖಾಸಗಿ ಚಾನೆಲ್ ಗಳಿಗೆ ಸ್ಯಾಟಲೈಟ್ ಮೂಲಕ ಸಂಪರ್ಕವನ್ನು ಒದಗಿಸುವ ಕಾರ್ಯವನ್ನು ಬೆಂಗಳೂರು ದೂರದರ್ಶನ ಕೇಂದ್ರಕ್ಕೆ ಹಾಗೂ ಅದೇ ರೀತಿ ಸದನದ ಕಾರ್ಯಕಲಾಪಗಳ ಛಾಯಾಚಿತ್ರಗಳನ್ನು ತೆಗೆದು ಮುದ್ರಣ ಮಾಧ್ಯಮದವರಿಗೆ ಒದಗಿಸುವ ಕಾರ್ಯವನ್ನು ವಾರ್ತಾ ಇಲಾಖೆಯವರಿಗೆ ವಹಿಸಲಾಗಿದೆ.

 Sharesee more..

ಮೈಸೂರು ವಿವಿಗೆ ೧೯ನೇ ರ‍್ಯಾಂಕಿಂಗ್

09 Sep 2021 | 5:47 PM

ಮೈಸೂರು, ಸೆ ೯(ಯುಎನ್ ಐ) ದೆಹಲಿಯ ಎನ್ ಐ ಆರ್ ಎಫ್ - ನ್ಯಾಷನಲ್ ಇನ್ಸ್‌ಟ್ಯೂಷನಲ್ ರ‍್ಯಾಂಕಿಂಗ್ ಫ್ರೇಮ್ ವರ್ಕ್- ಪ್ರತಿವರ್ಷದಂತೆ ಈ ವರ್ಷವೂ ದೇಶದ ವಿಶ್ವವಿದ್ಯಾನಿಲಯಗಳ ರ‍್ಯಾಂಕಿಂಗ್ ಪ್ರಕಟಿಸಿದ್ದು, ಶತಮಾನ ಪೂರೈಸಿರುವ ಮೈಸೂರು ವಿಶ್ವವಿದ್ಯಾಲಯಕ್ಕೆ ಈ ಬಾರಿ ೧೯ನೇ ರ‍್ಯಾಂಕ್ ದೊರೆತಿದೆ.

 Sharesee more..

ಒಡಿಸ್ಸಾದ ಮಂಡ ಎಮ್ಮೆಗೂ ಸ್ವದೇಶಿ ತಳಿ ಮಾನ್ಯತೆ

09 Sep 2021 | 5:23 PM

ಭುವನೇಶ್ವರ, ಸೆ 9 (ಯುಎನ್ಐ) ಕರ್ನಾಟಕದ ಧಾರವಾಡಿ ಎಮ್ಮೆಗೆ ತಳಿ ಮಾನ್ಯತೆ , ದೊರೆಕಿರುವಾಗಲೇ ಒಡಿಸ್ಸಾದ “ಮಂಡ ಎಮ್ಮೆಗೂ ಸ್ವದೇಶಿ ತಳಿ ಎಂಬ ಹೆಗ್ಗಳಿಕೆ ಲಭ್ಯವಾಗಿರುವುದು ರೈತ ಸಮುದಾಯಕ್ಕೆ ಬಹಳ ಹೆಮ್ಮೆ ಸಂಗತಿಯಾಗಿದೆ ಮಲ್ಕನ್ಗಿರಿ ಮತ್ತು ನಬರಂಗ್ಪುರ ಪ್ರದೇಶದಲ್ಲಿ ಕಾಣಿಸಿಕೊಳ್ಳುವ ಈ ಎಮ್ಮೆಗಳನ್ನು ನ್ಯಾಷನ್ಲ್ ಬ್ಯೂರೋ ಆಫ್ ಅನಿಮಲ್ ಜೆನೆಟಿಕ್ ರಿಸೋರ್ಸಸ್(ಎನ್ಬಿಎಜಿಆರ್) ಸ್ಥಳೀಯ ತಳಿ ಎಂದು ಘೋಷಿಸಿದೆ.

 Sharesee more..

ಭದ್ರಾ ಮೇಲ್ದಂಡೆ ಶೀಘ್ರ ರಾಷ್ಟ್ರೀಯ ಯೋಜನೆ; ಕೇಂದ್ರ ಸಚಿವ ನಾರಾಯಣ ಸ್ವಾಮಿ ಭರವಸೆ

09 Sep 2021 | 5:08 PM

ಚಿತ್ರದುರ್ಗ, ಸೆ ೯( ಯುಎನ್ ಐ) ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯಾಗಿ ಶೀಘ್ರದಲ್ಲಿ ಘೋಷಣೆಯಾಗಲಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆ ಸಹಾಯಕ ಸಚಿವ ಎ ನಾರಾಯಣಸ್ವಾಮಿ ಎಂದು ಚಿತ್ರದುರ್ಗದಲ್ಲಿ ಗುರುವಾರ ಆಶಯ ವ್ಯಕ್ತಪಡಿಸಿದ್ದಾರೆ.

 Sharesee more..

ವಿಧಾನ ಮಂಡಲ ಅಧಿವೇಶನ; ಸಚಿವರ ಹಾಜರಿ ಕಡ್ಡಾಯ, ಸೂಚನೆಗೆ ಸಿಎಂಗೆ ಸಭಾಪತಿ ಆಗ್ರಹ

09 Sep 2021 | 4:17 PM

ಬೆಂಗಳೂರು, ಸೆ ೯(ಯುಎನ್ ಐ) ಬರುವ ಸೋಮವಾರದಿಂದ ಹತ್ತು ದಿನಗಳ ಕಾಲ ವಿಧಾನಮಂಡಲದ ಅಧಿವೇಶನ ನಡೆಯಲಿದ್ದು , ಸದನ ಕಲಾಪಗಳ ಸಂದರ್ಭದಲ್ಲಿ ಸಚಿವರು ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಸೂಚನೆ ನೀಡುವಂತೆ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕೋರಿದ್ದಾರೆ.

 Sharesee more..

ಜಮ್ಮುವಿಗೆ 2 ದಿನಗಳ ಪ್ರವಾಸ ಕೈಗೊಂಡ ರಾಹುಲ್‌ ಗಾಂಧಿ

09 Sep 2021 | 2:59 PM

ಜಮ್ಮು, ಸೆ 9 (ಯುಎನ್ಐ) ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಎರಡು ದಿನಗಳ ಭೇಟಿಗಾಗಿ ಗುರುವಾರ ಜಮ್ಮುವಿಗೆ ಭೇಟಿ ನೀಡಿದರು ರಾಹುಲ್‌ ಗಾಂಧಿ ಅವರನ್ನು ವಿಮಾನ ನಿಲ್ದಾಣದ ಹೊರಗೆ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಪುಷ್ಪವೃಷ್ಟಿಯಿಂದ ಶುಭ ಹಾರೈಸಿದರು.

 Sharesee more..

ಸ್ವಚ್ಛ ಸರ್ವೇಕ್ಷಣ್ ಗ್ರಾಮೀಣ್ ಕಾರ್ಯಕ್ರಮ ಇಂದಿನಿಂದ ಆರಂಭ

09 Sep 2021 | 2:03 PM

ನವದೆಹಲಿ ಸೆ ೯(ಯು ಎನ್ ಐ) ಸ್ವಚ್ಛ ಭಾರತ್ ಮಿಷನ್ ಎರಡನೇ ಹಂತದ ಅಡಿ ಸ್ವಚ್ಛ ಸರ್ವೇಕ್ಷಣ್ ಗ್ರಾಮೀಣ್-೨೦೨೧ ಕಾರ್ಯಕ್ರಮ ಇಂದಿನಿಂದ ಆರಂಭವಾಗಲಿದೆ ಆಜಾದಿ ಕಾ ಅಮೃತ ಮಹೋತ್ಸವದ ಭಾಗವಾಗಿ, ಸ್ವಚ್ಛ ಸರ್ವೇಕ್ಷಣ ಗ್ರಾಮೀಣ ಕಾರ್ಯಕ್ರಮವು ದೇಶದ ಗ್ರಾಮೀಣ ಪ್ರದೇಶಗಳನ್ನು ಬಯಲು ಬಹಿರ್ದೆಸೆ ಮುಕ್ತಗೊಳಿಸುವ ಗುರಿ ಹೊಂದಲಾಗಿದೆ.

 Sharesee more..

ಬ್ರಿಕ್ಸ್ ಶೃಂಗಸಭೆ ಅಧ್ಯಕ್ಷತೆ ವಹಿಸಿ ಭಾಷಣ ಮಾಡಲಿರುವ ಮೋದಿ

09 Sep 2021 | 1:53 PM

ನವದೆಹಲಿ ಸೆ ೯(ಯು ಎನ್ ಐ) ಭಾರತವು ೨೦೨೧ರ ಬ್ರಿಕ್ಸ್ ದೇಶಗಳ ಸಮಾವೇಶದ ಅಧ್ಯಕ್ಷತೆ ವಹಿಸಿರುವ ಭಾಗವಾಗಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ೧೩ನೇ ಬ್ರಿಕ್ಸ್ ದೇಶಗಳ ವರ್ಚುವಲ್ ಶೃಂಗಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಲಿದ್ದಾರೆ.

 Sharesee more..

ಅಕ್ಟೋಬರ್ ಅಂತ್ಯದವರೆಗೆ ಕೇರಳದಿಂದ ರಾಜ್ಯಕ್ಕೆ ಬರುವಂತಿಲ್ಲ

09 Sep 2021 | 1:48 PM

ಮಂಗಳೂರು, ಸೆ ೯(ಯು ಎನ್ ಐ) ಕೇರಳದಲ್ಲಿ ಕೊರೋನಾ ಸೋಂಕು ಮತ್ತು ನಿಫಾ ವೈರಸ್ ಪ್ರಸರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಕೇರಳಕ್ಕೆ ತೆರಳುವುದು ಹಾಗೂ ಕೇರಳದಿಂದ ಜಿಲ್ಲೆಗೆ ಆಗಮಿಸುವುದನ್ನು ಅಕ್ಟೋಬರ್ ಅಂತ್ಯದವರೆಗೆ ನಿರ್ಬಂಧಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.

 Sharesee more..

ಆರ್‌ಎಸ್ಎಸ್‌ ವಿರುದ್ಧ ದಿಗ್ವಿಜಯ ಸಿಂಗ್‌ ಕಿಡಿ

08 Sep 2021 | 2:11 PM

ಭೂಪಾಲ್, ಸೆ 8 (ಯುಎನ್ಐ) ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ ಬುಧವಾರ ಕಿಡಿಕಾರಿರುವ ರಾಜ್ಯಸಭಾ ಸದಸ್ಯ ದಿಗ್ವಿಜಯ ಸಿಂಗ್, ಸಂಘದ ಮುಖಂಡರು ರಹಸ್ಯವಾಗಿ ಜನರಲ್ಲಿ ದ್ವೇಷ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

 Sharesee more..

ಕವಿ, ಸಾಹಿತಿ ಪುಲಮೈಪಿತನ್ ನಿಧನ

08 Sep 2021 | 12:48 PM

ಚೆನ್ನೈ, ಸೆ 08 (ಯುಎನ್ಐ) ಜನಪ್ರಿಯ ಕವಿ ಮತ್ತು ಸಾಹಿತಿ, ಎಐಎಡಿಎಂಕೆಯ ಮಾಜಿ ಅಧ್ಯಕ್ಷ ಪುಲಮೈಪಿತನ್ ನಿಧನರಾಗಿದ್ದಾರೆ.

 Sharesee more..

ಮಹಾರಾಷ್ಟ್ರ, ಕೇರಳದಲ್ಲಿ ಹೆಚ್ಚುತ್ತಿರುವ ಸೋಂಕು ಪ್ರಕರಣಗಳು

08 Sep 2021 | 12:21 PM

ನವದೆಹಲಿ, ಸೆ 8 (ಯುಎನ್ಐ) ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 37 ಸಾವಿರದ 875 ಹೊಸ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

 Sharesee more..

ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ 'ವರ್ಚುವಲ್ ಕ್ಯೂ ಬುಕಿಂಗ್' ಆರಂಭ

08 Sep 2021 | 11:06 AM

ತಿರುವನಂತಪುರಂ, ಸೆ 08(ಯುಎನ್ಐ) ವಿಶ್ವವಿಖ್ಯಾತ ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ದರ್ಶನಕ್ಕಾಗಿ 'ವರ್ಚುವಲ್ ಕ್ಯೂ ಬುಕಿಂಗ್' ಇಂದು ಸಂಜೆ ಆರಂಭವಾಗಲಿದೆ.

 Sharesee more..