Friday, Sep 17 2021 | Time 11:47 Hrs(IST)
Special

ಕೋವಿಡ್ ಬಾಧಿತ ವಲಯಗಳಿಗೆ ಸಾಲ ಖಾತರಿ ಯೋಜನೆ; ನಿರ್ಮಲಾ ಸೀತಾರಾಮನ್

31 Aug 2021 | 9:13 PM

ನವದೆಹಲಿ, ಆಗಸ್ಟ್ ೩೧( ಯುಎನ್ ಐ) ದೇಶದಲ್ಲಿ ಕೋವಿಡ್ ಲಸಿಕಾ ಪ್ರಕ್ರಿಯೆಯನ್ನು ಇನ್ನಷ್ಟು ಹೆಚ್ಚಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ ಕೊರೊನಾ ವೈರಸ್‌ನ ವಿವಿಧ ರೂಪಾಂತರಿಗಳ ವಿರುದ್ಧ ವೈಜ್ಞಾನಿಕವಾಗಿ ಪರೀಕ್ಷಿಸಲಾದ ರೋಗ ನಿರೋಧಕ ಲಸಿಕೆಯನ್ನು ದೇಶದ ಜನರಿಗೆ ನೀಡಲಾಗುವುದು ಎಂದು ಹೇಳಿದರು.

 Sharesee more..

ನಾಳೆ ಇಸ್ಕಾನ್ ಸಂಸ್ಥಾಪಕ ಪ್ರಭುಪಾದ ಜೀ ೧೨೫ನೇ ಜನ್ಮದಿನೋತ್ಸವ

31 Aug 2021 | 9:03 PM

ನವದೆಹಲಿ, ಆಗಸ್ಟ್ ೩೧( ಯುಎನ್ ಐ) ಇಸ್ಕಾನ್ ಸಂಸ್ಥಾಪಕ ಶ್ರೀಲ ಭಕ್ತಿ ವೇದಾಂತ ಪ್ರಭುಪಾದ ಜಿ ಅವರ ೧೨೫ನೇ ಜನ್ಮದಿನೋತ್ಸವ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ನಾಳೆ ವಿಡಿಯೊ ಕಾನ್ಫರೆನ್ಸ್ ಮೂಲಕ ೧೨೫ ರೂಪಾಯಿ ವಿಶೇಷ ನಾಣ್ಯವನ್ನು ಬಿಡುಗಡೆಗೊಳಿಸಿ, ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

 Sharesee more..

ಮೀಸಲಾತಿ ಪರಾಮರ್ಶಿಸಲು ಉನ್ನತ ಮಟ್ಟದ ಸಮಿತಿ ರಚನೆ

31 Aug 2021 | 8:04 PM

ಬೆಂಗಳೂರು, ಆಗಸ್ಟ್ ೩೧ (ಯುಎನ್ ಐ) ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಸುಭಾಷ್ ಆಡಿ ಅವರ ಅಧ್ಯಕ್ಷತೆಯಲ್ಲಿ ಮೀಸಲಾತಿ ಪರಾಮರ್ಶಿಸುವ ಸಂಬಂಧ ಉನ್ನತ ಮಟ್ಟದ ಸಮಿತಿ ರಚಿಸಲಾಗಿದ್ದು, ಈ ಸಮಿತಿಗೆ ಸದಸ್ಯರುಗಳಾಗಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಎಂ.

 Sharesee more..

ತಾಲಿಬಾನ್ ನಾಯಕನೊಂದಿಗೆ ಭಾರತ ಮಾತುಕತೆ

31 Aug 2021 | 7:29 PM

ನವದೆಹಲಿ, ಆಗಸ್ಟ್ ೩೧(ಯು ಎನ್ ಐ) ಕತಾರ್‌ನಲ್ಲಿ ಭಾರತದ ರಾಯಭಾರಿಯಾಗಿರುವ ದೀಪಕ್ ಮಿತ್ತಲ್ ಅವರು ಇಂದು ದೋಹಾದಲ್ಲಿರುವ ತಾಲಿಬಾನ್‌ನ ರಾಜಕೀಯ ಕಚೇರಿಯ ಮುಖ್ಯಸ್ಥ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟ್ಯಾನ್‌ಕಜೈ ಅವರನ್ನು ಭೇಟಿ ಮಾಡಿದ್ದರು ತಾಲಿಬಾನ್ ಕಡೆಯಿಂದ ಬಂದ ಕೋರಿಕೆ ಹಿನ್ನೆಲೆಯಲ್ಲಿ ದೋಹಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ಈ ಸಭೆ ನಡೆಯಿತು.

 Sharesee more..

ಶೀಘ್ರದಲ್ಲಿಯೇ ಹೊಸ ವೇತನ ಸಂಹಿತೆ ..ವಾರಕ್ಕೆ 3 ದಿನ ರಜೆ .. ಕೆಲಸದಅವಧಿಬದಲಾವಣೆ

31 Aug 2021 | 3:35 PM

ನವದೆಹಲಿ, ಆಗಸ್ಟ್‌ 31( ಯುಎನ್‌ ಐ) - ಕಾರ್ಮಿಕ ಕಾನೂನುಗಳಲ್ಲಿ ಬದಲಾವಣೆ ತರಲು ಕೇಂದ್ರ ಸರ್ಕಾರ ಸಜ್ಜುಗೊಳ್ಳುತ್ತಿದೆ ನೂತನ ವೇತನ ಸಂಹಿತೆ ರೂಪಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.

 Sharesee more..

ಆ 40 ಅಂತಸ್ತಿನ ಅವಳಿ ಗೋಪುರಗಳನ್ನು ಕೆಡವಿ : ಸುಪ್ರೀಂ ಕೋರ್ಟ್ ಆದೇಶ

31 Aug 2021 | 3:00 PM

ನವದೆಹಲಿ, ಆಗಸ್ಟ್‌ 31(ಯು ಎನ್‌ ಐ) - ಉತ್ತರ ಪ್ರದೇಶದ ನೋಯ್ಡಾದಲ್ಲಿ ನಿಬಂಧನೆಗಳನ್ನು ಉಲ್ಲಂಘಿಸಿ ಅಕ್ರಮವಾಗಿ ನಿರ್ಮಿಸಲಾದ ಬೃಹತ್‌ ಪ್ರಮಾಣದ ಅವಳಿ ಕಟ್ಟಡಗಳನ್ನು ಕೆಡವಲು ಸುಪ್ರೀಂ ಕೋರ್ಟ್ ಆದೇಶಿಸಿದೆ ಸೂಪರ್‌ ಟೆಕ್ ಎಮರಾಲ್ಡ್ ಸಂಸ್ಥೆ 40 ಅಂತಸ್ತಿನ 2 ಟವರ್‌ ಗಳನ್ನು ನಿರ್ಮಿಸಿದ್ದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

 Sharesee more..

ಐತಿಹಾಸಿಕ ಘಟನೆ ..ಏಕ ಕಾಲದಲ್ಲಿಮೂವರು ಮಹಿಳಾ ನ್ಯಾಯಮೂರ್ತಿಗಳ ಪ್ರಮಾಣ ವಚನ

31 Aug 2021 | 2:44 PM

ನವದೆಹಲಿ, ಆಗಸ್ಟ್‌ 31(ಯುಎನ್‌ ಐ) - ದೇಶದಲ್ಲಿ ಲಿಂಗ ಸಮಾನತೆಗೆ ಇದೊಂದು ಐತಿಹಾಸಿಕ ಉದಾಹರಣೆಯಾಗಿದೆ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾಗಿ ಮೂವರು ಮಹಿಳೆಯರು ಇಂದು ಒಂದೇ ಬಾರಿ ಪ್ರಮಾಣವಚನ ಸ್ವೀಕರಿಸಿರುವುದು ಚರಿತ್ರಾರ್ಹ ಘಟನೆಯಾಗಿದೆ.

 Sharesee more..

ಭಾರತಕ್ಕೆ ನಮ್ಮಿಂದ ಯಾವುದೇ ಅಪಾಯ ಇಲ್ಲ ; ತಾಲಿಬಾನ್

31 Aug 2021 | 2:00 PM

ಕಾಬೂಲ್, ಆಗಸ್ಟ್‌ 31(ಯುಎನ್‌ ಐ) - ಭಾರತಕ್ಕೆ ತಾಲಿಬಾನ್ ನಿಂದ ಯಾವುದೇ ಅಪಾಯವಿಲ್ಲ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಸೋಮವಾರ ಸ್ಪಷ್ಟಪಡಿಸಿದ್ದಾರೆ ಇಂಡಿಯಾ ಟುಡೇ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಜಬಿಹುಲ್ಲಾ ಹಲವು ಅಂಶಗಳನ್ನು ಪ್ರಸ್ತಾಪಿಸಿದ್ದಾರೆ.

 Sharesee more..

ಬೆದರಿಕೆ ಯಾವ ದಿಕ್ಕಿನಿಂದ ಬಂದರೂ ತಕ್ಕ ಪ್ರತ್ಯುತ್ತರ ; ರಾಜನಾಥ್ ಸಿಂಗ್‌

30 Aug 2021 | 8:03 PM

ಚಂಡೀಗಢ, ಆಗಸ್ಟ್‌ 30 (ಯುಎನ್‌ ಐ) ತಾಲಿಬಾನ್ ಹಿಡಿತದಲ್ಲಿರುವ ಅಫ್ಘಾನಿಸ್ತಾನದಲ್ಲಿ ಉದ್ಬವಾಗಿರುವ ಪರಿಸ್ಥಿತಿಗಳು ಹೊಸ ಭದ್ರತಾ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿವೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ ಕೇಂದ್ರ ಸರ್ಕಾರ ಯಾವುದೇ ಪರಿಸ್ಥಿತಿಯನ್ನು ಸಮರ್ಥವಾಗಿ , ಜಾಗರೂಕತೆಯಿಂದ ನಿಭಾಯಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 Sharesee more..

ಬಿ ಎಸ್‌ ಪಿ ಮುಂದಿನ ಅಧ್ಯಕ್ಷರ ಬಗ್ಗೆ ಮಾಯಾವತಿ ಕ್ಲಾರಿಟಿ

30 Aug 2021 | 6:59 PM

ನವದೆಹಲಿ, ಆಗಸ್ಟ್‌ 30 (ಯುಎನ್‌ ಐ) ಬಹು ಜನ ಸಮಾಜ ( ಬಿಎಸ್‌ ಪಿ) ಪಕ್ಷಕ್ಕೆ ಮಾಯಾವತಿಯ ನಂತರ ಮುಂದಿನ ಮುಖ್ಯಸ್ಥ ಯಾರು ಎಂಬ ಬಗ್ಗೆ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಚರ್ಚೆ ನಡೆಯುತ್ತಿದೆ.

 Sharesee more..

2ನೇ ಅಲೆಗೆ ಹೋಲಿಸಿದರೆ.. 3ನೇ ಅಲೆ ಅಂತಹ ತೀವ್ರವಾಗಿರದು ; ಐಸಿಎಂಆರ್‌ ತಜ್ಞ

30 Aug 2021 | 5:04 PM

ನವದೆಹಲಿ, ಆಗಸ್ಟ್‌ 30(ಯುಎನ್‌ ಐ) ಕೊರೋನಾ ಸಾಂಕ್ರಾಮಿಕದ ಮೂರನೇ ಅಲೆಯ ಬಗ್ಗೆ ವಿಜ್ಞಾನಿಗಳು ಕೆಲ ಸಮಯದಿಂದ ಎಚ್ಚರಿಕೆ ನೀಡುತ್ತಿದ್ದಾರೆ ಸೆಪ್ಟೆಂಬರ್, ಅಕ್ಟೋಬರ್‌ ತಿಂಗಳಲ್ಲಿ ಕೊರೊನಾ ಮೂರನೇ ಅಲೆ ಬರುವ ಸಾಧ್ಯತೆಯನ್ನು ಅಂದಾಜಿಸಿದ್ದಾರೆ.

 Sharesee more..

2024ರಲ್ಲೂ ಮೋದಿ ಯೇ ಪ್ರಧಾನಿ ಅಭ್ಯರ್ಥಿ: ಜೆಡಿ(ಯು)

30 Aug 2021 | 3:54 PM

ಪಾಟ್ನಾ, ಆಗಸ್ಟ್‌ 30 (ಯುಎನ್‌ ಐ) 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿಯೂ ನರೇಂದ್ರ ಮೋದಿ ಅವರೇ ಪ್ರಧಾನಿ ಅಭ್ಯರ್ಥಿ ಎಂದು ಜನತಾದಳ (ಸಂಯುಕ್ತ) ಪ್ರಧಾನ ಕಾರ್ಯದರ್ಶಿ ಕೆ ಸಿ.

 Sharesee more..

ಭಾರತದೊಂದಿಗೆ ವ್ಯಾಪಾರ, ರಾಜಕೀಯ ಸಂಬಂಧ ; ತಾಲಿಬಾನ್ ನಾಯಕ

30 Aug 2021 | 2:36 PM

ಭಾರತ ನಮಗೆ ಅತ್ಯಂತ ಮಹತ್ವದ ದೇಶ : ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನೆಕ್‌ಜಾಯ್ ನವದೆಹಲಿ, ಆಗಸ್ಟ್‌ 30(ಯುಎನ್‌ ಐ) ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಭಾರತದೊಂದಿಗಿನ ಸಂಬಂಧಗಳ ಬಗ್ಗೆ ತಾಲಿಬಾನ್ ಮಹತ್ವದ ಹೇಳಿಕೆ ನೀಡಿದೆ ಭಾರತದೊಂದಿಗೆ ರಾಜಕೀಯ, ವ್ಯಾಪಾರ ಹಾಗೂ ಸಾಂಸ್ಕೃತಿಕ ಸಂಬಂಧ ಮುಂದುವರಿಸಲು ಬಯಸಿದ್ದೇವೆ ಎಂದು ತಾಲಿಬಾನ್ ಪ್ರಮುಖ ನಾಯಕ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನೆಕ್‌ಜಾಯ್ ಹೇಳಿದ್ದಾರೆ.

 Sharesee more..

ಅಯೋಧ್ಯೆ ಭಾರತದ ಆತ್ಮ: ರಾಷ್ಟ್ರಪತಿ ಕೋವಿಂದ್

29 Aug 2021 | 6:34 PM

ಅಯೋಧ್ಯಾ, ಆ 29 (ಯುಎನ್ಐ) ರಾಮ ಇಲ್ಲದೆ ಅಯೋಧ್ಯೆಯನ್ನು ಯೋಚಿಸಲು ಕೂಡ ಸಾಧ್ಯವಿಲ್ಲ ಮತ್ತು ದೇಶದ ಆತ್ಮವೇ ಈ ನಗರದಲ್ಲಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಭಿಪ್ರಾಯಪಟ್ಟಿದ್ದಾರೆ ಅಯೋಧ್ಯೆಯ ರಾಮ ಕಥಾ ಪಾರ್ಕ್‌ನಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ರಾಮಾಯಣ ಸಮಾವೇಶ ಉದ್ಘಾಟಿಸಿದ ಮಾತನಾಡಿದ ಅವರು, ರಾಮನಿಲ್ಲದೆ ಅಯೋಧ್ಯೆ ಇಲ್ಲ.

 Sharesee more..

ಜಾತಿ ಗಣತಿ ಸೋರಿಕೆ ಬಗ್ಗೆ ಖಚಿತ ಮಾಹಿತಿ ಇದ್ದರೆ ತನಿಖೆ ನಡೆಸಲಿ; ಸಿದ್ದರಾಮಯ್ಯ

29 Aug 2021 | 4:59 PM

ಬೆಂಗಳೂರು, ಆಗಸ್ಟ್‌ 29( ಯುಎನ್‌ ಐ) ಜಾತಿ ಗಣತಿ ವರದಿಯನ್ನು ಒಪ್ಪಿಕೊಳ್ಳುವುದಕ್ಕೆ ತಯಾರಿಲ್ಲದ ರಾಜ್ಯ ಬಿಜೆಪಿ ನಾಯಕರು, ಅದು ಸೋರಿಕೆ ಯಾಗಿದೆ, ವೈಜ್ಞಾನಿಕವಾಗಿಲ್ಲ ಎಂಬ ಕುಂಟು ನೆಪಗಳನ್ನು ಹೇಳುತ್ತಿದ್ದಾರೆ ಸೋರಿಕೆ ಬಗ್ಗೆ ಖಚಿತ ಮಾಹಿತಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ಇದ್ದರೆ ಅದರ ಬಗ್ಗೆ ತನಿಖೆ ನಡೆಸಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭಾನುವಾರ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ ಸೋರಿಕೆ ಆಗಿದೆಯೆನ್ನಲಾದ ಜಾತಿಗಣತಿ ವರದಿಯ ಅಂಶಗಳೇ ಮೂಲ ವರದಿಯಲ್ಲಿ ಇವೆ ಎನ್ನುವುನ್ನು ರಾಜ್ಯ ಬಿಜೆಪಿ ಅಷ್ಟೊಂದು ವಿಶ್ವಾಸದಿಂದ ಹೇಗೆ ಹೇಳಲು ಸಾಧ್ಯ? ಎಂದು ಪ್ರಶ್ನಿಸಿರುವ ಮಾಜಿ ಮುಖ್ಯಮಂತ್ರಿಗಳು, ಸರ್ಕಾರದ ಬಳಿ ಇರಬೇಕಾದ ಮೂಲ ವರದಿ ಬಿಜೆಪಿಯ ರಾಜ್ಯ ಕಚೇರಿಯಲ್ಲಿದೆಯೇ? ಮುಖ್ಯಮಂತ್ರಿ ಕಚೇರಿಯಿಂದ ಅದು ಸೋರಿಕೆಯಾಗಿದೆಯೇ? ಸರಣಿ ಟ್ವೀಟ್‌ ಗಳಲ್ಲಿ ಪ್ರಶ್ನಿಸಿದ್ದಾರೆ.

 Sharesee more..