Monday, Sep 23 2019 | Time 02:07 Hrs(IST)
  • ಇಂಡೋ-ಆಫ್ರಿಕಾ ಚುಟುಕು ಸರಣಿ ಸಮಬಲ
Sports

ಇಂಡೋ-ಆಫ್ರಿಕಾ ಚುಟುಕು ಸರಣಿ ಸಮಬಲ

23 Sep 2019 | 12:04 AM

ಬೆಂಗಳೂರು ಸೆ ೨೩ (ಯುಎನ್ ಐ) ಕಗಿಸೋ ರಬಡಾ (39 ಕ್ಕೆೆ 3) ಅವರ ಮಾರಕ ದಾಳಿ ಹಾಗೂ ಕ್ವಿಂಟನ್ ಡಿ ಕಾಕ್ (ಔಟಾಗದೆ 63 ರನ್ ) ಅರ್ಧ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಮೂರನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ಭಾರತದ ವಿರುದ್ಧ ಒಂಬತ್ತು ವಿಕೆಟ್ ಜಯ ಸಾಧಿಸಿತು.

 Sharesee more..

ದಕ್ಷಿಣ ಆಫ್ರಿಕಾ ಗೆಲುವಿಗೆ ಸಾಧಾರಣ ಗುರಿ

22 Sep 2019 | 9:56 PM

ಬೆಂಗಳೂರು, ಸೆ 22 (ಯುಎನ್ ಐ) ಭಾರತ ಹಾಗೂ ಆಫ್ರಿಕಾ ನಡುವಣ ಮೂರನೇ ಟಿ20 ಪಂದ್ಯ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಆತಿಥೇಯ ತಂಡ ಸಾಧಾರಣ ಗುರಿಯನ್ನು ಪ್ರವಾಸಿ ತಂಡಕ್ಕೆ ನೀಡಿದೆ.

 Sharesee more..

ವಿಶ್ವ ಕುಸ್ತಿ: ರಾಹುಲ್ ಗೆ ಕಂಚು

22 Sep 2019 | 7:06 PM

ನವದೆಹಲಿ, ಸೆ 22, (ಯುಎನ್ ಐ) ಭಾರತದ ಭರವಸೆಯ ಕುಸ್ತಿ ಪಟು ರಾಹುಲ್ ಅವಾರೆ ಅವರು ಕಜಕಿಸ್ತಾನ್ ದ ನೂರ್ ಸುಲ್ತಾನ್ ದಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಸಾಧನೆ ಮಾಡಿದ್ದಾರೆ.

 Sharesee more..

ಮಂಗಳವಾರದಿಂದ ಏಷ್ಯಾ ಕಪ್ ಬಾಸ್ಕೆಟ್ ಬಾಲ್

22 Sep 2019 | 6:47 PM

ಬೆಂಗಳೂರು, ಸೆ 22 (ಯುಎನ್ ಐ) ಮಂಗಳವಾರದಿಂದ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮಹಿಳೆಯರ ಎಷ್ಯಾ ಕಪ್ ಎ ವಿಭಾಗದ ಬಾಸ್ಕೆಟ್ ಬಾಲ್ ಪಂದ್ಯಗಳು ಆರಂಭವಾಲಿದೆ.

 Sharesee more..

ವಿಶ್ವ ವ್ರೆಸ್ಲಿಂಗ್ ಚಾಂಪಿಯನ್ ಶಿಪ್ ನಲ್ಲಿ ದೀಪಕ್ ಪುನಿಯಾ ಬೆಳ್ಳಿ ಪದಕಕ್ಕೆ ತೃಪ್ತಿ!!

22 Sep 2019 | 3:51 PM

ನೂರ್ ಸುಲ್ತಾನ್, ಕಜಕಸ್ತಾನ್, ಸೆ 22 (ಯುಎನ್ಐ) ಭಾರತದ ಕಿರಿಯ ಕುಸ್ತಿಪಟು ದೀಪಕ್ ಪುನಿಯಾ ಮೊಣಕಾಲಿನ ಗಾಯದ ಕಾರಣ ಫೈನಲ್ ನಲ್ಲಿ ಸ್ಪರ್ಧಿಸಲಾಗದೇ ಬೆಳ್ಳಿ ಪದಕಕ್ಕೆ ತೃಪ್ತಿ ಪಡಬೇಕಾಗಿದೆ ಪುನಿಯಾ ಅವರಿಗೆ ಶನಿವಾರವೇ ಎಡಗೈ ಮೊಣಕಾಲಿಗೆ ಗಾಯವಾಗಿದ್ದು ಅದು ಭಾನುವಾರ ಹೆಚ್ಚಾಗಿ ಕುತೂಹಲದ ಫೈನಲ್ ಪಂದ್ಯಕ್ಕೆ ಅಡ್ಡಿಯಾಗಿದೆ.

 Sharesee more..

ತ್ರಿಕೋನ ಸರಣಿ ಫೈನಲ್‍ಗೆ ರಶೀದ್ ಖಾನ್ ಅನುಮಾನ

22 Sep 2019 | 1:06 PM

ದುಬೈ, ಸೆ 22 (ಯುಎನ್‍ಐ) ಬಾಂಗ್ಲಾದೇಶ ವಿರುದ್ಧದ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಮಂಡಿರಜ್ಜು(ಸ್ನಾಯುಸೆಳೆತ) ಗಾಯಕ್ಕೆ ಒಳಗಾಗಿರುವ ಅಫ್ಘಾನಿಸ್ತಾನ ತಂಡದ ನಾಯಕ ರಶೀದ್ ಖಾನ್ ಅವರು ತ್ರಿಕೋನ ಸರಣಿಯ ಫೈನಲ್ ಹಣಾಹಣಿಗೆ ಆಡುವುದು ಬಹುತೇಕ ಅನುಮಾನ ಎಂದು ಹೇಳಲಾಗುತ್ತಿದೆ.

 Sharesee more..

ಐತಿಹಾಸಿಕ ಬೆಳ್ಳಿ ಪದಕ ಗೆದ್ದ ಅಮಿತ್ ಪಂಘಾಲ್‍ಗೆ ಪ್ರಣಬ್ ಮುಖರ್ಜಿ ಅಭಿನಂದನೆ

22 Sep 2019 | 12:41 PM

ನವದೆಹಲಿ, ಸೆ 22 (ಯುಎನ್‍ಐ) ರಷ್ಯಾದಲ್ಲಿ ನಡೆದಿದ್ದ ಬಾಕ್ಸಿಂಗ್ ವಿಶ್ವ ಚಾಂಪಿಯನ್‍ಶಿಪ್‍ನ ಪುರುಷರ ವಿಭಾಗದಲ್ಲಿ ಐತಿಹಾಸಿಕ ಬೆಳ್ಳಿ ಪದಕ ಸಾಧನೆ ಮಾಡಿದ್ದ ಅಮಿತ್ ಪಂಘಾಲ್ ಅವರಿಗೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

 Sharesee more..

ಎಸೆಕ್ಸ್ ಗೆ ಬ್ಲಾಸ್ಟ್ ಟಿ-20 ಗರಿ

22 Sep 2019 | 11:25 AM

ಬರ್ಮಿಂಗ್‍ ಹ್ಯಾಮ್, ಸೆ 22 (ಯುಎನ್‍ಐ) ಸಂಘಟಿತ ಹೋರಾಟ ನಡೆಸಿದ ಎಸೆಕ್ಸ್ ತಂಡ 2019ರ ಟಿ-20 ಬ್ಲಾಸ್ಟ್ ಟೂರ್ನಿಯ ಫೈನಲ್ ಹಣಾಹಣಿಯಲ್ಲಿ ವೋರ್ಸ್‍ಸ್ಟೆರ್ಸ್‍ಶೈರ್ ವಿರುದ್ಧ ನಾಲ್ಕು ವಿಕೆಟ್‍ಗಳಿಂದ ಗೆದ್ದು ಚಾಂಪಿಯನ್ ಆಯಿತು ಇಲ್ಲಿನ ಎಜ್‍ಬಾಸ್ಟನ್ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ವೋರ್ಸ್‍ಸ್ಟೆರ್ಸ್‍ಶೈರ್ ತಂಡ ನಿಗದಿತ 20 ಓವರ್ ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿತ್ತು.

 Sharesee more..

ಮತ್ತೇ ಅಗ್ರ ಸ್ಥಾನಕ್ಕೇರಲು ರೋಹಿತ್‍ಗೆ ಎಂಟು ರನ್ ಅಗತ್ಯ

22 Sep 2019 | 10:03 AM

ಬೆಂಗಳೂರು, ಸೆ 22 (ಯುಎನ್‍ಐ) ಇಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುವ ಮೂರನೇ ಹಣಾಹಣಿಯಲ್ಲಿ ರೋಹಿತ್ ಶರ್ಮಾ ಎಂಟು ರನ್ ಗಳಿಸಿದ್ದೇ ಆದಲ್ಲಿ ನಾಯಕ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿ ಚುಟುಕು ಕ್ರಿಕಟ್‍ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟ್ಸಮನ್ ಎಂಬ ಸಾಧನೆಗೆ ಮತ್ತೇ ಭಾಜನರಾಗಲಿದ್ದಾರೆ.

 Sharesee more..

ಮರ್ರೆ ಟ್ರೋಫಿ ಚಾಲೆಂಜರ್: ಸಿಂಗಲ್ಸ್-ಡಬಲ್ಸ್ ಸೆಮಿಫೈನಲ್‍ನಲ್ಲಿ ರಾಮಕುಮಾರ್ ರಾಮನಾಥನ್‍ಗೆ ನಿರಾಸೆ

22 Sep 2019 | 9:36 AM

ನವದೆಹಲಿ, ಸೆ 22 (ಯುಎನ್‍ಐ) ಭಾರತದ ರಾಮಕುಮಾರ್ ರಾಮನಾಥನ್ ಅವರು ಇಲ್ಲಿ ನಡೆಯುತ್ತಿರುವ ಮರ್ರೆ ಟ್ರೋಫಿ ಚಾಲೆಂಜರ್ಸ್ ಟೆನಿಸ್ ಟೂರ್ನಿಯಲ್ಲಿ ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗದ ಸೆಮಿಫೈನಲ್ಸ್ ನಲ್ಲಿ ಸೋತು ನಿರಾಸೆ ಅನುಭವಿಸಿದರು ಶನಿವಾರ ತಡರಾತ್ರಿ ನಡೆದ 176ನೇ ಶ್ರೇಯಾಂಕಿಂತ ರಾಮನಾಥನ್ ಅವರು ಪುರುಷರ ಸಿಂಗಲ್ಸ್ ಸೆಮಿಫೈನಲ್ ಹಣಾಹಣಿಯಲ್ಲಿ 7-5, 1-6, 6-4 ಅಂತರದಲ್ಲಿ ಫ್ರಾನ್ಸ್ ನ 16ನೇ ಶ್ರೇಯಾಂಕಿತ ಅಲೆಕ್ಸಾಂಡರ್ ಮುಲ್ಲರ್ ವಿರುದ್ಧ ಸೋಲು ಅನುಭವಿಸಿದ್ದಾರೆ .

 Sharesee more..

ವಿಶ್ವ ಕುಸ್ತಿ: ದೀಪಕ್ ಪೂನಿಯಾ ಫೈನಲ್ ಗೆ, ಒಲಿಂಪಿಕ್ಸ್ ಅರ್ಹತೆ

21 Sep 2019 | 9:42 PM

ನೂರ್ ಸುಲ್ತಾನ್ (ಕಜಕಿಸ್ತಾನ್), ಸೆ 21 (ಯುಎನ್ ಐ)- ಜೂನಿಯರ್ ವಿಶ್ವ ಚಾಂಪಿಯನ್ ದೀಪಕ್ ಪೂನಿಯಾ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನ 86 ಕೆ ಜಿ ವಿಭಾಗದ ಫೈನಲ್ ಗೆ ಅರ್ಹತೆ ಪಡೆದು, ಮುಂದಿನ ವರ್ಷ ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ಸ್ಥಾನ ಪಡೆದಿದ್ದಾರೆ.

 Sharesee more..

ಬೆಂಗಳೂರಿನಲ್ಲಿ ಮೂರನೇ ಟಿ-20 ಪಂದ್ಯ, ಸರಣಿ ವಶದ ಮೇಲೆ ಭಾರತದ ಕಣ್ಣು

21 Sep 2019 | 9:33 PM

ಬೆಂಗಳೂರು, ಸೆ 21 (ಯುಎನ್ ಐ) ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರನೇ ಟಿ-20 ಪಂದ್ಯ ಇಲ್ಲಿನ ಚಿನ್ನ ಸ್ವಾಮಿ ಅಂಗಳದಲ್ಲಿ ನಡೆಯಲಿದ್ದು, ರೋಚಕತೆ ಹೆಚ್ಚಿಸಿದೆ \\\\ಸರಣಿಯ ಮೂರು ಪಂದ್ಯಗಳಲ್ಲಿ 1-0 ಮುನ್ನಡೆ ಸಾಧಿಸಿದೆ.

 Sharesee more..

ಐಟಿಟಿಎಫ್ ಏಷ್ಯನ್ ಟೇಬಲ್ ಟೆನಿಸ: ಸತ್ಯನ್ ಕ್ವಾರ್ಟರ್ ಫೈನಲ್ಸ್ ಗೆ

20 Sep 2019 | 11:03 PM

ಯೋಗ್ಯ ಕರ್ತ್ (ಇಂಡೋನೇಷಿಯಾ), ಸೆ 19 (ಯುಎನ್ಐ)- ಇಲ್ಲಿ ನಡೆಯುತ್ತಿರುವ 24ನೇ ಐಟಿಟಿಎಫ್ ಏಷ್ಯನ್ ಟೇಬಲ್ ಟೆನಿಸ್ ಚಾಂಪಿಯನ್ ಶಿಪ್ ನಲ್ಲಿ ಜಿ ಸತ್ಯನ್ ಅವರು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ಸ್ ಗೆ ಪ್ರವೇಶ ಪಡೆದು ಸಾಧನೆ ಮಾಡಿದ್ದಾರೆ.

 Sharesee more..

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್ ಗೆ ಸೋಲು

20 Sep 2019 | 10:17 PM

ಪುಣೆ, ಸೆ 20 (ಯುಎನ್ಐ)- ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ಏಳನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್ ಟೂರ್ನಿಯ 99ನೇ ಪಂದ್ಯದಲ್ಲಿ ಪುಣೇರಿ ಪಲ್ಟನ್ ವಿರುದ್ಧ ಸೋತು ನಿರಾಸೆ ಅನುಭವಿಸಿದೆ ಶಿವ ಛತ್ರಪತ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬುಲ್ಸ್ 38-42 ರಿಂದ ಪುಣೇರಿ ತಂಡದ ವಿರುದ್ಧ ಆಘಾತ ಕಂಡಿತು.

 Sharesee more..

ಅಂಡರ್ -16 ಫುಟ್‌ಬಾಲ್: ಭಾರತಕ್ಕೆ ಜಯ

20 Sep 2019 | 9:45 PM

ತಾಷ್ಕೆಂಟ್, ಸೆ 20 (ಯುಎನ್ಐ) ಎಎಫ್‌ಸಿ ಅಂಡರ್ -16 ಫುಟ್‌ಬಾಲ್ ಚಾಂಪಿಯನ್‌ಶಿಪ್ ಅರ್ಹತಾ ಪಂದ್ಯಗಳ ಬಿ ಗುಂಪಿನ ಎರಡನೇ ಪಂದ್ಯದಲ್ಲಿ ಭಾರತದ ಯುವ ತಂಡ 5–0ರಿಂದ ಬಹ್ರೇನ್ ತಂಡವನ್ನು ಸೋಲಿಸಿದೆ ಭಾರತ ಮೊದಲ ಪಂದ್ಯದಲ್ಲಿ 5–0ರಿಂದ ತುರ್ಕಮೆನಿಸ್ತಾನವನ್ನು ಸೋಲಿಸಿತ್ತು.

 Sharesee more..