Monday, Jun 21 2021 | Time 06:49 Hrs(IST)
Sports Share

ಕೊಹ್ಲಿ ಅನುಪಸ್ಥಿತಿ ಅಜಿಂಕ್ಯ ರಹಾನೆಗೆ ಒತ್ತಡ ಹೆಚ್ಚಾಗಲಿದೆ: ಪಾಂಟಿಂಗ್‌

ಕೊಹ್ಲಿ ಅನುಪಸ್ಥಿತಿ ಅಜಿಂಕ್ಯ ರಹಾನೆಗೆ ಒತ್ತಡ ಹೆಚ್ಚಾಗಲಿದೆ: ಪಾಂಟಿಂಗ್‌
ಕೊಹ್ಲಿ ಅನುಪಸ್ಥಿತಿ ಅಜಿಂಕ್ಯ ರಹಾನೆಗೆ ಒತ್ತಡ ಹೆಚ್ಚಾಗಲಿದೆ: ಪಾಂಟಿಂಗ್‌

ನವದೆಹಲಿ, ನ 21 (ಯುಎನ್‌ಐ) ವಿರಾಟ್‌ ಕೊಹ್ಲಿ ತವರಿಗೆ ಮರಳಿದ ಬಳಿಕ ಕೊನೆಯ ಮೂರು ಟೆಸ್ಟ್ ತಂಡಗಳಲ್ಲಿ ಭಾರತ ತಂಡವನ್ನು ಮುನ್ನಡೆಸುವ ಅಜಿಂಕ್ಯ ರಹಾನೆ ಅವರಿಗೆ ಒತ್ತಡ ಹೆಚ್ಚಾಗಲಿದೆ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ಕೊನೆಯ ಮೂರು ಟೆಸ್ಟ್ ಪಂದ್ಯಗಳಲ್ಲಿ ವಿರಾಟ್‌ ಕೊಹ್ಲಿ ಅನುಪಸ್ಥಿತಿ ಟೀಮ್‌ ಇಂಡಿಯಾಗೆ ಕಾಡಲಿದೆ. ಬ್ಯಾಟಿಂಗ್‌ ಹಾಗೂ ನಾಯಕತ್ವದಲ್ಲಿ ಅವರ ಗೈರು ಇನ್ನುಳಿದ ಆಟಗಾರರ ಮೇಲೆ ಒತ್ತಡ ಜಾಸ್ತಿ ಆಗುತ್ತದೆ," ಎಂದು ಅವರು ಕ್ರಿಕೆಟ್‌.ಕಾಮ್‌.ಎಯುಗೆ ತಿಳಿಸಿದ್ದಾರೆ.

"ಅಜಿಂಕ್ಯಾ ರಹಾನೆ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎಂಬ ನಗ್ಗೆ ನೀವು ಹೇಳುವುದಾದರೆ, ಅವರ ಮೇಲೆ ಹೆಚ್ಚಿನ ಒತ್ತಡ ಬೀಳಲಿದೆ. ಅಲ್ಲದೆ, ಕೊಹ್ಲಿಯ ನಾಲ್ಕನೇ ಕ್ರಮಾಂಕದಲ್ಲಿ ಯಾರು ಬ್ಯಾಟಿಂಗ್‌ಗೆ ಕಳುಹಿಸಲಿದ್ದಾರೆಂಬು ಮಹತ್ವದ ವಿಷಯವಾಗಿದೆ," ಎಂದು ಹೇಳಿದರು.

ವಿರಾಟ್‌ ಕೊಹ್ಲಿ ಒಂದೇ ಒಂದು ಟೆಸ್ಟ್ ಪಂದ್ಯಕ್ಕೆ ಮಾತ್ರ ಲಭ್ಯರಾಗಲಿದ್ದಾರೆ. ಅಡಿಲೇಡ್‌ನಲ್ಲಿ ಡಿ.17 ರಿಂದ ಆರಂಭವಾಗಲಿರುವ ಡೇ-ನೈಟ್‌ ಪಂದ್ಯದಲ್ಲಿ ಆಡಿದ ಬಳಿಕ ಕೊಹ್ಲಿ ತವರಿಗೆ ಮರಳಲಿದ್ದಾರೆ. ಏಕೆಂದರೆ ಅವರು ಮತ್ತು ಪತ್ನಿ ಅನುಷ್ಕಾ ಶರ್ಮಾ ಜನವರಿ ಆರಂಭದಲ್ಲಿ ಮೊದಲನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಇದರ ಹೊರತಾಗಿಯೂ ಭಾರತೀಯ ಕ್ರಿಕೆಟ್‌ ಮಂಡಳಿ ವಿರಾಟ್‌ ಕೊಹ್ಲಿ ಅನುಪಸ್ಥಿತಿಯಲ್ಲಿ ಯಾರು ತಂಡವನ್ನು ಮುನ್ನಡೆಸಲಿದ್ದಾರೆಂದು ಇನ್ನೂ ಸ್ಪಷ್ಟಪಡಿಸಿಲ್ಲ. ಆದರೆ, ಉಪ ನಾಯಕ ಅಜಿಂಕ್ಯಾ ರಹಾನೆ ತಂಡವನ್ನು ಮುನ್ನಡೆಸಬಹುದು ಅಥವಾ ಇಲ್ಲದೆ ಇರಬಹುದು.

"ಮೊದಲನೇ ಟೆಸ್ಟ್‌ ಪಂದ್ಯಕ್ಕೆ ಬ್ಯಾಟಿಂಗ್‌ ಕ್ರಮಾಂಕದ ಬಗ್ಗೆ ಭಾರತ ತಂಡ ಈಗಲೂ ಸ್ಪಷ್ಟವಾಗಿದ್ದಾರೆಂದು ನಾನು ಭಾವಿಸುವುದಿಲ್ಲ. ಯಾರು ಆರಂಭಿಕರಾಗಿ ಕಣಕ್ಕೆ ಇಳಿಸುತ್ತಾರೆ ಹಾಗೂ ವಿರಾಟ್‌ ಕೊಹ್ಲಿ ಭಾರತಕ್ಕೆ ಮರಳಿದ ಬಳಿಕ, ನಾಲ್ಕನೇ ಕ್ರಮಾಂಕದಲ್ಲಿ ಯಾರು ಬ್ಯಾಟಿಂಗ್‌ ಮಾಡಲಿದ್ದಾರೆ?" ಎಂದು ಪಾಂಟಿಂಗ್‌ ಪ್ರಶ್ನೆ ಮಾಡಿದರು.

ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳಿಗಿಂತ ಭಾರತ ಬ್ಯಾಟ್ಸ್‌ಮನ್‌ಗಳು ಹೆಚ್ಚು ಒತ್ತಡದಲ್ಲಿದ್ದಾರೆ. ಅದರಲ್ಲೂ ವಿಶೇಷವಾಗಿ ಟೆಸ್ಟ್‌ ಸರಣಿಯ ಕೊಹ್ಲಿ ಬ್ಯಾಟಿಂಗ್‌ ವಿಭಾಗ ಹೆಚ್ಚು ಒತ್ತಡಕ್ಕೆ ಒಳಗಾಗಿದೆ ಎಂಬುದು ಪಾಂಟಿಂಗ್‌ ಅಭಿಮತ.

"ಆಸ್ಟ್ರೇಲಿಯಾ ತಂಡದಲ್ಲಿ ಡೇವಿಡ್‌ ವಾರ್ನರ್‌ ಅವರ ಜತೆ ಕ್ಯಾಮರೊನ್‌ ಗ್ರೀನ್‌ ಅಥವಾ ವಿಲ್‌ ಪುಕೊವ್ಸ್ಕಿ ಅವರು ಇನಿಂಗ್ಸ್ ಆರಂಭಿಸಬಹುದು. ಈ ಇಬ್ಬರು ಆಟಗಾರರ ನಡುವೆ ನಾವು ಪ್ರಶ್ನೆ ಮಾಡಬಹುದು. ಆದರೆ, ಭಾರತ ತಂಡದಲ್ಲಿ ಇದಕ್ಕೆ ಹಲವು ಪ್ರಶ್ನೆಗಳಿವೆ," ಎಂದರು.

ಭಾರತ ತಂಡದ ವೇಗದ ಬೌಲಿಂಗ್‌ ವಿಭಾಗವನ್ನು ಜಸ್‌ಪ್ರಿತ್‌ ಬುಮ್ರಾ ಹಾಗೂ ಮೊಹಮ್ಮದ್ ಶಮಿ ಮುನ್ನಡೆಸಲಿದ್ದಾರೆ. ಇಶಾಂತ್‌ ಶರ್ಮಾ ಫಿಟ್‌ ಆದರೆ ಅವರನ್ನು ಬೇಗ ಪ್ರವಾಸಿ ತಂಡ ಕರೆಸಿಕೊಳ್ಳಲಿದೆ. ಅಲ್ಲದೆ, ಉಮೇಶ್‌ ಯಾದವ್‌, ನವದೀಪ್‌ ಸೈನಿ ಸೇರಿದಂತೆ ಟೀಮ್‌ ಇಂಡಿಯಾದ ವೇಗದ ವಿಬಾಗದಲ್ಲಿ ಹಲವು ಆಯ್ಕೆಗಳಿವೆ. ಈ ಬಗ್ಗೆ ನಮಗಿಂತ ಹೆಚ್ಚಿನ ಪ್ರಶ್ನೆಗಳಿಗೆ ಭಾರತ ಉತ್ತರಿಸಬೇಕಾಗಿದೆ ಎಂದು ಪಾಂಟಿಂಗ್‌ ಹೇಳಿದ್ದಾರೆ.

ಯುಎನ್‌ಐ ಆರ್‌ಕೆ 1530