Thursday, Oct 22 2020 | Time 20:08 Hrs(IST)
 • ಪ್ರಾದೇಶಿಕ ಭಾಷೆಗಳಲ್ಲಿ ಜೆ ಇ ಇ ಮುಖ್ಯ ಪರೀಕ್ಷೆ : ರಮೇಶ್ ಪೋಖ್ರಿಯಾಲ್
 • ಪದವಿಪೂರ್ವ ಪಠ್ಯ ಶೇ 30 ರಷ್ಟು ಕಡಿತ
 • ಸಶಸ್ತ್ರ ಪಡೆಗಳ ಪಿಂಚಣಿ ಸೌಲಭ್ಯದಲ್ಲಿ ತಾರತಮ್ಯ; ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆ
 • ತೆವಳುತ್ತಾ ಸಾಗುತ್ತಿದೆ ಸಮೃದ್ಧಿ ಯೋಜನೆ: ಲಾಭ ಪಡೆದಿದ್ದು ಕೇವಲ 177 ಫಲಾನುಭವಿಗಳು… !!!
 • ಬಿಹಾರಿಗಳ ಆತ್ಮಗೌರವ ಮಾರಾಟಕ್ಕಿಲ್ಲ , ತೇಜಸ್ವಿ ಯಾದವ್ ವಾಗ್ದಾಳಿ
 • ನಿತೀಶ್ ರಿಂದ ಜನತೆಗೆ ದ್ರೋಹ, ಲಾಲೂ ಕಿಡಿ
 • ನವೆಂಬರ್ 1ರಿಂದ ಸಾಯ್ ಕೇಂದ್ರಗಳಲ್ಲಿ ತರಬೇತಿ ಪುನರಾರಂಭ
 • ಐಪಿಎಲ್ 2020 ರೇಟಿಂಗ್ ಸಖತ್ತಾಗಿ ಸಾಗಿದೆ: ಸೌರವ್ ಗಂಗೂಲಿ
 • ಉಪ ಚುನಾವಣೆ ಗಂಭೀರವಾಗಿ ಪರಿಗಣಿಸಿ: ಸಂಘಟಿತವಾಗಿ ಹೋರಾಡಿ - ಯಡಿಯೂರಪ್ಪ
 • ಜಯದ ಅನಿವಾರ್ಯತೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್
 • ಕೆಕೆಆರ್‌ ವಿರುದ್ಧದ ಗೆಲುವಿನ ಹೊರತಾಗಿಯೂ ಬೇಸರ ವ್ಯಕ್ತಪಡಿಸಿದ ಕೊಹ್ಲಿ
 • ಉತ್ತರ ಕಾಶ್ಮೀರದಲ್ಲಿ ಶೋಧ ಕಾರ್ಯಾಚರಣೆ ವೇಳೆ ಇಬ್ಬರು ಅಲ್-ಬದರ್ ಉಗ್ರರು ಶರಣಾಗತಿ
 • ಈರುಳ್ಳಿ ಬೆಲೆ ಗಗನಕ್ಕೆ,ಗ್ರಾಹಕರ ಕಣ್ಣಲ್ಲಿ ಬಳ, ಬಳ ನೀರು !
 • ಎದುರಾಳಿ ನಮ್ಮ ಸರಿ ಸಮನಾಗಿದ್ದರಷ್ಟೇ ಯುದ್ಧ ಮಾಡಬಹುದು; ಡಿ ಕೆ ಶಿವಕುಮಾರ್
 • ಕುಲಭೂಷಣ್ ಜಾಧವ್ ಗಲ್ಲುಶಿಕ್ಷೆ ಪರಾಮರ್ಶೆಗೆ ಪಾಕ್ ಸಂಸತ್ ಸಮ್ಮತಿ
Sports Share

ಬೆಂಗಳೂರಿಗೆ ಕಠಿಣ ಗುರಿ ಒಡ್ಡಿದ ರಾಜಸ್ಥಾನ್

ಬೆಂಗಳೂರಿಗೆ ಕಠಿಣ ಗುರಿ ಒಡ್ಡಿದ ರಾಜಸ್ಥಾನ್
ಬೆಂಗಳೂರಿಗೆ ಕಠಿಣ ಗುರಿ ಒಡ್ಡಿದ ರಾಜಸ್ಥಾನ್

ದುಬೈ, ಅ.17 (ಯುಎನ್ಐ) ರಾಬಿನ್ ಉತ್ತಪ್ಪ (41) ಮತ್ತು ಸ್ಟೀವನ್ ಸ್ಮಿತ್ ( 57) ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡ ಐಪಿಎಲ್ 13ನೇ ಆವೃತ್ತಿಯ 33ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 178 ರನ್ ಗಳ ಕಠಿಣ ಗುರಿ ಒಡ್ಡಿದೆ.

ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ತನ್ನ ಪಾಲಿನ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 177 ರನ್ ಗಳಿಸಿತು.

ಆರಂಭಿಕರಾಗಿ ಕಣಕ್ಕಿಳಿದ ರಾಬಿನ್ ಉತ್ತಪ್ಪ ಮತ್ತು ಬೆನ್ ಸ್ಟೋಕ್ಸ್ ಮೊದಲ ವಿಕೆಟ್ ಗೆ 51 ರನ್ ಕಲೆಹಾಕಿ ತಂಡಕ್ಕೆ ತಮ್ಮ ಕಾಣಿಕೆ ಅರ್ಪಿಸಿದರು. 19 ಎಸೆತಗಳಲ್ಲಿ 15 ರನ್ ಗಳಿಸಿ ವಿಕೆಟ್ ಕಾಯ್ದುಕೊಂಡಿದ್ದ ಸ್ಟೋಕ್ಸ್ ಕ್ರಿಸ್ ಮೋರಿಸ್ ಗೆ ವಿಕೆಟ್ ಒಪ್ಪಿಸಿದರು. ನಂತರ 22 ಎಸೆತಗಳಲ್ಲಿ 7 ಫೋರ್, 1 ಸಿಕ್ಸರ್ ಒಳಗೊಂಡ 41 ರನ್ ಗಳಿಸಿ ಸಂಜು ಸ್ಯಾಮ್ಸನ್ ಜತೆ ಇನಿಂಗ್ಸ್ ಕಟ್ಟುವ ಯತ್ನದಲ್ಲಿದ್ದ ಉತ್ತಪ್ಪಗೆ ಸ್ಪಿನ್ನರ್ ಯಜ್ವೇಂದ್ರ ಚಹಲ್ ಸಿಂಹಸ್ವಪ್ನವಾದರು. 8ನೇ ಓವರ್ ನ 4 ಮತ್ತು ಐದನೇ ಎಸೆತಗಳಲ್ಲಿ ಉತ್ತಪ್ಪ ಮತ್ತು ಸ್ಯಾಮ್ಸನ್ ವಿಕೆಟ್ ಉರುಳಿಸಿದ ಚಹಲ್, ಆರ್ ಸಿಬಿಗೆ ಮೇಲುಗೈ ತಂದುಕೊಡುವ ಜತೆಗೆ ಎದುರಾಳಿ ತಂಡದ ರನ್ ವೇಗಕ್ಕೆ ಕಡಿವಾಣ ಹಾಕಿದರು.

ಸ್ಮಿತ್-ಬಟ್ಲರ್ ಆಸರೆ

ನಾಲ್ಕನೇ ವಿಕೆಟ್ ಗೆ ಜತೆಯಾದ ನಾಯಕ ಸ್ಮಿತ್ ಮತ್ತು ಬಟ್ಲರ್ ಬೆಂಗಳೂರು ತಂಡದ ಬೌಲರ್ ಗಳನ್ನು ಸಮರ್ಥವಾಗಿ ನಿಭಾಯಿಸಿ ತಂಡಕ್ಕೆ ಚುರುಕಿನ ರನ್ ತಂದುಕೊಟ್ಟರು. ಆದರೆ 25 ಎಸೆತಗಳಲ್ಲಿ 24 ರನ್ ಕಲೆಹಾಕಿದ್ದ ಬಟ್ಲರ್ 16ನೇ ಓವರ್ ನಲ್ಲಿ ಕ್ರಿಸ್ ಮೋರಿಸ್ ವಿಕೆಟ್ ಒಪ್ಪಿಸಿದರು. ಹೀಗಾಗಿ 58 ರನ್ ಗಳ ನಾಲ್ಕನೇ ವಿಕೆಟ್ ಜತೆಯಾಟ ಮುರಿದು ಬಿದ್ದಿತು.

ಒಂದೆಡೇ ವಿಕೆಟ್ ಉರುಳುತ್ತಿದ್ದರೂ ತಾಳ್ಮೆ ಕಳೆದುಕೊಳ್ಳದ ಆಸ್ಟ್ರೇಲಿಯಾದ ಸ್ಮಿತ್ 36 ಎಸೆತಗಳಲ್ಲಿ 6 ಫೋರ್, 1 ಸಿಕ್ಸರ್ ಸಹಿತ 57 ರನ್ ಗಳಿಸಿ ಅರ್ಧಶತಕ ಪೂರೈಸುವುದರ ಜತೆಗೆ ತಂಡದ ಸವಾಲಿನ ಮೊತ್ತಕ್ಕೆ ನೆರವಾದರು. ಇವರ ಜತೆಗೆ ರಾಹುಲ್ ತೆವಾಟಿಯಾ ಸಹ (ಅಜೇಯ 19) ತಮ್ಮ ಕಾಣಿಕೆ ನೀಡಿದರು. ಬೆಂಗಳೂರು ಪರ ಕ್ರಿಸ್ ಮೋರಿಸ್ 4 ಹಾಗೂ ಯಜ್ವೇಂದ್ರ ಚಹಲ್ ಎರಡು ವಿಕೆಟ್ ಉರುಳಿಸಿದರು.

ಸಂಕ್ಷಿಪ್ತ ಸ್ಕೋರ್

ರಾಜಸ್ಥಾನ್ ರಾಯಲ್ಸ್: 20 ಓವರ್ ಗಳಲ್ಲಿ 6 ವಿಕೆಟ್ ಗೆ177 (ಉತ್ತಪ್ಪ 41, ಸ್ಮಿತ್ 57, ಬಟ್ಲರ್ 24; ಕ್ರಿಸ್ ಮೋರಿಸ್ 26ಕ್ಕೆ 4, ಚಹಲ್ 34ಕ್ಕೆ 2).

ಯುಎನ್ಐಆರ್ ಕೆ 1718

More News

ಗಾಲ್ಫ್ ಆಟಗಾರ ಆಡಮ್ ಸ್ಕಾಟ್ ಗೆ ಕೋವಿಡ್-19 ಸೋಂಕು

22 Oct 2020 | 6:38 PM

 Sharesee more..
ಕೋವಿಡ್-19 ಹಿನ್ನೆಲೆ: ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ರದ್ದು

ಕೋವಿಡ್-19 ಹಿನ್ನೆಲೆ: ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ರದ್ದು

22 Oct 2020 | 6:37 PM

ನವದೆಹಲಿ, ಅ.22 (ಯುಎನ್ಐ)- ಕೋವಿಡ್-19 ಭೀತಿಯಿಂದಾಗಿ ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಸಹ ರದ್ದುಗೊಂಡಿದೆ. ಜಾಗತಿಕ ಸಾಂಕ್ರಾಮಿಕ ಕೊರೊನಾ ವೈರಸ್ ಹರಡಿದ ಕಾರಣ ವೈಯಕ್ತಿಕ ಪಂದ್ಯಾವಳಿಗಳನ್ನು ರದ್ದುಗೊಳಿಸಲಾಗಿದೆ ಅಥವಾ ಮುಂದೂಡಲಾಗಿದೆ.

 Sharesee more..

ಐಪಿಎಲ್ ನಲ್ಲಿ ಇತಿಹಾಸ ಬರೆದ ಸಿರಾಜ್

22 Oct 2020 | 5:59 PM

 Sharesee more..