Saturday, Jul 11 2020 | Time 09:19 Hrs(IST)
Entertainment Share

ಅಕ್ಷಯ್ ಕುಮಾರ್, ಸೋನು ಸೂದ್ ಗೆ ‘ಭಾರತ ರತ್ನ” ನೀಡಬೇಕು..

ಮುಂಬೈ, ಜೂನ್ ೨೯(ಯುಎನ್‌ಐ) ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಸೋನು ಸೂದ್ ಅವರಿಗೆ ದೇಶದ ಅತ್ಯುನ್ನತ ನಾಗರೀಕ ಪುರಸ್ಕಾರ ‘ಭಾರತ ರತ್ನ’ ನೀಡಬೇಕು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಅಭಿಯಾನ ಆರಂಭಗೊಂಡಿದೆ.
ಕೊರೊನಾ ಸಾಂಕ್ರಾಮಿಕ ದೇಶವನ್ನು ಬಾಧಿಸುತ್ತಿರುವ ಈ ಸಂದರ್ಭದಲ್ಲಿ. ಸಿನಿಮಾ ತಾರೆಯರು ತಮ್ಮ ಕೈಲಾದಷ್ಟೂ ನೆರವಾಗುತ್ತಿದ್ದಾರೆ. ಅದರಲ್ಲೂ ನಟ ಅಕ್ಷಯ್ ಕುಮಾರ್ ಅವರು ಪ್ರಧಾನಿ ಮಂತ್ರಿ ಕೇರ್ಸ್ ನಿಧಿಗೆ ೨೫ ಕೋಟಿ ರೂ. ಭಾರಿ ದೇಣಿಗೆ ನೀಡಿದ್ದರು. ಜೊತೆಗೆ ಇನ್ನಿತರರಿಗೂ ಸಹಾಯ ಕಲ್ಪಿಸಿದ್ದರು. ನಟ ಸೋನು ಸೂದ್ ಲಾಕ್ ಡೌನ್ ಸಮಯದಲ್ಲಿ ಅನೇಕ ವಲಸೆ ಕಾರ್ಮಿಕರಿಗೆ ತಮ್ಮದೇ ಆದ ಸಹಾಯ ಕಲ್ಪಿಸುತ್ತಿದ್ದಾರೆ. ಸ್ವಂತ ಊರಿಗೆ ತೆರಳಲು ಸಾಧ್ಯವಾಗದೆ ಅತಂತ್ರವಾಗಿದ್ದ ವಲಸೆ ಕಾರ್ಮಿಕರಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಬಸ್ಸುಗಳ ವ್ಯವಸ್ಥೆ ಮಾಡಿದ್ದರು. ಇನ್ನೂ ಕೆಲವರನ್ನು ರೈಲುಗಳ ಮೂಲಕ ಅವರ ಊರುಗಳಿಗೆ ಕಳುಹಿಸಿದ್ದರು. ಈ ಹಿನ್ನೆಲೆಯಲ್ಲಿಯೇ ಇವರಿಬ್ಬರಿಗೂ “ಭಾರತ ರತ್ನ” ಪುರಸ್ಕಾರ ನೀಡಬೇಕು ಎಂದು ಸಾಮಾಜಿಕ ಮಾಧ್ಯಮದಲ್ಲಿ ಕೆಲವರು ಅಭಿಯಾನ ಆರಂಭಿಸಿದ್ದಾರೆ.
ಲಾಕ್ ಡೌನ್ ಸಡಿಲಿಸಿ ಸುಮಾರು ಒಂದು ತಿಂಗಳು ಕಳೆದಿದ್ದರೂ, ಈಗಲೂ ನೆರವು ಕಲ್ಪಿಸುವಂತೆ ತಮಗೆ ನಿತ್ಯ ನೂರಾರು ದೂರವಾಣಿ ಕರೆಗಳು ಬರುತ್ತಿವೆ, ಅವರಿಗೆಲ್ಲ ಸಹಾಯ ಮಾಡುತ್ತಿದ್ದೇನೆ ಎಂದು ನಟ ಸೋನು ಸೂದ್ ಹೇಳಿದ್ದಾರೆ. ಕಳೆದ ವಾರ ಉತ್ತರಾಖಂಡಕ್ಕೆ ತೆರಳಲು ೨ ಸಾವಿರ ಮಂದಿಗೆ, ಬಿಹಾರ ತಲುಪಲು ೨,೪೦೦ ಮಂದಿಗೆ ಸಹಾಯ ಮಾಡಿರುವುದಾಗಿ ಅವರು ಹೇಳಿದ್ದಾರೆ.
ಮುಂಬೈನಲ್ಲಿ ವಲಸೆ ಕಾರ್ಮಿಕರು ಸ್ವಂತ ಊರಿಗೆ ತೆರಳಲಾರದೆ ಇನ್ನೂ ಅಲ್ಲಿಯೇ ಉಳಿದುಕೊಂಡಿದ್ದಾರೆ. ಕಾರಣ ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ನಿರ್ಬಂಧಗಳು ಸಡಿಲಿಕೆಯಾಗಿಲ್ಲ. ಅವರೆಲ್ಲ ಕಿರಿದಾದ ಕೋಣೆಗಳಲ್ಲಿ ಶೋಚನೀಯ ಬದುಕು ಸಾಗಿಸುತ್ತಿದ್ದಾರೆ. ಕಿರಿದಾದ ಕೋಣೆಗಳಲ್ಲಿ ೮-೧೦ ಜನ ವಾಸವಾಗಿದ್ದಾರೆ. ಲಾಕ್‌ಡೌನ್ ಸಂಪೂರ್ಣ ಸಡಿಲಗೊಂಡ ನಂತರ ತಮ್ಮ ಊರಿಗಳಿಗೆ ತೆರಳಲು ಅವರು ಬಯಸುತ್ತಾರೆ. ಈ ಪೈಕಿ ಹಲವರಿಗೆ ಪತ್ನಿ ಹಾಗೂ ಪುಟ್ಟ ಮಕ್ಕಳಿವೆ ಎಂದು ಸೂದ್ ಹೇಳಿದ್ದಾರೆ.
ಈಗಲೂ ನಮ್ಮ ಸಹಾಯವಾಣಿ ಗಳಿಗೆ ನಿತ್ಯ ನೂರಾರು ಕರೆಗಳು ಬರುತ್ತಿವೆ. ಮುಂಬಯಿಯಲ್ಲಿ ನಿರ್ಬಂಧಗಳನ್ನು ಸಡಿಲಿಸುತ್ತಿದ್ದಾರೆ. ಹಾಗಾಗಿ ನಮ್ಮನ್ನು ಸ್ವಂತ ಊರುಗಳಿಗೆ ಮನೆಗೆ ಕಳುಹಿಸಿಕೊಡಲು ನೆರವಾಗಿ ಎಂದು ಕೋರುತ್ತಿದ್ದಾರೆ. ನಾಲಸೋಪರಾ, ವಾಸೈ ಮತ್ತು ಪಾಲ್ಘರ್ ಪ್ರದೇಶದಲ್ಲಿರುವ ವಲಸೆ ಕಾರ್ಮಿಕರಿಗೆ ಸರಿಯಾದ ವಸತಿ ಇಲ್ಲ. ಆ ಪ್ರದೇಶಗಳಿಂದ ಹೆಚ್ಚಿನ ಕರೆಗಳು ಬರುತ್ತಿವೆ. ಅವರ ವಿವರ ಪರಿಶೀಲಿಸಿದ ನಂತರ ನಾವು ವ್ಯವಸ್ಥೆ ಮಾಡುತ್ತಿದ್ದೇವೆ. ಅಲ್ಲದೆ ಇದೇ ಸಮಯದಲ್ಲಿ, ಮುಂಬೈಗೆ ಬರಲು ಬಯಸುವವರಿಗೆ ನಾವು ಸಹಾಯ ಮಾಡುತ್ತಿದ್ದೇವೆ. ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣಕ್ಕೆ ತೆರಳಿ ಅವರನ್ನು ಭೇಟಿಯಾಗಲು ನನಗೆ ಸಂತೋಷವಾಗುತ್ತಿದೆ. ಬಡ ಜನರಿಗೆ ನೆರವಾಗಲು ತಮಗೆ ಲಭಿಸಿರುವ ಅವಕಾಶವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ, ಎಂದು ಸೋನು ಸೂದ್ ತಮ್ಮ ಸಂತಸ ಹಂಚಿಕೊಂಡಿದ್ದಾರೆ.
ಯುಎನ್‌ಐ ಕೆವಿಆರ್ ೧೪೨೧
More News

ಬಾಲಿವುಡ್ ಹಾಸ್ಯ ನಟ ಜಗದೀಪ್ ಜಾಫ್ರಿ ನಿಧನ

08 Jul 2020 | 11:30 PM

 Sharesee more..
ಕೊರೋನಾ ಸೋಂಕು: ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಆಸ್ಪತ್ರೆಗೆ ದಾಖಲು

ಕೊರೋನಾ ಸೋಂಕು: ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಆಸ್ಪತ್ರೆಗೆ ದಾಖಲು

08 Jul 2020 | 6:18 PM

ಬೆಂಗಳೂರು, ಜುಲೈ 08 (ಯುಎನ್‍ಐ) ಕನ್ನಡದ ಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕೊರೋನಾ ಸೋಂಕಿಗೆ ಒಳಗಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

 Sharesee more..
‘ದಾರಿ ಯಾವುದಯ್ಯಾ ವೈಕುಂಠಕೆ' ಚಿತ್ರೀಕರಣ ‌ಪೂರ್ಣ

‘ದಾರಿ ಯಾವುದಯ್ಯಾ ವೈಕುಂಠಕೆ' ಚಿತ್ರೀಕರಣ ‌ಪೂರ್ಣ

06 Jul 2020 | 9:42 PM

ಬೆಂಗಳೂರು, ಜುಲೈ 06 (ಯುಎನ್‍ಐ) ಶ್ರೀ ಬಸವೇಶ್ವರ ಕ್ರಿಯೇಷನ್ಸ್ ಲಾಂಛನದಲ್ಲಿ ಶರಣಪ್ಪ ಎಂ ಕೊಟಗಿ ಅವರು ನಿರ್ಮಿಸಿರುವ 'ದಾರಿ ಯಾವುದಯ್ಯಾ ವೈಕುಂಠಕ್ಕೆ' ಚಿತ್ರದ ಚಿತ್ರೀಕರಣ ಪೂರ್ಣವಾಗಿದೆ.

 Sharesee more..