Friday, Sep 18 2020 | Time 16:34 Hrs(IST)
 • ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್‌ ಐಪಿಎಲ್‌ ಕಿರೀಟ ಗೆಲ್ಲಬೇಕು: ಕೆವಿನ್ ಪೀಟರ್ಸನ್
 • ಸೊಮಾಲಿಯಾ ಅಧ್ಯಕ್ಷರಿಂದ ಹೊಸ ಪ್ರಧಾನಿ ನೇಮಕ
 • ಕಾಂಗ್ರೆಸ್‌ ರೈತರ ದಾರಿ ತಪ್ಪಿಸುತ್ತಿದೆ; ಮೋದಿ
 • ಕೃಷಿ ಮಾರುಕಟ್ಟೆ ಸುಧಾರಣೆಗಳಿಂದ ರೈತರು ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಪಡೆಯಲು ಸಹಕಾರಿ-ಪ್ರಧಾನಿ ಮೋದಿ
 • ಐಪಿಎಲ್‌ 2020: ಮುಂಬೈ ಇಂಡಿಯನ್ಸ್-ಚೆನ್ನೈ ಸೂಪರ್‌ ಕಿಂಗ್ಸ್ ನಡುವೆ ಆರಂಭಿಕ ಪಂದ್ಯ ನಾಳೆ
 • ಕೃಷಿ ವಿಧೇಯಕಗಳಿಗೆ ಲೋಕಸಭೆ ಅಂಗೀಕಾರ ಐತಿಹಾಸಿಕ :ಪ್ರಧಾನಿ ಮೋದಿ
 • ಐಪಿಎಲ್ 2020: ರಾಯಲ್‌ ಚಾಲೆಂಜರ್ಸ್‌ ನೂತನ ಹಾಡು ಬಿಡುಗಡೆ
 • ಕೇಂದ್ರ ಸಚಿವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ : ವಿವಿಧ ಯೋಜನೆಗಳಿಗೆ ಅನುಮೋದನೆ ಕೋರಿ ಮನವಿ
 • ಗೋಂದಿ ಯೋಜನೆ ಅಡಿ ಕೆರೆಗಳಿಗೆ ನೀರು: ಸಚಿವ ಸಿ ಟಿ ರವಿ
 • ರೈತರು ಪಂಜಾಬ್ ನ ಆತ್ಮ, ಅದರ ಮೇಲಿನ ದಾಳಿ ಸಹಿಸಲು ಸಾಧ್ಯವಿಲ್ಲ; ನವಜ್ಯೋತ್ ಸಿಂಗ್ ಸಿಧು
 • ಈ ವರ್ಷದ ಐಪಿಎಲ್‌ ಟೂರ್ನಿ ತುಂಬಾ ವಿಶೇಷತೆಯಿಂದ ಕೂಡಿದೆ: ವಿರೇಂದ್ರ ಸೆಹ್ವಾಗ್‌
 • ಮುಂಬೈ ಇಂಡಿಯನ್ಸ್‌ ತಂಡದ ಓಪನರ್ಸ್‌ ಯಾರೆಂದು ಬಹಿರಂಗ ಪಡಿಸಿದ ಜಯವರ್ಧನೆ
 • ನಿರೂಪಕ ಅಕುಲ್ ಬಾಲಾಜಿ ಸೇರಿ ಮೂವರಿಗೆ ಸಿಸಿಬಿ ನೋಟಿಸ್
 • ನೆರೆ ಪರಿಹಾರ ಕೈಗೊಳ್ಳಲು ಹೆಚ್ಚಿನ ನೆರವು ನೀಡಿ: ಪ್ರಧಾನಿ ಮೋದಿಗೆ ಮುಖ್ಯಮಂತ್ರಿ ಮನವಿ
 • ರೈಲ್ವೆ ಖಾಸಗೀಕರಣ ಪ್ರಸ್ತಾವನೆ ಸರ್ಕಾರ ಮುಂದೆ ಇಲ್ಲ: ಪಿಯೂಷ್ ಗೋಯಲ್
Parliament Share

ಅಗತ್ಯ ಸರಕುಗಳ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ

ನವದೆಹಲಿ, ಸೆಪ್ಟೆಂಬರ್ 15 (ಯುಎನ್‌ಐ) ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವಾಗ ಅಗತ್ಯ ವಸ್ತುಗಳ ಉತ್ಪಾದನೆ, ಪೂರೈಕೆ, ವಿತರಣೆ, ಸಂಗ್ರಹಣೆ ಮತ್ತು ವ್ಯಾಪಾರವನ್ನು ನಿಯಂತ್ರಿಸಲು ಮತ್ತು ನಿಯಂತ್ರಣಾ ವ್ಯವಸ್ಥೆಯನ್ನು ಉದಾರೀಕರಣಗೊಳಿಸಲು ಕೇಂದ್ರಕ್ಕೆ ಅಧಿಕಾರ ನೀಡುವ ಮಸೂದೆಯನ್ನು ಮಂಗಳವಾರ ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ.
ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆ-2020 ರ ಚರ್ಚೆಗೆ ಉತ್ತರಿಸಿದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಾವ್ ಸಾಹೇಬ್ ದಾದರಾವ್ ದನ್ವೆ, ಈ ಮಸೂದೆಯನ್ನು ಜಾರಿಗೆ ತರುವ ಮೂಲಕ ರೈತರು, ಗ್ರಾಹಕರು ಮತ್ತು ಹೂಡಿಕೆದಾರರಿಗೆ ಪೂರಕ ವಾತಾವರಣವನ್ನು ಸೃಷ್ಟಿಸಲಾಗುವುದು. ಇದು ಪ್ರಧಾನಮಂತ್ರಿಯವರ ಆತ್ಮನಿರ್ಭರ್ ಭಾರತ್ ದೃಷ್ಟಿಕೋನಕ್ಕೆ ಉತ್ತೇಜನ ನೀಡಲಿದೆ ಎಂದು ಹೇಳಿದ್ದಾರೆ.
ಉದ್ದೇಶಿತ ತಿದ್ದುಪಡಿ ಮಸೂದೆ ಸ್ಪರ್ಧೆಯನ್ನು ಉತ್ತೇಜಿಸುತ್ತದೆ. ರೈತರು ತಮ್ಮ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಪಡೆಯಲು ಸಹಾಯ ಮಾಡುತ್ತದೆ. ಗ್ರಾಹಕರು ಸಹ ಪ್ರಯೋಜನ ಪಡೆಯುತ್ತಾರೆ' ಎಂದು ಸಚಿವರ ಗಮನಸೆಳೆದರು.
ಅಗತ್ಯ ಸರಕುಗಳ ಕಾಯ್ದೆ 1955 ಅನ್ನು ಮತ್ತಷ್ಟು ತಿದ್ದುಪಡಿ ಮಾಡುವ ಮಸೂದೆಯನ್ನು ಧ್ವನಿ ಮತದಿಂದ ಅಂಗೀಕರಿಸಲಾಯಿತು.
ದೇಶವು ಆಹಾರದ ಕೊರತೆಯನ್ನು ಎದುರಿಸುತ್ತಿರುವ ಸಮಯದಲ್ಲಿ 1955 ರ ಕಾಯಿದೆಗೆ ತರಲಾಗಿತ್ತು. ಇದೀಗ ನಮ್ಮಲ್ಲಿ ಹೆಚ್ಚುವರಿ ಕೃಷಿ ಉತ್ಪಾದನೆ ಇದೆ. ನಷ್ಟವನ್ನು ಕಡಿಮೆ ಮಾಡಲು, ಆಹಾರ ಸಂಸ್ಕರಣಾ ಘಟಕಗಳ ಅಗತ್ಯವಿದೆ. ಶೈತ್ಯಾಗಾರಗಳು ಲಭ್ಯವಿಲ್ಲದ ಕಾರಣ ರೈತರು ನಷ್ಟ ಅನುಭವಿಸುತ್ತಿದ್ದಾರೆ ಎಂದು ಸಚಿವರು ಹೇಳಿದ್ದಾರೆ.
ಯುಎನ್‍ಐ ಎಸ್ಎಲ್ಎಸ್ 2102
More News
ಅಶೋಕ್ ಗಸ್ತಿ ಬದುಕಿದ್ದಾಗಲೇ ಸಂತಾಪ ಸೂಚಿಸಿದ್ದೆ: ರಾಜ್ಯಸಭೆಯಲ್ಲಿ ಎಂ ವೆಂಕಯ್ಯ ನಾಯ್ಡು

ಅಶೋಕ್ ಗಸ್ತಿ ಬದುಕಿದ್ದಾಗಲೇ ಸಂತಾಪ ಸೂಚಿಸಿದ್ದೆ: ರಾಜ್ಯಸಭೆಯಲ್ಲಿ ಎಂ ವೆಂಕಯ್ಯ ನಾಯ್ಡು

18 Sep 2020 | 2:49 PM

ನವದೆಹಲಿ, ಸೆ 18[]ಯುಎನ್ಐ] ರಾಜ್ಯವನ್ನು ಪ್ರತಿನಿಧಿಸುವ ಹಾಲಿ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಹಾಗೂ ಮಾಜಿ ಸದಸ್ಯರಾದ ಡಾ.ಕಪಿಲ್ ವಾತ್ಸಯನ್ ಅವರ ನಿಧನಕ್ಕೆ ರಾಜ್ಯಸಭೆಯಲ್ಲಿಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಅರ್ದ ಗಂಟೆ ಕಲಾಪವನ್ನು ಮುಂದೂಡಲಾಯಿತು.

 Sharesee more..
ರೈಲ್ವೆ ಖಾಸಗೀಕರಣ ಪ್ರಸ್ತಾವನೆ ಸರ್ಕಾರ ಮುಂದೆ ಇಲ್ಲ: ಪಿಯೂಷ್ ಗೋಯಲ್

ರೈಲ್ವೆ ಖಾಸಗೀಕರಣ ಪ್ರಸ್ತಾವನೆ ಸರ್ಕಾರ ಮುಂದೆ ಇಲ್ಲ: ಪಿಯೂಷ್ ಗೋಯಲ್

18 Sep 2020 | 2:43 PM

ನವದೆಹಲಿ, ಸೆ 18(ಯುಎನ್ಐ) ಭಾರತೀಯ ರೈಲ್ವೆಯನ್ನು ಖಾಸಗೀಕರಿಸುವ ಯಾವುದೇ ಪ್ರಸ್ತಾವನೆ ತನ್ನ ಮುಂದೆ ಇಲ್ಲ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

 Sharesee more..