Tuesday, Oct 22 2019 | Time 10:15 Hrs(IST)
  • ಆಸ್ಪತ್ರೆ ಸೇರಿರುವ ರಾಬರ್ಟ್ ವಾದ್ರಾ
  • 2024ರ ಪ್ಯಾರಿಸ್ ಒಲಿಂಪಿಕ್ ಹೊಸ ಲಾಂಛನ ಅನಾವರಣ
  • ಐರ್ಲೆಂಡ್ ನಲ್ಲಿ ಗರ್ಭಪಾತ, ಸಮಾನ ವಯಸ್ಸು ವಿವಾಹ ಕಾನೂನು ಬದ್ಧ
  • ಸಂಸದ ಜಲೀಲ್ ಮೇಲೆ ಹಲ್ಲೆಗೆ ಯತ್ನ: ಎನ್‌ಸಿಪಿ ಅಭ್ಯರ್ಥಿ ಸೇರಿ ಮೂವರ ಬಂಧನ
  • ಇಂದು ಬ್ಯಾಂಕ್ ನೌಕರರ ಮುಷ್ಕರ; ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ
  • ಇಸ್ಲಾಮಿಕ್‍ ಸ್ಟೇಟ್‍ ಉಗ್ರರ ದಾಳಿ: ನಾಲ್ವರು ಪೊಲೀಸರು ಬಲಿ
  • ಉತ್ತರ ಕರ್ನಾಟಕದಲ್ಲಿ ಮತ್ತೆ ಅತಿವೃಷ್ಠಿ,ನೆರೆ : 6 ಜನ ಪ್ರವಾಹಕ್ಕೆ ಸಿಲುಕಿ ಸಾವು
  • ಹೈಕಮಾಂಡ್ ಮೇಲೆ ಒತ್ತಡ ಹಾಕಿ ಅಧಿಕಾರ ಪಡೆದಿದ್ದಾರೆ : ಸಿ ಟಿ ರವಿ ಆರೋಪ
Health -Lifestyle Share

ಅತ್ಯಂತ ವಿರಳ ಎಂಡೋಸ್ಕೋಪಿ ಶಸ್ತ್ರ ಚಿಕಿತ್ಸೆ ಮೂಲಕ ಹೃದಯದ ಕವಾಟ ದುರಸ್ತಿ: ಸಪ್ತಗಿರಿ ಆಸ್ಪತ್ರೆ ವೈದ್ಯರ ಸಾಧನೆ

ಬೆಂಗಳೂರು, ಅ 3 [ಯುಎನ್ಐ] ಸಂಧೀವಾತ ಹೃದಯ ಸಮಸ್ಯೆಗಳು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಅತ್ಯಂತ ಸಾಮಾನ್ಯವಾಗಿ ಕಂಡು ಬರುವ ಹೃದಯ ಖಾಯಿಲೆಗಳಾಗಿವೆ. ಇದರ ಪರಿಣಾಮ ಹೃದಯದ ಕವಾಟದ ಸಮಸ್ಯೆಗಳು ಸಹ ಕಂಡು ಬರುತ್ತವೆ. ಪ್ರತಿವರ್ಷ ಒಂದು ಸಾವಿರ ಮಕ್ಕಳಲ್ಲಿ ಇಬ್ಬರಿಗೆ ಇಂತಹ ಸಮಸ್ಯೆ ಇರುತ್ತದೆ. ತಜ್ಞ ವೈದ್ಯರ ಲಭ್ಯತೆ ಮತ್ತು ವೆಚ್ಚ ಭರಿಸುವ ಸಾಮರ್ಥ್ಯ ಹೊಂದಿರುವವರಿಗೆ ಮಾತ್ರ ಚಿಕಿತ್ಸೆ ದೊರೆಯುತ್ತದೆ. ಉಳಿದವರಿಗೆ ಚಿಕಿತ್ಸೆ ಮರಿಚಿಕೆಯಾಗಿದೆ.
ಇಂತಹ ಸಮಸ್ಯೆ ಹೊಂದಿರುವವರಿಗೆ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಯಶಸ್ವಿಯಾಗಿ ಎಂಡೋಸ್ಕೋಪಿ ಶಸ್ತ್ರಿ ಚಿಕಿತ್ಸೆ ಮೂಲಕ ಹೃದಯದ ಕವಾಟವನ್ನು ದುರಸ್ತಿಮಾಡಿರುವುದು ಅಪರೂಪದ ಸಾಧನೆಗಳಲ್ಲಿ ಒಂದಾಗಿದೆ.
ಹೃದಯದ ಕವಾಟ ಬದಲಾವಣೆ ಮಾಡುವ ಚಿಕಿತ್ಸೆಗಳು ಸರ್ವೆ ಸಾಮಾನ್ಯ. ಇವು ಎಲ್ಲೆಡೆ ನಡೆಯುತ್ತವೆ. ಆದರೆ ಎಂಡೋಸ್ಕೋಪಿ ಮೂಲಕ ಹೃದಯದ ಕವಾಟವನ್ನು ಬೆಂಗಳೂರಿನ ಸಪ್ತಗಿರಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಖ್ಯಾತ ಹೃದಯ ತಜ್ಞರಾದ ಡಾ. ತಮೀಮ್ ಅಹ್ಮದ್ ಮತ್ತು ಡಾ. ಇಂತಿಕಾಬ್ ಆಲಂ, ಅಸಸ್ತೇಷಿಯಾ ತಜ್ಞೆ ಡಾ. ಪದ್ಮ ನೇತೃತ್ವದ ಕವಾಟವನ್ನು ಯಶಸ್ವಿಯಾಗಿ ರಿಪೇರಿ ಮಾಡಿದೆ. ಡಾ. ತಮೀಮ್ ಅಹ್ಮದ್ ಮತ್ತು ಡಾ. ಇಂತಿಕಾಬ್ ಆಲಂ ದೇಶದ ಪರಮೋಚ್ಛ ವೈದ್ಯಕೀಯ ಸಂಶೋಧನಾ ಸಂಸ್ಥೆ, ನವದೆಹಲಿ ಏಮ್ಸ್ ನಲ್ಲಿ ನುರಿತ ತರಬೇತಿ ಪಡೆದ ತಜ್ಞ ವೈದ್ಯರು ಎನ್ನುವುದು ವಿಶೇಷ.
ಎರಡು ಇಂಚಿನಷ್ಟು ಹೃದಯ ಭಾಗವನ್ನು ಕೊರೆದು ಎಂಡೋಸ್ಕೋಪಿ ಮೂಲಕ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ವಾಲ್ವ್ ದುರಸ್ತಿಗೆ ಸಾಧನಗಳ ಬದಲು ಬಟ್ಟೆಯಂತಹ ವಸ್ತುವನ್ನು ಬಳಸಲಾಗಿದೆ. ಇಂತಹ ವೈದ್ಯಕೀಯ ಸಾಧನಗಳಿಗೆ ಒಂದು ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಹೃದಯ ಕವಾಟದ ದುರಸ್ತಿಗೆ ಸಾಮಾನ್ಯವಾಗಿ ನಾಲ್ಕು ಪಟ್ಟು ಹೆಚ್ಚು ವೆಚ್ಚವಾಗುತ್ತದೆ. ಆದರೆ ಎಂಡೋಸ್ಕೋಪಿ ಮೂಲಕ ನಡೆಸಿದ ಚಿಕಿತ್ಸೆಯಿಂದ ವೆಚ್ಚ ಕಡಿಮೆ, ತ್ವರಿತವಾಗಿ ಚೇತರಿಸಿಕೊಳ್ಳಲು ಸಹಾಯವಾಗುತ್ತದೆ. ಕಡಿಮೆ ಪ್ರಮಾಣದಲ್ಲಿ ರಕ್ತ ನಷ್ಟವಾಗಲಿದ್ದು, ಆಸ್ಪತ್ರೆಯಿಂದ ಬೇಗ ಡಿಸ್ಚಾರ್ಜ್ ಆಗಿ ಗುಣಮಟ್ಟದ ಜೀವನ ನಡೆಸಲು ಇದರಿಂದ ಸಹಾಯವಾಗುತ್ತದೆ.
ಸಾಮಾನ್ಯವಾಗಿ ಹೃದಯ ಕವಾಟ ಶಸ್ತ್ರ ಚಕಿತ್ಸೆಯನ್ನು ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಮೂಲಕ ನಡೆಸಲಾಗುತ್ತದೆ. ಎದೆಯ ಮೂಳೆಗಳನ್ನು ಕತ್ತರಿಸಿ ನಡೆಸುವ ಶಸ್ತ್ರಚಿಕಿತ್ಸೆ ಅತ್ಯಂತ ದುಬಾರಿಯೂ ಹೌದು. ಕೃತಕ ಹೃದಯ ಕವಾಟದ ದರ ಹಲವು ಲಕ್ಷ ರೂಗಳವರೆಗೆ ಇದೆ. ಜತೆಗೆ ಇಂತಹ ಚಿಕಿತ್ಸೆ ಅಪಾಯಕಾರಿಯೂ ಹೌದು. ಮೆದುಳಿನ ಒಳಗಡೆ ರಕ್ತ ಸ್ರವಿಸುವ, ಹಠಾತ್ ಮರಣ ಸಂಭವಿಸುವ, ಹೃದಯ ಕವಾಟ ಜರುಗುವ ಸಾಧ್ಯತೆಯೂ ಇರುತ್ತದೆ.
ಮದುವೆಯಾಗದ ಮತ್ತು ಬಾಲಕಿಯರು ಹೃದಯದ ಕವಾಟ ಬದಲಾವಣೆ ಚಿಕಿತ್ಸೆಗೆ ಒಳಪಟ್ಟರೆ ಅಂತಹವರಲ್ಲಿ ಫಲವತ್ತತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ತಾಯಿಯಾಗುವ ಸಾಧ್ಯತೆಗಳು ಕ್ಷೀಣಿಸುತ್ತವೆ. ಕವಾಟ ಬದಲಾವಣೆ ಬದಲಿಗೆ ಕವಾಟ ದುರಸ್ತಿ ಹೆಚ್ಚು ಸೂಕ್ತ ಎಂದು ಡಾ. ತಮೀಮ್ ಅಹ್ಮದ್ ಅಭಿಪ್ರಾಯಪಡುತ್ತಾರೆ. ದುರದೃಷ್ಟವೆಂದರೆ ಇಂತಹ ಹೃದಯದ ಕವಾಟ ದುರಸ್ತಿಗೆ ಅತ್ಯಂತ ನುರಿತ, ಕುಶಲ ತಜ್ಞರ ಕೊರತೆಇದೆ.
ಸಪ್ತಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಈವರೆಗೆ ಇಂತಹ ಮೂರು ಶಸ್ತ್ರಚಿಕಿತ್ಸೆಗಳನ್ನು ಅತ್ಯಂತ ಯಶಸ್ವಿಯಾಗಿ ಮಾಡಲಾಗಿದೆ. ಭವಿಷ್ಯದಲ್ಲಿ ಈ ತಂತ್ರಜ್ಞಾನ ಜನ ಸಾಮಾನ್ಯರಿಗೂ ದೊರೆಯಬೇಕಾಗಿದೆ. ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ಸಮೂಹಕ್ಕೆ ಇಂತಹ ತಂತ್ರಜ್ಞಾನ ಒದಗಿಸಲು ಸಂಸ್ಥೆ ಸಜ್ಜಾಗಿದೆ. ಸರ್ಕಾರದ ಆರೋಗ್ಯ ಯೋಜನೆಗಳಡಿ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆಗಳನ್ನು ನಡೆಸುತ್ತಿದ್ದು, ಈ ಬೆಳವಣಿಗೆ ಆರ್ಥಿಕವಾಗಿ ದುರ್ಬಲವರ್ಗದವರಿಗೂ ಸಹ ಅನುಕೂಲಕರವಾಗಲಿದೆ ಎನ್ನುತ್ತಾರೆ ಡಾ. ತಮೀಮ್ ಅಹ್ಮದ್. ಜತೆಗೆ ಇಂತಹ ತಂತ್ರಜ್ಞಾನವನ್ನು ಜಾಗತಿಕವಾಗಿ ಅಗತ್ಯವಿರುವ ರಾಷ್ಟ್ರಗಳಿಗೆ ಒದಗಿಸಲು ಸಹಕಾರಿಯಾಗಲಿದೆ. ಜಗತ್ತಿನ ಆರೋಗ್ಯ ಕ್ಷೇತ್ರಕ್ಕೆ ಭಾರತದ ಕೊಡುಗೆ ಅನನ್ಯವಾಗಿದ್ದು, ಹೊಸ ಹೊಸ ಸಂಶೋಧನೆಗಳು, ಅನ್ವೇಷಣೆಗಳ ಮೂಲಕ ಅಂತಾರಾಷ್ಟ್ರೀಯ ವೈದ್ಯಕೀಯ ಕ್ಷೇತ್ರದಲ್ಲಿ ಭಾರತೀಯ ವೈದ್ಯರು ತನ್ನದೇ ಆದ ಹೆಗ್ಗುರುತು ಮೂಡಿಸುತ್ತಿದ್ದಾರೆ ಎಂದು ಡಾ. ತಮೀಮ್ ಅಹ್ಮದ್ ಹೇಳಿದ್ದಾರೆ.
ಸಪ್ತಗಿರಿ ವೈದ್ಯಕೀಯ ಸಂಶೋಧನಾ ಸಂಸ್ಥೆಯ ಡೀನ್ ಡಾ. ಜಯಂತಿ ಮಾತನಾಡಿ, ಜನ ಸಾಮಾನ್ಯರಿಗೆ ಕೈಗೆಟುವ ದರದಲ್ಲಿ ಚಿಕಿತ್ಸೆ ಒದಗಿಸಲು, ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲು ನಿರಂತರ ಪ್ರಯತ್ನ ನಡೆಸುತ್ತಿದೆ. ಈಗಿನ ಸಂದರ್ಭದಲ್ಲಿ ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಪ್ತಗಿರಿ ವೈದ್ಯಕೀಯ ಸಂಸ್ಥೆ ಆರೋಗ್ಯ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ ನೀಡುತ್ತಿದೆ ಎಂದು ಹೆಮ್ಮೆಯಿಂದ ಹೇಳಿದರು.
ಯುಎನ್ಐ ವಿಎನ್ 1725
More News
ರಾಜಧಾನಿಯಲ್ಲಿ ಉಲ್ಬಣಿಸಿದ ಡೆಂಘೀ ಜ್ವರ

ರಾಜಧಾನಿಯಲ್ಲಿ ಉಲ್ಬಣಿಸಿದ ಡೆಂಘೀ ಜ್ವರ

13 Sep 2019 | 3:55 PM

ಬೆಂಗಳೂರು, ಸೆ 13 [ಯುಎನ್ಐ]ಬೆಂಗಳೂರು ನಗರ ಡೆಂಘೀ ಜ್ವರದ ರಾಜಧಾನಿಯಾಗಿ ಪರಿವರ್ತನೆಯಾಗಿದ್ದು, ರಾಜ್ಯದಲ್ಲಿ ದಾಖಲಾದ ಪ್ರಕರಣಗಳ ಪೈಕಿ ಶೇ 60ಕ್ಕೂ ಹೆಚ್ಚು ಬೆಂಗಳೂರಿನಲ್ಲಿ ಪತ್ತೆಯಾಗಿದೆ.

 Sharesee more..
'ಗುಟ್ಟಿನಿಂದ ಬಟ್ಟಲಿನೆಡೆಗೆ' :ಇದು ಸಂತ್ರಸ್ತ ಸಹೋದರಿಯರಿಗಾಗಿ

'ಗುಟ್ಟಿನಿಂದ ಬಟ್ಟಲಿನೆಡೆಗೆ' :ಇದು ಸಂತ್ರಸ್ತ ಸಹೋದರಿಯರಿಗಾಗಿ

09 Sep 2019 | 5:54 PM

ಬೆಂಗಳೂರು, ಸೆ 9 (ಯುಎನ್‍ಐ) ಸುತ್ತೆಲ್ಲಾ ನೆರೆ, ಕಾಲು ಚಾಚಲು ಜಾಗವಿರದ ನಿರಾಶ್ರಿತಕೇಂದ್ರದಲ್ಲಿ ಮಹಿಳೆಯರು ಮುಟ್ಟಿನ ಸಂದರ್ಭಗಳಲ್ಲಿ ಎದುರಿಸುವ ಯಾತನೆ ಅನುಭವಿಸಿದವರಿಗಷ್ಟೆ ಗೊತ್ತು ಅಂತಹ ದಿನಗಳಲ್ಲಿ ಎದುರಿಸುವ ಮುಜುಗರದ ಪರಿಸ್ಥಿತಿಯನ್ನು ಬಹಿರಂಗವಾಗಿ ಹೇಳಿಕೊಳ್ಳಲು ಆಗದಂತಹ ಅನುಭವಿಸಲು ಸಾಧ್ಯವಿಲ್ಲದಂತಹ ಸನ್ನಿವೇಶ ಇರುತ್ತದೆ ಆದರೆ ಇಂತಹ ನಿರಾಶ್ರಿತ ಕೇಂದ್ರಗಳಲ್ಲಿ ಮಹಿಳೆಯರ ನೆರವಿಗೆ ಬಂದಿದ್ದು ‘ಗುಟ್ಟಿನಿಂದ ಬಟ್ಟಲಿನೆಡೆಗೆ’ ಅಭಿಯಾನ

 Sharesee more..