Wednesday, Feb 26 2020 | Time 13:04 Hrs(IST)
 • ದೆಹಲಿಯ ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಇಂದು ಅಜಿತ್ ದೋವಲ್ ಭೇಟಿ
 • ಎಲಿವೇಟೆಡ್ ಕಾರಿಡಾರ್ ಎಂಬ ಖಜಾನೆ ಕದಿಯುವ ಗುಮ್ಮ; ಆಮ್ ಆದ್ಮಿ ಪಕ್ಷದ ಪ್ರತಿಭಟನೆ
 • ದೆಹಲಿ ಹಿಂಸಾಚಾರ; ಮೃತರ ಸಂಖ್ಯೆ 20ಕ್ಕೇರಿಕೆ, ಸೇನೆ ನಿಯೋಜನೆಗೆ ಕೇಜ್ರೀವಾಲ್ ಮನವಿ
 • ಗಲಭೆ ಕೋರರನ್ನು ಮಟ್ಟ ಹಾಕಿ ಪೊಲೀಸರಿಗೆ ದೆಹಲಿ ಹೈಕೋರ್ಟ್ ಖಡಕ್ ಎಚ್ಚರಿಕೆ
 • ದೆಹಲಿ ಹಿಂಸಾಚಾರ: ಸಾವಿನ ಸಂಖ್ಯೆ 20ಕ್ಕೆ ಏರಿದೆ
 • ಕಾಶ್ಮೀರದ ಬುದ್ಗಾಮ್‌ನಲ್ಲಿ ಎನ್‌ಐಎ ದಾಳಿ
 • ದೆಹಲಿ ಹಿಂಸಾಚಾರ: ಸೋನಿಯಾ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ
 • ಕಾರ್ಮಿಕನ ಬರ್ಬರ ಹತ್ಯೆ
 • 2007ರಲ್ಲಿ ತಿಲಕ್‌ ನಗರದಲ್ಲಿ ಜೋಡಿ ಕೊಲೆ: ರವಿ ಪೂಜಾರಿ ತೀವ್ರ ವಿಚಾರಣೆ
 • "ಕೇಜ್ರಿವಾಲ್‌ ಹೊರಗೆ ಬನ್ನಿ, ನಮ್ಮೊಂದಿಗೆ ಮಾತನಾಡಿ" ಘೋಷಣೆಯೊಂದಿಗೆ ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ: ಪೊಲೀಸರಿಂದ ತೆರವು
 • ಕಾಶ್ಮೀರದಲ್ಲಿ ಮೂವರು ಉಗ್ರರ ಮನೆಗಳ ಮೇಲೆ ಭದ್ರತಾ ಪಡೆಯಿಂದ ದಾಳಿ
 • ಬಾಲಾಕೋಟ್ ಸರ್ಜಿಕಲ್ ದಾಳಿಗೆ ವರ್ಷಪೂರ್ಣ
 • ಅಮೂಲ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ
 • ದೆಹಲಿ ಗಲಭೆ, ಹಿಂಸಾಚಾರ ಮೃತರ ಸಂಖ್ಯೆ 17 ಕ್ಕೆ ಏರಿಕೆ
 • ದೆಹಲಿ ಹಿಂಸಾಚಾರ ಹಿನ್ನೆಲೆ: ಹಿಂಸೆಗೆ ಪ್ರಚೋದಿಸುವ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹನಿಗಳಿಗೆ ಸರ್ಕಾರ ತಾಕೀತು
Sports Share

ಅದು ನನ್ನ ತಂಡ, ಅವರು ನನ್ನ ಹುಡುಗರು!: ಚೆಟ್ರಿ

ದೋಹಾ, ಸೆ 11 (ಯುಎನ್‌ಐ) ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಎರಡನೇ ಪಂದ್ಯದಲ್ಲಿ ಭಾರತ ಫುಟ್ಬಾಲ್‌ ತಂಡ ಏಷ್ಯನ್‌ ಚಾಂಪಿಯನ್ಸ್‌ ಕತಾರ್‌ ವಿರುದ್ಧ 0-0 ಅಂತರದಲ್ಲಿ ಡ್ರಾ ಮಾಡಿಕೊಂಡಿತು. 62ನೇ ಶ್ರೇಯಾಂಕದ ಕತಾರ್ ವಿರುದ್ಧ 103ನೇ ಶ್ರೇಯಾಂಕದ ಭಾರತ ಭಾರಿ ಪೈಪೋಟಿ ನೀಡುವ ಮೂಲಕ ಎಲ್ಲರ ಗಮನ ಸೆಳೆಯಿತು. ಆ ಮೂಲಕ ಮೊದಲನೇ ಅಂಕ ತನ್ನ ಖಾತೆಗೆ ಸೇರಿಸಿಕೊಂಡಿತು.
ಅನಾರೋಗ್ಯದಿಂದಾಗಿ ನಿಯಮಿತ ನಾಯಕ ಸುನೀಲ್‌ ಚೆಟ್ರಿ ಅನುಪಸ್ಥಿಯಲ್ಲಿ ಗುರುಪ್ರೀತ್‌ ಸಿಂಗ್‌ ಸಂಧು ಅವರು ತಂಡವನ್ನು ಮುನ್ನಡೆಸಿದ್ದರು. ಅಮೋಘ ಗೋಲ್‌ ಕೀಪಿಂಗ್‌ ಮೂಲಕ ಗುರುಪ್ರೀತ್‌ ಸಿಂಗ್‌ ಸಂಧು ಅವರು ಕತಾರ್‌ ತಂಡದ ಹಲವು ಬೆಂಕಿ ಹೊಡೆತಗಳನ್ನು ನಿಯಂತ್ರಿಸಿದ್ದರು.
ಪಂದ್ಯದ ಬಳಿಕ ಟ್ವೀಟ್‌ ಮಾಡಿದ್ದ ಸುನೀಲ್‌ ಚೆಟ್ರಿ, " ಆತ್ಮೀಯ ಭಾರತ, ಅದು ನನ್ನ ತಂಡ ಹಾಗೂ ಅವರೆಲ್ಲ ನಮ್ಮ ಹುಡುಗರು! ಈ ಸನ್ನಿವೇಶದಲ್ಲಿ ನಾನೆಷ್ಟು ಹೆಮ್ಮೆ ಪಡುತ್ತಿದ್ದೇನೆಂದರೆ ವಿವರಿಸಲು ಸಾಧ್ಯವಾಗುತ್ತಿಲ್ಲ. ಅಂಕಪಟ್ಟಿಯಲ್ಲಿ ದೊಡ್ಡ ಫಲಿತಾಂಶ ನಮ್ಮ ಪರ ಬಂದಿಲ್ಲ. ಆದರೆ, ಹೋರಾಟದ ವಿಷಯದಲ್ಲಿ ಅದು ಪಡೆಯುವಷ್ಟು ದೊಡ್ಡದಾಗಿದೆ. ಇದರ ಶ್ರೇಯ ಕೋಚಿಂಗ್‌ ಹಾಗೂ ಡ್ರೆಸ್ಸಿಂಗ್‌ ಕೊಠಡಿಯ ಸಿಬ್ಬಂದಿಗೆ ಸಲ್ಲಬೇಕು" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇತ್ತೀಚಿಗಷ್ಟೆ ಅರ್ಜುನ ಪ್ರಶಸ್ತಿ ಗೌರವಕ್ಕೆ ಭಾಜನರಾಗಿರುವ ಬೆಂಗಳೂರು ಎಫ್‌ಸಿ ತಂಡದ ಗುರುಪ್ರೀತ್‌ ಸಿಂಗ್‌ ಸಂಧು ಪಂದ್ಯವೀಡಿ ಎದುರಾಳಿ ಮುಂಚೂಣಿ ಆಟಗಾರರನ್ನು ಗೋಲು ಗಳಿಸುವ ಪ್ರಯತ್ನವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಕತಾರ್‌ ಸ್ಟ್ರೈಕರ್‌ಗಳು ಸುಮಾರು 27 ಬಾರಿ ಗೋಲಿನ ಕಡೆ ಬಾರಿಸಿದ್ದ ಶಾಟ್‌ಗಳನ್ನು ಸಂಧು ತಡೆಯುವಲ್ಲಿ ಸಫಲರಾಗಿದ್ದರು. ಇದರಿಂದ ಹೆಚ್ಚಿನ ಸಂತಸಕ್ಕೆ ಒಳಗಾದ ನೂತನ ಕೋಚ್‌ ಇಗೋರ್‌ ಸ್ಟಿಮ್ಯಾಕ್‌ ಅವರು ಪಂದ್ಯ ಗೆದ್ದಷ್ಟೆ ಖುಷಿಪಟ್ಟರು.
ಎದುರಾಳಿ ಕತಾರ್‌ ತಂಡಕ್ಕೆ ಹಲವು ಬಾರಿ ಗೋಲು ಗಳಿಸುವ ಅವಕಾಶ ಒದಗಿ ಬಂದಿತ್ತು. ಇಸ್ಮಾಯಿಲ್‌ ಮೊಹಮ್ಮದ್‌ 85ನೇ ನಿಮಿಷದಲ್ಲಿ ಗೋಲಿನತ್ತ ಬಲವಾಗಿ ಹೊಡೆದ ಚೆಂಡನ್ನು ಗುರುಪ್ರೀತ್‌ ಸಿಂಗ್‌ ಸಂಧು ತಡೆದರು. ಆ ಮೂಲಕ ತಂಡವನ್ನು ಸೋಲಿನ ಭೀತಿಯಿಂದ ಪಾರು ಮಾಡಿದರು.
ಭಾರತ ಮೊದಲನೇ ಪಂದ್ಯದಲ್ಲಿ ಒಮನ್‌ ವಿರುದ್ಧ 1-2 ಅಂತರದಲ್ಲಿ ಸೋಲು ಅನುಭವಿಸಿತ್ತು. ಅಕ್ಟೋಬರ್‌ 15 ರಂದು ಭಾರತ ತನ್ನ ಮುಂದಿನ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಸೆಣಸಲಿದೆ.
ಯುಎನ್‌ಐ ಆರ್‌ಕೆ 1224
More News

ಮಾರ್ಚ 2ರಿಂದ ಚೆನ್ನೈ ಅಭ್ಯಾಸ

25 Feb 2020 | 7:24 PM

 Sharesee more..

ಏಷ್ಯಾ, ವಿಶ್ವ ಇಲೆವೆನ್ ತಂಡ ಪ್ರಕಟ

25 Feb 2020 | 7:23 PM

 Sharesee more..
ರನ್ ಹೊಳೆ ಹರಿಸಿದರೂ ಟೆಸ್ಟ್‌ನಲ್ಲಿ ರಾಹುಲ್‌ಗೆ ಅವಕಾಶವಿಲ್ಲ ಏಕೆ ? : ಕಪಿಲ್ ದೇವ್

ರನ್ ಹೊಳೆ ಹರಿಸಿದರೂ ಟೆಸ್ಟ್‌ನಲ್ಲಿ ರಾಹುಲ್‌ಗೆ ಅವಕಾಶವಿಲ್ಲ ಏಕೆ ? : ಕಪಿಲ್ ದೇವ್

25 Feb 2020 | 7:03 PM

ನವದೆಹಲಿ, ಫೆ 25 (ಯುಎನ್ಐ) ಸೀಮಿತ ಓವರ್‌ಗಳ ಸ್ವರೂಪದಲ್ಲಿ ಅತ್ಯದ್ಭುತ ಪ್ರದರ್ಶನದ ಹೊರತಾಗಿಯೂ ನ್ಯೂಜಿಲೆಂಡ್ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಕೆ.ಎಲ್ ರಾಹುಲ್ ಅವರನ್ನು ಕೈ ಬಿಟ್ಟಿರುವುದನ್ನು ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರು ತೀವ್ರವಾಗಿ ಖಂಡಿಸಿದ್ದಾರೆ.

 Sharesee more..