Wednesday, Jul 8 2020 | Time 05:58 Hrs(IST)
National Share

ಅನಂತ್‍ ಕುಮಾರ್ ಹೆಗಡೆ ಹೇಳಿಕೆಗೆ ‘ಮಹಾ ವಿಕಾಸ್ ಅಘಾಡಿ’ ಖಂಡನೆ

ಮುಂಬೈ, ಡಿ 2 (ಯುಎನ್‌ಐ) ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತಮ್ಮ 80 ಗಂಟೆಗಳ ಅಧಿಕಾರಾವಧಿಯಲ್ಲಿ ‘40,000 ಕೋಟಿ ರೂ.ಗಳನ್ನು ಮತ್ತೆ ಕೇಂದ್ರಕ್ಕೆ ವರ್ಗಾಯಿಸಿದ್ದಾರೆ.’ ಎಂಬ ಬಿಜೆಪಿ ಸಂಸದ ಅನಂತ್ ಕುಮಾರ್‍ ಹೆಗಡೆ ಅವರ ಆರೋಪಕ್ಕೆ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿಕೂಟವಾದ ‘ಮಹಾ ವಿಕಾಸ್ ಅಘಾಡಿ’ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

ಈ ಕುರಿತಂತೆ ಪ್ರತಿಕ್ರಿಯಿಸಿರುವ ಎನ್‌ಸಿಪಿ ರಾಷ್ಟ್ರೀಯ ವಕ್ತಾರ ನವಾಬ್ ಮಲಿಕ್, ‘ಇಷ್ಟು ದೊಡ್ಡ ಮೊತ್ತವಾದ 40,000 ಕೋಟಿ ರೂ.ಗಳನ್ನು ಮತ್ತೆ ಕೇಂದ್ರಕ್ಕೆ ವರ್ಗಾಯಿಸಲು ಸಾಧ್ಯವಿಲ್ಲ. ಮಹಾರಾಷ್ಟ್ರದಲ್ಲಿ ಬಿಜೆಪಿಯ ಸೋಲನ್ನು ಮರೆಮಾಚಲು ಈ ಹೇಳಿಕೆಯನ್ನು ಹರಡಲಾಗಿದೆ. ಇಷ್ಟಾದರೂ ಇದು ನಿಜವೇ ಆಗಿದ್ದರೆ, ರಾಜ್ಯಕ್ಕೆ ಭಾರೀ ಅನ್ಯಾಯವಾಗಿದೆ. ಇದು ಗಂಭೀರ ಸ್ವರೂಪಗಳನ್ನು ಪಡೆದುಕೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆಗೆ ಕಾರಣವಾಗಲಿದೆ. ಏಕೆಂದರೆ ಇದರ ಜ್ವಾಲೆ ದೇಶಾದ್ಯಂತ ಹರಡುತ್ತದೆ.’ ಎಂದು ಹೇಳಿದ್ದಾರೆ.
ಈ ವರದಿಯ ಬಗ್ಗೆ ಪ್ರತಿಕ್ರಿಯಿಸಿರುವ ಶಿವಸೇನಾ ಸಂಸದ ಸಂಜಯ್‍ ರಾವತ್, ‘ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಹಿನ್ನಡೆ ಮತ್ತು ವಿಶ್ವಾಸಘಾತುಕತನ’ ಎಂದು ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಮೂರು ಪಕ್ಷಗಳ ಮೈತ್ರಿಯ ಏಕತೆ ಮತ್ತು ಉದ್ದೇಶಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಹೇಳಿಕೆ ಇದಾಗಿದೆ ಎಂದು ಮೈತ್ರಿಕೂಟದ ನಾಯಕರು ಹೇಳಿದ್ದಾರೆ.
ನ 23 ರಂದು ಅಧಿಕಾರ ವಹಿಸಿಕೊಂಡ ಅಲ್ಪಾವಧಿಯ 80 ಗಂಟೆಗಳ ಸರ್ಕಾರದ ಹಿಂದಿನ ಉದ್ದೇಶವನ್ನು ಕೆಲವರು ಪ್ರಶ್ನಿಸುವುದರೊಂದಿಗೆ ಸಾಮಾಜಿಕ ಮಾಧ್ಯಮವೂ ಇಂದು ಮಿಶ್ರ ಪ್ರತಿಕ್ರಿಯೆಗಳೊಂದಿಗೆ ಗೊಂದಲಕ್ಕೀಡಾಗಿತ್ತು.

ಯುಎನ್‍ಐ ಎಸ್‍ಎಲ್‍ಎಸ್‍ 2231
More News
ನಿತಿನ್‍ ಗಡ್ಕರಿ ಅಧ್ಯಕ್ಷತೆಯಲ್ಲಿ ಮೂಲಸೌಕರ್ಯ ಕುರಿತ ತಂಡದ ಸಭೆ: ಕರ್ನಾಟಕದ ಪ್ರತಿನಿಧಿಗಳೂ ಭಾಗಿ

ನಿತಿನ್‍ ಗಡ್ಕರಿ ಅಧ್ಯಕ್ಷತೆಯಲ್ಲಿ ಮೂಲಸೌಕರ್ಯ ಕುರಿತ ತಂಡದ ಸಭೆ: ಕರ್ನಾಟಕದ ಪ್ರತಿನಿಧಿಗಳೂ ಭಾಗಿ

07 Jul 2020 | 8:58 PM

ನವದೆಹಲಿ, ಜುಲೈ 7 (ಯುಎನ್‍ಐ)- ಕೇಂದ್ರ ಭೂಸಾರಿಗೆ, ಹೆದ್ದಾರಿ ಹಾಗೂ ಸಾರಿಗೆ ಖಾತೆ ಸಚಿವ ನಿತಿನ್‍ ಗಡ್ಕರಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಮೂಲಸೌಕರ್ಯ ಕುರಿತ ತಂಡದ ಸಭೆಯಲ್ಲಿ 187 ಹೆದ್ದಾರಿಗಳ ಯೋಜನೆಗಳಿಗೆ ಬಾಕಿ ಇರುವ ಅರಣ್ಯ ಇಲಾಖೆ ಒಪ್ಪಿಗೆಗಳ ಕುರಿತು ಚರ್ಚಿಸಲಾಯಿತು.

 Sharesee more..