Monday, Mar 1 2021 | Time 18:50 Hrs(IST)
 • ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಬೋನಿಗೆ ಬಿದ್ದ ಹೆಣ್ಣು ಹುಲಿ
 • ವಿಮಾನ ನಿಲ್ದಾಣದಲ್ಲಿ ಧರಣಿ ಮುಂದುವರಿಸಿರುವ ಚಂದ್ರಬಾಬುನಾಯ್ಡು
 • ನನಗೇಕೆ ಕೋವಿಡ್ ಲಸಿಕೆ ಯುವ ಜನರಿಗೆ ನೀಡಿ: ಮಲ್ಲಿಕಾರ್ಜುನ ಖರ್ಗೆ
 • ಅಮಿತ್ ಶಾ ವಿರುದ್ದ ಕ್ರಿಮಿನಲ್ ದಾವೆ ಹೂಡುವೆ ; ಮಾಜಿ ಮುಖ್ಯಮಂತ್ರಿ ನಾರಾಯಣ ಸ್ವಾಮಿ
 • ರೇಣಿಗುಂಟ ವಿಮಾನ ನಿಲ್ದಾಣದಲ್ಲಿ ಚಂದ್ರಬಾಬು ನಾಯ್ಡು ಪೊಲೀಸ್ ವಶಕ್ಕೆ: ಟಿಡಿಪಿ ಮುಖಂಡರಿಂದ ಖಂಡನೆ
 • ಪ್ರಧಾನಿ ಮೋದಿ ಉದಾಹರಣೆಯಾಗಿ ನಿಂತಿದ್ದಕ್ಕೆ ಧನ್ಯವಾದಗಳು ; ಡಾ|| ಹರ್ಷವರ್ಧನ್
 • ಕೊವಿಡ್ -19 ಲಸಿಕೆ ಅಭಿಯಾನಕ್ಕೆ ಎಸ್ ಬಿಐನಿಂದ 11 ಕೋಟಿ ರೂ ನೆರವು
 • ಪ್ರಧಾನಿ ಮೋದಿಗೆ ಕೋವಾಕ್ಸಿನ್ ಲಸಿಕೆ ಕೋವಿಶೀಲ್ಡ್ ಪರಿಣಾಮಕಾರಿತ್ವದ ಬಗ್ಗೆ ಸಂಸದ ಒವೈಸಿ ಅನುಮಾನ
 • ಈಶಾನ್ಯ ಆಫ್ಘಾನಿಸ್ತಾನದಲ್ಲಿ ರಕ್ಷಣಾ ಪಡೆಗಳಿಂದ 30 ತಾಲಿಬಾನ್ ಉಗ್ರರ ಹತ್ಯೆ
 • ಸೂರತ್ಕಲ್ ಬೀಚ್ ನಲ್ಲಿ ಮುಳುಗಿ ಶಿವಮೊಗ್ಗ ಬಾಲಕ ಸಾವು
 • ದೇಶದಲ್ಲಿ ಕೋವಿಡ್-19 ಚೇತರಿಕೆ ಪ್ರಮಾಣ ಶೇ 97 07: ಗುಣಮುಖರಾದವರ ಸಂಖ್ಯೆ 1 07ಕ್ಕೆ ಏರಿಕೆ
 • ಚಂದ್ರಬಾಬು ನಾಯ್ಡು ಪೋಲಿಸ್ ವಶಕ್ಕೆ, ವಿಮಾನ ನಿಲ್ದಾಣದಲ್ಲೇ ಪ್ರತಿಭಟನೆ
 • ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳ, ಗ್ರಾಹಕರ ಜೇಬಿಗೆ ನಿತ್ಯವೂ ಕತ್ತರಿ…!
 • ಪೆಟ್ರೋಲ್, ಡೀಸೆಲ್ ಬೆಲೆ ಸತತ ಎರಡನೇ ದಿನವೂ ಸ್ಥಿರ
 • ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಂಡ ಪ್ರಧಾನಿ
Entertainment Share

ಅಪಮಾನಿಸಬೇಡಿ: ದರ್ಶನ್ ಫ್ಯಾನ್ಸ್, ಖಾಸಗಿ ಮಾಧ್ಯಮವೊಂದರ ವರ್ತನೆಗೆ ಜಗ್ಗೇಶ್ ಆಕ್ರೋಶ

ಬೆಂಗಳೂರು, ಫೆ 23 (ಯುಎನ್ಐ) ಮೈಸೂರು ಜಿಲ್ಲೆ ಬನ್ನೂರಿನಲ್ಲಿ ನಡೆದ ಘಟನೆ ಹಾಗೂ ಖಾಸಗಿ ಮಾಧ್ಯಮವೊಂದು ತಮ್ಮ ಬಗ್ಗೆ ಮಾಡಿರುವ ಅಪಮಾನದ ಬಗ್ಗೆ ನಟ ಜಗ್ಗೇಶ್, ತೀವ್ರ ಆಕ್ರೋಶ, ಬೇಸರ ವ್ಯಕ್ತಪಡಿಸಿದ್ದಾರೆ.

ದೀಕ್ಷೆ ಪಡೆದುಕೊಂಡು, ಮಠ, ಮಂದಿರ, ನಟನೆ, ಸಂಸಾರ, ಕನ್ನಡ, ಕನ್ನಡಿಗರು ಎಂದು ನನ್ನ ಪಾಡಿಗೆ ಇದ್ದೇನೆ. ಆದಾಗ್ಯೂ, ರೌಡಿಸಂಗೆ ಪ್ರಚೋದನೆ ನೀಡುವ ರೀತಿಯಲ್ಲಿ 58 ವರ್ಷದ ನನ್ನನ್ನು ಖಾಸಗಿ ಮಾಧ್ಯಮವೊಂದು ಅಪಮಾನಿಸಿದೆ ಎಂದು ಟ್ವಿಟರ್ ಮೂಲಕ ಜಗ್ಗೇಶ್ ಹೇಳಿದ್ದಾರೆ.

“ಬನ್ನೂರಿನಲ್ಲಿ ಉದ್ರೇಕಗೊಂಡಿದ್ದ 20ಕ್ಕೂ ಹೆಚ್ಚು ಜನರು ದರ್ಶನ್ ಫ್ಯಾನ್ಸ್ ಹೆಸರಿನಲ್ಲಿ ಬಂದು ನನ್ನ ಜಾತಿ ಬಗ್ಗೆ ಮಾತನಾಡಿದರು. ಅಂತಹ ಸಂದರ್ಭದಲ್ಲಿ ನಾನೊಬ್ಬನೇ ಏನು ಮಾಡಬಹುದಿತ್ತು? ಆದರೂ ಓಡಿಹೋಗದೆ ಎದುರಿಸಲಿಲ್ಲವೇ. ಆ ಸಂದರ್ಭವನ್ನು ಖಾಸಗಿ ಚಾನಲ್ ಒಂದು ‘ಕಾಗೆ ಹಾರಿಸಿದ್ದಾರೆ’ ಎಂದು ಹೇಳುವುದು ಎಷ್ಟರಮಟ್ಟಿಗೆ ಸರಿ?” ಕಾಗೆ ಹಾರಿಸುವುದಿದ್ದರೆ ರಾಜಕಾರಣದಲ್ಲಿ ಬೇಕಾದ ಸ್ಥಾನ ಪಡೆಯಬಹುದಿತ್ತು. ಆದರೆ ಯಾರ ಬೂಟನ್ನೂ ನೆಕ್ಕುವ ಮನಃಸ್ಥಿತಿ ನನ್ನದಲ್ಲ" ಎಂದಿದ್ದಾರೆ.

“ಡಾ. ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್ ಹೋದ ಬಳಿಕ ಕನ್ನಡದ ಸ್ವಾಭಿಮಾನ ಹಾಳಾಗಿದೆ. ಚಿತ್ರರಂಗದ ಹಿರಿಯರಾಗಿ ನಾನು, ಶಿವರಾಜ್ ಕುಮಾರ್, ರಮೇಶ್ ಉಳಿದ್ದೇವೆ. ಮುಂದೆ ವಿಧಿವಶರಾದ ಬಳಿಕ ತಿಥಿ ಮಾಡಿ ಆನಂದಪಡಿ” ಎಂದು ಕೋಪ, ನೋವು ಮಿಶ್ರಿತ ಭಾವನೆ ಹೊರಹಾಕಿದ್ದಾರೆ.

ಪುಂಡಾಟಿಕೆಗೆ ಯಾರೂ ಕುಮ್ಮಕ್ಕು ನೀಡಬಾರದು. ನಾನು ಚಿತ್ರೋದ್ಯಮಕ್ಕೆ ಇನ್ನೂ ಹತ್ತಾರು ವರ್ಷ ಕೆಲಸ ಮಾಡಬೇಕು ಎಂದಿರುವೆ. ಒಬ್ಬ ನಟ ಅಥವಾ ಆತನ ಅಭಿಮಾನಿಗಳು ನನಗೆ ಬುದ್ಧಿ ಕಲಿಸಲು ಸಾಧ್ಯವಿಲ್ಲ. ರಾಯರು ಹಾಗೂ ಕೋಟ್ಯಂತರ ಕನ್ನಡಿಗರಿದ್ದಾರೆ ಎಂದಿದ್ದಾರೆ.

ಚಿತ್ರೋದ್ಯಮದ ಬಗ್ಗೆಯೂ ಮಾತನಾಡುತ್ತಾ, ಈ ಹಿಂದೆ ಇದ್ದಂತಹ ವಾತಾವರಣ ಉದ್ಯಮದಲ್ಲಿಲ್ಲ. ತಾನೊಬ್ಬನೇ ಬೆಳೆಯಬೇಕು ಎಂದು ಉಳಿದವರನ್ನು ತುಳಿಯುವ ಕೆಲಸವಾಗುತ್ತಿದೆ. ಇಂತಹವರಿಗೆ ಪ್ರಚೋದಿಸಬೇಡಿ. ಒಂದು ಕಾಲದಲ್ಲಿ ನನ್ನನ್ನು ಬೆಳೆಸಿದ ಮಾಧ್ಯಮದವರಿಗೆ ಗೌರವ ನೀಡುತ್ತಿದ್ದೇನೆ. ಆದರೆ ಈಗಾಗುತ್ತಿರುವ ಬೆಳವಣಿಗೆ ಅನರ್ಥಕ್ಕೆ ಹಾದಿಯಾಗುತ್ತದೆ. ನನ್ನ ಹೆಸರಿನಲ್ಲಿಯೂ 112 ಅಭಿಮಾನಿಗಳ ಸಂಘವಿದೆ. ಅವರು ಯಾರೂ ನನ್ನ ಮೇಲಿನ ಘೇರಾವ್ ಬಗ್ಗೆ ದನಿಯೆತ್ತದಂತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ, 'ಆತ್ಮೀಯರೆ ನನಗೆ ನೀವು ನಿಮಗೆ ನಾನು ಇನ್ನುಮುಂದೆ! ಇನ್ನು ಮುಂದೆ ನನ್ನ ಉದ್ಯಮದ ಯಾರ ಹುಟ್ಟುಹಬ್ಬ, ಸಿನಿಮಾ, ಸ್ನೇಹ, ಕಾರ್ಯಕ್ರಮ, ಭೇಟಿ, ಹರಟೆ ನನ್ನಿಂದ ಇರುವುದಿಲ್ಲ. ಮುಂದೆ ನನ್ನ ಸಿನಿಮಾ, ನನ್ನ ಜೀ ಟಿವಿ ಶೋಗೆ ಮೀಸಲು ಬದುಕು. ಕಾರಣ, ತುಂಬ ತಾಮಸವಾಗಿದೆ ನಮ್ಮ ರಂಗ. ದೊಡ್ಡವರು ಬದುಕಿದ್ದಾಗಲೇ ಅಪಮಾನಿಸಿ ದೊಡ್ಡವರಾಗುವ ಹುನ್ನಾರ ಪುರುಷರ ಸಾಮ್ರಾಜ್ಯ ಆಗಿದೆ ರಂಗ' ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದರು.

ಸೋಮವಾರ ಫೆಬ್ರವರಿ 22ರಂದು ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದ ಜಗ್ಗೇಶ್ ಅವರನ್ನು ದರ್ಶನ್ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದರು. ಆ ಘಟನೆ ಬಳಿಕ ಜಗ್ಗೇಶ್‌ ಅವರು ಟ್ವೀಟರ್‌ ಮೂಲಕ ತಮ್ಮ ಪ್ರತಿಕ್ರಿಯೆ ತಿಳಿಸಿದ್ದಾರೆ. ಚಿತ್ರರಂಗದ ಯಾರೊಂದಿಗೂ ಇನ್ಮುಂದೆ ಹುಟ್ಟುಹಬ್ಬ, ಸಿನಿಮಾ, ಸ್ನೇಹ, ಭೇಟಿ, ಹರಟೆ, ಕಾರ್ಯಕ್ರಮ ಇಟ್ಟುಕೊಳ್ಳುವುದಿಲ್ಲ ಎಂದು ಅವರು ನಿರ್ಧಾರ ತೆಗೆದುಕೊಂಡಿದ್ದಾರೆ.

ಒಟ್ಟಾರೆ ಪ್ರಕರಣದ ಬಗ್ಗೆ ಜಗ್ಗೇಶ್‌ ಅಭಿಮಾನಿಗಳು ಹಲವು ಬಗೆಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆಲವು ಸುದ್ದಿ ವಾಹಿನಿಗಳಲ್ಲಿ ಜಗ್ಗೇಶ್‌ ಬಗ್ಗೆ ವರದಿ ಪ್ರಸಾರವಾದ ರೀತಿ ಸರಿಯಿಲ್ಲ ಎಂದು ಜಗ್ಗೇಶ್‌ ಫ್ಯಾನ್ಸ್‌ ಬೇಸರ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಉತ್ತರ ನೀಡಿರುವ ಅವರು, 'ಪುಟವಿಟ್ಟಷ್ಟೂ ಚಿನ್ನ ಮಿರುಗುತ್ತದೆ. ಯಾವುದೋ ಕಾಲದಿಂದ ತಪ್ಪಿಲ್ಲಾ ಈ ಅಪಮಾನ. ಆದರೂ ಅದೇ ಅವಮಾನ 6 ಕೋಟಿ ಹೃದಯದಲ್ಲಿ ಅಲುಗದಂತೆ ಕೂರಿಸಿದೆ. ಅಷ್ಟು ಮಾತ್ರ ಸಾಕು. ಅವರಿಗೂ ನನ್ನ ಧನ್ಯವಾದ' ಎಂದಿದ್ದಾರೆ ಜಗ್ಗೇಶ್‌.
ಯುಎನ್ಐ ಎಸ್‍ಎ 1254
More News

"ದಾರಿ ಯಾವುದಯ್ಯ ವೈಕುಂಠಕೆ" 6 ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ!

27 Feb 2021 | 9:24 PM

ಬೆಂಗಳೂರು, ಫೆ 27 (ಯುಎನ್ಐ) ಕನ್ನಡ ಚಿತ್ರರಂಗ ಇದೀಗ ಬೇರೆ ಭಾಷಾ ಚಿತ್ರರಂಗಗಳಿಗೆ ಹೋಲಿಸಿದರೆ ತುಸು ಗುಣಮಟ್ಟದ ಚಿತ್ರಗಳನ್ನೇ ಕೊಡುತ್ತ ಬಂದಿವೆ.

 Sharesee more..