Sunday, Apr 5 2020 | Time 14:28 Hrs(IST)
 • ಸೆಲ್ಫ್ ಕ್ವಾರೆಂಟೈನ್‌ಗೆ ಒಳಗಾಗಿರುವ ಸಿ ಆರ್ ಪಿ ಎಫ್ ಮುಖ್ಯಸ್ಥ ಎ ಪಿ ಮಹೇಶ್ವರಿ
 • ರೈತರ ಸ್ಥಿತಿಗತಿ ಅವಲೋಕನ: ಏ 6 ರಿಂದ ಸಚಿವ ಬಿ ಸಿ ಪಾಟೀಲ್ ಜಿಲ್ಲಾ ಪ್ರವಾಸ
 • ಕೋವಿಡ್ ಪ್ರಕರಣ ಹೆಚ್ಚಳ: ಲಾಕ್ ಡೌನ್ ಕಟ್ಟುನಿಟ್ಟಾಗಿ ಪಾಲಿಸಲು ಮುಖ್ಯಮಂತ್ರಿ ಮನವಿ
 • ಆಸ್ಪತ್ರೆಗೆ ಹೋಗುತ್ತಿದ್ದೆ, ಪಾರ್ಟಿಗಲ್ಲ: ನಟಿ ಶರ್ಮಿಳಾ ಮಾಂಡ್ರೆ ಸ್ಪಷ್ಟನೆ
 • ಪಾಕಿಸ್ತಾನದಲ್ಲಿ ಏಪ್ರಿಲ್ ಅಂತ್ಯಕ್ಕೆ ಕೊರೊನಾ ಸೋಂಕಿತರ ಸಂಖ್ಯೆ 50 ಸಾವಿರಕ್ಕೆ ಏರಿಕೆ
 • ಲಾಕ್‌ಡೌನ್ ಉಲ್ಲಂಘಿಸಿ ಕಾರಿನಲ್ಲಿ ಆಗಮಿಸಿ, ಪೊಲೀಸರಿಗೆ ಬೆದರಿಕೆ ಹಾಕಿದ ಇಬ್ಬರ ಬಂಧನ
 • ರಕ್ಕಸ ಕೊರೊನಾ; ಅಮೆರಿಕಾ, ಸೌದಿಯಲ್ಲಿ ಇಬ್ಬರು ಭಾರತೀಯರ ಸಾವು
 • ರಾಜ್ಯದ ಜನಹಿತವೇ ಪರಮೋಚ್ಚ: ಕರ್ನಾಟಕ-ಕೇರಳ ಗಡಿ ಮುಚ್ಚಿರುವ ಹಿಂದೆ ಪೂರ್ವಗ್ರಹಗಳಿಲ್ಲ: ಎಚ್‌ಡಿಡಿಗೆ ಪತ್ರ ಬರೆದ ಮುಖ್ಯಮಂತ್ರಿ
 • ರೋಗ ಪತ್ತೆ ಕಿಟ್‌ಗಳ ರಫ್ತಿನ ಮೇಲೆ ಸಂಪೂರ್ಣ ನಿಷೇಧ
 • ಕೊರೊನಾ - ಸಾವಿನ ಸಂಖ್ಯೆ ಹೆಚ್ಚಳ : ಟ್ರಂಪ್
 • ತಮಿಳುನಾಡಿನಲ್ಲಿ ಕರೋನವೈರಸ್‍ಗೆ ಇನ್ನೂ ಇಬ್ಬರು ಬಲಿ: ಸಾವಿನ ಸಂಖ್ಯೆ 5ಕ್ಕೆ ಏರಿಕೆ
 • ಕೊರೊನಾ ಅಲರ್ಟ್; ಮಹಾರಾಷ್ಟ್ರದಲ್ಲಿ ಭಾನುವಾರ ಒಂದೇ ದಿನ ೨೬ ಹೊಸ ಪ್ರಕರಣ
 • ಬಾಬು ಜಗಜೀವನ್‌ ರಾಮ್‌ ಜಯಂತಿ: ಪ್ರಧಾನಿ ಗೌರವ ಸಲ್ಲಿಕೆ
 • ಕೋವಿಡ್‌-19: ಸೋಂಕು ಪ್ರಕರಣಗಳ ಸಂಖ್ಯೆ 3374ಕ್ಕೇರಿಕೆ: 77 ಸಾವು, 266 ಮಂದಿ ಗುಣಮುಖ
 • ಬಾಬು ಜಗಜೀವನ್‌ ರಾಮ್‌ ಜಯಂತಿ: ಗಣ್ಯರಿಂದ ಗೌರವ ಸಲ್ಲಿಕೆ
Entertainment Share

ಅಪ್ಪನಿಗೆ ಐರಾಳ ಸ್ಪೂನ್ ಫೀಡ್!

ಬೆಂಗಳೂರು, ಮಾ 24 (ಯುಎನ್‍ಐ) ಕೊರೋನಾ ವೈರಾಣು ನಿಯಂತ್ರಿಸುವ ನಿಟ್ಟಿನಲ್ಲಿ ಇಡೀ ರಾಜ್ಯ ಸ್ತಬ್ಧವಾಗಿದೆ. ಸಿನಿಮಾ, ಸೀರಿಯಲ್ ಎಲ್ಲವೂ ಕ್ಯಾನ್ಸಲ್ ಆಗಿರುವ ಪರಿಣಾಮ ಸ್ಟಾರ್ ನಟ-ನಟಿಯರು ತಮ್ಮ ಕುಟುಂಬದವರ ಜೊತೆ ಕಾಲ ಕಳೆಯುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಕೂಡ ಇದಕ್ಕೆ ಹೊರತಾಗಿಲ್ಲ. ಸಂಪೂರ್ಣ ಸಮಯವನ್ನು ಕುಟುಂಬಕ್ಕೆ ಮೀಸಲಿಡುವ ಸಮಯಾವಕಾಶವನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ.

ಇದಕ್ಕೆ ಕಾರಣ ಪುಟ್ಟ ಕಂದ ಐರಾ. ಹೌದು. ಅವಳೊಂದಿಗೆ ಆಡುತ್ತ, ಆಟವಾಡಿಸುತ್ತ, ಮಗನ ಆಟಪಾಟ ನೋಡುತ್ತ ಯಶ್ ಆರಾಮವಾಗಿದ್ದಾರೆ.

ಐರಾ ಹೇಳಿದ ಹಾಗೇ ಯಶ್ ಕೇಳುತ್ತಿದ್ದಾರೆ. ಅಪ್ಪನಿಗೆ ಐರಾ ಸ್ಪೂನ್ ಫೀಡ್ ಮಾಡಿಸುತ್ತಿದ್ದಾಳೆ. ನೀನು ತಿಂದರೆ ಮಾತ್ರ ತಿನ್ನುತ್ತೇನೆ ಎಂದು ಯಶ್ ಹೇಳುತ್ತಿದ್ದಾರೆ. ಆದರೆ ಐರಾಗೆ ತಿನ್ನಿಸೋಕೆ ಯಶ್ ಹರಸಾಹಸ ಪಟ್ಟರೂ ವರ್ಕೌಟ್ ಆಗಿಲ್ಲ. ಐರಾ ಮಾತ್ರ ಅಪ್ಪನಿಗೆ ಮತ್ತೆ ಮತ್ತೆ ತಿನ್ನಿಸಿದ್ದಾಳೆ.

ಇದನ್ನು ರಾಧಿಕಾ ವಿಡಿಯೋ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಅಪ್ಪ- ಮಗಳ ಬಾಂಧವ್ಯದ ಈ ಸನ್ನಿವೇಶಕ್ಕೆ ಫ್ಯಾನ್ಸ್ ದಿಲ್ ಖುಷ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದುವರೆಗೂ 7 ಲಕ್ಷಕ್ಕೂ ಅಧಿಕ ಮಂದಿ ಲೈಕ್ಸ್ ಮಾಡಿದ್ದು, 5 ಸಾವಿರಕ್ಕೂ ಹೆಚ್ಚಿನ ಜನರು ಕಮೆಂಟ್ ಮಾಡಿದ್ದಾರೆ.
ಯುಎನ್‍ಐ ಎಸ್‍ಎ ವಿಎನ್ 1327