Sunday, Aug 25 2019 | Time 02:02 Hrs(IST)
International Share

ಅಫ್ಘಾನ್ ನಲ್ಲಿ ಇಬ್ಬರು ತಾಲಿಬಾನ್ ಮುಖಂಡರ ಹತ್ಯೆ

ಕಾಬೂಲ್, ಆಗಸ್ಟ್ 13 (ಸ್ಫುಟ್ನಿಕ್) ಅಫ್ಘಾನಿಸ್ತಾನದ ಪೂರ್ವ ಪ್ರದೇಶದಲ್ಲಿ ಸೇನಾ ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ತಾಲಿಬಾನ್ ಮುಖಂಡರು ಹತರಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
ಜುಮಾತ್ ಜಿಲ್ಲೆಯ ಗೋಲಾಲ್ ಗ್ರಾಮದಲ್ಲಿ ಸೇನಾ ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಹಲವು ಉಗ್ರರು ಸೇರಿ ಇಬ್ಬರು ತಾಲಿಬಾನ್ ನಾಯಕರು ಹತರಾಗಿದ್ದಾರೆ ಎಂದು ರಾಷ್ಟ್ರೀಯ ಭದ್ರತಾ ನಿರ್ದೇಶನಾಲಯದ ಮಾದರಿ ಆಧರಿಸಿ ಸುದ್ದಿ ಸಂಸ್ಥೆಯೊಂದು ಈ ವರದಿ ಮಾಡಿದೆ.
ಯುಎನ್ಐ ಪಿಕೆ ಎಸ್ಎಚ್ 1555