Saturday, Jul 11 2020 | Time 11:30 Hrs(IST)
  • ಪುಲ್ವಾಮದಲ್ಲಿ ಭದ್ರತಾ ಪಡೆಯಿಂದ ಶೋಧ ಕಾರ್ಯಾಚರಣೆ
  • ಬಾರಮುಲ್ಲಾ ಗಡಿಯಲ್ಲಿ ಒಳನುಸುಳಲು ಯತ್ನಿಸಿದ ಇಬ್ಬರು ಉಗ್ರರ ಹತ್ಯೆ
business economy Share

ಅಭಿವೃದ್ಧಿಯ ಹೊಸ ಮಾರ್ಗಕ್ಕೆ ಎಂಎಸ್‌ಎಂಇ ಎದುರಿಸುತ್ತಿರುವ ಸಮಸ್ಯೆಗಳು ನಿವಾರಿಸಬೇಕು - ವಿಶ್ವಾಸ್‍ ತ್ರಿಪಾಠಿ

ಅಭಿವೃದ್ಧಿಯ ಹೊಸ ಮಾರ್ಗಕ್ಕೆ ಎಂಎಸ್‌ಎಂಇ ಎದುರಿಸುತ್ತಿರುವ ಸಮಸ್ಯೆಗಳು ನಿವಾರಿಸಬೇಕು - ವಿಶ್ವಾಸ್‍ ತ್ರಿಪಾಠಿ
ಅಭಿವೃದ್ಧಿಯ ಹೊಸ ಮಾರ್ಗಕ್ಕೆ ಎಂಎಸ್‌ಎಂಇ ಎದುರಿಸುತ್ತಿರುವ ಸಮಸ್ಯೆಗಳು ನಿವಾರಿಸಬೇಕು - ವಿಶ್ವಾಸ್‍ ತ್ರಿಪಾಠಿ

ನವದೆಹಲಿ, ಜೂನ್ 28 (ಯುಎನ್‌ಐ) ಎಂಎಸ್‌ಎಂಇಗಳು (ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಉದ್ಯಮಗಳು) ಎದುರಿಸುತ್ತಿರುವ ಸವಾಲುಗಳನ್ನು ಸರಿಪಡಿಸುವ ಮತ್ತು ಎದುರಿಸುವ ಮೂಲಕ ಭಾರತದ ಹೊಸ ಅಭಿವೃದ್ಧಿಯ ಹಾದಿಯನ್ನು ನಿರ್ಮಿಸಬಹುದಾಗಿದೆ ಎಂದು ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ವಾಣಿಜ್ಯ ಕೈಗಾರಿಕಾ ಒಕ್ಕೂಟ (ಬ್ರಿಕ್ಸ್- ಸಿಸಿಐ)ದ ಅಧ್ಯಕ್ಷ ವಿಶ್ವಾಸ್ ತ್ರಿಪಾಠಿ ಹೇಳಿದ್ದಾರೆ.

ಇದಕ್ಕಾಗಿ ನಿಯಮಗಳನ್ನು ಸರಳೀಕರಿಸುವುದು,ಈ ವಲಯಕ್ಕೆ ಸಂಬಂಧಿಸಿದ ವಿಷಯಗಳನ್ನು ಸುಲಭಗೊಳಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.

2020ರ ಸಾಂಕ್ರಾಮಿಕ ರೋಗ ಭಾರತಕ್ಕೆ ಕಣ್ಣು ತೆರೆಯುವಂತಿರಬೇಕು. ಏಕೆಂದರೆ ಮಾರಕ ಸೋಂಕು ಜಗತ್ತನ್ನು ಅಸ್ತವ್ಯಸ್ತಗೊಳಿಸಿದೆ. ಅತ್ಯಂತ ಪ್ರಬಲ ದೇಶಗಳ ಆರ್ಥಿಕತೆಯನ್ನು ದುರ್ಬಲಗೊಳಿಸಿದೆ. 1930 ರ ನಂತರದ ತೀವ್ರ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಿದೆ ಎಂದು ತ್ರಿಪಾಠಿ ಹೇಳಿದ್ದಾರೆ.

ನಮ್ಮ ಆರ್ಥಿಕ ನೀತಿಗಳನ್ನು ರೂಪಿಸುವ ಪ್ರಾಮುಖ್ಯತೆಯನ್ನು ಇದರಿಂದ ಅರಿತುಕೊಳ್ಳಬೇಕು ಮತ್ತು ಭಾರತವನ್ನು ಅಭಿವೃದ್ಧಿಯ ಹೊಸ ಹಾದಿಗೆ ಕೊಂಡೊಯ್ಯಬಲ್ಲ ಕ್ಷೇತ್ರಗಳತ್ತ ಗಮನ ಹರಿಸಬೇಕು ಎಂದು ಯುಎನ್‌ಐ ನಿರ್ದೇಶಕರ ಮಂಡಳಿಯ ಅಧ್ಯಕ್ಷರೂ ಆಗಿರುವ ತ್ರಿಪಾಠಿ ಹೇಳಿದ್ದಾರೆ.

ಜಾಗತಿಕವಾಗಿ ಎಲ್ಲಾ ಸಂಸ್ಥೆಗಳಲ್ಲಿ ಶೇ 90ರಷ್ಟು ಪಾಲು ಹೊಂದಿರುವ, ಒಟ್ಟು ಉದ್ಯೋಗದ ಶೇ 70 ರಷ್ಟು ಹೊಂದಿರುವ ಮತ್ತು ಜಿಡಿಪಿಗೆ ಅರ್ಧದಷ್ಟು ಕೊಡುಗೆ ನೀಡುತ್ತಿರುವ ವಲಯವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಸಚಿವಾಲಯ ಎಂಎಸ್‌ಎಂಇ ದಿನವನ್ನು ಆಚರಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಕೊವಿಡ್‍ ಮತ್ತು ಭಾರತೀಯ ಆರ್ಥಿಕತೆಯು ಕುಸಿತ ತಲುಪುತ್ತಿರುವ ಸನ್ನಿವೇಶದಲ್ಲಿ ಹಣಕಾಸು ಬಿಕ್ಕಟ್ಟಿನಿಂದ ಸಣ್ಣ ಉದ್ಯಮಗಳು ಸಂಕಷ್ಟಕ್ಕೀಡಾಗಿರುವುದರಿಂದ ಎಂಎಸ್‍ಎಂಇ ದಿನ ತುಂಬಾ ಮಹತ್ವದ್ದಾಗಿದೆ ಎಂದು ಅವರು ಹೇಳಿದ್ದಾರೆ.

ಭಾರತವನ್ನು ಉದಾಹರಣೆಯನ್ನಾಗಿ ತೆಗೆದುಕೊಂಡರೆ, ಎಂಎಸ್‌ಎಂಇ ದೇಶದ ಅತಿದೊಡ್ಡ ಉದ್ಯೋಗ ಸೃಷ್ಟಿಕರ್ತ ವಲಯವಾಗಿದೆ. ಮೇಕ್ ಇನ್ ಇಂಡಿಯಾ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಅಂಕಿ-ಅಂಶಗಳಂತೆ 68 ಲಕ್ಷ ನೋಂದಾಯಿತ ಎಂಎಸ್‌ಎಂಇಗಳಿವೆ. ಈ ಪೈಕಿ 6,032,100 ಅತಿಸಣ್ಣ, 28,611 ಮಧ್ಯಮ, ಹಾಗೂ 728,516 ಸಣ್ಣ ಉದ್ಯಮಗಳಿವೆ.

ಬ್ರಿಕ್ಸ್ ಮತ್ತು ನೆರೆಯ ಮಿತ್ರ ರಾಷ್ಟ್ರಗಳು ಸೇರಿದಂತೆ ವಿವಿಧ ದೇಶಗಳಿಗೆ ರಫ್ತು ಮಾಡುವುದರಿಂದ ಎಂಎಸ್‌ಎಂಇಗಳು ನಮ್ಮ ದೇಶಕ್ಕೆ ಆದಾಯ ಸೃಷ್ಟಿಯಲ್ಲೂ ಪ್ರಮುಖ ಪಾತ್ರವಹಿಸಿವೆ. ಇತ್ತೀಚಿನ ಸರ್ಕಾರದ 'ಮೇಕ್ ಇನ್ ಇಂಡಿಯಾ' ಮತ್ತು ಈ ವಲಯವನ್ನು ಬೆಂಬಲಿಸುವ ಈ ಯೋಜನೆಯಂತಹ ಅನೇಕ ಉಪಕ್ರಮಗಳನ್ನು ಆರಂಭಿಸಿದೆ. ದೂರಸಂಪರ್ಕ, ಆರೋಗ್ಯ ಮತ್ತು ಎಲೆಕ್ಟ್ರಾನಿಕ್ಸ್‌ನಂತಹ ಕ್ಷೇತ್ರಗಳು ಭಾರತದಲ್ಲಿ ಎಂಎಸ್‌ಎಂಇ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಿವೆ ಎಂದು ತ್ರಿಪಾಠಿ ಗಮನಸೆಳೆದಿದ್ದಾರೆ.

ರಾಜ್ಯಗಳ ಪೈಕಿ ಮಹಾರಾಷ್ಟ್ರದಲ್ಲಿ 1,104,189 ಘಟಕಗಳೊಂದಿಗೆ ಅತಿ ಹೆಚ್ಚು ನೋಂದಾಯಿತ ಎಂಎಸ್‌ಎಂಇಗಳನ್ನು ಹೊಂದಿದ್ದು, ನಂತರದ ಸ್ಥಾನಗಳಲ್ಲಿರುವ ಬಿಹಾರದಲ್ಲಿ 829,694, ತಮಿಳುನಾಡುನಲ್ಲಿ 791,288, ಉತ್ತರ ಪ್ರದೇಶದಲ್ಲಿ 706,342 ಮತ್ತು ಮಧ್ಯಪ್ರದೇಶದಲ್ಲಿ 645,077 ಎಂಎಸ್‍ಎಂಇಗಳಿವೆ ಎಂದು ಅವರು ವಿವರಿಸಿದ್ದಾರೆ.

ಆದರೂ, ಭಾರತದಲ್ಲಿನ ಎಂಎಸ್ಎಂಇಗಳು ಜಿಡಿಪಿಗೆ ಅರ್ಧದಷ್ಟು ಕೊಡುಗೆ ನೀಡಿದರೂ ಸಹ ಸದಾ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿವೆ ಎಂದು ತ್ರಿಪಾಠಿ ಹೇಳಿದ್ದಾರೆ.

ಯುಎನ್ಐ ಎಸ್‍ಎಲ್ಎಸ್ 2207

.

More News
ಕೋವಿಡ್ ಯೋಧರಿಗೆ ಯಮಹಾದಿಂದ

ಕೋವಿಡ್ ಯೋಧರಿಗೆ ಯಮಹಾದಿಂದ "ವಿಶೇಷ ಹಣಕಾಸು ಯೋಜನೆ" ಘೋಷಣೆ

10 Jul 2020 | 4:10 PM

ಮುಂಬೈ, ಜು 10 (ಯುಎನ್ಐ) ಪ್ರಮುಖ ಆಟೊಮೊಬೈಲ್ ಕಂಪನಿ ಯಮಹಾ ಮೋಟಾರ್ ಇಂಡಿಯಾ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುವವರಿಗೆ ನೆರವಾಗುವ ಸಲುವಾಗಿ ಎಲ್ಲಾ ಅಧಿಕೃತ ಯಮಹಾ ಮಾರಾಟಗಾರರ ಮೂಲಕ ವಿಶೇಷ ಹಣಕಾಸು ಯೋಜನೆ ಘೋಷಿಸಿದೆ.

 Sharesee more..
'ಜಿಯೋ-ಬಿಪಿ' ಪಾಲುದಾರಿಕೆ ಪ್ರಾರಂಭಿಸಿದ ರಿಲಯನ್ಸ್

'ಜಿಯೋ-ಬಿಪಿ' ಪಾಲುದಾರಿಕೆ ಪ್ರಾರಂಭಿಸಿದ ರಿಲಯನ್ಸ್

10 Jul 2020 | 3:50 PM

ಮುಂಬೈ, ಜು.10 (ಯುಎನ್ಐ) ಇಂಧನಗಳು ಮತ್ತು ಮೊಬಿಲಿಟಿಗಾಗಿ ತಮ್ಮ ಹೊಸ ಭಾರತೀಯ ಜಂಟಿ ಉದ್ಯಮ ರಿಲಯನ್ಸ್ ಬಿಪಿ ಮೊಬಿಲಿಟಿ ಲಿಮಿಟೆಡ್‌ನ (ಆರ್‌ಬಿಎಂಎಲ್) ಪ್ರಾರಂಭವನ್ನು ಬಿಪಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಘೋಷಿಸಿವೆ.

 Sharesee more..