Saturday, Dec 5 2020 | Time 02:33 Hrs(IST)
International Share

ಅಮೆರಿಕದ ಮಾಲ್ ನಲ್ಲಿ ಗುಂಡಿನ ದಾಳಿ: 8 ಮಂದಿಗೆ ಗಾಯ

ವಾಷಿಂಗ್ಟನ್, ನವೆಂಬರ್ 21 (ಯುಎನ್ಐ ) ಅಮೆರಿಕದ ವಿಸ್ಕಾನ್ಸಿನ್‌ ನ ವೌವಾಟೋಸಾದ ಮೇಫೇರ್ ಮಾಲ್‌ ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ 8 ಮಂದಿ ಗಾಯಗೊಂಡಿದ್ದು, ದಾಳಿಕೋರರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಮಿಲ್ವಾಕೀ ಜರ್ನಲ್ ಸೆಂಟಿನೆಲ್ ತುರ್ತು ರೇಡಿಯೋ ಕೇಂದ್ರ ವರದಿ ಮಾಡಿದೆ.
ತಮ್ಮ ಅಧಿಕಾರಿಗಳು, ವಿಸ್ಕಾನ್ಸಿನ್‌ನ ವೌವಾಟೋಸಾದ ಮೇಫೇರ್ ಮಾಲ್‌ ಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ, ಸ್ಥಳೀಯ ಪೊಲೀಸರು ಕೂಡ ಸಾಥ್ ನೀಡಿದ್ದಾರೆ ಎಂದು ಎಫ್‌ ಬಿಐ ಮತ್ತು ಮಿಲ್ವಾಕೀ ಕೌಂಟಿ ಶೆರಿಫ್ ಕಚೇರಿ ಟ್ವೀಟ್ ಮಾಡಿದೆ.
"ಭದ್ರತಾ ಸಿಬ್ಬಂದಿ ಸ್ಥಳಕ್ಕೆ ತಲುಪಿದಾಗ ದಾಳಿಕೋರ ತಲೆಮರೆಸಿಕೊಂಡಿದ್ದ ಎಂದು ವಾವಟೋಸಾ ಪೊಲೀಸ್ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.
ಗಾಯಾಳುಗಳಲ್ಲಿ ಏಳು ಮಂದಿ ವಯಸ್ಕರು ಮತ್ತು ಒಬ್ಬ ಹದಿಹರೆಯದವ, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ಗಾಯಗೊಂಡವರ ಸ್ಥಿತಿ ಸ್ಥಿರವಾಗಿದೆ, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೌವಾಟೋಸಾ ಮೇಯರ್ ಡೆನ್ನಿಸ್ ಮೆಕ್‌ ಬ್ರೈಡ್ ಎಬಿಸಿ ನ್ಯೂಸ್ ಗೆ ತಿಳಿಸಿದರು.
ದಾಳಿಕೋರನನ್ನು 20ರಿಂದ 30 ವರ್ಷ ಪ್ರಾಯದ ಬಿಳಿಯ ಎಂದು ಗುರುತಿಸಲಾಗಿದೆ.
ಮಾಲ್‌ ನಲ್ಲಿ ದಾಳಿಕೋರ ದಾಳಿ ಆರಂಭಿಸುತ್ತಿದ್ದಂತೆ ಭೀತಿಗೊಳಗಾದ ಅಸಂಖ್ಯಾತ ಸಾರ್ವಜನಿಕರು ಕಟ್ಟಡದ ಒಳಗೆ ಆಶ್ರಯ ಪಡೆಯುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೋದಲ್ಲಿ ಕಂಡುಬಂದಿದೆ.
ಗುಂಡಿನ ದಾಳಿ ನಡೆದಾಗ ತಾನು ತನ್ನ 79 ವರ್ಷದ ತಾಯಿಯೊಂದಿಗೆ ಅಲ್ಲಿದ್ದೆ ಎಂದು ಶಾಪರ್ಸ್ ಜಿಲ್ ವೂಲೆ ಎಂಬವರು ಸ್ಥಳೀಯ ಸುದ್ದಿ ಕೇಂದ್ರಕ್ಕೆ ಮಾಹಿತಿ ನೀಡಿದ್ದಾರೆ.
ಯುಎನ್ಐ ಎಎಚ್ 1116