Sunday, May 31 2020 | Time 17:41 Hrs(IST)
 • ಬಾಂಗ್ಲಾದೇಶದಲ್ಲಿ ಒಂದೇ ದಿನ ಅತಿಹೆಚ್ಚು 40 ಕೊರೊನವೈರಸ್ ಸೋಂಕಿತರು ಸಾವು
 • ತಳಮಟ್ಟದವರಿಗಾಗಿ ಆನ್ ಲೈನ್ ಕೋಚಿಂಗ್ ತರಬೇತಿ ಖೇಲೋ ಇಂಡಿಯಾ ಇ ಪ್ರತಿಷ್ಠಾನ ಆರಂಭಿಸಲಿರುವ ಸಾಯ್
 • ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆಗೆ ಕರ್ನಾಟಕ ಪ್ರಾಂತ ರೈತ ಸಂಘ ತೀವ್ರ ವಿರೋಧ: ಸೋಮವಾರ ಪ್ರತಿಭಟನೆ
 • ಕೊವಿಡ್‍-19: ಪಾಕಿಸ್ತಾನದಲ್ಲಿ ಹೊಸ 88 ಸಾವು ಪ್ರಕರಣಗಳು ವರದಿ
 • ರಾಜ್ಯದಲ್ಲಿ ಸೋಮವಾರದಿಂದ ರಾತ್ರಿ 9 ರಿಂದ ಬೆ, 5 ಗಂಟೆವರೆಗೆ ಮಾತ್ರ ಕರ್ಫ್ಯೂ ಜಾರಿ
 • ಖೇಲ್ ರತ್ನಗೆ ವಿನೇಶ್ ಹೆಸರು ಶಿಫಾರಸಿಗೆ ಸಜ್ಜು
 • ಗ್ರಾಪಂ ಚುನಾವಣೆ ಮುಂದೂಡಿಕೆ: ಕೋರ್ಟ್ ಮೆಟ್ಟಿಲೇರಲು ಸಿದ್ಧತೆ- ಎಚ್‌ ಕೆ ಪಾಟೀಲ್
 • ಸ್ವಾಮೀಜಿಗಳ ಜೊತೆ ಆರ್‌ಆರ್‌ಎಸ್‌ ಮುಖ್ಯಸ್ಥ ಭಾಗವತ್ ಸಂವಾದ
 • ಮುಂದುವರಿದ ಬಿಜೆಪಿ ಬಂಡಾಯ: ನಿರಾಣಿ ವಿರುದ್ಧ ತಿರುಗಿಬಿದ್ದ ಕತ್ತಿ, ಯತ್ನಾಳ್
 • ದೇವಸ್ಥಾನ ತೆರೆಯುವ ಬಗ್ಗೆ ಆಕಾಶ್‌ ಛೋಪ್ರ ಅಸಂಬದ್ಧ ಹೇಳಿಕೆಗೆ ಅಭಿಮಾನಿಗಳು ಕೆಂಡಮಂಡಲ
 • ಕೇರಳ: ಹೆತ್ತ ತಾಯಿಯನ್ನೇ ಕತ್ತು ಸೀಳಿ ಹತ್ಯೆ ಮಾಡಿದ ಪುತ್ರ
 • ಕೋವಿಡ್-19: ರಾಯಚೂರಿನಲ್ಲಿ ಗುಣಮುಖರಾದ 34 ಮಂದಿ ಬಿಡುಗಡೆ
 • ಹೊಸಪೇಟೆಯಲ್ಲಿ 12 5 ಕೋಟಿ ವೆಚ್ಚದ ವಿವೇಕಾನಂದರ ಪ್ರತಿಮೆ: ಸಚಿವ ಆನಂದ್ ಸಿಂಗ್‌
 • ಷೇರುದಾರರ ಸಹಾಯಕ್ಕಾಗಿ ಆರ್ ಐಎಲ್ ಮೊದಲ ಎಐ ಚಾಟ್ ಬಾಟ್ ಆರಂಭ
 • ಮುಂಗಾರು ಹಂಗಾಮಿಗೆ ಸಿದ್ಧತೆ: ಬಿತ್ತನೆ ಬೀಜಗಳಿಗಿಲ್ಲ ಕೊರತೆ; 2 59 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ
National Share

ಅಯೋಧ್ಯಾ ವರದಿ 'ದೇಶದ ಪರೀಕ್ಷೆಯ ಕಾಲ’ ಜಾಮಾ ಮಸೀದಿಯ ಶಾಹಿ ಇಮಾಮ್

ನವದೆಹಲಿ, ನ ೦೮ (ಯುಎನ್‌ಐ) ಇದೇ ತಿಂಗಳ ೧೭ ಅಥವಾ ಅಷ್ಟರೊಳಗೆ ಅಯೋಧ್ಯಾ ಭೂ ವಿವಾದದ ಕುರಿತು ಸುಪ್ರೀಂಕೋರ್ಟ್ ತೀರ್ಪು ಪ್ರಕಟವಾಗಲಿದ್ದು, ಇದು ರಾಷ್ಟ್ರಕ್ಕೆ ’ಪರೀಕ್ಷಾ ಸಮಯ’ ಎಂದು ಜಾಮಾ ಮಸೀದಿಯ ಶಾಹಿ ಇಮಾಮ್ ಸೈಯದ್ ಅಹ್ಮದ್ ಬುಖಾರಿ ಹೇಳಿದ್ದಾರೆ.
"ಸಾಂವಿಧಾನಿಕ ಶ್ರೇಷ್ಠತೆಯು ಮೇಲುಗೈ ಸಾಧಿಸುತ್ತದೆ ಮತ್ತು ಕಾನೂನಿನ ನಿಯಮವು ರಾಜಿಯಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಇದು ರಾಷ್ಟ್ರಕ್ಕೆ ಪರೀಕ್ಷೆಯ ಸಮಯ ಎಂದು ಶಾಹಿ ಇಮಾಮ್ ಶುಕ್ರವಾರ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಬಾಬರಿ ಮಸೀದಿಯ ಮೊಕದ್ದಮೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ, ನಾನು ವಿವಿಧ ಭಾಗಗಳ ಹೇಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ".
"ಉಭಯ ಕೋಮಿನಲ್ಲಿ ಭಾವೋದ್ರೇಕಗಳು ಹೆಚ್ಚಾಗುತ್ತಿದ್ದರೂ, ಸಂಯಮ ಮತ್ತು ನ್ಯಾಯಾಂಗದಲ್ಲಿ ನಂಬಿಕೆಯನ್ನು ಪ್ರದರ್ಶಿಸುವಂತೆ ನಾನು ಭಾರತೀಯ ಮನಸ್ಸಾಕ್ಷಿಯನ್ನು ಒತ್ತಾಯಿಸುತ್ತೇನೆ" ಎಂದಿದ್ದಾರೆ.
ವಿವಾದದ ಬಗ್ಗೆ ತೀರ್ಪು ಹೊರಬರುವಾಗ ಶಾಂತಿ ಖಚಿತಪಡಿಸಿಕೊಳ್ಳುವಂತೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರು ಅಲ್ಪಸಂಖ್ಯಾತ ಸಮುದಾಯದ ಮುಖಂಡರಲ್ಲಿ ಮನವಿ ಮಾಡಿದ್ದಾರೆ.
ಯುಎನ್‌ಐ ಎಸ್‌ಎ ವಿಎನ್ ೧೯೩೧