Thursday, Aug 13 2020 | Time 19:57 Hrs(IST)
 • ದ್ವಿತೀಯ ಟೆಸ್ಟ್ ಗೆ ವರುಣನ ಕಾಟ
 • ಆರ್ಥಿಕತೆ ಸುಧಾರಣೆಗೆ ವುಹಾನ್‌ ಬಿಯರ್‌ ಉತ್ಸವ ಆಯೋಜನೆ
 • ಕೇರಳದಲ್ಲಿ 1,564 ಹೊಸ ಕೊವಿಡ್‍ ಪ್ರಕರಣಗಳು ದೃಢ, ಮೂವರು ಸಾವು
 • ಮನೆ, ಬೆಳೆಹಾನಿ ಕುರಿತ ವರದಿ ಶೀಘ್ರ ಸಲ್ಲಿಸಲು ಸಚಿವ ಜಗದೀಶ್ ಶೆಟ್ಟರ್ ಸೂಚನೆ
 • ನಾನು ದೀಪ ಹಚ್ಚುವವರ ಪರ, ಬೆಂಕಿ ಹಚ್ಚುವವರ ಪರವಲ್ಲ: ಕಟೀಲ್‌ಗೆ ತಿರುಗೇಟು ನೀಡಿದ ಸಿದ್ದರಾಮಯ್ಯ
 • ಚಲನಚಿತ್ರದ ಪೋಷಕ ಕಲಾವಿದರಿಗೆ ಆಲೆಯನ್ಸ್ ವಿವಿಯಿಂದ ಆರ್ಥಿಕ ನೆರವು : ಡಿಸಿಎಂ ಅಶ್ವತ್ಥ್ ನಾರಾಯಣ್
 • ಹೊಸ ದಾಖಲೆ ನಿರ್ಮಿಸಿದ ಪ್ರಧಾನಿ ನರೇಂದ್ರ ಮೋದಿ
 • ಬಿಡಿಎಲ್‌ನಿಂದ ಸ್ವದೇಶಿ ನಿರ್ಮಿತ ಎರಡು ಉತ್ಪನ್ನಗಳನ್ನು ಬಿಡುಗಡೆಗೊಳಿಸಿದ ರಾಜನಾಥ್‌
 • ರಾಮನಗರ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಮಾಲೋಚನೆ : ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಅಭಿವೃದ್ಧಿ ಬಗ್ಗೆ ಚರ್ಚೆ
 • ಆರೋಪಿ ಮನೆಗೆ ಜಮೀರ್ ಹೋಗ್ತಾರೆ ಅಂದರೆ ಘಟನೆ ಹಿಂದೆ ಯಾರಿದ್ದಾರೆ ಎನ್ನುವುದು ಸ್ಪಷ್ಟ : ಸಚಿವ ಡಾ ಕೆ ಸುಧಾಕರ್
 • ಕೋವಿಡ್‌ ಹಿನ್ನೆಲೆ: ದೇಶಾದ್ಯಂತ ಐತಿಹಾಸಿಕ ದುರ್ಗಾ ಪೂಜೆ ಆಚರಣೆಗೆ ಅಡ್ಡಿ
 • ಕೋವಿಡ್ ಸೋಂಕಿನಿಂದ ಕರುಣ್ ಚೇತರಿಕೆ
 • ಕಾವಲ್ ಭೈರಸಂದ್ರ ಗಲಭೆ ಪ್ರಕರಣದ ಸೂಕ್ತ ತನಿಖೆ ನಡೆಸುವಂತೆ ಸರ್ಕಾರಕ್ಕೆ ಕಾಂಗ್ರೆಸ್ ನಾಯಕರ ಆಗ್ರಹ
 • ನಾವು ಮನುಷ್ಯರ ಪರ, ಮನುಷ್ಯ ವಿರೋಧಗಳ ಪರ ಅಲ್ಲ: ಸಿದ್ದರಾಮಯ್ಯ
 • ನವೀನ್ ಕಾಂಗ್ರೆಸ್ ಕಾರ್ಯಕರ್ತ ; ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ತಿರುಗೇಟು ಕೊಟ್ಟ ಡಿಸಿಎಂ ಅಶ್ವತ್ಥ್ ನಾರಾಯಣ್
Health -Lifestyle Share

ಅರವಳಿಕೆ ವೈದ್ಯರ 67ನೇ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ: ರೋಗಿಗೆ ಚಿಕಿತ್ಸೆ ಸಮಯದಲ್ಲಿ ಅಪಾಯವಾದರೆ ವಿಮಾ ವ್ಯವಸ್ಥೆ

ಬೆಂಗಳೂರು, ನ 27 [ಯುಎನ್ಐ] ಭಾರತೀಯ ಅರವಳಿಕೆ ವೈದ್ಯರ 67ನೇ ರಾಷ್ಟ್ರೀಯ ಸಮ್ಮೇಳನ ನಗರದ ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ಆರಂಭಗೊಂಡಿದೆ. ನಾಲ್ಕು ದಿನಗಳ ಕಾಲ ನಡೆಯಲಿರುವ ಸಮ್ಮೇಳನಕ್ಕೆ ಮಾಜಿ ಆರೋಗ್ಯ ಸಚಿವ ಡಾ. ಎ. ಬಿ. ಮಾಲಿಕಾ ರೆಡ್ಡಿ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಇದೊಂದು ಅಪರೂಪದ ಸಮ್ಮೇಳನವಾಗಿದ್ದು, ದೇಶದ ಎಲ್ಲಾ ಅರವಳಿಕೆ ವೈದ್ಯರು ಒಂದೆಡೆ ಸೇರಿ ತಮ್ಮ ವಿಚಾರಗಳನ್ನು ಹಂಚಿಕೊಳ್ಳುತ್ತಿರುವುದು ಅತ್ಯಂತ ಸಂತಸದ ವಿಚಾರವಾಗಿದೆ. ತಮ್ಮ ಅವಧಿಯಲ್ಲಿ ಆರೋಗ್ಯ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆಗಳನ್ನು ಜಾರಿತರಲಾಗಿತ್ತು. ಅರವಳಿಕೆ ವಿಧಾನ ಅತ್ಯಂತ ಸೂಕ್ಷ್ಮವಾಗಿದ್ದು, ಈ ಬಗ್ಗೆ ಇನ್ನು ಹೆಚ್ಚು ಸಂಶೋಧನೆ ಹಾಗೂ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಹೇಳಿದರು.
ಇಂಡಿಯನ್ ಸೊಸೈಟಿ ಆಫ್ ಅರಿವಳಿಕೆ ತಜ್ಞ ವೈದ್ಯ ಡಾ. ಎಸ್ ಬಾಲಾ ಭಾಸ್ಕರ್ ಮಾತನಾಡಿ, ಅರವಳಿಕೆ ವೈದ್ಯ ಪದ್ದತಿ ಸಂದರ್ಭದಲ್ಲಿ ಕೆಲ ಕಾರಣಗಳಿಂದ ಚಿಕಿತ್ಸೆಗೆ ಒಳಗಾಗುವ ರೋಗಿಗೆ ಅಪಾಯ ಉಂಟಾದರೆ ಸೂಕ್ತ ವಿಮಾ ವ್ಯವಸ್ಥೆಯನ್ನು ಒದಗಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ತಮ್ಮ ಸಂಘ ಇಡೀ ದೇಶದಲ್ಲಿ ಪ್ರಬಲವಾಗಿ ಬೆಳೆಯುತ್ತಿದ್ದು, ಗ್ರಾಮೀಣ ಪ್ರದೇಶಕ್ಕೂ ಅರವಳಿಕೆ ವೈದ್ಯ ಪದ್ದತಿಯನ್ನು ವಿಸ್ತರಿಸುವುದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿ ಎಸ್. ಸಚ್ಚಿದಾನಂದ್ ಮಾತನಾಡಿ ಅರವಳಿಕೆ ವೈದ್ಯ ಪದ್ದತಿಯಲ್ಲಿ ದಿನೆ ದಿನೆ ಹೊಸ ಹೊಸ ಅವಿಷ್ಕಾರ ಹಾಗೂ ಪದ್ದತಿಗಳು ನಡೆಯುತ್ತಿದ್ದು, ಈ ವೈದ್ಯ ಪದ್ದತಿ ಹೆಚ್ಚು ಪ್ರಚಲಿತವಾಗಿದೆ. ಈ ಮೂರು ದಿನಗಳ ಸಮ್ಮೇಳನದಲ್ಲಿ ಉತ್ತಮ ಸಂಶೋಧನೆಗಳು ನಡೆಯುವತ್ತ ಚರ್ಚೆಯಾಗಲಿ ಎಂದು ಹೇಳಿದರು.
ಐಸಾಕಾನ್ ಸಮ್ಮೇಳನ ಸಂಘಟನಾ ಅಧ್ಯಕ್ಷ ಡಾ. ಎಸ್.ಬಿ. ಗಂಗಾಧರ್ ಮಾತನಾಡಿ, ಕಳೆದ 25 ವರ್ಷಗಳ ನಂತರ ಬೆಂಗಳೂರಿನಲ್ಲಿ ನಡೆಯುತ್ತಿದೆ. ಈ ಸಮ್ಮೇಳನದಲ್ಲಿ 3800 ಕ್ಕೂ ಅಧಿಕ ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ. ನಾಲ್ಕು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಹಲವು ವೈಜ್ಞಾನಿಕ ವಿಚಾರ ಧಾರೆಗಳು, ಪ್ರಖ್ಯಾತ ತಜ್ಞರೊಂದಿಗೆ ಸಮಾಲೋಚನೆಗಳು, ವಾಕಥಾನ್, ವ್ಯಕ್ತಿ ವಿಕಸನ ಹಾಗೂ ಮಾನಸಿಕ ಆರೋಗ್ಯದ ವಿಚಾರ, ವಿಮರ್ಶೆಗಳನ್ನೂ ಸಹ ನಡೆಯುತ್ತಿವೆ ಎಂದು ತಿಳಿಸಿದರು.
ದೂರದೃಷ್ಟಿಯುಳ್ಳ ಕೆಲವು ಪ್ರಖ್ಯಾತ ಅರವಳಿಕೆ ತಜ್ಞರ ಸತತ ಪರಿಶ್ರಮದೊಂದಿಗೆ ಕೇವಲ 6 ಜನ ಸದಸ್ಯರೊಂದಿಗೆ ಸಂಘ ಸ್ಥಾಪನೆಯಾಗಿ ಇಂದು 28 ಸದಸ್ಯತ್ವದೊಂದಿಗೆ ಸಂಘ ಅಭಿವೃದ್ಧಿಯಾಗಿರುವ ನಿಟ್ಟಿನಲ್ಲಿ ರಾಷ್ಟ್ರೀಯ ಮಟ್ಟದ ಸಮ್ಮೇಳನಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದರು.
ಈ ಸಮ್ಮೇಳನದ ಮೂಲಕ ರಾಜ್ಯದ ವೈವಿಧ್ಯತೆ ಹಂಚಿಕೊಳ್ಳಲು ಉತ್ತಮ ವೇದಿಕೆ ಕಲ್ಪಿಸಲಾಗಿತ್ತು. ತಜ್ಞ ವೈದ್ಯರು ಸೇರಿದಂತೆ, ವಿಶ್ವದ ಹಲವು ಭಾಗಗಳಿಂದ ತಜ್ಞ ವೈದ್ಯರು ತಮ್ಮ ಅನುಭವ ಹಾಗೂ ಜ್ಞಾನವನ್ನು ಹಂಚಿಕೊಂಡರು. ವೈಜ್ಞಾನಿಕ ವಿಚಾರಧಾರೆಯೊಂದಿಗೆ ಕಲೆ, ಸಂಸ್ಕೃತಿ ಬಿಂಬಿಸುವ ಮನೋರಂಜನಾ ಕಾರ್ಯಕ್ರಮಗಳನ್ನು ನಡೆದವು.
ಯುಎನ್ಐ ವಿಎನ್ 1809
More News
20 2 ದಶಲಕ್ಷ ಮೀರಿದ ಜಾಗತಿಕ ಕೋವಿಡ್ ಪ್ರಕರಣಗಳ ಸಂಖ್ಯೆ!

20 2 ದಶಲಕ್ಷ ಮೀರಿದ ಜಾಗತಿಕ ಕೋವಿಡ್ ಪ್ರಕರಣಗಳ ಸಂಖ್ಯೆ!

12 Aug 2020 | 8:19 PM

ವಾಷಿಂಗ್ಟನ್, ಆ 12 (ಯುಎನ್ಐ) ಜಾಗತಿಕ ಕಾದಂಬರಿ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಬುಧವಾರ 20..2 ಮಿಲಿಯನ್ ಮೀರಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.

 Sharesee more..