Sunday, Aug 25 2019 | Time 01:51 Hrs(IST)
Sports Share

ಅರ್ಜೆಂಟೀನಾ ತಂಡದ ವಿಶ್ವಕಪ್ ವಿಜೇತ ತಂಡದ ಸದಸ್ಯ ಲೂಯಿಸ್ ನಿಧನ

ಬ್ಯೂನಸ್ ಐರಿಸ್, ಆ 13 (ಯುಎನ್ಐ)- ಅರ್ಜೆಂಟೀನಾ ತಂಡದ ಮಾಜಿ ಫುಟ್ಬಾಲ್ ಆಟಗಾರ ಹಾಗೂ 1986ರಲ್ಲಿ ವಿಶ್ವಕಪ್ ವಿಜೇತ ತಂಡದ ಸದಸ್ಯ ಜಾಸ್ ಲೂಯಿಸ್ ಬ್ರೌನ್ ಅವರು ದೀರ್ಘ ಅನಾರೋಗ್ಯದಿಂದ ಬಳಲಿದ್ದು, ಮಂಗಳವಾರ ನಿಧನರಾಗಿದ್ದಾರೆ.

ಲೂಯಿಸ್ ಅವರು ಅರ್ಜೆಂಟೀನಾದ ಪರ 36 ಪಂದ್ಯಗಳನ್ನು ಆಡಿದ್ದು 1986ರ ವಿಶ್ವಕಪ್ ನಲ್ಲಿ ಆಡಿದ್ದರು. ಅಲ್ಲದೆ ಫೈನಲ್ ಪಂದ್ಯದಲ್ಲಿ ಮೊದಲ ಗೋಲು ಬಾರಿಸಿದ ಕೀರ್ತಿ ಇವರದ್ದಾಗಿತ್ತು. ಪಶ್ಚಿಮ ಜರ್ಮನಿ ತಂಡವನ್ನು 2-3 ರಿಂದ ಮಣಿಸಿದ ಅರ್ಜೆಂಟೀನಾ ಪಂದ್ಯ ಗೆದ್ದು ಬೀಗಿತ್ತು. ನಿವೃತ್ತಿ ಬಳಿಕ ಅವರು ಅರ್ಜೆಂಟೀನಾ 23 ವರ್ಷದೊಳಗಿನ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೆ 2008ರಲ್ಲಿ ತಂಡ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಯುಎನ್ಐ ವಿಎನ್ಎಲ್ 2143