Wednesday, Jun 3 2020 | Time 09:22 Hrs(IST)
  • ನಿಸರ್ಗಚಂಡಮಾರುತ ಬೀತಿ: ಮುಂಬೈನಗರದಲ್ಲಿ ನಿಷೇಧಾಜ್ಞೆ
  • ನ್ಯೂಯಾರ್ಕ್ ನಲ್ಲಿ ನಿಲ್ಲದ ಹಿಂಸಾಚಾರ, ಲೂಟಿ : ಕರ್ಫ್ಯೂ ವಿಸ್ತರಣೆ
  • ವಂದೇ ಭಾರತ್ ಮಿಷನ್ ಅಡಿ ಗಲ್ಫ್ ದೇಶಗಳಿಂದ 2,200ಕ್ಕೂ ಹೆಚ್ಚು ಭಾರತೀಯರು ವಾಪಸ್
  • ಚಿಲಿಯಲ್ಲಿ 1,08,686 ಕೊರೊನಾ ಸೋಂಕು ಪ್ರಕರಣ
International Share

ಅಳಿವಿನ ದಂಗೆ: ೫೦೦ ಪ್ರತಿಭಟನಾಕಾರರ ಬಂಧನ

ಲಂಡನ್, ಅ ೯ (ಯುಎನ್‌ಐ) ಹವಾಮಾನ ಬದಲಾವಣೆಯ ವಿರುದ್ಧ ತುರ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಲಂಡನ್ ನಲ್ಲಿ ಅಳಿವಿನ ದಂಗೆ ಆರಂಭವಾಗಿದೆ.
ಪ್ರತಿಭಟನೆ ಆರಂಭವಾದ ಮೊದಲ ೨೪ ಗಂಟೆಗಳಲ್ಲಿ ಸುಮಾರು ೫೦೦ ಪ್ರತಿಭಟನಾಕಾರರನ್ನು ಲಂಡನ್‌ನ ಮೆಟ್ರೋಪಾಲಿಟನ್ ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಸೋಮವಾರ, ಲಂಡನ್ ಸೇರಿದಂತೆ ವಿವಿಧ ಪ್ರಮುಖ ಯುರೋಪಿಯನ್ ನಗರಗಳಲ್ಲಿ ಅಳಿವಿನ ದಂಗೆಯಿಂದ ಸಿಂಕ್ರೊನೈಸ್ ಮಾಡಿದ ಪ್ರತಿಭಟನೆಯನ್ನು ಪ್ರಾರಂಭಿಸಲಾಯಿತು,
ಧರಣಿ, ಸಂಚಾರ ತಡೆ ಸೇರಿದಂತೆ ವಿವಿಧ ರೀತಿಯಲ್ಲಿ ಪ್ರತಿಭಟಿಸು ಸರ್ಕಾರದ ಗಮನ ಸೆಳೆಯಲಾಗುತ್ತಿದೆ.
ಮಂಗಳವಾರ, ಮೆಟ್ರೋಪಾಲಿಟನ್ ಪೊಲೀಸರು ಪ್ರತಿಭಟನೆಯನ್ನು ಟ್ರಾಫಲ್ಗರ್ ಚೌಕಕ್ಕೆ ಸೀಮಿತಗೊಳಿಸಿದ್ದು, ಅದನ್ನು ಮೀರಿದಲ್ಲಿ ಯಾರನ್ನಾದರೂ ಬಂಧಿಸಲಿದ್ದಾರೆ ಎಂದು ಸ್ಪುಟ್ನಿಕ್ ವರದಿ ಮಾಡಿದೆ.
ಪೊಲೀಸರ ಪ್ರಕಾರ, ಸೋಮವಾರ ಲಂಡನ್‌ನಲ್ಲಿ ನಡೆದ ಅಳಿವಿನ ದಂಗೆ ಪ್ರತಿಭಟನೆಯ ಭಾಗವಾಗಿ ಒಟ್ಟು ೨೮೦ ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಮಂಗಳವಾರ, ೧೭೩೦ ಗಂಟೆಗಳವರೆಗೆ ಒಟ್ಟು ೨೧೨ ಜನರನ್ನು ಬಂಧಿಸಲಾಗಿದೆ.
ಬಹುಪಾಲು ಪ್ರತಿಭಟನಾಕಾರರನ್ನು ದಂಡದೊಂದಿಗೆ ಬಿಡಲಾಗಿತ್ತು. ಆದಾಗ್ಯೂ, ಅವರು ಮತ್ತೆ ಪ್ರತಿಭಟನೆಗೆ ಮರಳಿದ್ದಾರೆ
ಜಾಗತಿಕ ತಾಪಮಾನ ಏರಿಕೆಯ ಬಗ್ಗೆ ಸಾರ್ವಜನಿಕರ ಗಮನವನ್ನು ಸೆಳೆಯುವ ಪ್ರಯತ್ನವಾಗಿ ಇಂತಹ ಪ್ರತಿಭಟನೆಗಳನ್ನು ಸಕ್ರಿಯವಾಗಿ ನಡೆಸುತ್ತಿದೆ, ಇದನ್ನು ಅವರು ’ಹವಾಮಾನ ತುರ್ತುಸ್ಥಿತಿ’ ಎಂದು ಕರೆಯುತ್ತಾರೆ ಎಂದು ವರದಿ ಸೇರಿಸಲಾಗಿದೆ
ಬರ್ಲಿನ್, ಆಮ್ ಸತರದಯಾಡ್ಯಾಮ್ ಮತ್ತು ಸಿಡ್ನಿಯಂತಹ ಇತರ ನಗರಗಳಲ್ಲಿಯೂ ಪ್ರತಿಭಟನೆಗಳಯ ನಡೆಂಯುತ್ತಿವೆ.
ಯುಎನ್‌ಐ ಎಸ್‌ಎ ವಿಎನ್ ೧೦೪೭
More News

ಚಿಲಿಯಲ್ಲಿ 1,08,686 ಕೊರೊನಾ ಸೋಂಕು ಪ್ರಕರಣ

03 Jun 2020 | 8:13 AM

 Sharesee more..
ಗಲಭೆಗಳನ್ನು ಹತ್ತಿಕ್ಕಲು ಹೆಚ್ಚಿನ ಸೇನೆ: ವಾಷಿಂಗ್ಟನ್‍ಗೆ ಸಾವಿರಾರು ಸಶಸ್ತ್ರ ಪಡೆಗಳ ನಿಯೋಜನೆ- ಟ್ರಂಪ್

ಗಲಭೆಗಳನ್ನು ಹತ್ತಿಕ್ಕಲು ಹೆಚ್ಚಿನ ಸೇನೆ: ವಾಷಿಂಗ್ಟನ್‍ಗೆ ಸಾವಿರಾರು ಸಶಸ್ತ್ರ ಪಡೆಗಳ ನಿಯೋಜನೆ- ಟ್ರಂಪ್

02 Jun 2020 | 5:44 PM

ವಾಷಿಂಗ್ಟನ್, ಜೂನ್ 2 (ಸ್ಪುಟ್ನಿಕ್) ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಸಾವು ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಗಳನ್ನು ನಿಭಾಯಿಸಲು ರಾಷ್ಟ್ರರಾಜಧಾನಿಯಲ್ಲಿ ಸಾವಿರಾರು ಸಶಸ್ತ್ರ ಪಡೆಗಳ ನಿಯೋಜನೆ ಸೇರಿದಂತೆ ಲಭ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಸಜ್ಜುಗೊಳಿಸಲು ಅಧ್ಯಕ್ಷೀಯ ಕ್ರಮ ತೆಗೆದುಕೊಳ್ಳುತ್ತಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

 Sharesee more..
ಕೊವಿಡ್‍-19 ಪರಿಣಾಮ: ಮುಂದಿನ ದಶಕದಲ್ಲಿ ಅಮೆರಿಕ ಆರ್ಥಿಕತೆ 7 9 ಟ್ರಿಲಿಯನ್‍ ಡಾಲರ್‍ ನಷ್ಟು ಕುಸಿತ ಅಂದಾಜು

ಕೊವಿಡ್‍-19 ಪರಿಣಾಮ: ಮುಂದಿನ ದಶಕದಲ್ಲಿ ಅಮೆರಿಕ ಆರ್ಥಿಕತೆ 7 9 ಟ್ರಿಲಿಯನ್‍ ಡಾಲರ್‍ ನಷ್ಟು ಕುಸಿತ ಅಂದಾಜು

02 Jun 2020 | 5:25 PM

ವಾಷಿಂಗ್ಟನ್, ಜೂನ್ 2 (ಕ್ಸಿನ್ಹುವಾ) ಕೊವಿಡ್-19 ಸಾಂಕ್ರಾಮಿಕ ರೋಗದ ಪರಿಣಾಮದಿಂದ ಮುಂದಿನ ದಶಕದಲ್ಲಿ ಅಮೆರಿಕ ಆರ್ಥಿಕತೆಯ ಗಾತ್ರ 7.9 ಟ್ರಿಲಿಯನ್ ಡಾಲರ್ ನಷ್ಟು ಕುಸಿತ ಕಾಣಲಿದೆ ಎಂದು ಸಿಬಿಒ ಸೋಮವಾರ ಬಿಡುಗಡೆ ಮಾಡಿದ ವರದಿಯಲ್ಲಿ ಅಂದಾಜಿಸಲಾಗಿದೆ.

 Sharesee more..