Sunday, Jan 19 2020 | Time 04:41 Hrs(IST)
Sports Share

ಅಶ್ರಿತಾ ಶೆಟ್ಟಿ ಜೊತೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಮನೀಷ್ ಪಾಂಡೆ

ಬೆಂಗಳೂರು, ಡಿ.2 (ಯುಎನ್ಐ)- ಟೀಮ್ ಇಂಡಿಯಾ ಹಾಗೂ ಕರ್ನಾಟಕದ ಸ್ಟಾರ್ ಆಟಗಾರ ಮನೀಷ್ ಪಾಂಡೆ ಸೋಮವಾರ ನಟಿ ಅಶ್ರಿತಾ ಶೆಟ್ಟಿ ಜೊತೆ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.

ಭಾನುವಾರ ಕರ್ನಾಟಕ ತಂಡ ಸೈಯದ್ ಮುಷ್ತಾಕ್ ಅಲಿ ಟಿ-20 ಕ್ರಿಕೆಟ್ ಟೂರ್ನಿಯ ಫೈನಲ್ ನಲ್ಲಿ ತಮಿಳುನಾಡು ತಂಡವನ್ನು ಒಂದು ರನ್ ಗಳಿಂದ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ರಾಜ್ಯ ತಂಡವನ್ನು ಮನೀಷ್ ಪಾಂಡೆ ಮುನ್ನಡೆಸಿದ್ದರು. ಇದು ಪ್ರಸಕ್ತ ಋತುವಿನಲ್ಲಿ ಕರ್ನಾಟಕ ಪಡೆದ ಎರಡನೇ ಪ್ರಶಸ್ತಿ ಆಗಿದೆ. ಈ ಮೊದಲು ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಯ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

ಅಶ್ರಿತಾ ಶೆಟ್ಟಿ ಉದಯಂ ಎನ್ಎಚ್ 4 ಮತ್ತು ಇಂದ್ರಜಿತ್ ಚಿತ್ರದಲ್ಲಿ ಪಾತ್ರವಹಿಸಿದ್ದರು. ಮನೀಷ್ ಸೂರತ್ ನಿಂದ ಮುಂಬೈಗೆ ಪ್ರಯಾಣ ಬೆಳಿಸಿ ಮದುವೆ ಆದರು. 2018 ರಲ್ಲಿ ಬಿಡುಗಡೆಯಾದ ತಮಿಳು ಚಿತ್ರ ನಾನ್ ದಾನ್ ಶಿವದಲ್ಲಿ ಅಶ್ರಿತಾ ಪಾತ್ರವಹಿಸಿದ್ದರು.

ಮದುವೆ ಸಮಾರಂಭದಲ್ಲಿ ಮನೀಷ್ ಪಾಂಡೆ ಹಾಗೂ ಅಶ್ರಿತಾ ಶೆಟ್ಟಿ ಅವರ ಕುಟುಂಬಸ್ಥರು ಹಾಗೂ ಆಪ್ತರು ಸಮರಾಂಭದಲ್ಲಿ ಹಾಜರಿದ್ದರು.

ಮನೀಷ್ ಪಾಂಡೆ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಆಡಿದ್ದಾರೆ.

ಯುಎನ್ಐ ವಿಎನ್ಎಲ್ 1845
More News

ಆಯ್ಕೆದಾರರ ಸ್ಥಾನಕ್ಕೆ ಅರ್ಜಿ ಕರೆದ ಬಿಸಿಸಿಐ

18 Jan 2020 | 11:56 PM

 Sharesee more..

ಗೋವಾಕ್ಕೆ ಶಾಕ್ ನೀಡಿದ ಎಟಿಕೆಗೆ ಅಗ್ರ ಸ್ಥಾನ

18 Jan 2020 | 11:06 PM

 Sharesee more..
ಪ್ರೊ ಲೀಗ್ ಹಾಕಿ: ನೇದರ್‌ಲೆಂಡ್ ವಿರುದ್ಧ ಭಾರತಕ್ಕೆೆ 5-2 ಅಂತರದಲ್ಲಿ ಭರ್ಜರಿ ಜಯ

ಪ್ರೊ ಲೀಗ್ ಹಾಕಿ: ನೇದರ್‌ಲೆಂಡ್ ವಿರುದ್ಧ ಭಾರತಕ್ಕೆೆ 5-2 ಅಂತರದಲ್ಲಿ ಭರ್ಜರಿ ಜಯ

18 Jan 2020 | 10:26 PM

ಭುವನೇಶ್ವರ್,ಜ.18 (ಯುಎನ್ಐ) ವಿಶ್ವದ ಮೂರನೇ ಶ್ರೇಯಾಂಕದ ನೇದರ್‌ಲೆಂಡ್ ವಿರುದ್ಧ ಭಾರತ ಹಾಕಿ ತಂಡ ಇಂದಿಲ್ಲಿ ಆರಂಭವಾದ ಪ್ರೊ ಲೀಗ್ ಮೊದಲನೇ ಪಂದ್ಯದಲ್ಲಿ 5-2 ಅಂತರದಲ್ಲಿ ಜಯ ಸಾಧಿಸಿ ಟೂರ್ನಿಯಲ್ಲಿ ಭರ್ಜರಿ ಶುಭಾರಂಭ ಮಾಡಿದೆ.

 Sharesee more..