Friday, Jan 22 2021 | Time 11:45 Hrs(IST)
  • ಶಿವಮೊಗ್ಗ ದುರಂತ; ಅಕ್ರಮ ಗಣಿಗಾರಿಕೆ ವಿರುದ್ಧ ಕಠಿಣ ಕ್ರಮಕ್ಕೆ ಸಿದ್ದರಾಮಯ್ಯ ಒತ್ತಾಯ
  • ಶಿವಮೊಗ್ಗ ಹುಣಸೋಡು ಸ್ಫೋಟ; ಮೂವರ ಬಂಧನ; ನಾಳೆ ಮುಖ್ಯಮಂತ್ರಿ ಭೇಟಿ
  • ಶಿವಮೊಗ್ಗ ದುರಂತ: ತಾವು ಹಿಂದೆಂದೂ ಕಂಡುಕೇಳರಿಯದ ಘಟನೆ- ಈಶ್ವರಪ್ಪ
  • ಇಬ್ಬರು ಅಂತಾರಾಜ್ಯ ಕನ್ನಕಳವು ಆರೋಪಿಗಳ ಬಂಧನ; 75 ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶ
  • ಲಸಿಕೆ ಪಡೆದ ಫಲಾನುಭವಿಗಳ ಜೊತೆ ಪ್ರಧಾನಿ ಸಂವಾದ
  • ಸರ್ಕಾರದ ಪ್ರಸ್ತಾಪ ತಿರಸ್ಕರಿದ ರೈತರು, ಇಂದು 11 ನೇ ಸುತ್ತಿನ ಸಂಧಾನ ಸಭೆ
  • ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ನಿಶ್ಚಿತ; ಮುಖ್ಯಮಂತ್ರಿ
  • ಶಿವಮೊಗ್ಗ ದುರಂತ; ಪ್ರಧಾನಿ ಮೋದಿ ಸಂತಾಪ
  • ಶಿವಮೊಗ್ಗ ದುರಂತ; ಉನ್ನತ ಮಟ್ಟದ ತನಿಖೆಗೆ ಮುಖ್ಯಮಂತ್ರಿ ಆದೇಶ
  • ಕಲ್ಲು ಗಣಿಗಾರಿಕೆಗೆ ಸಾಗಿಸುತ್ತಿದ್ದ ಡೈನಮೈಟ್, ಜಿಲೆಟಿನ್ ಸ್ಫೋಟ; 8ಕ್ಕೂ ಅಧಿಕ ಮಂದಿ ಸಾವು
Sports Share

ಅಶ್ವಿನ್-ವಿಹಾರಿ ಕೆಚ್ಚೆದೆಯ ಹೋರಾಟ, ಮೂರನೇ ಟೆಸ್ಟ್ ಡ್ರಾ

ಸಿಡ್ನಿ, ಜ.11 (ಯುಎನ್ಐ)- ಸಿಡ್ನಿ ಅಂಗಳದಲ್ಲಿ ಕೆಚ್ಚೆದೆಯ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿ ಮೂರನೇ ಟೆಸ್ಟ್ ಪಂದ್ಯ ಡ್ರಾ ಮಾಡಿಕೊಳ್ಳುವಲ್ಲಿ ಸಫಲವಾಗಿದೆ. ಈ ಮೂಲಕ ಆಸ್ಟ್ರೇಲಿಯಾದ ಗೆಲುವಿನ ಕನಸು ಕಮರಿದೆ.
ಟೀಮ್ ಇಂಡಿಯಾದ ಪರ ಸ್ಟಾರ್ ಆಟಗಾರ ರಿಷಭ್ ಪಂತ್ ಗೆಲುವಿನ ಆಸೆ ಚಿಗುರಿಸಿದರೆ, ಹನುಮ ವಿಹಾರಿ ಪಂದ್ಯ ಡ್ರಾ ಮಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದರು. ಮೂರನೇ ಟೆಸ್ಟ್ ನ ಕೊನೆಯ ದಿನ ಡ್ರೆಸ್ಸಿಂಗ್ ರೂಮ್ ನಲ್ಲಿ ಹಾಕಿಕೊಂಡ ಯೋಜನೆಯಂತೆ ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಆಟಗಾರರು ಅಬ್ಬರಿಸಿದರು.
ಆರಂಭದಲ್ಲಿ ನಾಯಕ ಅಜಿಂಕ್ಯ ರಹಾನೆ ರನ್ ಕಲೆ ಹಾಕುವಲ್ಲಿ ವಿಫಲರಾದರು. ಈ ಹಂತದಲ್ಲಿ ಆಸೀಸ್ ಮೇಲುಗೈ ಸಾಧಿಸುವ ಪ್ಲಾನ್ ಮಾಡಿಕೊಂಡಿತ್ತು. ಆದರೆ, ಸ್ಟಾರ್ ಯುವ ಆಟಗಾರ ರಿಷಭ್ ಪಂತ್ ಹಾಗೂ ಟೆಸ್ಟ್ ಸ್ಪೇಷಲಿಸ್ಟ್ ಚೇತೇಶ್ವರ್ ಪೂಜಾರ ತಮ್ಮ ಮೇಲಿನ ಒತ್ತಡ ಮೆಟ್ಟಿನಿಂತು ಬ್ಯಾಟ್ ಮಾಡಿದರು. ಅಲ್ಲದೆ ಟೀಮ್ ಇಂಡಿಯಾ ಗೆಲುವಿನ ಆಸೆಗೆ ಈ ಜೋಡಿ ನೀರು ಹಾಕಿತು.
ರಿಷಭ್ ಪಂತ್ ತಮಗೆ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ಸೊಗಸಾದ ಆಟವನ್ನು ಆಡಿದರು. ತಮಗಿದ್ದ ಗಾಯದ ಸಮಸ್ಯೆ ಮೆಟ್ಟಿನಿಂತು ಬ್ಯಾಟ್ ಮಾಡಿದ ಪಂತ್ ಅಬ್ಬರಿಸಿದರು. ಇವರನ್ನು ಕಟ್ಟಿ ಹಾಕಲು ಆಸೀಸ್ ಮಾಡಿಕೊಂಡ ಪ್ಲಾನ್ ಎಲ್ಲ ಉಲ್ಟಾ ಆಯಿತು. ಏಕದಿನ ಶೈಲಿಯಲ್ಲಿ ಬ್ಯಾಟ್ ಮಾಡಿದ ಪಂತ್ ಆರ್ಭಟಿಸಿದರು.
ರಿಷಭ್ ಪಂತ್ 118 ಎಸೆತಗಳಲ್ಲಿ 12 ಬೌಂಡರಿ, 3 ಸಿಕ್ಸರ್ ನೆರವಿನಿಂದ 97 ರನ್ ಬಾರಿಸಿ ಔಟ್ ಆದರು.
ಇನ್ನು ಸ್ಟಾ ರ್ ಆಟಗಾರ ಚೇತೇಶ್ವರ್ ಪೂಜಾರ 205 ಎಸೆತಗಳಲ್ಲಿ 12 ಬೌಂಡರಿ ನೆರವಿನಿಂದ 77 ರನ್ ಬಾರಿಸಿ ಜೋಶ್ ಹ್ಯಾಜಲ್ ವುಡ್ ತೋಡಿದ ಖೆಡ್ಡಾಗೆ ಬಲಿಯಾದರು.
ಇನ್ನು ಆರನೇ ವಿಕೆಟ್ ಗೆ ಹನುಮ ವಿಹಾರಿ ಹಾಗೂ ಆರ್.ಅಶ್ವಿನ್ ಮನಮೋಹಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಜೋಡಿ ಸುಮಾರು 42 ಓವರ್ ಗಳ ಕಾಲ ಬ್ಯಾಟ್ ಮಾಡಿ, ಆಸ್ಟ್ರೇಲಿಯಾ ತೆಕ್ಕೆಯಲ್ಲಿದ್ದ ಗೆಲುವಿನ ಆಸೆ ಚಿವುಟಿತು.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ 338, ದ್ವಿತೀಯ ಇನ್ನಿಂಗ್ಸ್ 6 ವಿಕೆಟ್ ಗೆ 312 (ಡಿಕ್ಲೇರ್)
ಭಾರತ 244, ಎರಡನೇ ಇನ್ನಿಂಗ್ಸ್ 5 ವಿಕೆಟ್ ಗೆ 334
ಯುಎನ್ಐ ವಿಎನ್ಎಲ್
More News

ಶ್ರೀಲಂಕಾದ ಇಬ್ಬರು ಆಟಗಾರರಿಗೆ ಕೋವಿಡ್-19 ಸೋಂಕು

21 Jan 2021 | 8:04 PM

 Sharesee more..
ಎಬಿಡಿ, ಕೊಹ್ಲಿಯನ್ನು ಉಳಿಸಿಕೊಂಡ ಆರ್ ಸಿಬಿ

ಎಬಿಡಿ, ಕೊಹ್ಲಿಯನ್ನು ಉಳಿಸಿಕೊಂಡ ಆರ್ ಸಿಬಿ

20 Jan 2021 | 8:31 PM

ಬೆಂಗಳೂರು, ಜ.20 (ಯುಎನ್ಐ) ಮಿಸ್ಟರ್ 360 ಡಿಗ್ರಿ ಖ್ಯಾತಿಯ ಎಬಿಡಿ ವಿಲಿಯರ್ಸ್ ಹಾಗೂ ನಾಯಕ ವಿರಾಟ್ ಕೊಹ್ಲಿ ಅವರನ್ನು ಮುಂದಿನ ಆವೃತ್ತಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉಳಿಸಿಕೊಂಡಿದೆ.

 Sharesee more..