Saturday, Aug 15 2020 | Time 11:38 Hrs(IST)
 • ಭಾರತದ ಸಾರ್ವಭೌಮತೆ ಸರ್ವಶ್ರೇಷ್ಠವಾದುದು; ಪ್ರಧಾನಿ ಮೋದಿ
 • ಆಗಸ್ಟ್ 15 ಎಂದರೆ ನವ ಭಾರತದ ಉದಯದ ದಿನ : ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ
 • ಭಾರತೀಯತೆ, ದೇಶಪ್ರೇಮ, ದೇಶಭಕ್ತಿ ಉಕ್ಕಿ ಹರಿಯಲಿ: ಆರ್ ಅಶೋಕ
 • ಅಖಂಡ ಶ್ರೀನಿವಾಸಮೂರ್ತಿ ಮೇಲೆ ಬಿಜೆಪಿಯಿಂದ ಒತ್ತಡ: ಡಿ ಕೆ ಶಿವಕುಮಾರ್
 • ಭಾರತ - ಜರ್ಮನಿ ನಡುವೆ ಒಪ್ಪಂದ; ಬೆಂಗಳೂರಿಗೆ ವಿಮಾನ ಸೇವೆ ಪ್ರಾರಂಭಿಸಿದ ಲುಫ್ತಾನ್ಸಾ
 • ಶಿವಮೊಗ್ಗ ಜಿಲ್ಲೆಯಲ್ಲಿ ಅಭಿವೃದ್ಧಿಯ ಹೊಸಪರ್ವವೇ ಆರಂಭ; ಸ್ವಾತಂತ್ರ್ಯ ದಿನದ ಸಂದೇಶದಲ್ಲಿ ಕೆ ಎಸ್ ಈಶ್ವರಪ್ಪ
 • ಭಾನುವಾರದಿಂದ ಮಾತಾ ವೈಷ್ಣೋ ದೇವಿ ಯಾತ್ರೆ ಆರಂಭ
 • ಭಾರತೀಯರು ಸ್ಥಳೀಯರ ಧ್ವನಿಯಾಗಬೇಕು- ಪ್ರಧಾನಿ ಪ್ರತಿಪಾದನೆ
 • ನಾಡಿನ ಜನತೆಗೆ 74ನೇ ಸ್ವಾತಂತ್ರ್ಯೋತ್ಸವದ ಶುಭಕೋರಿದ ಮುಖ್ಯಮಂತ್ರಿ
 • ಆತ್ಮನಿರ್ಭರ ಭಾರತ, ಪ್ರತಿ ಭಾರತೀಯರ ದಿವ್ಯ ಮಂತ್ರ: ಪ್ರಧಾನಿ
 • ಅಧಿಕೃತ ನಿವಾಸದಲ್ಲೇ ಧ್ವಜಾರೋಹಣ ನೆರವೇರಿಸಿದ ರಾಜನಾಥ್ ಸಿಂಗ್
 • ಕರೋನ ಸಮರದಲ್ಲಿ ಗೆಲ್ಲುವುದೆ ನಮ್ಮ ಮುಖ್ಯ ಗುರಿ: ಮೋದಿ
 • ಡಿ ಜೆ ಹಳ್ಳಿ ಗಲಭೆ ಪ್ರಕರಣ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶ ಮಾಡಿ ರಾಜ್ಯ ಸರ್ಕಾರದ ಆದೇಶ
Health -Lifestyle Share

ಅಂಧ ಮಕ್ಕಳಿಗಾಗಿ ಪುನರ್ವಸತಿ ಕೇಂದ್ರ ಸ್ಥಾಪಿಸಲು ಮುಂದಾದ ನಾರಾಯಣ ನೇತ್ರಾಲಯ

ಬೆಂಗಳೂರು,ಡಿ.27 (ಯುಎನ್ಐ) ನೇತ್ರ ಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿರುವ ನಾರಾಯಣ ನೇತ್ರಾಲಯ ರೆಟಿನಲ್ ಡಿಸ್ಸ್ಟೋಫೀಸ್ ಮತ್ತು ಬೆಳವಣಿಗೆಯ ವೈಪರಿತ್ಯಗಳಂತಹ ಚಿಕಿತ್ಸೆ ದೊರೆಯದೆ ನೇತ್ರ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗೆ ಅತ್ಯಾಧುನಿಕ ಪುನರ್ವಸತಿ ಕೇಂದ್ರವನ್ನು ಪ್ರಾರಂಭಿಸುವ ಉದ್ದೇಶ ಹೊಂದಿದ್ದು, ದುರ್ಬಲ ವರ್ಗದವರ ಆರೋಗ್ಯ ಸೇವೆಗೆ ವಾರ್ಷಿಕ 5 ಕೋಟಿ ರೂ. ಮೀಸಲಿರಿಸಲಾಗುವುದು ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಭುಜಂಗ ಶೆಟ್ಟಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆಸ್ಪತ್ರೆಯಲ್ಲಿ ನೂರಾರು ಶಸ್ತ್ರ ಚಿಕಿತ್ಸೆ ನಡೆಸುತ್ತೇವೆ ಹಾಗೂ ಗುಣಪಡಿಸಬಲ್ಲ ನೇತ್ರ ರೋಗಗಳಿಂದ ಬಳಲುತ್ತಿರುವ ಮಕ್ಕಳು ಹಾಗೂ ವಯಸ್ಕರಿಗೆ ಪ್ರತಿನಿತ್ಯ ದೃಷ್ಟಿ ನೀಡುತ್ತೇವೆ. ಆದರೂ ಸಾವಿರಾರು ಮಕ್ಕಳು ಚಿಕಿತ್ಸೆ ನೀಡಲಾಗದ ನೇತ್ರ ರೋಗಗಳಿಂದ ಬಳಲುತ್ತಿದ್ದು, ಅವರಿಗೆ ವಿಶೇಷ ಆರೈಕೆಯ ಅಗತ್ಯವಿದೆ. ಒಂದು ತಿಂಗಳಲ್ಲಿ ಬಹಳಷ್ಟು ಪ್ರಕರಣಗಳಲ್ಲಿ ಅವರ ದೃಷ್ಠಿ ಸುಧಾರಿಸುವ ಪ್ರಯತ್ನ ಮಾಡಿದ್ದೇವೆ. ನಮ್ಮ ಏಕೀಕೃತ ಪುನರ್ವಸತಿ ವಿಧಾನದ ಮೂಲಕ ಅವರ ಜೀವನ ಮಟ್ಟ ಸುಧಾರಿಸುವಲ್ಲಿ ಯಶಸ್ವಿಯಾಗಿದ್ದೇವೆ. ಈ ಸೌಲಭ್ಯವನ್ನು ಪ್ರತ್ಯೇಕವಾದ ಪುನರ್ವಸತಿ ಕೇಂದ್ರ ಸ್ಥಾಪಿಸುವ ಮೂಲಕ ಕಣ್ಣಿನ ತೊಂದರೆ ಇರುವ ಮಕ್ಕಳಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ಒಂದು ತಿಂಗಳಲ್ಲಿ ಎರಡರಿಂದ ಮೂರು ಸಾವಿರ ಮಕ್ಕಳು ಅವಧಿಗೂ ಮುಂಚಿತವಾಗಿ ಹುಟ್ಟುತ್ತಿದ್ದು, ಅವರಲ್ಲಿ ಕಣ್ಣಿನ ಸಮಸ್ಯೆ ಹೆಚ್ಚಿರುತ್ತದೆ. ಇಂತಹ ಮಕ್ಕಳಿಗಾಗಿಯೇ ಆಸ್ಪತ್ರೆಯಿಂದ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸಲು ಮುಂದಾಗಿದ್ದು, ಪುನರ್ವಸತಿ ಕೇಂದ್ರದಲ್ಲಿ ಮಕ್ಕಳಿಗೆ ಉಳಿದುಕೊಳ್ಳುವ ಎಲ್ಲಾ ವ್ಯವಸ್ಥೆ ಹೊಂದಿರುವ ಶಾಲೆಯನ್ನು ಪ್ರಾರಂಭಿಸಲಾಗುವುದು ಎಂದು ಅವರು ತಿಳಿಸಿದರು.

ಆಸ್ಪತ್ರೆಯ ನಿರ್ದೇಶಕ ಮತ್ತು ಪೀಡಿಯಾಟ್ರಿಕ್ ರೆಟನಲ್ ಸರ್ಜನ್ ಡಾ.ಆನಂದ್ ಎಸ್.ವಿನೇಕಾರ್ ಮಾತನಾಡಿ, ಬಡ್ಸ್ ಟು ಬ್ಲಾಸ್ಟಮ್ಸ್ ಉಪಕ್ರಮದ ಅಡಿಯಲ್ಲಿ ದೃಷ್ಟಿ ಪುನರ್ವಸತಿ, ಫಿಸಿಯೋಥೆರಪಿ ಮತ್ತು ಆಕ್ಯುಪೇಷನಲ್ ಥೆರಪಿ, ಮೊಬಿಲಿಟಿ, ಅಂಡ್ ಕಾಗ್ನಿಟಿವ್ ಥೆರಪಿಯೊಂದಿಗೆ ಮಾನಸಿಕ ಮತ್ತು ನರರೋಗ ಸಂಬಂಧಿ ನೆರವನ್ನು ಒಂದೇ ಸೂರಿನಡಿ ನೀಡಲು ಮುಂದಾಗಿದ್ದೇವೆ ಎಂದು ಹೇಳಿದರು.

ಯುಎನ್ಐ ಡಿಸಿ ವಿಎನ್ 1750