Tuesday, Oct 22 2019 | Time 10:20 Hrs(IST)
  • ಆಸ್ಪತ್ರೆ ಸೇರಿರುವ ರಾಬರ್ಟ್ ವಾದ್ರಾ
  • 2024ರ ಪ್ಯಾರಿಸ್ ಒಲಿಂಪಿಕ್ ಹೊಸ ಲಾಂಛನ ಅನಾವರಣ
  • ಐರ್ಲೆಂಡ್ ನಲ್ಲಿ ಗರ್ಭಪಾತ, ಸಮಾನ ವಯಸ್ಸು ವಿವಾಹ ಕಾನೂನು ಬದ್ಧ
  • ಸಂಸದ ಜಲೀಲ್ ಮೇಲೆ ಹಲ್ಲೆಗೆ ಯತ್ನ: ಎನ್‌ಸಿಪಿ ಅಭ್ಯರ್ಥಿ ಸೇರಿ ಮೂವರ ಬಂಧನ
  • ಇಂದು ಬ್ಯಾಂಕ್ ನೌಕರರ ಮುಷ್ಕರ; ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ
  • ಇಸ್ಲಾಮಿಕ್‍ ಸ್ಟೇಟ್‍ ಉಗ್ರರ ದಾಳಿ: ನಾಲ್ವರು ಪೊಲೀಸರು ಬಲಿ
  • ಉತ್ತರ ಕರ್ನಾಟಕದಲ್ಲಿ ಮತ್ತೆ ಅತಿವೃಷ್ಠಿ,ನೆರೆ : 6 ಜನ ಪ್ರವಾಹಕ್ಕೆ ಸಿಲುಕಿ ಸಾವು
  • ಹೈಕಮಾಂಡ್ ಮೇಲೆ ಒತ್ತಡ ಹಾಕಿ ಅಧಿಕಾರ ಪಡೆದಿದ್ದಾರೆ : ಸಿ ಟಿ ರವಿ ಆರೋಪ
International Share

ಆಫ್ಘನ್ ಸೇನಾ ಕಾರ್ಯಾಚರಣೆ : ಅಲ್-ಖೈದಾ ದಕ್ಷಿಣ ಏಷ್ಯಾ ಮುಖ್ಯಸ್ಥ ಬಲಿ

ಕಾಬೂಲ್, ಅ ೦೯ (ಯುಎನ್‌ಐ) ಕಳೆದ ತಿಂಗಳು ದಕ್ಷಿಣ ಅಫ್ಘಾನಿಸ್ತಾನದಲ್ಲಿ ಅಮೆರಿಕ-ಅಫ್ಘಾನ್ ಸೇನಾ ಜಂಟಿ ದಾಳಿಯಲ್ಲಿ ಅಲ್-ಖೈದಾದ ದಕ್ಷಿಣ ಏಷ್ಯಾ ಶಾಖೆಯ ನಾಯಕ ಅಸಿಮ್ ಉಮರ್ ಸಾವನ್ನಪ್ಪಿದ್ದಾನೆ ಎಂದು ಆಫ್ಘನ್ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಭಾರತೀಯ ಉಪಖಂಡದಲ್ಲಿ ೨೦೧೪ ರ ಆರಂಭದಿಂದಲೂ ಅಲ್-ಖೈದಾವನ್ನು ಮುನ್ನಡೆಸಿದ ಅಸಿಮ್ ಉಮರ್, ಕಳೆದ ಸೆಪ್ಟೆಂಬರ್ ೨೩ ರಂದು ಹೆಲ್ಮಂಡ್ ಪ್ರಾಂತ್ಯದ ಮೂಸಾ ಖಾಲಾ ಜಿಲ್ಲೆಯ ತಾಲಿಬಾನ್ ಕಾಂಪೌಂಡ್ ಮೇಲೆ ನಡೆಸಿದ ದಾಳಿಯಲ್ಲಿ ಬಲಿಯಾಗಿದ್ದಾನೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಅಫ್ಘಾನಿಸ್ತಾನದ ರಾಷ್ಟ್ರೀಯ ಭದ್ರತಾ ನಿರ್ದೇಶನಾಲಯವು ಉಮರ್ ಪಾಕಿಸ್ತಾನಿ ಪ್ರಜೆ ಎಂದು ಹೇಳಿದ್ದರೆ, ಕೆಲವು ವರದಿಗಳು ಆತ ಭಾರತದಲ್ಲಿ ಜನಿಸಿದನೆಂದು ಹೇಳಿಕೊಂಡಿದೆ.
ಕಾರ್ಯಾಚರಣೆಯ ಸಮಯದಲ್ಲಿ ವಾಯುದಾಳಿಯಲ್ಲಿ ಮಕ್ಕಳು ಸೇರಿದಂತೆ ೪೦ ನಾಗರಿಕರು ಸಾವನ್ನಪ್ಪಿದ್ದಾರೆ ಎಂಬ ವರದಿಗಳನ್ನು ತನಿಖೆ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಯುಎನ್‌ಐ ಎಸ್‌ಎ ವಿಎನ್ ೧೪೩೩
More News
ಅಮೆರಿಕಾ - ಚೈನಾ ವ್ಯಾಪಾರ ಸಂಘರ್ಷ ತಡೆಯಲು ಅಂತಾರಾಷ್ಟ್ರೀಯ ಸಮುದಾಯ ಶ್ರಮಿಸಬೇಕು; ವಿಶ್ವಸಂಸ್ಥೆ

ಅಮೆರಿಕಾ - ಚೈನಾ ವ್ಯಾಪಾರ ಸಂಘರ್ಷ ತಡೆಯಲು ಅಂತಾರಾಷ್ಟ್ರೀಯ ಸಮುದಾಯ ಶ್ರಮಿಸಬೇಕು; ವಿಶ್ವಸಂಸ್ಥೆ

21 Oct 2019 | 4:18 PM

ವಿಶ್ವಸಂಸ್ಥೆ, ಅ.21 (ಯುಎನ್‌ಐ) ಜಾಗತಿಕ ವ್ಯಾಪಾರ ಹಾಗೂ ತಂತ್ರಜ್ಞಾನದ ಸಂಬಂಧ ಉದ್ವಿಗ್ನತೆ ತೀವ್ರಗೊಳ್ಳುತ್ತಿದ್ದು, ಅಮೆರಿಕಾ, ಚೈನಾ ದೇಶಗಳ ನೇತೃತ್ವದಲ್ಲಿ ಜಗತ್ತು ಸ್ಪರ್ಧಾತ್ಮಕ ಕ್ಷೇತ್ರಗಳಾಗಿ ಇಬ್ಬಾಗಗೊಳ್ಳುವುದನ್ನು ತಡೆಯಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಅಂತಾರಾಷ್ಟ್ರೀಯ ಸಮುದಾಯ ನಡೆಸುವ ಅಗತ್ಯವಿದೆ ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್ ಕರೆ ನೀಡಿದ್ದಾರೆ.

 Sharesee more..

ಚಿಲಿಯಲ್ಲಿ ಹಿಂಸಾಚಾರ, ಗಲಭೆಗೆ 10 ಮಂದಿ ಬಲಿ

21 Oct 2019 | 10:00 AM

 Sharesee more..